ಕರ್ನಾಟಕ ಸರ್ಕಾರ ಅನ್ನ ಭಾಗ್ಯ ಯೋಜನೆಗೆ ಅಕ್ಕಿಯನ್ನು ಕೇಳಿದರೆ ಕೇಂದ್ರ ಸರ್ಕಾರ ಅಕ್ಕಿಯನ್ನು ಕೊಡಲು ಸಿದ್ಧವಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮಾಹಿತಿ ನೀಡಿದ್ದಾರೆ.
ನವದೆಹಲಿ (ಆ.01): ಕರ್ನಾಟಕ ಸರ್ಕಾರ ಅನ್ನ ಭಾಗ್ಯ ಯೋಜನೆಗೆ ಅಕ್ಕಿಯನ್ನು ಕೇಳಿದರೆ ಕೇಂದ್ರ ಸರ್ಕಾರ ಅಕ್ಕಿಯನ್ನು ಕೊಡಲು ಸಿದ್ಧವಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮಾಹಿತಿ ನೀಡಿದ್ದಾರೆ.
ಈ ಕುರಿತು ನವದೆಹಲಿಯಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಅಕ್ಕಿ ರಾಜಕೀಯದ ವಿಚಾರದ ಬಗ್ಗೆ ಮಾತನಾಡಿದರು. ಯಾವುದೇ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ಅಕ್ಕಿಯನ್ನು ಕೇಳಿದರೆ ಕೇಂದ್ರ ಸರ್ಕಾರವು ಅಕ್ಕಿಯನ್ನು ಕೊಡಲಿ ಸಿದ್ಧವಿದೆ. ಇನ್ನು ಕಳೆದ ವರ್ಷ ಕರ್ನಾಟಕ ಸರ್ಕಾರ ಅಕ್ಕಿಯನ್ನು ಕೇಳಿದಾಗ ದೇಶದಾದ್ಯಂತ ಬರಗಾಲದ ಪರಿಸ್ಥಿತಿ ಇತ್ತು. ಹೀಗಾಗಿ, ಕರ್ನಾಟಕದ ಮಾದರಿಯಲ್ಲಿಯೇ ಎಲ್ಲಾ ರಾಜ್ಯಗಳು ಅಕ್ಕಿಯನ್ನು ಕೇಳಿದರೆ ಸ್ಟಾಕ್ ಸಮಸ್ಯೆ ಆಗಬಹುದು ಎಂದು ಅಕ್ಕಿಯನ್ನು ಕೊಡದಿರಲು ತೀರ್ಮಾನ ಮಾಡಲಾಗಿತ್ತು.
ಬೆಂಗಳೂರು ಕುಳಿತಲ್ಲಿಯೇ ಪ್ರಾಣಬಿಟ್ಟ ಕಟ್ಟಡ ಕಾರ್ಮಿಕ; ಸತ್ತು ಒಂದು ದಿನವಾದ್ರೂ ಯಾರಿಗೂ ಗೊತ್ತಾಗಿಲ್ಲ!
ಆದರೆ, ಈಗ ದೇಶದಲ್ಲಿ ಉತ್ತಮ ಮಳೆಯಾಗಿದ್ದು, ಎಲ್ಲೆಡೆ ಉತ್ತಮ ಬೆಳೆಯನ್ನು ನಿರೀಕ್ಷೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಯಾವುದೇ ರಾಜ್ಯಗಳು ಅಕ್ಕಿಯನ್ನು ಕೇಳಿದರೆ 28 ರುಪಾಯಿ ದರದಲ್ಲಿ ನಾವು ಅಕ್ಕಿ ಕೊಡಲು ಸಿದ್ಧರಿದ್ದೇವೆ. ಈಗ ಸದಸ್ಯಕ್ಕೆ ಯಾವುದೇ ರಾಜ್ಯದಿಂದ ಅಕ್ಕಿ ಬೇಕೆಂದು ಮನವಿ ಬಂದಿಲ್ಲ. ದೇಶದಲ್ಲಿ ನಾವು 80 ಕೋಟಿ ಜನರಿಗೆ ಪಡಿತರ ಮೂಲಕ ಅಕ್ಕಿ ಕೊಡ್ತಿವಿ. ರಾಜ್ಯಗಳು ಹರಾಜಿಗೂ ಭಾಗಿಯಾಗದೇ ನೇರವಾಗಿ 28 ರೂ. ಕೊಡ್ತಿವಿ. ರಾಜ್ಯದಿಂದ ಈತನಕ ಯಾವುದೇ ಬೇಡಿಕೆ ಬಂದಿಲ್ಲ ಎಂದು ಮಾಹಿತಿ ನೀಡಿದರು.
