ಸಿದ್ದರಾಮಯ್ಯ ಪರ ಬ್ಯಾಟಿಂಗ್; ಪ್ರತಾಪ ಸಿಂಹ ಎಲ್ಲಿಯಾದ್ರೂ ಸಿಕ್ಕರೆ ಕಾಫಿ ಕೊಡಿಸುತ್ತೇನೆ: ಎಂ ಲಕ್ಷ್ಮಣ್

By Ravi Janekal  |  First Published Dec 26, 2024, 2:37 PM IST

ಮೈಸೂರು ಕೆ.ಆರ್. ರಸ್ತೆಗೆ ಸಿದ್ದರಾಮಯ್ಯನವರ ಹೆಸರಿಡುವ ವಿಚಾರಕ್ಕೆ ಬಿಜೆಪಿಯಲ್ಲೇ ಭಿನ್ನಮತ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಪ್ರತಾಪ್ ಸಿಂಹ ಅವರ ಹೇಳಿಕೆಗೆ ಕೆಪಿಸಿಸಿ ವಕ್ತಾರ ಎಂ. ಲಕ್ಷಣ್ ಅಭಿನಂದಿಸಿದ್ದಾರೆ


ಮೈಸೂರು (ಡಿ.26): ಮೈಸೂರು ಕೆಆರ್ ರಸ್ತೆಗೆ ಸಿದ್ದರಾಮಯ್ಯನವರ ಹೆಸರು ಇಟ್ಟರೆ ತಪ್ಪೇನು ಎಂದು ಬಿಜೆಪಿ ಪಕ್ಷದ ಮಾಜಿ ಸಂಸದ ಪ್ರತಾಪ ಸಿಂಹ ಅವರೇ ಪ್ರಶ್ನಿಸಿದ್ದಾರೆ 10 ವರ್ಷಗಳ ಬಳಿಕ ನಿಜ ಹೇಳಿರುವ ಅವರನ್ನು ನಾನು ಅಭಿನಂದಿಸುತ್ತೇನೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷಣ್ ಹೇಳಿದರು.

ಮೈಸೂರು ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರಿಡುವ ವಿಚಾರಕ್ಕೆ ಬಿಜೆಪಿಯಲ್ಲೇ ಭಿನ್ನಮತ ಕಾಣಿಸಿಕೊಂಡ ಬೆನ್ನಲ್ಲೇ ಸುದ್ದಿಗೋಷ್ಟಿ ಕರೆದು ಮಾತನಾಡಿದ ಅವರು, ಪ್ರತಾಪ ಸಿಂಹ ಸಿದ್ದರಾಮಯ್ಯರನ್ನ ಕಟುವಾಗಿ ಟೀಕಿಸುತ್ತಾ ಬಂದಿದ್ದವರು. ಆದರೆ ಅಂಥವರು ನಿನ್ನೆ ಸಿಎಂ ಸಿದ್ದರಾಮಯ್ಯ ಪರವಾಗಿ ಮಾತನಾಡಿದ್ದಾರೆ. ಎಲ್ಲಾದರೂ ಭೇಟಿಯಾದರೆ ನಾನೇ ಖುದ್ದಾಗಿ ಕರೆದುಕೊಂಡು ಹೋಗಿ ಕಾಫಿ ಕುಡಿಸುತ್ತೇನೆ. ಕಾಫಿಗೆ ಮಾತ್ರ ಸೀಮಿತಗೊಳಿಸುತ್ತೇನೆ. ಅವರು ಎಷ್ಟಾದರೂ ಬಲಪಂಥೀಯ. ಕಾಫಿ ಕೊಡಿಸುತ್ತೇನೆ ಎಂದಿರುವುದು ಅವರು ಸಿದ್ದರಾಮಯ್ಯರನ್ನ ಹೊಗಳಿರುವುದಕ್ಕಲ್ಲ, ಪ್ರತಾಪ ಸಿಂಹಗೆ ಟಿಕೆಟ್ ಕೈತಪ್ಪಿದ ಮೇಲೆ ಜ್ಞಾನೋದಯವಾಗಿದೆ. ನಾಳೆ ಇನ್ನೇನು ಹೇಳುತ್ತಾರೋ ಗೊತ್ತಿಲ್ಲ. ಬಿಜೆಪಿಯ ಹಿಡನ್ ಅಜೆಂಡಾ ಗೊತ್ತಾಗಿದ್ದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

