Kolar​: ಕುರುಡುಮಲೆ ಗ್ರಾಮದಲ್ಲಿ ಯುಗಾದಿ ಹಬ್ಬ ಬಂದ್ರೆ ಭಯ ಬೀಳ್ತಾರೆ!

Published : Apr 02, 2022, 08:56 PM IST
Kolar​: ಕುರುಡುಮಲೆ ಗ್ರಾಮದಲ್ಲಿ ಯುಗಾದಿ ಹಬ್ಬ ಬಂದ್ರೆ ಭಯ ಬೀಳ್ತಾರೆ!

ಸಾರಾಂಶ

ಈ ಊರಲ್ಲಿ ಮಾತ್ರ ಜನರಿಗೆ ಯುಗಾದಿ ಹಬ್ಬ ಬಂತೆಂದ್ರೆ ಸಾಕು ಒಂದು ರೀತಿಯ ಶೋಕಾಚರಣೆ ಮಾಡಿದಂತೆ ಹಬ್ಬದ ಸಂಭ್ರಮದಿಂದಲೇ ದೂರ ಉಳಿಯುವ ಜನರಿಗೆ ಯುಗಾದಿ ಅಂದ್ರೆ ಒಂದು ರೀತಿಯ ಭಯದ ವಾತಾವರಣ.

ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ.

ಕೋಲಾರ (ಏ.02): ಹಿಂದುಗಳಿಗೆ ಯುಗಾದಿ ಹಬ್ಬ (Ugadi Festival) ಅಂದ್ರೆ ಹೊಸ ವರ್ಷ, ಹೊಸ ಸಂವತ್ಸರಕ್ಕೆ ಕಾಲಿಡುವ ದೃಷ್ಟಿಯಿಂದ ಎಲ್ಲೆಡೆ ಸಂಭ್ರಮ ಮನೆ ಮಾಡಿರುತ್ತದೆ. ಆದರೆ ಈ ಊರಲ್ಲಿ ಮಾತ್ರ ಜನರಿಗೆ ಯುಗಾದಿ ಹಬ್ಬ ಬಂತೆಂದ್ರೆ ಸಾಕು ಒಂದು ರೀತಿಯ ಶೋಕಾಚರಣೆ ಮಾಡಿದಂತೆ ಹಬ್ಬದ ಸಂಭ್ರಮದಿಂದಲೇ ದೂರ ಉಳಿಯುವ ಜನರಿಗೆ ಯುಗಾದಿ ಅಂದ್ರೆ ಒಂದು ರೀತಿಯ ಭಯದ ವಾತಾವರಣ. ಯಾಕೆ ಈ ಸ್ಟೋರಿ ನೋಡಿ.

ಹಬ್ಬದ ಸಂಭ್ರಮವಿಲ್ಲ ಸಡಗರವಿಲ್ಲ, ಮನೆಗಳಲ್ಲಿ ತಳಿರು ತೋರಣಗಳಿಲ್ಲ ಮನೆಯವರ ಮುಖದಲ್ಲಿ ಹಬ್ಬದ ಕಳೆಯೂ ಇಲ್ಲ, ಮನೆಯ ಸುತ್ತಲೂ ಹಾಕಿರುವ ಸಗಣಿಯ ಪಟ್ಟಿ, ಇದೆಲ್ಲಾ ಕಂಡು ಬಂದಿದ್ದು, ಕೋಲಾರ (Kolar) ಜಿಲ್ಲೆ ಮುಳಬಾಗಿಲು ತಾಲ್ಲೂಕು ಕುರುಡುಮಲೆ ಗ್ರಾಮದ (Kurudumale Village) ಕಾಲೋನಿಯಲ್ಲಿ. ಹೌದು! ಯುಗಾದಿ ಹಬ್ಬ ಬರುತ್ತೆ ಅಂದ್ರೆ ಸಾಮಾನ್ಯವಾಗಿ ಎಲ್ಲರೂ ಹತ್ತಾರು ದಿನಗಳಿಂದ ಹೊಸ ಬಟ್ಟೆ ಖರೀದಿ, ಮನೆಗೆ ಸುಣ್ಣ ಬಣ್ಣ ಮಾಡಿ ಸಿದ್ದತೆ ಮಾಡಿಕೊಳ್ಳುತ್ತಾರೆ. ಕುರುಡುಮಲೆ ಗ್ರಾಮದ ಕಾಲೋನಿಯಲ್ಲಿ ಮಾತ್ರ ಜನ ಯುಗಾದಿ ಹಬ್ಬಕ್ಕೆ ಮೂರು ದಿನಗಳ ಮುಂಚಿತವಾಗಿಯೇ ಶೋಕಾಚರಣೆ ರೀತಿಯಲ್ಲಿ ಸಿದ್ದರಾಗಿ ಹಬ್ಬವಾದ ನಂತರ ಮೂರುದಿನಗಳು ಕೂಡಾ ಅದೇ ರೀತಿ ಆಚರಣೆಯಲ್ಲಿ ತೊಡಗಿರುತ್ತಾರೆ. 