ಇನ್ನು ಪಾದಯಾತ್ರೆ ವಿಚಾರದ ಬಗ್ಗೆ ಮಾತನಾಡಿ, ಹೆಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಮಾತುಕೆ ಮಾಡಲಾಗುವುದು. ಬಿಜೆಪಿ ಪಾದಯಾತ್ರೆ ನಡೆಯುತ್ತದೆ. ಅವರು ಹಾಗೂ ನಾವು ಪಾದಯಾತ್ರೆಯಲ್ಲಿ ಭಾಗವಹಿಸುತ್ತೇವೆ. ಪಾದಯಾತ್ರೆ ಬಗ್ಗೆ ಬಿಜೆಪಿ ಅವರು ಅಪಸ್ವರ ಹಿನ್ನೆಲೆಯಲ್ಲಿ ಅವರ ಜೊತೆಯೂ ನಮ್ಮ ನಾಯಕರು ಮಾತುಕತೆ ನಡೆಸ್ತಾರೆ ಎಂದು ತಿಳಿಸಿದರು.
ಬಿಜೆಪಿಯವರು ಸಿದ್ದರಾಮಯ್ಯ ಸರ್ಕಾರ ಅಲುಗಾಡಿಸಿದರೆ ರಕ್ತಕ್ರಾಂತಿ ಆಗುತ್ತೆ; ಶಾಸಕ ಶಿವಲಿಂಗೇಗೌಡ ಎಚ್ಚರಿಕೆ
ವಾಲ್ಮೀಕಿ ಹಗರಣ ವಿಚಾರದ ಬಗ್ಗೆ ಮಾತನಾಡಿ, ರಾಜ್ಯಪಾಲರು ಸಂವಿಧಾನಾತ್ಮಕ ವ್ಯಕ್ತಿಯಾಗಿದ್ದಾರೆ. ಅವರ ಬಗ್ಗೆ ಯಾಕೆ ಇವರಿಗೆ ಭಯ. ಮುಡಾ ಅಧಿಕಾರಿ ಚಂದ್ರಶೇಖರ್ ಡೆತ್ ನೋಟ್ ಬರೆಯದೇ ಇದ್ದಿದ್ರೇ ಈ ಅವ್ಯವಹಾರ ಹೊರಗಡೆ ಬರುತ್ತಿಲ್ಲ. ನೀವು ಭ್ರಷ್ಟಾಚಾರ, ಹಗರಣ ಮಾಡಿದ್ದೀರಿ. ಸಿದ್ದರಾಮಯ್ಯ ಅವರು ಮುಖಚರ್ಯೆ ನೋಡಿ. ಭಯಗ್ರಸ್ಥರಾಗಿ ಈ ರೀತಿಯಾಗಿ ಹೇಳಿಕೆ ನೀಡುತ್ತಿದ್ದಾರೆ. ಮೂಡಾ ಹಗರಣ- ದಾಖಲೆಗಳು ಅವರ ಪಕ್ಷದ ನಾಯಕರೇ ಕೊಟ್ಟಿದ್ದಾರೆ. 19 ಹಗರಣಗಳ ಪಟ್ಟಿಯ ಎಲ್ಲ ವಿವರಗಳನ್ನು ಮನೆ ಮನೆಗೆ ಹಂಚುತ್ತಾರೆ. ಯಾಕೆ ಹಂಚ್ತಿರಿ.. ನಿಮ್ಮದೇ ಸರ್ಕಾರ ಇದೆ. ತನಿಖೆ ಮಾಡಿ. ಎಲ್ಲರನ್ನು ಹೆದರಿಸಿ ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಸಾಧ್ಯವಿಲ್ಲ. ಅಹಿಂದ ಇರಲಿ ಅಥವಾ ಬೇರೆ ಯಾವುದೇ ಸಮುದಾಯದ ನಾಯಕ ಇರಲಿ. ಭ್ರಷ್ಟಾಚಾರ ಮಾಡಿ, ತನಿಖೆ ಮಾಡೋದು ಬೇಡ ಎಂದ್ರೆ ಹೇಗೆ? ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.