Tap to resize

Latest Videos

undefined

ಮುಡಾ ಪ್ರಕರಣ: ವಕೀಲರಿಗೆ ಲಕ್ಷ ಲಕ್ಷ ಫೀಸ್ ಕೊಡಲು ಸ್ನೇಹಮಯಿ ಕೃಷ್ಣಗೆ ಹಣ ಎಲ್ಲಿಂದ ಬರುತ್ತೆ?: ಎಂ ಲಕ್ಷ್ಮಣ್ ಪ್ರಶ್ನೆ

ಬಿಜೆಪಿಯಲ್ಲಿ ಕೆಲವರು ಸ್ಯಾಡಿಸ್ಟ್ ಆಗಿ ಬಿಹೇವ್ ಮಾಡುತ್ತಿದ್ದಾರೆ. ಬಿಜೆಪಿ ಯೋಗ್ಯತೆಗೆ 5 ಬಾರಿ ಸಿಎಂ ಆಗಿದ್ದರೂ ಮೈಸೂರು ಜಿಲ್ಲೆಗೆ ನಿಮ್ಮ ಕೊಡುಗೆ ಏನು ಬೊಗಳಿ. ಮೈಸೂರು ಜಿಲ್ಲೆಗೆ ನಿಮ್ಮ ಕೊಡುಗೆ ಏನು? ಕಾಂಗ್ರೆಸ್ ಕೊಡುಗೆ ಏನು ಅಂತಾ ಪ್ರಶ್ನಿಸುತ್ತೀರಲ್ಲ ನಿಮಗೆ ನಾಚಿಕೆ ಆಗಬೇಕು. ನಿಮಗೆ ಮರ್ಯಾದೆ ಇದ್ದರೆ ಕೊಡುಗೆ ಏನು ಅನ್ನೋದಕ್ಕೆ ಉತ್ತರ ಕೊಡಿ. ಉಡುಪಿಯಲ್ಲಿ ಬೋಳ ಗ್ರಾಮದಲ್ಲಿ ನಾಥುರಾಮ್ ಗೋಡ್ಸೆ ಹೆಸರು ಇಟ್ಟಿದ್ದಾರೆ. ನಿಮ್ಮ ಆರಾಧ್ಯದೈವದ ಹೆಸರು ಇಟ್ಟಿದ್ದೀರಾ? ಯಾರು ಆತ?  ಯಡಿಯೂರಪ್ಪ ಹೆಸರು ಇಟ್ಟಿದ್ದೀರಾ ಅವರು ಪೋಕ್ಸೋ ಆರೋಪಿ ಜೈಲಿನಲ್ಲಿದ್ದವರು, ಅಮಿತ್ ಶಾ ಮೋದಿ ಹೆಸರು ಇಟ್ಟಿದ್ದೀರಾ ಇದಕ್ಕೆ ಉತ್ತರ ಕೊಡಿ. ಒಂದು ಲಕ್ಷ ಜನ ಸಿದ್ದರಾಮಯ್ಯ ಪರ ಪತ್ರ ಬರೆಯುತ್ತಾರೆ. ಹೆಸರಿಡಲು ಪಾಲಿಕೆ ಸಿಎಂ ಸಿದ್ದರಾಮಯ್ಯ ಅನುಮತಿ ಪಡೆಯಬೇಕು.

ನಾಥುರಾಮ್ ರಸ್ತೆ, ಮೋದಿ ಸ್ಟೇಡಿಯಂ ಇಲ್ವ?

