ಆರ್‌ಎಸ್‌ಎಸ್‌ ಬೆಂಬಲ ಇದೆ, ಪೊಲೀಸರಿಗೆ ಚೈತ್ರಾ ಕುಂದಾಪುರ ಮಾಹಿತಿ?: ಬೊಮ್ಮಾಯಿ ಕಿಡಿ

By Girish GoudarFirst Published Sep 13, 2023, 1:52 PM IST
Highlights

ಕಾವೇರಿ ನೀರಿನ ವಿಚಾರದಲ್ಲಿ ನಮ್ಮ ನಿಲುವು ಬಹಳ ಸ್ಪಷ್ಟವಾಗಿದೆ. ಈಗಾಗಲೇ 15, 16 ಟಿಎಂಸಿಯ 15,000 ಕ್ಯೂಸೆಕ್ಸ್ ನೀರು ಹರಿಸಿದ್ದಾರೆ. ಮತ್ತೆ ನೀರು ಬಿಡಿ ಎನ್ನುವುದು ಸಾಧ್ಯವಾಗದ ಮಾತು: ಬಸವರಾಜ ಬೊಮ್ಮಾಯಿ 

ಹಾವೇರಿ(ಸೆ.13):  ಕಾವೇರಿ ನೀರಿನ ವಿಚಾರದಲ್ಲಿ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರು ಸರ್ವಪಕ್ಷ ಸಭೆ ಕರೆದಿದ್ದಾರೆ. ಇದಕ್ಕೆ ಹೋಗಲು ನನಗೆ ತಡ ರಾತ್ರಿ ಆಹ್ವಾನ‌ ಬಂದಿದೆ. ಹೀಗಾಗಿ ಅದಕ್ಕೆ ಸಭೆ ಅಟೆಂಡ್ ಮಾಡೋಕೆ ಆಗಿಲ್ಲ, ನಾನು ಇಂದು ಪ್ರವಾಸದಲ್ಲಿ ಇದ್ದೇನೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 

ಕಾವೇರಿ ವಿಚಾರವಾಗಿ ಸಭೆಗೆ ಗೈರಾದ ಕುರಿತು ಪ್ರತಿಕ್ರಿಯೆ ಇಂದು(ಬುಧವಾರ) ಜಿಲ್ಲೆಯ ಸವಣೂರಿನ ವಿ.ಕೃ. ಗೋಕಾಕ್‌ ಸಭಾ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬೊಮ್ಮಾಯಿ, ಕಾವೇರಿ ನೀರಿನ ವಿಚಾರದಲ್ಲಿ ನಮ್ಮ ನಿಲುವು ಬಹಳ ಸ್ಪಷ್ಟವಾಗಿದೆ. ಈಗಾಗಲೇ 15, 16 ಟಿಎಂಸಿಯ 15,000 ಕ್ಯೂಸೆಕ್ಸ್ ನೀರು ಹರಿಸಿದ್ದಾರೆ. ಮತ್ತೆ ನೀರು ಬಿಡಿ ಎನ್ನುವುದು ಸಾಧ್ಯವಾಗದ ಮಾತು. ಅಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಕಾವೇರಿ ಜಲಾನಯನ ಪ್ರದೇಶದ ಜನರಿಗೆ, ರೈತರಿಗೆ ಸಂಕಷ್ಟದ ಪರಿಸ್ಥಿತಿ ಇದೆ. ಮಳೆಗಾಲ ಇಲ್ಲ,  ಹೀಗಾಗಿ ಕುಡಿಯುವ ನೀರಿಗಾಗಿ ಸಂಗ್ರಹ ಮಾಡುವ ಅವಶ್ಯವಿದೆ. ತಮಿಳುನಾಡಿನವರು 1.8 ಲಕ್ಷ ಹೆಕ್ಟರ್ ನೀರಾವರಿ ಮಾಡಬೇಕು ಅಂತಾ ಕೇಳಿದ್ರು. ಆದರೆ ಅವಶ್ಯಕತೆಗಿಂದ ಹೆಚ್ಚು 4 ಲಕ್ಷ ಹೆಕ್ಟರ್ ಮಾಡಿ ಅಕ್ರಮವಾಗಿ ನೀರು ಕೇಳ್ತಾ ಇದಾರೆ ಅಂತ ಆರೋಪಿಸಿದ್ದಾರೆ. 

ಚೈತ್ರಾ ಕುಂದಾಪುರ ಬಿಜೆಪಿ ಟಿಕೆಟ್‌ ವಂಚನೆ ಕೇಸ್‌ನಲ್ಲಿ ಸ್ವಾಮೀಜಿ ಪಾಲೆಷ್ಟು ಗೊತ್ತಾ?

