ಅಗ್ನಿ ಶಾಮಕ ಇಲಾಖೆಯಲ್ಲಿ ಶುರುವಾಗಿದೆ ಬಡ್ತಿಯ ಬಿಕ್ಕಟ್ಟು.!

Published : Nov 08, 2023, 11:12 AM IST
ಅಗ್ನಿ ಶಾಮಕ ಇಲಾಖೆಯಲ್ಲಿ ಶುರುವಾಗಿದೆ ಬಡ್ತಿಯ ಬಿಕ್ಕಟ್ಟು.!

ಸಾರಾಂಶ

ಸಾಮಾನ್ಯ ವರ್ಗದ ಪದೋನ್ನತಿ ಅಕಾಂಕ್ಷಿಗಳು ದೂರು ನೀಡಿದ್ದಾರೆ. ಸಿಎಂ ಹಾಗೂ ಸರ್ಕಾರದ ಕಾರ್ಯದರ್ಶಿಗೆ ಸಾಮಾನ್ಯ ಹಾಗೂ ಹಿಂದುಳಿದ ವರ್ಗಗಳ ಪದೋನ್ನತಿ ಅಕಾಂಕ್ಷಿಗಳು ದೂರಿನಲ್ಲಿ ಆಳಲು ತೋಡಿಕೊಂಡಿದ್ದಾರೆ. ಬಡ್ತಿಯಲ್ಲಿ ನಮಗೆ ಅನ್ಯಾಯ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. 

ಬೆಂಗಳೂರು(ನ.08):  ಸಮಾಜ ಕಲ್ಯಾಣ ಇಲಾಖೆಯ ಶಿಫಾರಸ್ಸಿನಿಂದ ಗೊಂದಲ ಉಂಟಾದ ಪರಿಣಾಮ ಅಗ್ನಿ ಶಾಮಕ ಇಲಾಖೆಯಲ್ಲಿ ಬಡ್ತಿಯ ಬಿಕ್ಕಟ್ಟು ಶುರುವಾಗಿದೆ. ಹೌದು, ಡಾ. ಜಿ.ಪರಮೇಶ್ವರ ಇಲಾಖೆಗೆ ಸಚಿವ ಹೆಚ್. ಸಿ. ಮಹದೇವಪ್ಪ ಪತ್ರವೊಂದನ್ನು ಬರೆದಿದ್ದಾರೆ. ಹೀಗಾಗಿ ಸಾಮಾನ್ಯ ಹಾಗೂ SC ಹಾಗೂ ST  ಪಂಗಡಗಳ ನಡುವೆ ಗೊಂದಲ ಉಂಟಾಗಿದೆ. 

ಈ ಪತ್ರ ಇಲಾಖೆಯಲ್ಲಿ ಅಧಿಕಾರಿಗಳ ನಡುವೆ ವೈಮನಸ್ಸಿಗೆ ಕಾರಣವಾಗಿದೆ. ಡಿಎಫ್ಓ ನಿಂದ ಆರ್ಎಫ್ಒಗೆ ಪದೋನ್ನತಿಯಲ್ಲಿ ಕಿರಿಕಿರಿ ಉಂಟಾಗಿದೆ. ಡಿಪಿಎಆರ್ ಅಭಿಪ್ರಾಯ ಪಡೆಯದೇ ಪದೋನ್ನತಿಗೆ ಪ್ಲಾನ್ ಮಾಡಲಾಗಿದೆ. ಹೀಗಾಗಿ ಇದನ್ನು ಪ್ರಶ್ನಿಸಿ ಅಧಿಕಾರಿಗಳ ತಂಡ ಆಕ್ಷೇಪಿಸುತ್ತಿದ್ದಾರೆ. 

ಅಗ್ನಿಶಾಮಕಕ್ಕೆ ಈ ವರ್ಷ 2000 ಜನ ನೇಮಕ: ಗೃಹ ಸಚಿವ ಜ್ಞಾನೇಂದ್ರ

ಸಾಮಾನ್ಯ ವರ್ಗಕ್ಕೆ 2020ರಲ್ಲಿಯೇ ಅರ್ಹತೆಯೂ ಸಿಕ್ಕಿತ್ತು. ಸಾಮಾನ್ಯ ವರ್ಗ ಎರಡೂವರೆ ವರ್ಷಗಳಿಂದ ಕಾದು ಕುಳಿತಿದ್ದಾರೆ. ಆದ್ರೆ ಈಗ ಎಸ್ಸಿ & ಎಸ್ಟಿ ಅಭ್ಯರ್ಥಿಗಳ ಶಿಫಾರಸ್ಸು ಆದೇಶ ಹೆಚ್ಚಿಸಿ ಸಚಿವ ಹೆಚ್. ಸಿ. ಮಹದೇವಪ್ಪ ಇಲಾಖೆಯಿಂದ ಶಿಫಾರಸ್ಸು ಆದೇಶ ಬಂದಿದೆ. 