ಕೆ ಆರ್ ಎಸ್ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರಿಡುವಂತೆ ಕೋರಿ ಸ್ಥಳೀಯ ಶಾಸಕ ಕೆ ಹರೀಶ್ ಗೌಡ ಜಿಲ್ಲಾಧಿಕಾರಿಗೆ ನೀಡಿರುವ ಪತ್ರದಲ್ಲಿ ವಿವಿಧ ಆಸ್ಪತ್ರೆಗಳ ನಿರ್ಮಾಣಕ್ಕಾಗಿ ಸಿದ್ದರಾಮಯ್ಯ ನೀಡಿರುವ ಅನುದಾನದ ವಿಚಾರ ಪ್ರಸ್ತಾಪಿಸಿದ್ದಾರೆ. ಒಟ್ಟು 12 ಆಸ್ಪತ್ರೆಗಳು ಆ ರಸ್ತೆಯಲ್ಲಿ ನಿರ್ಮಾಣ ಆಗಿವೆ. ಇದರಿಂದ ಐದು ಜಿಲ್ಲೆಗಳ ಸುಮಾರು 77 ಲಕ್ಷ ಜನರು ಪ್ರಯೋಜನ ಪಡೆದು ಕೊಳ್ಳುತ್ತಿದ್ದಾರೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಕಾರಣರಾಗಿದ್ದಾರೆ. ಹಾಗಾಗಿ ಕೆ ಆರ್ ಎಸ್ ರಸ್ತೆಗೆ ಸಿದ್ದರಾಮಯ್ಯ ಹೆಸರಿಡುವುದು ಸೂಕ್ತವಾಗಿದೆ. ರಾಜ್ಯ ಸರ್ಕಾರದ ನಡಾವಳಿ ಪ್ರಕಾರ ವೃತ್ತ, ರಸ್ತೆ, ಉದ್ಯಾನವನಕ್ಕೆ ಹೆಸರಿಡಲು ತೀರ್ಮಾನ ಕೈಗೊಳ್ಳಲಾಗುತ್ತದೆ. ಇದರ ಪ್ರಕಾರವೇ ಮಹಾನಗರ ಆಯುಕ್ತರು ಪಾಲಿಕೆ ಸ್ಥಾಯಿ ಸಮಿತಿಗೆ ಕಳುಹಿಸಿದ್ದಾರೆ. ಸ್ಥಾಯಿ ಸಮಿತಿ ಈ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದೆ. ಆಕ್ಷೇಪಣೆ ಸಲ್ಲಿಸಲು‌ ಕಾಲಾವಕಾಶ ನೀಡಲಾಗಿದೆ. ಇದಕ್ಕೆ ಕೆಲ ಸಂಘ ಸಂಸ್ಥೆಯವರು ವಿರೋಧ ವ್ಯಕ್ತಪಡಿಸಿದ್ದಾರೆ. ಕೆ ಆರ್ ಎಸ್ ರಸ್ತೆಗೆ ಪ್ರಿನ್ಸೆಸ್ ರಸ್ತೆ ಎಂದು ನಾಮಕರಣ ಮಾಡಿಲ್ಲ. ಈ ಬಗ್ಗೆ ಎಲ್ಲಿಯೂ ಉಲ್ಲೇಖವಾಗಿಲ್ಲ. ಬಿಜೆಪಿಯವರಿಗೆ ಬರೀ ವಿರೋಧ ಮಾಡುವುದನ್ನು ಬಿಟ್ಟರೇ ಬೇರೇನೂ ಗೊತ್ತಿಲ್ಲ. ನಾತುರಾಮ್ ಗೋಡ್ಸೆ ರಸ್ತೆ ಎಂದು ಹೆಸರಿಡಲಾಗಿದೆ, ನರೇಂದ್ರ ಮೋದಿ ಸ್ಟೇಡಿಯಂ‌‌ ಇದೆ. ಜೈಲಿಗೆ ಹೋಗಿ ಬಂದಿರುವ ಅಮಿತ್ ಶಾ ಹೆಸರಿನಲ್ಲಿ ರಸ್ತೆ ಇದೆ. ಇದಕ್ಕೆಲ್ಲಾ ಬಿಜೆಪಿಯವರು ಸ್ಪಷ್ಟೀಕರಣ ನೀಡಬೇಕು ಎಂದರು.

ಸಿ ಟಿ ರವಿಗೆ ಮಾನ ಮರ್ಯಾದೆ ಇದೆಯಾ ?