Karnataka Politics: ಕೋಲಾರ ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ!

ಹೌದು! ಕುರುಡುಮಲೆ ಗ್ರಾಮದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಕಾಲೋನಿಯ ಜನ ಇಂಥಾದೊಂದು ಆಚರಣೆಯಲ್ಲಿ ತೊಡಗಿರುತ್ತಾರೆ. ಕೇಳಿದ್ದೆಲ್ಲವನ್ನು ಕೊಡುವ ರಾಜ್ಯದ ಪ್ರಸಿದ್ದ ಕುರುಡುಮಲೆ ಗಣೇಶ ದೇವಸ್ಥಾನವಿರುವ ಈ ಗ್ರಾಮದ ಕಾಲೋನಿಯ ಜನರ ಕಳೆದ ನೂರಾರು ವರ್ಷಗಳಿಂದ ಯುಗಾದಿ ಹಬ್ಬ ಅಂದ್ರೆ ಹಬ್ಬದ ಆಚರಣೆಯಿಂದ ದೂರ ಉಳಿಯುತ್ತಾರೆ. ಕಾರಣ ನೂರಾರು ವರ್ಷಗಳ ಹಿಂದೆ ಗ್ರಾಮದಲ್ಲಿ ಯುಗಾದಿ ಹಬ್ಬದ ದಿನದಂದು ನಡೆದಿದ್ದ ಒಂದು ದುರ್ಘಟನೆ. ಅದೇನೆಂದ್ರೆ ಹಬ್ಬದ ದಿನ ಈ ಗ್ರಾಮದ ಸೊಸೆಯರು ನೀರಿಗೆ ಹೋಗಿ ಬರುವಾಗ ಗೂಳಿಯೊಂದು ಸೊಸೆಯರ ಗುಂಪಿನಲ್ಲಿದ್ದ ಗರ್ಭವತಿಯಾಗಿದ್ದ ಮಹಿಳೆಯೊಬ್ಬಳನ್ನು ತನ್ನ ಕೊಂಬಿನಿಂದ ತಿವಿದು ಕೊಂದು. ಆಕೆಯ ಗರ್ಭದಲ್ಲಿದ್ದ ಮಗುವನ್ನು ಕೊಂಬಿಗೆ ಸಿಕ್ಕಿಸಿಕೊಂಡು ಊರೆಲ್ಲಾ ಸುತ್ತು ಹೊಡೆದಿತ್ತಂತೆ. 

ನಂತರ ಗೂಳಿ ಊರ ಬಾಗಿಲ ಬಳಿ ಬಂದು ಸಾವನ್ನಪ್ಪಿತ್ತಂತೆ, ಅಂದು ನಡೆದ ಈ ಘಟನೆಯನ್ನು ಕಂಡಿದ್ದ ಜನರು ಬೆಚ್ಚಿ ಬಿದ್ದು ಅಂದಿನಿಂದ ಹಬ್ಬದ ಆಚರಣೆಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.  ಅಂದಿನಿಂದ ಈ ಕಾಲೋನಿಯಲ್ಲಿ ಯುಗಾದಿ ಬಂತೆಂದ್ರೆ ಇಡೀ ಕಾಲೋನಿಗೆ ಏನು ತೊಂದರೆ ಆಗದಂತೆ ಹಸುವಿನ ಸಗಣಿಯಿಂದ ಎಲ್ಲಾ ಮನೆಗಳ ಸುತ್ತಾ ಪಟ್ಟಿಯ ರೀತಿ ಸುತ್ತುಗಟ್ಟುತ್ತಾರೆ. ಯುಗಾದಿಗೆ ಮುನ್ನಾ ಮೂರು ದಿನ ಹಾಗೂ ಯುಗಾದಿಗೆ ನಂತರ ಮೂರು ದಿನ, ಕಾಲೋನಿಯಲ್ಲಿ ಯಾವುದೇ ಜನರು ತಲೆಗೆ ಸ್ನಾನ ಮಾಡೋದಿಲ್ಲಾ, ಹೊಸ ಬಟ್ಟೆ ಹಾಕೋದಿಲ್ಲಾ, ತಲೆಗೆ ಎಣ್ಣೆಕೂಡಾ ಹಚ್ಚೋದಿಲ್ಲಾ, ಅಷ್ಟೆ ಯಾಕೆ ಮನೆಯಲ್ಲಿ ಒಗ್ಗರಣೆ ಹಾಕೋಲ್ಲಾ, ಸಿಹಿ ತಿಂಡಿ ಮಾಡೋಲ್ಲವಂತೆ. ಇದನ್ನ ಈ ಕಾಲೋನಿಯ ಜನ ಕಟ್ಟು ನಿಟ್ಟಾಗಿ ಅನುಸರಿಸುತ್ತಾರೆ. 

