KSRTC: ಸಾರಿಗೆ ನಿಗಮಗಳ ಬೊಕ್ಕಸ ಖಾಲಿ, ಸಮವಸ್ತ್ರ ಕೊಡೋಕು ದುಡ್ಡಿಲ್ಲ!

By Santosh NaikFirst Published Aug 1, 2024, 11:50 AM IST
Highlights

ಶಕ್ತಿ ಯೋಜನೆಯಿಂದ ಸಾರಿಗೆ ನಿಗಮಗಳಿಗೆ ಬಲ ಬಂದಿದೆ ಎಂದು ಸರ್ಕಾರ ಹೇಳುತ್ತಿರುವ ನಡುವೆಯೇ, ಸಾರಿಗೆ ನಿಗಮದ ನೌಕರರಿಗೆ ನಿಗಮದಲ್ಲಿ ಹಣವಿಲ್ಲ ಎನ್ನುವ ಅನುಮಾನ ವ್ಯಕ್ತವಾಗಿದೆ. ಅದಕ್ಕೆ, ಕಾರಣ ನಿಗಮದ ಹೊಸ ಸಮವಸ್ತ್ರ ನೀತಿ.

ಬೆಂಗಳೂರು (ಆ.1): ಒಂದೆಡೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಶಕ್ತಿ ಯೋಜನೆಯಿಂದ ರಾಜ್ಯದ ಸಾರಿಗೆ ನಿಗಮಗಳು ಪುನಃಶ್ಚೇತನ ಕಂಡಿವೆ ಎಂದು ವಿವರಗಳನ್ನು ಹಂಚಿಕೊಳ್ಳುತ್ತಿರುವ ನಡುವೆಯೇ, ನಿಗಮದ ನೌಕರರಲ್ಲೇ ರಾಜ್ಯದ ಎಲ್ಲಾ ಸಾರಿಗೆ ನಿಗಮದಲ್ಲಿ ಹಣವಿಲ್ಲವೇ ಎನ್ನುವ ಅನುಮಾನ ವ್ಯಕ್ತವಾಗಿದೆ. ಸಾರಿಗೆ ನಿಗಮದ ಬೊಕ್ಕಸ ಖಾಲಿಯಾಗಿರಬಹುದು ಎನ್ನುವ ಅನುಮಾನ ಬರಲು ಕಾರಣ ನಿಗಮದ ಹೊಸ ಸಮವಸ್ತ್ರ ನೀತಿ. ಕೆಎಸ್‌ಆರ್‌ಟಿಸಿ ನಿಗಮದ ಸಿಬ್ಬಂದಿಗಳಿಗೆ ಸಮವಸ್ತ್ರ ಕೊಡೋಕು ಸರ್ಕಾರಕ್ಕೆ ದುಡ್ಡಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿಬಾರಿ ಸಮವಸ್ತ್ರ ನೀಡ್ತಾ ಇದ್ದ  ಇಗಮ ಈ ಬಾರಿ ಸಮವಸ್ತ್ರದ ಬದಲು ಚಿಲ್ಲರೆ ಕಾಸು ಕೊಟ್ಟು ಕೈತೊಳೆದುಕೊಂಡಿದೆ. 2 ಶರ್ಟ್‌ ಪೀಸ್‌ ಹಾಗೂ 2 ಪ್ಯಾಂಟ್‌ ಪೀಸ್‌ಗೆ ಕೆಎಸ್‌ಆರ್‌ಟಿಸಿ ಫಿಕ್ಸ್‌ ಮಾಡಿರುವ ಹಣ 750 ರೂಪಾಯಿ. ಮಹಿಳಾ ಸಿಬ್ಬಂದಿಗಳ ಸೀರೆಗೆ ರವಿಕೆಗೂ ಕೆಎಸ್‌ಆರ್‌ಟಿಸಿ ಬೆಲೆ ಕಟ್ಟಿದೆ. ಮಹಿಳಾ ಸಿಬ್ಬಂದಿ ಸೀರೆ ಮತ್ತು ರವಿಕೆಗೆ ತಲಾ 1707 ರೂಪಾಯಿ ನಿಗದಿ ಮಾಡಿದೆ. ಅದರೊಂದಿಗೆ ಇವುಗಳನ್ನು ಅಳತೆಗೆ ತಕ್ಕಂತೆ ಹೊಲಿಸಿಕೊಳ್ಳಲು ಕೂಡ ದರ ಕೆಎಸ್‌ಆರ್‌ಟಿಸಿ ಲೆಕ್ಕಪತ್ರ ಇಲಾಖೆ ದರ ನಿಗದಿ ಮಾಡಿ ಆದೇಶ ಹೊರಡಿಸಿದೆ.

