ಕಾಂಗ್ರೆಸ್‌ಗೆ ಅಧಿಕಾರದ ದಾಹ, ಬಿಜೆಪಿಗೆ ಅಭಿವೃದ್ಧಿಯ ತುಡಿತ, ದಾವಣೆಗೆರೆಯಲ್ಲಿ ಸಿಎಂ ಬೊಮ್ಮಾಯಿ ಭಾಷಣ!

By Suvarna News  |  First Published Mar 25, 2023, 4:23 PM IST

ಡಬಲ್ ಎಂಜಿನ್ ಸರ್ಕಾರ ಕರ್ನಾಟಕ ಹಿಂದೆಂದು ಕಾಣದಂತ ಅಭಿವೃದ್ಧಿ ಕಾಣುತ್ತಿದೆ. ಯುಪಿಎ ಸರ್ಕಾರಕ್ಕಿಂತ 5 ಪಟ್ಟು ಹೆಚ್ಚು ಹಣವನ್ನು ಮೋದಿ ಸರ್ಕಾರ ಕರ್ನಾಟಕಕ್ಕೆ ನೀಡಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ. ದಾವರಣೆಗೆರೆಯಲ್ಲಿನ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಸಿಎಂ ಬೊಮ್ಮಾಯಿ ಭಾಷಣದ ಹೈಲೈಟ್ಸ್ ಇಲ್ಲಿದೆ.


ದಾವಣೆಗೆರೆ(ಮಾ.25) ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ದಾಹ. 60 ವರ್ಷ ಅಧಿಕಾರದಲ್ಲಿದ್ದರೂ ದೇಶದ ಬಗ್ಗೆ ಕಾಳಜಿ ಇಲ್ಲ, ಕರ್ನಾಟಕದ ಬಗ್ಗೆ ಕಾಳಜಿ ಇಲ್ಲ. ಆದರೆ ಪ್ರಧಾನಿ ಮೋದಿ ಡಬಲ್ ಎಂಜಿನ್ ಸರ್ಕಾರಕ್ಕೆ 5 ಪಟ್ಟು ಹಣವನ್ನು ಕೇಂದ್ರ ನೀಡಿದೆ. ರಾಷ್ಟ್ರೀಯ ಹೆದ್ದಾರಿಗೆ 6,000 ಕಿಲೋಮೀಟರ್ ರಸ್ತೆಗೆ ಹಣ ಮಂಜೂರು ಮಾಡಲಾಗಿದೆ. ಈ ವರ್ಷ 7,351 ಕೋಟಿ ರೂಪಾಯಿಯನ್ನು ಕರ್ನಾಟಕಕ್ಕೆ ನೀಡಲಾಗಿದೆ. ಭದ್ರಾ ಮೇಲ್ಡಂಡೆ ಯೋಜನೆಗೆ 5,000 ಕೋಟಿ ರೂಪಾಯಿ ನೀಡಲಾಗಿದೆ ಎಂದು ಮುಖ್ಯಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಇಂದು ದಾವಣೆಗೆರೆಯಲ್ಲಿ ಆಯೋಜಿಸಿದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಸಮಾರೋಪ ಸಮಾರಂಭ ಪಾಲ್ಗೊಂಡು ಬೊಮ್ಮಾಯಿ ಮಾತನಾಡಿದ್ದಾರೆ. 