ಸುಪ್ರೀಂ ಕೋರ್ಟ್‌ನಲ್ಲಿ ಪ್ರತಿಪಾದಿಸೋಕೆ ಆಗ್ತಾ ಇಲ್ಲಾ: 

ಕಾವೇರಿ ವಿಚಾರದಲ್ಲಿ ಸರ್ಕಾರಕ್ಕೆ ಪದೆ ಪದೆ ಹಿನ್ನಡೆಯ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು, ಸುಪ್ರೀಂ ಕೋರ್ಟ್‌ಗೆ ನೀರು ಕೊಡಲ್ಲಾ ಹೇಳಿದ ಮೇಲೆ ಅದಕ್ಕೆ ಸರ್ಕಾರ ಬದ್ಧವಾಗಿ ಇರಬೇಕು. ಯಾವುದೇ ಕಾರಣಕ್ಕೂ ನೀರು ಬಿಡಕೂಡದು. ಕೂಡಲೇ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ನೀರು ಯಾಕೆ ಬಿಡೋಕೆ ಆಗಲ್ಲಾ ಎಂದು ಗಟ್ಟಿಯಾಗಿ ಪ್ರತಿಪಾದಿಸಬೇಕು. ಇದನ್ನೇ ಸರ್ಕಾರಕ್ಕೆ ಹೇಳಿದ್ದೇನೆ, ಇದೆ ನಮ್ಮ ಆಗ್ರಹ ಕೂಡ ಆಗಿದೆ. ಮತ್ತೆ ಸರ್ವಪಕ್ಷ ಸಭೆ ಕರೆದಿರುವುದು ನೋಡಿದ್ರೆ, ಸುಪ್ರೀಂ ಕೋರ್ಟ್‌ನಲ್ಲಿ ಪ್ರತಿಪಾದಿಸೋಕೆ ಆಗ್ತಾ ಇಲ್ಲಾ. ಮತ್ತೆ ಒತ್ತಡಕ್ಕೆ ಸಿಲುಕಿದ್ದಾರೆ. ನಾವೆಲ್ಲಾ ಅವರ ಜೊತೆ ಇದ್ದೇವೆ. ಯಾವುದೇ ಕಾರಣಕ್ಕೂ ಒತ್ತಡಕ್ಕೆ ಮಣಿಯಬಾರದು. ನಮ್ಮನ್ನ ನಾವು ರಕ್ಷಣೆ ಮಾಡಿಕೊಳ್ಳಬೇಕು. ಗಟ್ಟಿಯಾಗಿ ನಿಲ್ಲುವ ಕಾಲ ಬಂದಿದೆ ಹಿಂದೆ ಸರಿಯಬಾರದು. ರಾಜ್ಯದ ನಾಯಕತ್ವ ಎಷ್ಟು ಗಟ್ಟಿಯಾಗಿದೆ ಎಂದು ಈ ವೇಳೆ ತೋರಿಸಿಕೊಡಬೇಕಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಬೊಮ್ಮಾಯಿ ಸಲಹೆ ನೀಡಿದ್ದಾರೆ. 

ಚೈತ್ರಾ ಕುಂದಾಪುರ ಅರೆಸ್ಟ್‌: ಅನಗತ್ಯವಾಗಿ‌ ಹಿಂದೂಪರ ಕಾರ್ಯಕರ್ತರಿಗೆ ತೊಂದರೆ ಕೊಡೋದು ಸರಿಯಲ್ಲ, ಜ್ಞಾನೇಂದ್ರ

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಕೂರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಅಲ್ಲಿನ ಸ್ಥಳೀಯ ನಾಯಕರು, ಕಮಿಷನರ್‌ಗಳು ಕೂತು ಈ ಸಮಸ್ಯೆಯನ್ನ ಬಗೆಹರಿಸಬೇಕು. ಕಳೆದ ಬಾರಿ ಯಾವ ರೀತಿ ಆಗಿದೆ ಎನ್ನೋದು ನೋಡಿ, ಯಾರಿಗೂ ಸಮಸ್ಯೆ ಆಗದಂತೆ ಮಾಡಬೇಕು ಎಂದು ಹೇಳಿದ್ದಾರೆ. 

ಉದ್ಯಮಿಗೆ ಮೋಸ ವಿಚಾರದಲ್ಲಿ ಚೈತ್ರಾ ಕುಂದಾಪುರ ಅರೆಸ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಆರ್‌ಎಸ್‌ಎಸ್‌ನವರ ಬೆಂಬಲ ಇದೆ ಎಂದು ಚೈತ್ರಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂಬ ವಿಚಾರಕ್ಕೆ ಬೊಮ್ಮಾಯಿ ಕಿಡಿ ಕಾರಿದ್ದಾರೆ.  ಯಾರಾದರೂ ತಪ್ಪು ಮಾಡಿದಾಗ ತಮ್ಮ ಮೈ ಮೇಲೆ ಆಪಾದನೆ ಇರೋದನ್ನ ತಪ್ಪಿಸಿಕೊಳ್ಳಲು ಹಾಗೆ ಹೇಳ್ತಾರೆ. ಪೋಲಿಸನವರು ಅದನ್ನು ತನಿಖೆ ಮಾಡಲಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ. 

click me!