ಪ್ರತಿಸಲ ಸಿಬ್ಬಂದಿಗಳಿಗೆ ಕೆಎಸ್‌ಆರ್‌ಟಿಸಿಯೇ ಸಮವಸ್ತ್ರ ನೀಡುತ್ತಿತ್ತು. ಆದರೆ, ಗ್ಯಾರೆಂಟಿ ಸರ್ಕಾರ ಬಂದಾಗ ಎಲ್ಲವೂ ಬದಲಾಗಿದೆ. ಹೊಸ ಸುತ್ತೋಲೆಯಲ್ಲಿ ಸಿಬ್ಬಂದಿಗಳಿಗೆ ನಿಗಮದಿಂದ ಸಮವಸ್ತ್ರ ನೀಡಲ್ಲ ಎಂದು ಆದೇಶ ಹೊರಡಿಸಲಾಗಿದೆ. ಸಮವಸ್ತ್ರದ ಬದಲಾಗಿ ಬಟ್ಟೆ & ಹೊಲಿಗೆ ವೆಚ್ಚಕ್ಕೆ ಕೆಎಸ್‌ಆರ್‌ಟಿಸಿ ಲೆಕ್ಕಪತ್ರ ಇಲಾಖೆ ಹಣ ನೀಡಲು ಮುಂದಾಗಿದೆ. ಖಾಕಿ ಬಟ್ಟೆ, ಹೊಲಿಗೆಯ ಖರ್ಚಿಗೆ ದರ ನಿಗದಿ ಮಾಡಿ ಈಗಾಗಲೇ ಇಲಾಖೆ ನಿರ್ದೇಶಕ ಆದೇಶ ಹೊರಡಿಸಿದ್ದಾರೆ.

ತರಬೇತಿ ಸಿಬ್ಬಂದಿ ಮತ್ತು ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಸಮವಸ್ತ್ರ ಬದಲಾಗಿ ಹಣ ನೀಡೋದಾಗಿ ಆದೇಶ ಹೊರಡಿಸಲಾಗಿದೆ. ಕೆಎಸ್‌ಆರ್‌ಟಿಸಿ ನೀಡುವ ಹಣದಿಂದ ಬಟ್ಟೆ ಖರೀದಿಸಿ ಹೊಲಿಗೆ ಹಾಕಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ನಿಗಮದ ಹೊಸ ಹೊಸ ಆಲೋಚೆಗೆ ಸಿಬ್ಬಂದಿಗಳು ಹೈರಾಣಾಗಿದ್ದಾರೆ. 'ಇದೆಂತಾ ಆದೇಶ, ಇವರ ಬಳಿ ದುಡ್ಡೆ ಇಲ್ಲವಾ?  ಕೆಲಸದ ನಡುವೆ  ನಾವು ಹೇಗೆ ಬಟ್ಟೆ ಹೊಲಿಸಿಕೊಳ್ಳೋದು..' ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ. ಇವರು ಕೊಡುವ ಕನಿಷ್ಠ ದರದಲ್ಲಿ ಸಮವಸ್ತ್ರದ ಬಟ್ಟೆ ಕೂಡ ಬರಲ್ಲ ಅಂತ ಬೇಸರ ವ್ಯಕ್ತಪಡಿಸಿದ್ದಾರೆ.

