ಕೆಇಎ ಪರೀಕ್ಷಾ ಅಕ್ರಮ: ಮನೆಗಾಗಿ ಹೆಸರನ್ನೇ ಬದಲಿಸಿಕೊಂಡಿದ್ದ ಕಿಂಗ್‌ಪಿನ್‌ ಆರ್‌.ಡಿ. ಪಾಟೀಲ್‌..!

By Kannadaprabha News  |  First Published Nov 8, 2023, 11:20 AM IST

ರುದ್ರಗೌಡ ಮನೆ ಬಾಡಿಗೆ ಪಡೆಯುವಾಗ ಬಸವರಾಜ್‌ ಎಂದು ಹೆಸರು ಬದಲಿಸಿಕೊಂಡು ಮುಂಗಡ ಹಣ ನೀಡಿದ್ದ, ಕಿಂಗ್‌ಪಿನ್‌ ತಾನು ಅಡಗಿದ್ದ ಮನೆಯಿಂದ ಪರಾರಿಯಾಗುವಾಗ ಮೊಬೈಲ್‌ ಫೋನ್‌ನಲ್ಲಿ ನಿರಂತರ ಮಾತಾಡ್ತಿದ್ದ, ಆರ್‌ಡಿಪಿಗೆ ಬಂದಂತಹ ಆ ಕರೆ ಯಾರದ್ದು? ಆ ಕರೆ ಮಾಡಿದ್ದು ಪೊಲೀಸ್‌ ಅಧಿಕಾರಿಯೆ? ಗೃಹ ಇಲಾಖೆ ನಿಗಾ.


ಶೇಷಮೂರ್ತಿ ಅವಧಾನಿ

ಕಲಬುರಗಿ(ನ.08):  ಪೊಲೀಸ್‌ ಬಂಧನದಿಂದ ಸ್ವಲ್ಪದರಲ್ಲಿಯೇ ತಪ್ಪಿಸಿಕೊಂಡು ತಲೆಮರೆಸಿಕೊಂಡಿರುವ ಆರ್‌ಡಿ ಪಾಟೀಲ್‌ ವರ್ಧನ್‌ ನಗರದಲ್ಲಿರುವ ಐಷಾರಾಮಿ ಮಹಾಲಕ್ಷ್ಮೀ ಅಪಾರ್ಟ್ಮೆಂಟ್‌ನಲ್ಲಿ ಮನೆ ಪಡೆಯುವಾಗ ತನ್ನ ಮೂಲ ಹೆಸರನ್ನೇ ಬದಲಿಸಿಕೊಂಡಿದ್ದನೆಂಬ ಅಚ್ಚರಿಯ ಮಾಹಿತಿ ಹೊರಬಿದ್ದಿದೆ! ಇಲ್ಲಿನ ಜೇವರ್ಗಿ ರಸ್ತೆಯಲ್ಲಿನ ವರ್ಧನ್‌ ನಗರದಲ್ಲಿರುವ ಮಹಾಲಕ್ಷ್ಮೀ ಗ್ರುಪ್‌ನ ಲೇಮನ್‌ ಟ್ರೀ ಬಹುಮಹಡಿ ಅಪಾರ್ಟ್ಮೆಂಟ್‌ಗೆ ಕಿಂಗ್‌ಪಿನ್‌ ಆರ್‌ ಡಿ ಪಾಟೀಲ್‌ ಸಾಮಾನ್ಯ ಬಾಡಿಗೆದಾರನ ರೂಪದಲ್ಲಿ ಎಂಟ್ರಿ ಕೊಟ್ಟಿದ್ದ.

Latest Videos

undefined

ನಿನ್ನೆ ಎಸ್ಕೆಪ್ ಆಗಿದ್ದ ಮಹಾಲಕ್ಷ್ಮಿ ಅಪಾರ್ಟಮೆಂಟ್ ನ ಬ್ಲಾಕ್ Aನ 103 ಫ್ಲ್ಯಾಟ್ ನಲ್ಲಿ ತಂಗಿದ್ದ ಆರ್.ಡಿ. ಪಾಟೀಲ್ ಶಹಾಪೂರ ಮೂಲದ ಶಂಕರಗೌಡ ಎನ್ನುವವರಿಗೆ ಸೇರಿದ ಫ್ಲ್ಯಾಟ್ ಬಾಡಿಗೆ ಪಡೆದ ಆರ್.ಡಿ. ಪಾಟೀಲ್, ಫ್ಲ್ಯಾಟ್ ಬಾಡಿಗೆ ಪಡೆಯಲು ತನ್ನ ಹೆಸರನ್ನು ರುದ್ರಗೌಡ ಬದಲಾಗಿ ಬಸವರಾಜ ಎಂದು ಬದಲಿಸಿ ಸುಳ್ಳು ಹೇಳಿದ್ದನೆಂಬ ಮಾಹಿತಿಯೂ ಬಹಿರಂಗವಾಗಿದೆ.

