ಸನಾತನ ಧರ್ಮವನ್ನು ಅವರಪ್ಪ ಬಂದರೂ ನಾಶ ಮಾಡಲು ಆಗುವುದಿಲ್ಲ ನಿರ್ಮೂಲನೆ ಮಾಡುತ್ತೇನೆ ಎನ್ನುವವರು ರಾಕ್ಷಸರು ಆಯೋಗ್ಯರು ಎಂದು ಉದಯನಿಧಿ ಸ್ಟಾಲಿನ್ ವಿರುದ್ಧ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಗುಡುಗಿದರು.
ಮೈಸೂರು: ಸನಾತನ ಧರ್ಮವನ್ನು ಅವರಪ್ಪ ಬಂದರೂ ನಾಶ ಮಾಡಲು ಆಗುವುದಿಲ್ಲ ನಿರ್ಮೂಲನೆ ಮಾಡುತ್ತೇನೆ ಎನ್ನುವವರು ರಾಕ್ಷಸರು ಆಯೋಗ್ಯರು ಎಂದು ಉದಯನಿಧಿ ಸ್ಟಾಲಿನ್ ವಿರುದ್ಧ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಗುಡುಗಿದರು.
ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸನಾತನ ಧರ್ಮದ ನಿರ್ಮೂಲನೆಗೆ ಕರೆ ನೀಡಿರುವ ತಮಿಳನಾಡು ಮುಖ್ಯಮಂತ್ರಿ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಹೇಳಿಕೆ ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದರು.
ಸನಾತನ ಧರ್ಮ ನಿರ್ಮೂಲನೆ ಮಾಡಲು ಹಿಂದೆ ಸಂಚು ಮಾಡಿದ್ದರು. ಆದರೆ ಅವರೆಲ್ಲ ನಾಶವಾಗಿದ್ದಾರೆ. ಅವರಂತೆ ಇವರು ನಾಶವಾಗುತ್ತಾರೆ. ಸನಾತನ ಧರ್ಮ ಎಲ್ಲ ಕಾಲಕ್ಕೂ ಇರುತ್ತದೆ. ಈ ದೇಶ ಉಳಿದಿರುವುದೇ ಸನಾತನ ಧರ್ಮದಿಂದ ಎಂದರು.
ಸನಾತನಧರ್ಮ ಎಂಬುದು ಸದಾಕಾಲ ಇರುವಂತದ್ದು; ಪೇಜಾವರಶ್ರೀ
ಸಿದ್ದರಾಮಯ್ಯ ಸರ್ಕಾರ ಬಂದ ನಂತರ ರಾಜ್ಯ ಸೇಫ್ ಇಲ್ಲ. ಕಾಂಗ್ರೆಸ್‌ನೊಳಗೆ ಎಲ್ಲವೂ ಸರಿಯಿಲ್ಲ. ಮುಂದಿನ ಲೋಕಸಭಾ ಚುನಾವಣೆ ಹೊತ್ತಿಗೆ ಈ ಸರ್ಕಾರ ಬಿಳುತ್ತದೆ. ಇದು ಲಾಟರಿಯಿಂದ ಅಧಿಕಾರಕ್ಕೆ ಬಂದಿರೋ ಸರ್ಕಾರ. ಈ ಸರ್ಕಾರದಲ್ಲೇ ಕೆಲವರು ದುರಾಡಳಿತಕ್ಕೆ ಬೇಸತ್ತಿದ್ದಾರೆ ಎಂದರು. ಇದು ನಾನು ಹೇಳಿದ್ದಲ್ಲ, ಬೇಕಾದರೆ ಈ ಸರ್ಕಾರ ಹೇಗಿದೆ ಅಂತಾ ಬಿಕೆ ಹರಿಪ್ರಸಾದ್, ಶಾಸಕ ಬಸನಗೌಡ ರಾಯರೆಡ್ಡಿ ಅವರನ್ನೇ ಕೇಳಿ ಎಂದರು.
ರಾಜ್ಯ ಸರ್ಕಾರ ಇಂಥ ದಯನೀಯ ಸ್ಥಿತಿಯಲ್ಲಿರುವಾಗ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಮೈಸೂರು ಕ್ಷೇತ್ರದಿಂದ ಪ್ರತಾಪ್ ಸಿಂಹ ಗೆಲುವು ಖಚಿತ ಹಾಗೆಯೇ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗುವುದು ಶತಸಿದ್ಧ ಎಂದರು.
ಡಿಎಂಕೆಗೆ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹಿಂದೂ ಧರ್ಮವೇ ಬೇಕಾ?