
ಚಾಮರಾಜನಗರ (ಮಾ.10): ಕರ್ನಾಟಕದ ಕಾಡಾನೆ (Karnataka Elephant) ದಾಳಿಗೆ ಬಲಿಯಾಗಿದ್ದ ಕೇರಳದ ವ್ಯಕ್ತಿಯ (Kerala Man) ಕುಟುಂಬಕ್ಕೆ ಕರ್ನಾಟಕ ಸರ್ಕಾರ ಘೋಷಣೆ ಮಾಡಿದ್ದ 15 ಲಕ್ಷ ರೂಗಳ ಪರಿಹಾರವನ್ನು ಸಂತ್ರಸ್ಥನ ಕುಟುಂಬಸ್ಥರು ತಿರಸ್ಕರಿಸಿದ್ದಾರೆ.
ಆನೆ ಕಾಲ್ತುಳಿತ ಪ್ರಕರಣದಲ್ಲಿ, ಕರ್ನಾಟಕ ಸರ್ಕಾರ ಘೋಷಿಸಿದ್ದ 15 ಲಕ್ಷ ರೂ. ಪರಿಹಾರವನ್ನು ಸಂತ್ರಸ್ತ ಕುಟುಂಬ ತಿರಸ್ಕರಿಸಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ (Eshwara Khandre) ತಿಳಿಸಿದ್ದಾರೆ. ಈ ಕುರಿತು ಬಂಡೀಪುರದಲ್ಲಿ (Bandipur) ಮಾತನಾಡಿದ ಅವರು, ನಾವು ಮಾನವೀಯತೆಯಿಂದ ಪರಿಹಾರ ಘೋಷಣೆ ಮಾಡಿದ್ದೆವು. ಆದರೆ ಸಂತ್ರಸ್ತ ಕುಟುಂಬವು ಪರಿಹಾರ ಬೇಡವೆಂದು ತಿರಸ್ಕರಿಸಿದೆ ಎಂದಿದ್ದಾರೆ.
ಕಾಡಾನೆ ದಾಳಿಯಿಂದ ಬೆಳೆ ರಕ್ಷಿಸಿಕೊಳ್ಳಲು ಕಂದಕ ನಿರ್ಮಾಣಕ್ಕೆ ಜಮೀನು ನೀಡಿದ ರೈತರು!
ಬಿಜೆಪಿ ವಿರೋಧದಿಂದ ಪರಿಹಾರ ತಿರಸ್ಕರಿಸಿದ ಕುಟುಂಬ
ನಾವು ಮಾನವೀಯತೆಯಿಂದ ಪರಿಹಾರ ಘೋಷಿಸಿದ್ದೆವು. ಆದರೆ ಪರಿಹಾರ ನೀಡಲು ಬಿಜೆಪಿ ವಿರೋಧ ಮಾಡಿತ್ತು. ಬಿಜೆಪಿ ವಿರೋಧ ಮಾಡಿದ್ದರಿಂದ ನಮಗೆ ಪರಿಹಾರ ಬೇಕಿಲ್ಲ ಎಂದು ಸಂತ್ರಸ್ತನ ಕುಟುಂಬ ತಿರಸ್ಕರಿಸಿದೆ ಎಂದು ಖಂಡ್ರೆ ಮಾಹಿತಿ ನೀಡಿದ್ದಾರೆ.
ಕಾಡಾನೆ ದಾಳಿಗೆ ಸಾವನ್ನಪ್ಪಿದ ಕೇರಳ ವ್ಯಕ್ತಿಗೆ ಕೆಪಿಸಿಸಿಯಿಂದ 15 ಲಕ್ಷ ಪರಿಹಾರ ಕೊಡಿ: ಸಿಟಿ ರವಿ ಆಕ್ರೋಶ
ಅಂದಹಾಗೆ ಈ ಹಿಂದೆ ಕೇರಳದಲ್ಲಿ (Kerala) ಕರ್ನಾಟಕದ ಆನೆ ತುಳಿತದಿಂದಾಗಿ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದರು. ಕೇರಳದ ವ್ಯಕ್ತಿ ಮೃತಪಟ್ಟಿರುವುದಕ್ಕೆ ಕರ್ನಾಟಕ ಸರ್ಕಾರದಿಂದ ಪರಿಹಾರ ಘೋಷಿಸಲಾಗಿತ್ತು. ಈ ವಿಚಾರ ಚರ್ಚೆಗೆ ಗ್ರಾಸವಾಗಿತ್ತು. ಪರಿಹಾರ ಘೋಷಣೆಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