ಕೆಎಸ್‌ಆರ್‌ಟಿಸಿಯ ಸಮವಸ್ತ್ರ ದರಪಟ್ಟಿ:  ಖಾಕಿ ಸೂಟ್‌ ಧರಿಸುವ ಸಿಬ್ಬಂದಿಗೆ 5.6 ಮೀಟರ್‌ ಬಟ್ಟೆಗೆ  ದರ ನಿಗದಿ ಮಾಡಲಾಗಿದೆ. 2 ಪ್ಯಾಂಟ್‌ ಹಾಗೂ 2 ಶರ್ಟ್‌ ಪೀಸ್‌ಗೆ 742 ರೂಪಾಯಿ ನಿಗದಿ ಮಾಡಲಾಗಿದೆ. ನೀಲಿ ಸೂಟ್‌ ಧರಿಸುವ ಸಿಬ್ಬದಿಗೆ 750 ರೂಪಾಯಿ ಹಾಗೂ ಬಿಳಿ ಸೂಟ್‌ ಧರಿಸುವ ಸಿಬ್ಬಂದಿಗೆ 731 ರೂಪಾಯಿ ನಿಗದಿ ಮಾಡಲಾಗಿದೆ. ಇನ್ನು ಎರಡು ಜೊತೆ ಬಟ್ಟೆ ಹೊಲಿಸಿಕೊಳ್ಳಲು 350 ರೂಪಾಯಿಯನ್ನು ನಿಗಮ ನೀಡಲಿದೆ.

ಕೆಆರ್‌ಟಿಸಿಗೆ ಹೈಕೋರ್ಟ್ ದಂಡ, ಬಸ್‌ನಿಂದ ಬಿದ್ದು ಸಾವನ್ನಪ್ಪಿದ ಮಹಿಳೆಗೆ 26 ಲಕ್ಷ ರು. ಪರಿಹಾರ

ಮಹಿಳಾ ಸಿಬ್ಬಂದಿಗಳಿಗೆ ಖಾಕಿ ಸೀರೆ ಹಾಗೂ ರವಿಕೆಯ ಪೀಸ್‌ಗೆ ಕೆಎಸ್‌ಆರ್‌ಟಿಸಿ 1707 ರೂಪಾಯಿ ನಿಗದಿ ಮಾಡಿದೆ. ಇವುಗಳನ್ನು ಹೊಲಿಸಿಕೊಳ್ಳಲು 100 ರೂಪಾಯಿ ನಿಗದಿ ಮಾಡಿದೆ. ಇನ್ನು ನೀಲಿ ಸೀರೆ ಹಾಗೂ ರವಿಕೆ ಧರಿಸುವ ಸಿಬ್ಬಂದಿಗೂ ಇದೇ ಮೊತ್ತವನ್ನು ನಿಗದಿ ಮಾಡಲಾಗಿದೆ. ತಾಂತ್ರಿಕ ಸಿಬ್ಬಂದಿಗಳ ಬ್ರೌನ್ ಸೂಟ್ ಮತ್ತು ಕ್ರೀಮ್ ಸೂಟ್ ಗೆ ದರ ಫಿಕ್ಸ್‌ ಮಾಡಲಾಗಿದೆ. 2 ಪ್ಯಾಂಟ್ ಗೆ ಮತ್ತು 2 ಶರ್ಟ್ ಗೆ  731 ರೂಪಾಯಿ ನಿಗದಿ ಮಾಡಲಾಗಿದ್ದರೆ, ಹೊಲಿಗೆಗೆ 350 ರೂಪಾಯಿ ಫಿಕ್ಸ್‌ ಮಾಡಲಾಗಿದೆ.

Latest Videos

ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ನಿಯಮ ಪಾಲಿಸದ ಕೆಎಸ್ಸಾರ್ಟಿಸಿ ಚಾಲಕರಿಗೆ ದಂಡ - ನಿಗಮ ಎಚ್ಚರಿಕೆ

click me!