6 ಎಸ್ಸಿ, 2 ಎಸ್ಟಿ ಬ್ಯಾಕ್ಲಾಗ್ ಹುದ್ದೆ  ಪದೋನ್ನತಿಗೆ ಶಿಫಾರಸ್ಸು ಮಾಡಲಾಗಿದೆ. ಇದಕ್ಕೆ ಡಿಜಿಪಿ ಕಮಲ್ ಪಂತ್ ಅವರು  ಡಿಪಿಎಆರ್ಗೆ ಪತ್ರ ಬರೆದಿದ್ದಾರೆ. ಆದ್ರೆ ಡಿಪಿಎಆರ್ ಅಭಿಪ್ರಾಯ ಕೇಳದೇ ಪದೋನ್ನತಿಗೆ ಪ್ಲಾನ್ ಮಾಡಲಾಗಿದೆ. ಇದು ಇಲಾಖೆಯಲ್ಲಿ ಜಾತಿ ತಾರತಮ್ಯ ಆಗುತ್ತಿದೆ ಎಂದು ಆರೋಪಿಸಲಾಗಿದೆ. 

ಸದ್ಯ ಒಳಾಡಳಿತ ಪ್ರಿನ್ಸಿಪಲ್ ಸೆಕ್ರೆಟರಿ ಬಳಿ ಫೈಲ್ ಇದೆ. ಡಿಪಿಎಆರ್ ನಿಂದ ಲಿಖಿತ ಕಾನೂನು ಸಲಹೆ ಪಡೆಯಬೇಕು ಎಂದು ಡಿಜಿಪಿ ಜೊತೆ ಹಿಂದುಳಿದ ವರ್ಗಗಳ ಆಯೋಗವೂ ಹೇಳಿದೆ. ಆದ್ರೆ ಆ ಶಿಫಾರಸ್ಸು ಸಹ ಪರಿಗಣಿಸುತ್ತಿಲ್ಲವೆಂದು ಆರೋಪಿಸಲಾಗಿದೆ. 

ಅಗ್ನಿಶಾಮಕ ಇಲಾಖೆ ನೇಮಕಾತಿಯಲ್ಲಿ ಅಕ್ರಮ ಆರೋಪ, 7 ಅಭ್ಯರ್ಥಿಗಳ ವಿರುದ್ಧ FIR

ಈ ಸಂಬಂಧ ಸಾಮಾನ್ಯ ವರ್ಗದ ಪದೋನ್ನತಿ ಅಕಾಂಕ್ಷಿಗಳು ದೂರು ನೀಡಿದ್ದಾರೆ. ಸಿಎಂ ಹಾಗೂ ಸರ್ಕಾರದ ಕಾರ್ಯದರ್ಶಿಗೆ ಸಾಮಾನ್ಯ ಹಾಗೂ ಹಿಂದುಳಿದ ವರ್ಗಗಳ ಪದೋನ್ನತಿ ಅಕಾಂಕ್ಷಿಗಳು ದೂರಿನಲ್ಲಿ ಆಳಲು ತೋಡಿಕೊಂಡಿದ್ದಾರೆ. ಬಡ್ತಿಯಲ್ಲಿ ನಮಗೆ ಅನ್ಯಾಯ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. 

ಸದ್ಯ ಡಾ. ಜಿ. ಪರಮೇಶ್ವರ್ ಹಾಗೂ ಹೆಚ್. ಸಿ. ಮಹದೇವಪ್ಪರ ಮುಂದೆ ಚೆಂಡು ಇದ್ದು, ಸ್ವಜಾತಿ ಪ್ರೇಮ ತೋರುತ್ತಾರಾ.? ಇಲ್ಲಾ ನ್ಯಾಯ ನೀಡ್ತಾರಾ..? ಎಂಬುದಕ್ಕೆ ಕಾಲವೇ ಉತ್ತರ ನೀಡಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ
ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!