ಕಾರವಾರ: ರಸ್ತೆ ಮೇಲೆ ಕಸ ಎಸೆಯಬೇಡಿ ಎಂದಿದ್ದಕ್ಕೆ ಕಾರ್ಮಿಕರ ಮೇಲೆ ಹಲ್ಲೆ

Published : Sep 13, 2023, 01:59 PM IST
ಕಾರವಾರ: ರಸ್ತೆ ಮೇಲೆ ಕಸ ಎಸೆಯಬೇಡಿ ಎಂದಿದ್ದಕ್ಕೆ ಕಾರ್ಮಿಕರ ಮೇಲೆ ಹಲ್ಲೆ

ಸಾರಾಂಶ

 ರಸ್ತೆಯ ಮೇಲೆ ಕಸ ಎಸೆಯಬೇಡಿ. ನಗರಸಭೆ ವಾಹನಕ್ಕೆ ನೀಡಿ ಎಂದ ಇಲ್ಲಿನ ನಗರಸಭೆಯ ಪೌರಕಾರ್ಮಿಕನ ಮೇಲೆ ಹಲ್ಲೆ ಇಬ್ಬರು ವ್ಯಕ್ತಿಗಳು ಸೋಮವಾರ ರಾತ್ರಿ ಹಲ್ಲೆ ಮಾಡಿದ್ದಾರೆ.

 ಕಾರವಾರ (ಸೆ.13) :  ರಸ್ತೆಯ ಮೇಲೆ ಕಸ ಎಸೆಯಬೇಡಿ. ನಗರಸಭೆ ವಾಹನಕ್ಕೆ ನೀಡಿ ಎಂದ ಇಲ್ಲಿನ ನಗರಸಭೆಯ ಪೌರಕಾರ್ಮಿಕನ ಮೇಲೆ ಹಲ್ಲೆ ಇಬ್ಬರು ವ್ಯಕ್ತಿಗಳು ಸೋಮವಾರ ರಾತ್ರಿ ಹಲ್ಲೆ ಮಾಡಿದ್ದಾರೆ.

ನಗರಸಭೆಯಲ್ಲಿ ಪೌರಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿರುವ ಚೇತನಕುಮಾರ ಕೊರಗ ಎಂಬುವವರು ಸ್ವಚ್ಛತಾ ಕೆಲಸದ ಪಾಳಿ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಸಮೀಪ ನಿತಿನ್ ಹರಿಕಂತ್ರ ಎಂಬುವವರು ಕಸ ಬಿಸಾಡುತ್ತಿದ್ದರು. ಇದನ್ನು ಗಮನಿಸಿದ ಚೇತನಕುಮಾರ ರಸ್ತೆಗಳನ್ನು ಸ್ವಚ್ಛತೆ ಮಾಡಿದ್ದು ಪುನಃ ಇಲ್ಲಿ ಕಸ ಬಿಸಾಡಬೇಡಿ. ನಗರಸಭೆಯ ಕಸ ಸಂಗ್ರಹಣೆ ಮಾಡುವ ವಾಹನಕ್ಕೆ ನೀಡಿ ಎಂದು ತಿಳಿಸಿದ್ದಾರೆ. ಆಗ ನಿತಿನ ಹರಿಕಂತ್ರ ಹಾಗೂ ನಿತೇಶ ಹರಿಕಂತ್ರ ಚೇತನ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ನಾನು ಇಲ್ಲಿಯೇ ಕಸ ಬಿಸಾಡುತ್ತೇನೆ. ನನಗೆ ಹೇಳುವವನು ನೀನು ಯಾರು? ಕಸ ಆರಿಸುವವ ನೀನು. ನಿನ್ನ ಹಾಗೂ ನಿನ್ನ ಜಾತಿಯ ಕೆಲಸ ನಾವು ಬಿಸಾಡಿದ ಕಸ ಆರಿಸುವುದು, ಈ ಕಸ ತೆಗೆದುಕೊಂಡು ಹೋಗು ಎಂದು ಹೇಳಿ ಹಲ್ಲೆ ಮಾಡಿದ್ದಾರೆ. ಅಲ್ಲದೆ ಚೇತನ ಅವರನ್ನು ಬಿಡಿಸಲು ಬಂದ ಕಚೇರಿ ಸಿಬ್ಬಂದಿ ಪುರುಷೋತ್ತಮ ಕೊರಗ ಅವರ ಮೇಲೆ ಕೂಡಾ ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ‌ ಮದ್ಯಸೇವನೆ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಕುಡುಕರಿಂದ‌ ವ್ಯಕ್ತಿ ಮೇಲೆ ಹಲ್ಲೆ!