Kolar: ದೊಡ್ಡ ಮಾರುಕಟ್ಟೆಗೆ ಜಾಗವಿಲ್ಲ: ರೈತರ ಗೋಳು ಕೇಳೋರಿಲ್ಲ!

ಒಂದು ವೇಳೆ ಈ ಕಟ್ಟಲೆಯನ್ನು ಮುರಿದಿದ್ದೇ ಆದರೆ ಏನಾದ್ರು ಅನಾಹುತ ಕಟ್ಟಿಟ್ಟ ಬುತ್ತಿಯಂತೆ ಹಾಗಾಗಿ ನೂರಾರು ವರ್ಷಗಳೆ ಕಳೆದ್ರು ಈ ಕಾಲೋನಿಯ ಜನ ಈ ಹಬ್ಬದ ಆಚರಣೆಗೆ ಧೈರ್ಯ ಮಾಡಿಲ್ಲಾ ಮಾಡೋದು ಇಲ್ಲ. ಕೆಲವರು ಜ್ಯೋತಿಷಿಗಳ ಬಳಿ ಹೋಗಿ ಬಂದು ಹಬ್ಬ ಆಚರಣೆಗೆ ಮುಂದಾದಗಲೂ ಕೆಲವೊಂದು ದುರ್ಘಟನೆಗಳು ನಡೆದ ಹಿನ್ನೆಲೆಯಲ್ಲಿ ಈಗಿನ ಯುವ ಪೀಳಿಗೆ ಕೂಡಾ ಹಿರಿಯರ ಸಂಪ್ರದಾಯವನ್ನು ಮುರಿಯಲು ಪ್ರಯತ್ನ ಮಾಡೋದಿಲ್ಲ. ಒಟ್ಟಾರೆ ಎಂದೋ ನಡೆದ ದುರ್ಘಟನೆ ಇಂದಿಗೂ ಈ ಕಾಲೋನಿಯ ಜನರನ್ನು ಬಾದಿಸುತ್ತಲೇ ಇದೆ. ಅಷ್ಟೇ ಯಾಕೆ ಅದನ್ನು ಮೂಡನಂಬಿಕೆ ಎಂದು ಭಾವಿಸಿ ಹಬ್ಬ ಆಚರಣೆ ಮಾಡಲು ಮುಂದಾದರೂ ಏನೋ ಒಂದು ದುರ್ಘಟನೆ ಮರುಕಳಿಸಿ ಅವರನ್ನು ಕಟ್ಟಿ ಹಾಕುತ್ತಿದೆ ಹಾಗಾಗಿನೆ ಇಲ್ಲಿನ ಜನ ಮೂಡನಂಬಿಕೆ ಆಂದುಕೊಂಡರೂ ಪರ್ವಾಗಿಲ್ಲ ನಾವು ಹಬ್ಬ ಮಾಡೋದಿಲ್ಲ ಎನ್ನುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡೆಲಿವರಿ ಬಾಯ್ಸ್‌ಗೆ ಲಿಫ್ಟ್ ಬಳಸಬೇಡಿ ಎಂದ ಮೇಘನಾ ಫುಡ್ಸ್; ಪೋಸ್ಟರ್ ವೈರಲ್‌ ಆಗ್ತಿದ್ದಂತೆ ಕ್ಷಮೆಯಾಚನೆ
ದರ್ಶನ್ ಗ್ಯಾಂಗ್‌ನಿಂದ ಕೊಲೆಗೀಡಾದ ರೇಣುಕಾಸ್ವಾಮಿಗೆ ಸತ್ತಮೇಲೂ ನೆಮ್ಮದಿಯಿಲ್ಲ! ಸಮಾಧಿ ಧ್ವಂಸಗೈದ ಡೆವಿಲ್ ಗ್ಯಾಂಗ್‌!