ಎಫ್‌ಡಿಎ ಜಾತಿ ವಿವಾದ: ತಪ್ಪಾಗಿಲ್ಲ ಎಂದ ಕೆಪಿಎಸ್ಸಿ

By Kannadaprabha NewsFirst Published Sep 15, 2021, 7:40 AM IST
Highlights

*  ಆರ್ಹತಾ ಪಟ್ಟಿಯಲ್ಲಿ ಒಂದೇ ಜಾತಿಗೆ ಸೇರಿದ 70 ಮಂದಿ ಆಯ್ಕೆ
*  ಪ್ರಸ್ತುತ ಪ್ರಕಟವಾಗಿರುವ ಪಟ್ಟಿ ಅರ್ಹತಾ ಪಟ್ಟಿಯಾಗಿದ್ದು, ಜೇಷ್ಠತಾ ಪಟ್ಟಿಯಲ್ಲ 
*  ನಿಯಮಾನುಸಾರ ವಿವಿಧ ಮೀಸಲಾತಿ ಅಡಿ ಅರ್ಹತಾ ಪಟ್ಟಿಯಲ್ಲಿ ಆಯ್ಕೆ 

ಬೆಂಗಳೂರು(ಸೆ.15):  2019-20ನೇ ಸಾಲಿನ ಪ್ರಥಮ ದರ್ಜೆ ಸಹಾಯಕ(ಎಫ್‌ಡಿಎ)ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಸೆ.9 ರಂದು ಪ್ರಕಟಿಸಿರುವ ಆರ್ಹತಾ ಪಟ್ಟಿಯಲ್ಲಿ ಒಂದೇ ಜಾತಿಗೆ ಸೇರಿದ 70 ಮಂದಿ ಆಯ್ಕೆಯಾಗಿದ್ದಾರೆ ಎಂಬ ಅಂಶ ಆಧಾರ ರಹಿತವಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ) ತಿಳಿಸಿದೆ.

ಸೆ.13ರಂದು ಕನ್ನಡಪ್ರಭ ಪತ್ರಿಕೆ ಪ್ರಕಟಿಸಿದ್ದ ವರದಿಗೆ ಸ್ಪಷ್ಟನೆ ನೀಡಿರುವ ಕೆಪಿಎಸ್‌ಸಿ ಕಾರ್ಯದರ್ಶಿ ಜಿ.ಸತ್ಯವತಿ, ಅರ್ಹತಾ ಪಟ್ಟಿಯಲ್ಲಿರುವ ಒಂದು ಜಾತಿಗೆ ಸೇರಿದ ಅಭ್ಯರ್ಥಿಗಳು ಒಂದೇ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದಾರೆ ಎಂಬುದು ತಪ್ಪು. ಪಟ್ಟಿಯಲ್ಲಿರುವ ಎಲ್ಲ ಅಭ್ಯರ್ಥಿಗಳು ಪ್ರತ್ಯೇಕ ಕೇಂದ್ರಗಳಲ್ಲಿ ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ತಿಳಿಸಿದ್ದಾರೆ.

KPSC: ಒಂದೇ ಜಾತಿಯ 70ಕ್ಕೂ ಹೆಚ್ಚು ಜನ ಆಯ್ಕೆ, ಅಕ್ರಮದ ಶಂಕೆ!

ಅಲ್ಲದೆ, ನಿಯಮಾನುಸಾರ ವಿವಿಧ ಮೀಸಲಾತಿ ಅಡಿ ಅರ್ಹತಾ ಪಟ್ಟಿಯಲ್ಲಿ ಆಯ್ಕೆ ಹೊಂದಿದ್ದಾರೆ. ಅಷ್ಟಕ್ಕೂ ಪ್ರಸ್ತುತ ಪ್ರಕಟವಾಗಿರುವ ಪಟ್ಟಿ ಅರ್ಹತಾ ಪಟ್ಟಿಯಾಗಿದ್ದು, ಜೇಷ್ಠತಾ ಪಟ್ಟಿಯಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

click me!