ಕೆಇಎ ಪರೀಕ್ಷಾ ಅಕ್ರಮ: ಕಬ್ಬಿನ ಗದ್ದೆಯಲ್ಲಿ ಬ್ಲೂಟೂತ್‌ ಸೆಟ್‌ ಹಂಚಿಕೆ..!

ತನ್ನ ಹೆಸರು ಬಸವರಾಜ್ ಪಾಟೀಲ್ ಎಂದು ಸುಳ್ಳು ಹೆಸರು ಹೇಳಿ 10 ಸಾವಿರ ಅಡ್ವಾನ್ಸ್ ಕೊಟ್ಟು ಕೀ ಪಡೆದಿದ್ದ ಆರ್.ಡಿ ಪಾಟೀಲ್, ನ.5 ರಂದು ರಾತ್ರಿ 11 ಗಂಟೆಗೆ ಇದೇ ಅಪಾರ್ಟಮೆಂಟ್ ಗೆ ಬಂದು ತಂಗಿದ್ದ. ಮರುದಿನ ಮಧ್ಯಾಹ್ನ 1 ಗಂಟೆಯವರೆಗೂ ಇದೇ ಫ್ಲ್ಯಾಟ್‌ ನಂಬರ್ 103 ರಲ್ಲಿಯೇ ಇದ್ದ. ಆದರೆ ಯಾವಾಗ ಪೊಲೀಸ್ ಎಂಟ್ರಿ ಕೊಟ್ಟಿದಾರೆ ಎನ್ನುವುದು ಗೊತ್ತಾಯಿತೋ ಅದೇ ಕ್ಷಣದಲ್ಲಿ ಹಿಂಬದಿಯಿಂದ ಕಾಂಪೌಂಡ್ ಹಾರಿದ್ದಾನೆ, ಮಧ್ಯಾಹ್ನ 1 ಗಂಟೆಗೆ ಪೊಲೀಸರು ಬಂದರೆ, ಒಂದು ಗಂಟೆ ಎರಡು ನಿಮಿಷಕ್ಕೆ ಆರ್.ಡಿ ಪಾಟೀಲ್‌ ಅಲ್ಲಿಂದ ಪರಾರಿಯಾಗಿದ್ದ!

ಆರ್‌ಡಿ ಪಾಟೀಲ್ ನಗರದಲ್ಲೆ ಇದ್ರು ಆತನ ಸುಳಿವು ಪೊಲೀಸರಿಗೆ ಅದ್ಹೇಗೆ ಸಿಗಲಿಲ್ಲ? ಸುಳಿವಿದ್ದರೂ ಕೂಡಾ ತಕ್ಷಣ ಆ‌ರ್‌ಡಿ ಪಾಟೀಲ್ ತಪ್ಪಿಸಿಕೊಂಡು ಹೋಗಲು ಪೊಲೀಸರೇ ದಾರಿ ಮಾಡಿ ಕೊಟ್ಟರೆ? ಎಂಬ ಪ್ರಶ್ನೆಗಳು ಇದೀಗ ಉದ್ಭವವಾಗಿವೆ.

ಕೆಇಎ ಪರೀಕ್ಷಾ ಹಗರಣದ ಮೆನ್ ಮಾಸ್ಟರ್ ಮೈಂಡ್ ಆಗಿರೋ ಕಿಂಗ್‌ಪಿನ್ ಆರ್‌ಡಿ ಪಾಟೀಲ್ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದರೂ ಅವರಿಗೆ ಚಳ್ಳೆಹಣ್ಣು ತನ್ನಿಸಿ ಸಿನಿಮೀಯ ರೀತಿಯಲ್ಲಿ ಪಾಟೀಲ್‌ ತಾನು ಅಡಗಿದ್ದ ಮನೆಯಿಂದಲೇ ಪರಾರಿಯಾಗಿರೋದು ಜಿಲ್ಲಾ ಪೊಲೀಸ್‌ ಪಾಲಿಗೆ ಪೇಚಿನ ಪ್ರಸಂಗವಾಗಿ ಕಾಡಲಾರಂಭಿಸಿದೆ.