ಎಲ್ಲಾ ದೇಶಗಳು ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತಕ್ಕೆ ಗೌರವ ನೀಡುತ್ತಿದೆ. ಪಾಕಿಸ್ತಾನದಲ್ಲಿ ಅಲ್ಲಿಯ ಸಾಮಾನ್ಯ ಜನ, ನಮಗೆ ನರೇಂದ್ರ ಮೋದಿಯಂತ ನಾಯಕತ್ವ ಬೇಕು ಎಂದು ಹೇಳುತ್ತಿದೆ. ಕೋವಿಡ್ ಸಂಪೂರ್ಣವಾಗಿ ನಿಯಂತ್ರಣ ಮಾಡಿ ಭಾರತವನ್ನು ಮುನ್ನಡೆಬಲ್ಲ ಮೋದಿ ನಾಯಕತ್ವ ಚೀನಾಗೆ ಬೇಕು ಎಂದು ಚೀನಾದ ಪತ್ರಿಕೆ ಹೇಳುತ್ತಿದೆ.  ಆದರೆ ನಮ್ಮರು, ವಿರೋಧ ಪಕ್ಷದ ನಾಯಕರು ಪ್ರಧಾನಿ ಮೋದಿ ಟೀಕೆ ಮಾಡಿ, ಭಾರತದ ಪ್ರಜಾಪ್ರಭುತ್ವವನ್ನು ವಿರೋಧಿ ಇತರ ದೇಶಗಳ ನೆರವು ಪಡೆಯುತ್ತಿದ್ದಾರೆ. ಇಂತಹ ನಾಯಕತ್ವ ನಮಗೆ ಬೇಕಾ ಅನ್ನೋದನ್ನು ನಾವು ಯೋಚಿಸಬೇಕು ಎಂದು ಬೊಮ್ಮಾಯಿ ಹೇಳಿದ್ದಾರೆ.

Tap to resize

Latest Videos

ನನಗೆ 80 ವರ್ಷ, ಮನೆಗೆ ಮನಗೆ ತೆರಳಿ ಬಿಜೆಪಿ ಗೆಲ್ಲಿಸಲು ಶ್ರಮಿಸುತ್ತೇನೆ, ಮೋದಿ ಸಮ್ಮುಖದಲ್ಲಿ ಯಡಿಯೂರಪ್ಪ ಭರವಸೆ!

ಭದ್ರಾ ಮೇಲ್ದಂಡೆ ಯೋಜನೆ ಬಹಳ ದಿನಗಳ ಬೇಡಿಕೆಯಾಗಿತ್ತು. ಈ ಯೋಜನೆಗೆ ಶಕ್ತಿ ತುಂಬಿರುವುದು ಪ್ರಧಾನಿ ನರೇಂದ್ರ ಮೋದಿ. 5,300 ಕೋಟಿ ರೂಪಾಯಿ ಈ ಯೋಜನೆಗೆ ಕೇಂದ್ರ ನೀಡಿದೆ. ಮೊದಲ ಬಾರಿಗೆ ಇಷ್ಟು ದೊಡ್ಡ ಮೊತ್ತದ ಹಣ ಕರ್ನಾಟಕದ ನೀರಾವರಿಗೆ ಬಂದಿದೆ. ಇದಕ್ಕೆ ಮೋದಿ ಕಾರಣ. ಕಳಸ ಬಂಡೂರಿಗೆ ಅನುಮತಿ ಕೊಟ್ಟು, ಡಿಪಿಆರ್ ಮಾಡಿಸಿ, ನಮ್ಮ ಹೋರಾಟಕ್ಕೆ ಗೆಲುವವಾಗಿದೆ. ಈಗಾಗಲೇ ಸಂಪುಟದಲ್ಲಿ ಅನುಮೋದನೆ ಕೊಟ್ಟು ಟೆಂಡರ್ ಕರೆದಿದ್ದೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ.

ಕಿಸಾನ್ ಸಮ್ಮಾನ್ ಯೋಜನೆ ಮೂಲಕ 16,000 ಕೋಟಿ ರೂಪಾಯಿ ನೀಡಿದ್ದಾರೆ. ಜಲ ಜೀವನ ಮಿಶನ್ ಮೂಲಕ ಹಳ್ಳಿ ಹಳ್ಳಿಗೆ ಕುಡಿಯುವ ನೀರು ಬರುತ್ತಿದೆ. 3 ವರ್ಷದ ಹಿಂದೆ ಕೆಂಪು ಕೋಟೆ ಮೇಲೆ ನಿಂತು ಪ್ರಧಾನಿ ಮೋದಿ ಕುಡಿಯುವ ನೀರು ಕೊಡುವ ಭರವಸೆ ನೀಡಿದರು. ಇದನ್ನು ಕಳೆದ 3 ವರ್ಷದಲ್ಲಿ ಮೋದಿ ಸಾಧಿಸಿ ತೋರಿಸಿದ್ದಾರೆ. ಕರ್ನಾಟಕದಲ್ಲಿ 75 ವರ್ಷದಲ್ಲಿ 25 ಲಕ್ಷ ಮನೆಗಳಿಗೆ ಕುಡಿಯುವ ನೀರಿತ್ತು. ಇದೀಗ 3 ವರ್ಷದಲ್ಲಿ 40 ಲಕ್ಷ ಮನೆಗಳಿಗೆ ಕುಡಿಯುವ ನೀರನ್ನು ಕೊಟ್ಟಿದ್ದೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ.

