
ಬೆಂಗಳೂರು (ಜು.24): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್2 ರಲ್ಲಿ ಪ್ರಯಾಣಿಕರ ಪ್ರಯಾಣವನ್ನು ಇನ್ನಷ್ಟು ಮಧುರಗೊಳಿಸಲು ವಿಶೇಷ ಸುಗಂಧ ಹೊರಸೂಸುವ ಅನನ್ಯವಾದ 'ಡ್ಯಾನ್ಸಿಂಗ್ ಬ್ಯಾಂಬೂ' ವನ್ನು ಪರಿಚಯಿಸಲಾಗಿದೆ. ಏರೋಮ್ ಸಹಯೋಗದೊಂದಿಗೆ ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿರುವ ಈ ಸುಮಧುರ ಸುಗಂಧದಿಂದ ಪ್ರಯಾಣಿಕರು ತಮ್ಮ ಒತ್ತಡವನ್ನು ಮರೆತು ಶಾಂತಚಿತ್ತದಿಂದ ಪ್ರಯಾಣಿಸಬಹುದಾಗಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿ ಚೆಕ್-ಇನ್, ಆಗಮನ ಪ್ರದೇಶ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಸುಗಂಧದ ಅನುಭವವನ್ನು ಪ್ರಯಾಣಿಕರು ಅನುಭವಿಸಬಹುದಾಗಿದೆ. ಜೊತೆಗೆ, ವಿಮಾನ ನಿಲ್ದಾಣವನ್ನು ನಿರ್ಗಮಿಸಿದ ಬಳಿಕವೂ ಈ ಅನುಭವ ಪ್ರಯಾಣಿಕರ ಮನದಲ್ಲಿ ಹಾಗೆಯೇ ಉಳಿಯಲಿದೆ.
ಪ್ರಪಂಚದಾದ್ಯಂತದ ವಿಮಾನ ನಿಲ್ದಾಣಗಳು ಕೇವಲ ಪ್ರಯಾಣಕ್ಕಷ್ಟೇ ಸೀಮಿತವಾಗದೇ, ಅದಕ್ಕೂ ಮೀರಿ ವಿಕಸನಗೊಳ್ಳುತ್ತಿವೆ. ಅದೇ ರೀತಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಭಾವನೆ, ಪರಿಚಿತತೆ ಮತ್ತು ಸ್ಮರಣೆಯಿಂದ ಪ್ರಯಾಣಿಕರಲ್ಲಿ ಪ್ರಯಾಣ ವ್ಯಾಖ್ಯಾನವನ್ನು ಮರುಕಲ್ಪಿಸುತ್ತಿದೆ. ಪ್ರಸ್ತುತ ಪ್ರಾರಂಭಿಸಲಾದ ಹೊಸ ವೈಶಿಷ್ಟ್ಯವು ಟರ್ಮಿನಲ್ 2ರ ಒಟ್ಟಾರೆ ಅನುಭವಕ್ಕೆ ಇನ್ನಷ್ಟು ಪೂರಕವಾಗಿರಲಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿ ಪ್ರತಿ ಪ್ರಯಾಣಿಕರ ಆಗಮನ ಮತ್ತು ನಿರ್ಗಮನದಲ್ಲಿ ಹೆಚ್ಚು ಪರಿಚಿತ, ಜಾಗತಿಕ ಮತ್ತು ಐಷಾರಾಮಿಯ ಅನುಭವ ಒದಗಿಸಲು ಈ ಸುಗಂಧದ ಸಿಗ್ನೇಚರ್ ಹೆಚ್ಚು ಪರಿಣಾಮಕಾರಿಯಾಗಲಿದೆ. ಜೊತೆಗೆ, ವಿಮಾನ ನಿಲ್ದಾಣದ ಗದ್ದಲದ ನಡುವೆ ಪ್ರಯಾಣದ ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಜೊತೆಗೆ, ಅತ್ಯಾಧುನಿಕತೆ ಮತ್ತು ಶಾಂತ ಐಷಾರಾಮಿ ವಾತಾವರಣವನ್ನು ಸೃಷ್ಟಿಸುತ್ತದೆ.
'ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಶಾಲಿನಿ ರಾವ್ ಅವರು ಮಾತನಾಡಿ, 'ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿ, ನಾವು ಪ್ರತಿ ಪ್ರಯಾಣವನ್ನು ಕೇವಲ ನಿರ್ಗಮನ ಅಥವಾ ಆಗಮನಕ್ಕಿಂತ ಹೆಚ್ಚಿನದಾಗಿ ನೋಡುತ್ತೇವೆ. ನಮ್ಮ ಪ್ರಯಾಣಿಕರೊಂದಿಗೆ ಆಳವಾದ ಸಂಪರ್ಕ ಸಾಧಿಸುವ ಹಾಗೂ ಅರ್ಥಪೂರ್ಣ ಅನುಭವಗಳನ್ನು ಸೃಷ್ಟಿಸುವ ಅವಕಾಶ ನಿರ್ಮಿಸಲು ಪ್ರಯತ್ನಿಸುತ್ತೇವೆ. ವಿಶಿಷ್ಟ ಸುಗಂಧವನ್ನು ಟರ್ಮಿನಲ್ 2ರಲ್ಲಿ ಪರಿಚಯಿಸುವ ಮೂಲಕ, ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಅನುಭವವನ್ನು ಇನ್ನಷ್ಟು ಸಂವೇದನಾಶೀಲಗೊಳಿಸುವ ಉದ್ದೇಶವನ್ನು ಹೊಂದಿದ್ದೇವೆ. ಪ್ರಶಾಂತ, ಪ್ರಕೃತಿಯಲ್ಲಿ ಸಮ್ಮಿಲನಗೊಂಡ ಮತ್ತು ಐಷಾರಾಮಿ ಅನುಭವದ ಸಂಪೂರ್ಣತೆಯನ್ನು ಪ್ರಯಾಣಿಕರು ಅನುಭವಿಸಬಹುದಾಗಿದೆ” ಎಂದು ತಿಳಿಸಿದರು.
ಈ ಸುಗಂಧವು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ಬ್ರ್ಯಾಂಡ್‌ಗೆ ಹೊಸ ಆಯಾಮವನ್ನು ಸೇರಿಸುವ ಜೊತೆಗೆ, ವಿಮಾನ ನಿಲ್ದಾಣದ ಸಂಸ್ಕೃತಿ ಮತ್ತು ಅಸ್ಮಿತೆಯೊಂದಿಗೆ ಪ್ರತಿಧ್ವನಿಸಲಿದೆ. ನಮ್ಮ ಎಫ್&ಬಿ, ಚಿಲ್ಲರೆ ವ್ಯಾಪಾರ, ವೈಯಕ್ತಿಕಗೊಳಿಸಿದ ಲೌಂಜ್ ಸೇವೆಗಳು, ಕಲೆ ಅಥವಾ ಆಕರ್ಷಣೀಯ ಪರಿಸರದ ಮೂಲಕ ಪ್ರಯಾಣಿಸುವ ಪ್ರಯಾಣಿಕರು ಈಗಾಗಲೇ ಸಂತೃಪ್ತರಾಗಿದ್ದಾರೆ. ಇದೀಗ ಈ ಸುಗಂಧದ ಮೂಲಕ ಈ ಎಲ್ಲ ಸಂತೋಷದಾಯಕ ಕ್ಷಣಗಳು ಸ್ಮರಣೀಯವಾಗಲಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