ಸಿಟಿ ರವಿಗೆ ಮಾನ-ಮಾರ್ಯಾದೆ ಏನಾದ್ರೂ ಇದೆಯಾ? ಎಂದು ಪ್ರಶ್ನಿಸಿದ ಅವರು, ಜನೆವರಿ ವೇಳೆಗೆ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಾಕ್ಷ ಸ್ಥಾನದಿಂದ ಕೆಳಗಿಳಿಯಲಿದ್ದಾರೆ. ಸಿಟಿ ರವಿ ಮೂಲಕವೇ ವಿಜಯೇಂದ್ರರನ್ನ ಕೆಳಗಿಳಿಸಲು ಹುನ್ನಾರ ನಡೆದಿದೆ ಎಂದು ಆರೋಪಿಸಿದರು.

ಪ್ರಲ್ಹಾದ್ ಜೋಶಿ ಒಬ್ಬ ಜೋಕರ್:

ಎಲ್ಲದಕ್ಕೂ ಪ್ರತಿಕ್ರಿಯೆ ನೀಡುವ ಕೇಂದ್ರ ಸಚಿವ ಪ್ರಲ್ಜಾದ್ ಜೋಶಿ ಒಬ್ಬ ಜೋಕರ್. ಗಾಂಧಿಜಿಯನ್ನ ನಕಲಿ ಗಾಂಧಿ ಅಂತೀಯಾ ಮಾನ ಮರ್ಯಾದೆ ಏನಾದ್ರೂ ಇದೆಯ? ನಿನಗೆ ನಾಚಿಕೆ ಆಗೊಲ್ವ? ಜನ ನಿನ್ನ ಮಾತಿಗೆ ಅಸಹ್ಯಪಡುತ್ತಿದ್ದಾರೆ. ಪ್ರಲ್ಹಾದ್ ಜೋಶಿ ಅಶಾಂತಿ ಸೃಷ್ಟಿ ಮಾಡಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾನೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಇದೇ ವೇಳೆ ಅಂಬೇಡ್ಕರ್ ಬಗ್ಗೆ ಅಮಿತ್ ಶಾ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಂ ಲಕ್ಷ್ಮಣ್, ನೂರಕ್ಕೆ ನೂರು ಸಮಾವೇಶ ಮುಗಿದ ಮೇಲೆ ಹಳ್ಳಿ ಹಳ್ಳಿಗೆ ಹೋಗಿ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತೆ ಎಂದರು.

ಮೈಸೂರು ಪ್ರಿನ್ಸೆಸ್ ರಸ್ತೆ ಹೆಸರಿನ ಹಿಂದೆ ಇಷ್ಟೊಂದು ದೊಡ್ಡ ಇತಿಹಾಸ ಇದೆಯೇ?

ಕೂಡಲಶ್ರೀ ವಿರುದ್ಧವೂ ಕಿಡಿ:

ನಿಮ್ಮ ಜಾತಿ ಹೆಣ್ಣು ಮಗಳ ಮೇಲೆ ಅಶ್ಲೀಲ ಪದ ಬಳಕೆ ಮಾಡಿದ್ದಾರೆ. ಯಾಕೆ ಬಾಯಿ ಬಿಡುತ್ತಿಲ್ಲ, ಆ ಸ್ವಾಮೀಜಿ(ಜಯಮೃತ್ಯುಂಜಯ ಸ್ವಾಮೀಜಿ) ಎಲ್ಲಿ ಅಡಗಿಕುಳಿತಿದ್ದಾರೆ. ರಾಜ್ಯದಲ್ಲಿ ವೀರಶೈವ ಲಿಂಗಾಯತ ಎಂತಾ ದೊಡ್ಡ ಸಮುದಾಯ, ಸಿಟಿ ರವಿ ಆ ರೀತಿ ಮಾತನಾಡಿದ್ರೂ ಏಕೆ ಸುಮ್ಮನಿದ್ದಾರೆ ? ಸಿಟಿ ಆ ಪದ ಹೇಳಿಲ್ಲ ಅಂದರೆ ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ, ಲಕ್ಷ್ಮಿ ಹೆಬ್ಬಾಳ್ಕರ್ ಯಾವುದೇ ಕಾರಣಕ್ಕೂ ಇದನ್ನ ಇಲ್ಲಿಗೆ ಬಿಡುವುದಿಲ್ಲ. ಸಿಟಿ ರವಿಗೆ ಬುದ್ಧಿ ಕಲಿಸೋವರೆಗೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

click me!