ಮನವಿ:

ಪೌರಕಾರ್ಮಿಕರ ಹಾಗೂ ಕಚೇರಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಕೂಡಲೇ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘ ಕಾರವಾರ ಘಟಕದ ಪದಾಧಿಕಾರಿಗಳು ಪೌರಾಯುಕ್ತ ಚಂದ್ರಮೌಳಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಇದರಿಂದ ನಗರಸಭೆ ಪೌರಕಾರ್ಮಿಕರಿಗೆ ಮನೆ-ಮನೆ ತಿರುಗಿ ಸ್ವಚ್ಛತೆ ಕೆಲಸ ಮಾಡಲು ಜೀವ ಭಯ ಕಾಡುತ್ತಿದೆ. ನಾವು ಆರೋಪಿಗಳನ್ನು ಬಂಧಿಸುವವರೆಗೂ ಆ ವಾರ್ಡ್ ಕಸ ತೆಗೆಯುವುದಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ನಗರಸಭೆಯ ವಿವಿಧ ವಿಭಾಗದ ಸಿಬ್ಬಂದಿ ಇದ್ದರು. 

 

ಇಷ್ಟೊತ್ತಿಗೆ ಬರಗಾಲ ಘೋಷಣೆ ಆಗಬೇಕಿತ್ತು, ಸೆಪ್ಟೆಂಬರ್ ಬಂದ್ರೂ ಆಗಿಲ್ಲ: ಬೊಮ್ಮಾಯಿ ಕಿಡಿ

ರಸ್ತೆಯ ಮೇಲೆ ಕಸ ಎಸೆಯಬಾರದು ಎಂದು ತಿಳಿವಳಿಕೆ ನೀಡಿದ ನಮ್ಮ ಸಿಬ್ಬಂದಿ ಚೇತನ ಹಾಗೂ ಪುರುಷೋತ್ತಮ ಮೇಲೆ ಸೋಮವಾರ ರಾತ್ರಿ ಬಸ್‌ನಿಲ್ದಾಣದ ಸಮೀಪ ಹಲ್ಲೆ ಮಾಡಿದ ಬಗ್ಗೆ ತಿಳಿದಿದೆ. ಹಲ್ಲೆ ಮಾಡಿದ ವ್ಯಕ್ತಿಗಳ ವಿರುದ್ಧ ಕ್ರಮವಹಿಸಲು ಪೊಲೀಸ್ ಇಲಾಖೆಗೆ ದೂರು ನೀಡಲಾಗಿದೆ. ಕಾನೂನಿನ ಪ್ರಕಾರ ಸಾರ್ವಜನಿಕರು ಕಸವನ್ನು ಎಸೆಯುವುದು ಕೂಡಾ ತಪ್ಪು.

ಕೆ.ಚಂದ್ರಮೌಳಿ, ಪೌರಾಯುಕ್ತ

ದಿನದ ಕೆಲಸ ಮುಗಿಸಿಕೊಂಡು ತೆರಳುತ್ತಿದ್ದ ವೇಳೆ ಸಾರ್ವಜನಿಕರೊಬ್ಬರು ರಸ್ತೆಯ ಮೇಲೆ ಕಸ ಎಸೆಯುತ್ತಿರುವುದನ್ನು ಗಮನಿಸಿದ ಚೇತನ ಆ ರೀತಿ ಮಾಡಬೇಡಿ ಎಂದಿದ್ದಾರೆ. ಅವಾಚ್ಯ ಶಬ್ದದಿಂದ ನಿಂದಿಸಿ ಆಗ ಆ ವ್ಯಕ್ತಿ ಏಕಾಏಕಿ ಹಲ್ಲೆ ಮಾಡಿದ್ದಾರೆ. ಚೇತನ ಅವರನ್ನು ಬಿಡಿಸಲು ಹೋದ ನಮಗೂ ಹಲ್ಲೆ ಮಾಡಿದ್ದಾರೆ. ಅವರ ಇಬ್ಬರ ವಿರುದ್ಧ ಕಾನೂನು ಕ್ರಮವಾಗಬೇಕು.

ಪುರುಷೋತ್ತಮ ಕೊರಗ ಹಲ್ಲೆಗೊಳಗಾದ ಸಿಬ್ಬಂದಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ಗ್ಯಾಸ್ ಸಿಲಿಂಡರ್ ಸ್ಫೋಟ - ಗೋವಾ ಕ್ಲಬ್‌ನಲ್ಲಿ ಅಗ್ನಿ ಅವಘಡ, 23 ಸಾವು