ಕೆಇಎ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ, ಓಎಂಆರ್ ಶೀಟ್ ತಿದ್ದಿ ನಡೆದಿರುವ ಅಕ್ರಮಗಳ ತನಿಖೆಯನ್ನು ಸರಕಾರ ಸಿಐಡಿಗೆ ವಹಿಸಿದ ಬೆನ್ನಲ್ಲೇ ಕಲಬುರಗಿಗೆ ಆಗಮಿಸಿರುವ ಸಿಐಡಿ ತಂಡ ತನಿಖೆಯ ಸಂಬಂಧಿತ ಎಲ್ಲಾ ಕಡತಗಳನ್ನು ಅಧಿಕೃತವಾಗಿ ಪೊಲೀಸರಿಂದ ಪಡೆದುಕೊಂಡಿದೆ.
ಕಲಬುರಗಿ (ನ.15): ಕೆಇಎ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ, ಓಎಂಆರ್ ಶೀಟ್ ತಿದ್ದಿ ನಡೆದಿರುವ ಅಕ್ರಮಗಳ ತನಿಖೆಯನ್ನು ಸರಕಾರ ಸಿಐಡಿಗೆ ವಹಿಸಿದ ಬೆನ್ನಲ್ಲೇ ಕಲಬುರಗಿಗೆ ಆಗಮಿಸಿರುವ ಸಿಐಡಿ ತಂಡ ತನಿಖೆಯ ಸಂಬಂಧಿತ ಎಲ್ಲಾ ಕಡತಗಳನ್ನು ಅಧಿಕೃತವಾಗಿ ಪೊಲೀಸರಿಂದ ಪಡೆದುಕೊಂಡಿದೆ. ಇದೀಗ ಹಗರಣದ ಪ್ರಮುಖ ಆರೋಪಿ ಆರ್‌ಡಿ ಪಾಟೀಲ್ ಸೇರಿದಂತೆ ಹಲವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದಲ್ಲದೆ ಯಾದಗಿರಿಯಲ್ಲೂ 5 ಪ್ರಕರಣ ದಾಖಲಾಗರೋದರಿಂದ ಅಲ್ಲಿಂದಲೂ ಹಗರಣ ಕುರಿತಾದ ಪ್ರಕರಣಗಳ ಕಡತಗಳನ್ನೆಲ್ಲ ಸಂಗ್ರಹಿಸಲಿುವ ಸಿಐಡಿ ನಂತರದಲ್ಲಿ ಆರೋಪಿಗಳ ವಿಚಾರಣೆಗೆ ಮುಂದಾಗುವ ಸಾಧ್ಯತೆಗಳಿವೆ.
ನ್ಯಾಯಾಂಗ ಬಂಧನದಲ್ಲಿ ಆರೋಪಿಗಳು ಇರೋದರಿಂದ ಅವರನ್ನು ಮತ್ತೆ ಕಸ್ಟಡಿಗೆ ಪಡೆಯಲು ಸಿಐಡಿ ದೀಪಾವಳಿ ನಂತರವೇ ಮುಂದಾಗಲಿದೆ. ಏಕೆಂದರೆ ನ್ಯಾಯಾಲಯಕ್ಕೂ ದೀಪಾವಳಿ ರಜೆ ಇರೋ ಕಾರಣ ಇನ್ನೆರಡು ದಿನಗಳ ನಂತರವಷ್ಟೇ ಹಗಣದ ತನಿಖೆಯಲ್ಲಿ ಚುರುಕು ಕಾಣುವ ಸಾಧ್ಯತೆಗಳಿವೆ. ಪಿಎಸ್‌ಐ ಹಗರಣದಲ್ಲಿಯೂ ಮಹತ್ವದ ಪಾತ್ರ ನಿಭಾಯಿಸಿ ರಾಜ್ಯಾದ್ಯಂತ ಗಮನ ಸೆಳೆದಿದ್ದ ಸಿಐಡಿ ಎಸ್ಪಿ ರಾಘವೇಂದ್ರ ಹೆಗಡೆ ನೇತೃತ್ವದಲ್ಲಿಯೇ ಇದೀಗ ಕೆಇಎ ಹಗರಣದ ತನಿಖೆ ನಡೆಯುತ್ತಿರೋದು ವಿಶೇಷ. ಹೆಗಡೆಯವರು ಕಲಬುರಗಿಗೆ ಆಗಮಿಸಿದ್ದು ತನಿಖೆಯ ಪ್ರಾಥಮಿಕ ಹಂತದ ಸಿದ್ಧತೆಗಳು ಸಾಗಿವೆ. ತಂಡದ ತಂಡದಲ್ಲಿ ಡಿವೈಎಸ್ಪಿ ತನ್ವೀರ್, ಶಂಕರಗೌಡ ತಂಡದಲ್ಲಿರುವ ಪ್ರಮುಖ ಅಧಿಕಾರಿಗಳಾಗಿದ್ದಾರೆ.
