ಮುರುಘಾಶ್ರೀ ವಿರುದ್ಧ ಬಂಧನ ವಾರಂಟ್; ಕಳೆದ ವಾರ ಬಿಡುಗಡೆಯಾಗಿರುವ ಶ್ರೀಗಳಿಗೆ ಮತ್ತೆ ಬಂಧನ ಭೀತಿ!

By Ravi Janekal  |  First Published Nov 20, 2023, 12:47 PM IST

ಮೊದಲ ಪ್ರಕರಣದಲ್ಲಿ ಜಮೀನು ಪಡೆದು ಇತ್ತೀಚೆಗೆ ಬಿಡುಗಡೆಯಾಗಿರುವ ಮುರುಘಾಶ್ರೀಗಳಿಗೆ ಎರಡನೇ ಪ್ರಕರಣದಲ್ಲಿ ಮತ್ತೆ ಸಂಕಷ್ಟ ಎದುರಾಗಿದೆ.


ಚಿತ್ರದುರ್ಗ (ನ.20):  ಮೊದಲ ಪ್ರಕರಣದಲ್ಲಿ ಜಮೀನು ಪಡೆದು ಇತ್ತೀಚೆಗೆ ಬಿಡುಗಡೆಯಾಗಿರುವ ಮುರುಘಾಶ್ರೀಗಳಿಗೆ ಎರಡನೇ ಪ್ರಕರಣದಲ್ಲಿ ಮತ್ತೆ ಸಂಕಷ್ಟ ಎದುರಾಗಿದೆ.

ಎರಡನೇ ಪೋಕ್ಸೋ ಪ್ರಕರಣ ವಿಚಾರಣೆ ನಡೆಸಿದ ಚಿತ್ರದುರ್ಗ 2ನೇ ಅಪರ ಜಿಲ್ಲಾ & ಸತ್ರ ನ್ಯಾಯಾಲಯದ ನ್ಯಾಯಧೀಶರಾದ ಬಿಕೆ ಕೋಮಲಾರಿಂದ ಮುರುಘಾಶ್ರೀ ವಿರುದ್ಧ 21/11/2023 ದಿನಾಂಕಕ್ಕೆ ಅರಸ್ಟ್ ವಾರೆಂಟ್ ಜಾರಿ ಮಾಡಿದ್ದಾರೆ. ಮೊದಲನೆ ಪೊಕ್ಸೋ ಪ್ರಕರಣದಲ್ಲಿ ಒಂದು ವರ್ಷ ಜೈಲಿನಲ್ಲಿದ್ದು ನ.16ರಂದು ಜಿಲ್ಲಾ ಕಾರಾಗೃಹದಿಂದ ಬಿಡುಗಡೆ ಆಗಿರುವ ಮುರುಘಾಶ್ರೀ. 

