ಸಿದ್ದರಾಮಯ್ಯ ಪ್ರಧಾನಮಂತ್ರಿ ಆಗಬೇಕು ಅಂತಾ ಹಣೆಯಲ್ಲಿ ಬರೆದಿದ್ರೆ ಯಾರೂ ತಪ್ಪಿಸೋಕೆ ಆಗಲ್ಲ: ಎಚ್‌ ವಿಶ್ವನಾಥ

By Ravi Janekal  |  First Published Sep 4, 2023, 4:11 PM IST

ಸಿದ್ದರಾಮಯ್ಯ ಪ್ರಧಾನಮಂತ್ರಿ ಆಗಬೇಕು ಅಂತಾ ಅವರ ಹಣೆಯಲ್ಲಿ ಬರೆದಿದ್ರೆ, ಅವಕಾಶ ಇದ್ರೆ ಯಾರೂ ತಪ್ಪಿಸೋಕೆ ಆಗಲ್ಲ ಎಂದು ಮಾಜಿ ಸಚಿವ ಎಚ್ ವಿಶ್ವನಾಥ್ ಹೇಳಿದರು.


ಗದಗ (ಸೆ.4):ಸಿದ್ದರಾಮಯ್ಯ ಪ್ರಧಾನಮಂತ್ರಿ ಆಗಬೇಕು ಅಂತಾ ಅವರ ಹಣೆಯಲ್ಲಿ ಬರೆದಿದ್ರೆ, ಅವಕಾಶ ಇದ್ರೆ ಯಾರೂ ತಪ್ಪಿಸೋಕೆ ಆಗಲ್ಲ ಎಂದು ಮಾಜಿ ಸಚಿವ ಎಚ್ ವಿಶ್ವನಾಥ್ ಹೇಳಿದರು.

ಇಂದು ಗದಗನಲ್ಲಿ ಮಾತನಾಡಿದ ಅವರು, ರಾಜಕೀಯ ಅನ್ನೋದು ಅವಕಾಶ. ಯಾವುದನ್ನೂ ತಳ್ಳಿಹಾಕೋದಕ್ಕೆ ಸಾದ್ಯವಿಲ್ಲ. ಇಲ್ಲಿ ಏನು ಬೇಕಾದರೂ ಆಗಬಹುದು. ಡೆಮಾಕ್ರಟಿಕ್ ಐಡಿಯಾಲಜಿಯಲ್ಲಿ ಪೊಲಿಟಿಕ್ಸ್ ಸೇರಿಕೊಂಡಿದೆ ಎಂದರು. 

Tap to resize

Latest Videos

undefined

ಬಿಜೆಪಿಯ ಕೆಲವರು ಮತ್ತೆ ಕಾಂಗ್ರೆಸ್‌ಗೆ ಬರುವುದು ಒಳ್ಳೇದು: ಎಚ್‌.ವಿಶ್ವನಾಥ್‌

ದೇವೇಗೌಡ್ರು ಪ್ರಧಾನಿಮಂತ್ರಿ ಆಗ್ತೇನೆ ಅಂತಾ ಕನಸು ಕಂಡಿದ್ರಾ? ಹರದನಹಳ್ಳಿಯಲ್ಲಿ ಹುಟ್ಟಿ ಅಲ್ಲಿಂದ ಚಿಮ್ಮಿ ಗಣತಂತ್ರ ವ್ಯವಸ್ಥೆಯ ಎತ್ತರದ ಸ್ಥಾನ ಏರಿದ್ರು. ಹಿಂದೆಯೂ ನಾನು ಪಾರ್ಲಿಮೆಂಟ್ ಮೇಂಬರ್ ಆಗಿದ್ದೆ. ಮತ್ತೊಮ್ಮೆ ಆಗ್ಬೇಕಂತಿದೆ.
ಚುನಾವಣೆಯಲ್ಲಿ ಸ್ಪರ್ಧಿಸುವ ಬಯಕೂ ಇದೆ ಎಂದು ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಆಸೆ ವ್ಯಕ್ತಪಡಿಸಿದ ಎಚ್ ವಿಶ್ವನಾಥ್. 

ಲೋಕಸಭಾ ಚುನಾವಣೆಗೆ ಹೆಸರು ಘೋಷಣೆ ಮಾಡುವ ಮುಂಚೆ ಹಲವು ಹೆಸರುಗಳು ಓಡಾಡುತ್ತಿವೆ. ಆದರೆ ಟಿಕೆಟ್ ಕೊಡೋದು ಒಬ್ಬರಿಗೆ. ಯತೀಂದ್ರ ಆದರೂ ಪರವಾ ಇಲ್ಲ. ಅವರಿಗೆ ಟಿಕೆಟ್ ಸಿಕ್ಕರೆ ಒಳ್ಳೆಯದು ಯಂಗ್ ಸ್ಟಾರ್ ಎಂದರು. ಆದರೆ ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಪರೋಕ್ಷವಾಗಿ ಬಯಕೆ ವ್ಯಕ್ತಪಡಿಸಿದರು.

ಬಿಜೆಪಿ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲ್ಲ; ಎಚ್‌ ವಿಶ್ವನಾಥ್ ಭವಿಷ್ಯ

click me!