undefined
ಕಿಂಗ್‌ಪಿನ್ ಆರ್.ಡಿ.ಪಾಟೀಲ್ ತವರಿಂದಲೇ ಕೆಇಎ ಪ್ರಶ್ನೆಪತ್ರಿಕೆ ಸೋರಿಕೆ?
ಕೆಇಎ ತನಿಖಾ ತಂಡದಲ್ಲೂ ಅಕ್ರಮಕೋರರ ಸಿಂಹಸ್ವಪ್ನ ಸಿಐಡಿ ಶಂಕರಗೌಡ ಪ್ರತ್ಯಕ್ಷ: ಈಗಾಗಲೇ ಕಲಬುರಗಿಯಿಂದ ಬಯಲಾಗಿ ಇಡೀ ರಾಜ್ಯಾದ್ಯಂತ ವ್ಯಾಪ್ಸಿದ್ದಂತಹ ಪಿಎಸ್‌ಐ ನೇಮಕಾತಿ ಅಕ್ರಮದ ಹಗರಣದಲ್ಲ ಕಾರ್ಯನಿರ್ವಹಿಸಿ ಗಮನ ಸೆಳೆದಿರುವ ಡಿವೈಎಸ್ಪಿ ಶಂಕರಗೌಡ ಮತ್ತೆ ಈ ತಂಡದಲ್ಲಿಯೂ ಇರೋದರಿಂದ ಸಿಐಡಿ ತನಿಖೆಯ ಬಗ್ಗೆ ಸಹಜವಾಗಿಯೇ ಸಾರ್ವಜನಿಕ ವಲಯದಲ್ಲಿ ಕುತೂಹಲ ಕೆರಳಿದೆ. ಕಳೆದ ಬಾರಿಯಂತೆ ಈ ಬಾರಿಯೂ ತನಿಖೆಯ ತಂಡದಲ್ಲಿರುವ ಶಂಕರಗೌಡರಿಗೆ ಈ ಬಾರಿಯೂ ಮಹತ್ವದ ತನಿಖೆಯ ಹೊಣೆಗಾರಿಕೆ ಹಂಚಿಕೆಯಾಗುವ ಸಾಧ್ಯತೆಗಳಿವೆ.
ಪಿಎಸ್‌ಐ ಹಗರಣದಲ್ಲಂತೂ ಶಂಕರಗೌಡ ಅಕ್ರಮಕೋರರ ಪಾಲಿಗೆ ಸಿಂಹಸ್ವಪ್ನವಾಗಿದ್ದರು. ಪಿಎಸ್‌ಐ ಅಕ್ರಮದಲ್ಲಿಯೂ ಕಿಂಗ್‌ಪಿನ್ ಆಗಿ ಹೊರಹೊಮ್ಮಿದ್ದ ಆರ್‌ಡಿ ಪಾಟೀಲ್ ಅಫಜಲ್ಪೂರದಲ್ಲಿನ ಸಾಮೂಹಿಕ ವಿವಾಹ ಮಂಟಪದಿಂದ ಪರಾರಿಯಾಗಿದ್ದಾಗ ಆತನನ್ನು ಬೆನ್ನಟ್ಟಿ ಪುಣೆ- ಸೊಲ್ಲಾಪುರ ನಡುವೆ ಬಂಧಿಸಿ ಹೆಡಮುರಿ ಕಟ್ಟುವ ಮೂಲಕ ಗಮನ ಸೆಳೆದಿದ್ದರು. ಇದಾದ ನಂತರ ಪಿಲ್‌ಐ ಹಗಣದಲ್ಲಿ ಆರ್‌ಡಿ ಪಾಟೀಲ್ ಸಹೋದರ ಮಹಂತೇಶ ಪಾಟೀಲನನ್ನು ಅಂಗಿ ಕಾಲರ್ ಪಟ್ಟಿ ಹಿಡಿದು ಎಳೆ ತಂದು ಲಾಕಪ್‌ಗೆ ತಳ್ಳುವ ಮೂಲಕವೂ ಸಾರ್ವಜನಿಕವಾಗಿ ಗಮನ ಸೆಳೆದಿದ್ದರು. ಇದೀಗ ಇದೇ ಸಿಐಡಿ ಶಂಕರಗೌಡರು ಮತ್ತೆ ಕೆಇಎ ಹಗರಣದ ಅಕ್ರಮಕೋರರ ಜತಕ ಜಾಲಾಡುವ ತನಿಖೆಯಲ್ಲಿದ್ದು ಗಮನ ಸೆಳೆದಿದ್ದಾರೆ.
