ಮುಡಾ ಹಗರಣ: ಬಿಜೆಪಿ ಪಾದಯಾತ್ರೆ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯ

By Ravi Janekal  |  First Published Aug 1, 2024, 10:14 AM IST

ಬಿಜೆಪಿ ಒಡೆದ ಮನೆಯಂತಾಗಿದೆ. ಮೈಸೂರಿಗೆ ಪಾದಯಾತ್ರೆ ಬದಲು ದೆಹಲಿಗೆ ಪಾದಯಾತ್ರೆ ಮಾಡಲು ಹೇಳಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯ ಮಾಡಿದರು.


ಬೆಂಗಳೂರು (ಆ.1): ಬಿಜೆಪಿ ಒಡೆದ ಮನೆಯಂತಾಗಿದೆ. ಮೈಸೂರಿಗೆ ಪಾದಯಾತ್ರೆ ಬದಲು ದೆಹಲಿಗೆ ಪಾದಯಾತ್ರೆ ಮಾಡಲು ಹೇಳಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯ ಮಾಡಿದರು.

ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ರಾಜ್ಯಪಾಲರು ಯಾವುದೇ ಸ್ಪಷ್ಟನೆ ಕೇಳದೇ ಮುಖ್ಯಮಂತ್ರಿಗಳಿಗೆ ಶೋಕಸ್ ನೋಟೀಸ್ ಕೊಟ್ಟಿದ್ದಾರೆ. ಹೀಗೆ ನೋಟಿಸ್ ನೀಡೋದು ಸರಿಯಲ್ಲ. ರಾಜ್ಯಪಾಲರಿಗೆ ಯಾರು ಈ ಸ್ಕ್ರಿಪ್ಟ್ ಬರೆದು ಕೊಟ್ಟಿದ್ದಾರೆ? ಯಾರು ಬರೆದುಕೊಟ್ಟಿದ್ದಾರೆ ಅಂತಾ ಗೊತ್ತಿದೆ. ಒಂದು ರೂಲ್ಸ್ ಅಂತಾ ಇದೆ, ರಾಜ್ಯಪಾಲರು ಕೆಲಸ ಮಾಡುವ ಕಾನೂನು ಇದೆ. ಅದನ್ನು ಬಿಟ್ಟು ಅವರು ನೋಟಿಸ್ ನೀಡ್ತಿರೋದ್ಯಾಕೆ? ರಾಜ್ಯಪಾಲರು ನೋಟಿಸ್ ನೀಡಲಿ. ನಾವು ಎಲ್ಲವನ್ನೂ ಕಾನೂನಾತ್ಮಕವಾಗಿ ಎದುರಿಸುತ್ತೇವೆ ಎಂದರು.

Latest Videos

undefined

 

INTERVIEW: ಕೇವಲ ಹೊಟ್ಟೆಕಿಚ್ಚಿಂದ ಹುಟ್ಟಿದ ಕೇಸ್‌ ಮುಡಾ - ಬೈರತಿ ಸುರೇಶ್

ರಾಜ್ಯಪಾಲರು ತಮ್ಮ ಅಧಿಕಾರವ್ಯಾಪ್ತಿ ಮೀರಿ ಕೆಲಸ ಮಾಡ್ತಿದ್ದಾರೆ. ಇದು ಯಾರೋ ಬರೆದ ಸ್ಕ್ರಿಪ್ಟ್ ಅಂತಾ ಗೊತ್ತಾಗುತ್ತೆ. ರಾಜ್ಯಪಾಲರು ಕೊಟ್ಟಿರೋ ನೋಟಿಸ್‌ಗೆ ಉತ್ತರ ಕೊಡ್ತೇವೆ. ರಾಜ್ಯಾಧ್ಯಕ್ಷ ಯಾರು ಅವರು ಮೊದಲು ಬಿಜೆಪಿಯನ್ನ ನೋಡಿಕೊಳ್ಳಲಿ ಎಂದು ಹರಿಹಾಯ್ದರು.

ರಾಜ್ಯಪಾಲರು ನೋಟಿಸ್ ಕೊಟ್ಟ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್, ಜಮೀರ್ ಅಹ್ಮದ್, ಪರಮೇಶ್ವರ್, ಈಶ್ವರ್ ಖಂಡ್ರೆ, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಸಚಿವರು ಆಗಮಿಸಿದ್ದಾರೆ.  

click me!