ಕಾಂಗ್ರೆಸ್‌ಗೆ ಅಧಿಕಾರದ ದಾಹ, ಬಿಜೆಪಿಗೆ ಅಭಿವೃದ್ಧಿಯ ತುಡಿತ, ದಾವಣೆಗೆರೆಯಲ್ಲಿ ಸಿಎಂ ಬೊಮ್ಮಾಯಿ ಭಾಷಣ!

ವಿದ್ಯುತ್ ಕೊಡಿಸಲಾಗಿದೆ. ಯುವಕರಿಗೆ ಕೆಲಸ ಕೊಡುವ ಮುದ್ರಾ ಯೋಜನೆ ಕೊಡಲಾಗಿದೆ. ಬಿಜೆಪಿ ಸರ್ಕಾರದ ಪ್ರತಿ ಯೋಜನೆಗಳು ಮನೆ ಮನೆಗೆ ತಲುಪಿದೆ. 11 ಲಕ್ಷ ರೈತ ಕುಟುಂಬಗಳಿಗೆ ವಿದ್ಯಾನಿದಿ ತಲುಪಿದೆ. 47 ಲಕ್ಷ ರೈತರಿಗೆ ಡೀಸೆಲ್ ಸಬ್ಸಿಡಿ ಕೊಡಲಾಗಿದೆ. ಶೂನ್ಯ ಸಾಲವನ್ನು 3 ರಿಂದ 5 ಲಕ್ಷಕ್ಕೆ ಏರಿಸಲಾಗಿದೆ. ರೈತರಿಗೆ ವಿಮೆಯನ್ನು ಮಾಡಲಾಗಿದೆ. ರೈತರ ಪರವಾಗಿರವ ಸರ್ಕಾರ ಬಿಜೆಪಿ ಸರ್ಕಾರವಾಗಿದೆ ಎಂದರು.

ಗಂಗಾ ಕಲ್ಯಾಣ ಯೋಜನೆ ಮೂಲಕ ಹಲವು ಮನೆಗಳ ಸಂಕಷ್ಟಕ್ಕೆ ಸ್ಪಂದಿಸಿದ್ದೇವೆ. ದೀನ ದಲಿತರ ಹಾಸ್ಟೆಲ್ ಸಂಖ್ಯೆ ಹೆಚ್ಚಿಸಿದ್ದೇವೆ. ದುಡಿಯುವ ವರ್ಗಕ್ಕೆ ಬೆಂಬಲ ಕೊಟ್ಟಿದ್ದೇವೆ. ರಾಜ್ಯದ ಜನರ ಶಕ್ತಿಯನ್ನು ಉಪಯೋಗಿಸಿ ಕರ್ನಾಟಕ ಕಟ್ಟುವ ಕೆಲಸ ಮಾಡಿದ್ದೇವೆ. ಡಬಲ್ ಎಂಜಿನ್ ಸರ್ಕಾರದಿಂದ ಮಾತ್ರ ಕರ್ನಾಟಕ ಅಭಿವೃದ್ಧಿ ಸಾಧ್ಯ. ಡಬಲ್ ಎಂಜಿನ್ ಸರ್ಕಾರದಿಂದ ಮಾತ್ರ ಯುವಕರ ಭವಿಷ್ಯ, ಹೆಣ್ಣು ಮಕ್ಕಳ ರಕ್ಷಣೆ ಸಾಧ್ಯ ಎಂದು ಬೊಮ್ಮಾಯಿ ಹೇಳಿದ್ದಾರೆ.

ನವ ಕರ್ನಾಟಕದಿಂದ ನವ ಭಾರತ ನಿರ್ಮಾಣ ಮಾಡಲು ಎಲ್ಲರ ಆಶೀರ್ವಾದ ಇರಲಿ. ಈ ಕರ್ನಾಟಕ ವಿಧಾನಸಭಾ ಚುನಾವಣೆ ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಲು ಸಂಕಲ್ಪ ಮಾಡೋಣ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. 

click me!