KEA ಪರೀಕ್ಷಾ ಅಕ್ರಮ ರಾಜ್ಯಾದ್ಯಂತ ವ್ಯಾಪಿಸಿರೋ ಶಂಕೆ: ಸಚಿವ ಪ್ರಿಯಾಂಕ್ ಖರ್ಗೆ
ಶುರುವಾಯ್ತು ತನಿಖೆಗೆ ಸಿದ್ಧತೆ- ಕಡತಗಳ ಹಸ್ತಾಂತರ: ಅಧಿಕೃತವಾಗಿ ಸಿಐಡಿ ತನಿಖೆ ಆರಂಭವಾಗಿದ್ದು ಈ ಅಕ್ರಮ ಪ್ರಕರಣದ ಕೇಸ್ ಫೈಲ್‌ಗಳನ್ನು ಕಲಬುರಗಿ ಹಾಗೂ ಯಾದಗಿರಿ ಪೊಲೀಸರು ಹಾಗೂ ಸಿಐಡಿ ನಡುವೆ ಪರಸ್ಪರ ಹಸ್ತಾಂತರ ಪ್ರಕ್ರಿಯೆ ಶುರುವಾಗಿದೆ. ಈಗಾಗಲೇ ಅಶೋಕ ನಗರ ಠಾಣೆಯಲ್ಲಿ ದಾಖಲಾಗಿರುವ ಕೇಸ್‌ನ ತನಿಖೆಯ ಹಂತಗಳನ್ನು ಅಲ್ಲಿನ ಪಿಐ ಅರುಣ ಸಿಐಡಿ ಅಧಿಕಾರಗಿಳಿಗೆ ವಿವರಿಸಿದ್ದಾರೆ. ಇದಲ್ಲದೆ ಅಫಜಲ್ಪುರ ಹಾಗೂ ವಿವಿ ಠಾಣೆಯಲ್ಲಿನ ಕೇಸ್‌ಗಳ ತನಿಖೆಯ ಕಡತಗಳನ್ನು ಸಿಐಡಿ ಪಡೆದುಕೊಂಡು ಮಾಹಿತಿ ಕಲೆ ಹಾಕಿದೆ. ಇಂದು ಕಲಬುರಗಿಗೆ ಸಿಐಡಿ ಎಸ್ಪಿ ರಾಘವೇಂದ್ರ ಆಗಮಿಸಿದ್ದು ತನಿಖೆಯ ವ್ಯಾಪ್ತಿ, ವಿಸ್ತಾರ, ತಂಡದ ಅಧಿಕಾರಿಗಳು ನಿಭಾಯಿಸಬೇಕಾದಂತಹ ಜವಾಬ್ದಾರಿ, ಹೊಣೆಗಾರಿಕೆಗಳ ಬಗ್ಗೆ ಮಹತ್ವದ ಸೂಚನೆಗಳನ್ನು ನೀಡುವ ಸಾಧ್ಯತೆಗಳಿವೆ. ಹೀಗಾಗಿ ದೀಪಾವಳಿ ನಂತರ ಸಿಐಡಿ ತನಿಖೆ ವೇಗ ಪಡೆದುಕೊಳ್ಳಲಿದೆ.