Tap to resize

Latest Videos

undefined

ತಲೆತಲಾಂತರದಿಂದ ಮಠದ ಭಕ್ತರಾದ ನಾವು ಮುರುಘಾ ಶರಣರ ಜೊತೆ ಇರುತ್ತೇವೆ; ಶಾಸಕ ವಿರೇಂದ್ರ ಪಪ್ಪಿ 

ಸರ್ಕಾರಿ ವಕೀಲ‌ ಜಗದೀಶರಿಂದ ಕೋರ್ಟ್ ಗೆ ಮನವಿ ಹಿನ್ನೆಲೆ ಸರ್ಕಾರಿ ವಕೀಲ ಜಗದೀಶ ಹಾಗೂ ಮುರುಘಾಶ್ರೀ ಪರ ವಕೀಲ‌ ಉಮೇಶ ವಾದ ಮಂಡಿಸಿದರು. 2ನೇ ಫೋಕ್ಸೋ ಪ್ರಕರಣದಲ್ಲಿ ಬಾಡಿ ವಾರೆಂಟ್ ಇದ್ದರೂ ಬಿಡುಗಡೆಯಾಗಿದೆ. ಮುರುಘಾಶ್ರೀ ಪ್ರಭಾವ ಬೀರಿ ಸಾಕ್ಷನಾಶ ಸಾಧ್ಯತೆ ಹಿನ್ನೆಲೆ ಬಂಧನ ವಾರೆಂಟ್ ಗೆ ಸರ್ಕಾರಿ ವಕೀಲ ಜಗದೀಶ್ ಮನವಿ ಮಾಡಿದ್ದರು. 1ನೇ ಫೋಕ್ಸೋ ಕೇಸಲ್ಲಿ ಹೈಕೋರ್ಟ್ ನಿಂದ ಷರತ್ತು ಬದ್ಧ ಜಾಮೀನು ಹಿನ್ನೆಲೆ ಮುರುಘಾಶ್ರೀ ಚಿತ್ರದುರ್ಗ ಜಿಲ್ಲೆ‌ ಪ್ರವೇಶಿಸುವಂತಿಲ್ಲ. ಹೀಗಿರುವಾಗ ಸಾಕ್ಷ್ಯಾನಾಶ ಆಗುವುದಿಲ್ಲ ಮುರುಘಾಶ್ರೀ ಮತ್ತೆ ಬಂಧನ ಮಾಡುವ ಅಗತ್ಯವಿಲ್ಲ. ಬಂಧನ ವಾರೆಂಟ್ ಹೈಕೋರ್ಟ್ ಆದೇಶ ಉಲ್ಲಂಘನೆ ಆಗುತ್ತದೆಂದು ಮುರುಘಾಶ್ರೀ ಪರ ವಕೀಲ‌ ಉಮೇಶ ವಾದ ಎರಡೂ ಕಡೆ ವಾದ ಆಲಿಸಿದ ಬಳಿಕ ಇಂದು ಚಿತ್ರದುರ್ಗ 2ನೇ ಅಪರ ಜಿಲ್ಲಾ & ಸತ್ರ ನ್ಯಾಯಾಲಯದಿಂದ ಇಂದು ಬಂಧನ ವಾರಂಟ್ ಆದೇಶ ನೀಡಿರುವ ಕೋರ್ಟ್;

ದಾವಣಗೆರೆಯ ವಿರಕ್ತ ಮಠದಲ್ಲಿ ಮುರುಘಾ ಶ್ರೀ ವಾಸ್ತವ್ಯ

ಕೋರ್ಟ್‌ಗೆ ಆಗಮಿಸಿದ ಪೊಲೀಸರು:

ಮುರುಘಾಶ್ರೀಗಳ ವಿರುದ್ಧ ಬಂಧನ ವಾರಂಟ್ ಜಾರಿ ಹಿನ್ನೆಲೆ ಕೋರ್ಟ್‌ಗೆ ಆಗಮಿಸಿದ ಗ್ರಾಮಾಂತರ ಠಾಣೆ ಪಿಐ ಮುದ್ದುರಾಜ ಮತ್ತು ಸಿಬ್ಬಂದಿ. ಕೋರ್ಟ್ ಆದೇಶ ಪಡೆದ ಬಳಿಕ ದಾವಣಗೆರೆ ವಿರಕ್ತ ಮಠಕ್ಕೆ ತೆರಳಿ  ಮುರುಘಾಶ್ರೀಗಳ ಬಂಧಿಸುವ ಸಾಧ್ಯತೆ. ಬಳಿಕ ಶ್ರೀಗಳನ್ನು ಮತ್ತೆ ಕೋರ್ಟ್ ಹಾಜರು ಪಡಿಸಲಿರುವ ಪೊಲೀಸರು. 

ಹೈಕೋರ್ಟ್ ಮೊರೆ ಹೋಗುವ ಸಾಧ್ಯತೆ:

ಚಿತ್ರದುರ್ಗದ ಮುರುಘಾಶ್ರೀ ವಿರುದ್ಧ ಕೋರ್ಟ್ ಮತ್ತೆ ಬಂಧನ ವಾರೆಂಟ್ ಆದೇಶ ಹೊರಡಿಸಿರುವ ಹಿನ್ನೆಲೆ ಚಿತ್ರದುರ್ಗ ಕೋರ್ಟ್ ಆದೇಶ ರದ್ದತಿಗೆ ಮುರುಘಾಶ್ರೀ ಪರ ವಕೀಲರಿಂದ ಇಂದೇ ಹೈಕೋರ್ಟ್ ಮೊರೆ ಹೋಗುವ ಸಾಧ್ಯತೆ. ಈಗಾಗಲೇ ಶ್ರೀಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಸಿದ್ಧವಾಗಿರುವ ಪೊಲೀಸರು. ಹೀಗಾಗಿ ಇಂದೇ ಮುರುಘಾಶ್ರೀ ಬಂಧನ ಆದೇಶ ರದ್ದತಿಗೆ ಹೈಕೋರ್ಟ್‌ಗೆ ಮನವಿ ಮಾಡುವ ಸಾಧ್ಯತೆ.

click me!