ಕೆಇಎ ಹಗರಣ: ಕಿಂಗ್‌ಪಿನ್‌ ಆರ್‌.ಡಿ.ಪಾಟೀಲ್‌ ಜಾಮೀನು ಅರ್ಜಿ ತಿರಸ್ಕಾರ

ಆರ್‌ಡಿ ಪಾಟೀಲ್‌ಗೆ ಪೊಲೀಸ್‌ ಅಧಿಕಾರಿಯದ್ದೇ ಕರೆ ಬಂದಿತ್ತಾ?:

ಆರ್‌ಡಿ ಪಾಟೀಲ್ ಎಸ್ಕೆಪ್ ಪ್ರಕರಣದಲ್ಲಿ ಹೊಸ ಟ್ವಿಸ್ಟ್‌ ಕೇಳಿ ಬಂದಿದೆ. ಈತ ಪರಾರಿಯಾಗೋವಾಗ ಮೋಬೈಲ್‌ ಕಾಲ್‌ನಲ್ಲಿ ಮಾತಾಡ್ತಿದ್ದ ದೃಶ್ಯಗಳು ಸೀಸಿ ಟೀವಿಯಲ್ಲಿ ಸೆರೆಯಾಗಿವೆ. ಆರ್‌ಡಿ ಪಾಟೀಲ್‌ಗೆ ಕಾಲ್ ಮಾಡಿ ಅಲ್ಲಿಂದ ಕಾಲ್ಕಿತ್ತುವಂತೆ ಪೊಲೀಸರೇ ಹೇಳಿದ್ರಾ? ಎಂಬ ಸಂದೇಹಕ್ಕೆ ಈ ದೃಶ್ಯಾವಳಿಗಳು ಬಲವಾದಂತಹ ಕಾರಣವಾಗಿವೆ. ಎಸ್ಕೆಪ್ ಆಗಲು ಪಿಎಸ್‌ಐ ಕರೆ ಮಾಡಿ ಹೇಳಿದ್ರ? ಅಪಾರ್ಟ್ಮೆಂಟ್‌ಗೆ ಬಂಧಿಸಲು ಪೊಲೀಸರ ತಂಡ ಬರ್ತಿದೆ ಎಂದು ಪಿಎಸ್‌ಐ‌ನಿಂದ ಕಿಂಗ್‌ಪಿನ್ ಆರ್.ಡಿ.ಪಿಗೆ ಕರೆ ಮಾಡಿದ್ದರೆ? ಎಂಬ ಶಂಕೆಮೂಡಿದೆ.

ಇದೀಗ ಗೃಹ ಸಚಿವಾಲಯ, ಹಿರಿಯ ಪೊಲೀಸ್‌ ಅಧಿಕಾರಗಳು ಪಾಟೀಲ್ ಎಸ್ಕೆಪ್ ಆಗಲು ಸಹಾಯ ಮಾಡಿದ್ದರ ಬಗ್ಗೆ ಶಂಕೆ ಇರುವ ಪಿಎಸ್‌ಐ ಚಲನವಲನಗಳು, ಫೋನ್‌ ಕರೆಗಳ ಮೇಲೆ ನಿಗಾ ಇಟ್ಟಿದ್ದಾರೆಂದು ಗೊತ್ತಾಗಿದೆ.
ಕರೆ ಬಂದ ತಕ್ಷಣ ಅಪಾರ್ಟ್ಮೆಂಟ್‌‌ನಿಂದ ಹೊರಬಂದು ಕಾಂಪೌಂಡ್ ಹಾರಿ ಆರ್‌ಡಿ ಪಾಟೀಲ್ ಎಸ್ಕೆಪ್ ಆಗಿದ್ದಾನೆ. ಹೀಗಾಗಿ ಪೊಲೀಸರ ವಿರುದ್ಧವೇ ಶಂಕೆಗಳು ಬಲಗೊಂಡಿರೋದರಿಂದ ಈ ವಿಚಾರದಲ್ಲಿ ಓರ್ವ ಪಿಎಸ್‌ಐ ವಿರುದ್ಧ ವಿಚಾರಣೆ ನಡೆಸಲು ಪೊಲೀಸ್ ಆಯುಕ್ತರಿಗೆ ಗೃಹ ಸಚಿವಾಲಯ ಸೂಚಿಸಿದೆ ಎಂದು ಗೊತ್ತಾಗಿದೆ. ಆದರೆ ಕಲಬುರಗಿ ಪೊಲೀಸರು ಈ ಬಗ್ಗೆ ಯಾವುದೇ ವಿಚಾರ ಬಿಟ್ಟುಕೊಡುತ್ತಿಲ್ಲ.

click me!