
ಬೆಂಗಳೂರು(ಅ.22): ಹಬ್ಬದ ಸಂದರ್ಭದಲ್ಲಿ ಖಾಸಗಿ ಬಸ್‌ಗಳು ಪ್ರಯಾಣಿಕರಿಂದ ದುಪ್ಪಟ್ಟು ದರಗಳನ್ನು ವಸೂಲಿ ಮಾಡುತ್ತವೆ. ಈ ದರಗಳು ವಿಮಾನ ಪ್ರಯಾಣಕ್ಕಿಂತ ದುಬಾರಿ ಅನ್ನೋದು ಹಲವು ಪ್ರಯಾಣಿಕರ ಮಾತುಗಳು. ಈ ಬಾರಿ ದೀಪಾವಳಿ ಹಬ್ಬ ಹಾಗೂ ವಾರಾಂತ್ಯದ ಕಾರಣ ಖಾಸಗಿ ಬಸ್‌ಗಳ ದರಗಳು ಅತ್ಯಂತ ದುಬಾರಿಯಾಗಿದೆ. ಈ ಕುರಿತು ಸತತ ದೂರುಗಳು ಸಾರಿಗೆ ಇಲಾಖೆಗೆ ಬಂದಿದೆ. ಇದರ ಹಿನ್ನಲೆಯಲ್ಲಿ ಖಾಸಗಿ ಬಸ್ ಗಳ ವಿರುದ್ಧ ಸಾರಿಗೆ ಇಲಾಖೆ ಅಧಿಕಾರಿಗಳ ಸಮರ ಸಾರಿದ್ದಾರೆ. ಬಸ್ ಮಾಲೀಕರಿಂದ ದುಪ್ಪಟ್ಟು ದರ ವಸೂಲಿ ದೂರುಗಳು ಬಂದ ಬೆನ್ನಲ್ಲೇ ಅಧಿಕಾರಿಗಳು ಬಸ್‌ಗಳಿಗೆ ಹತ್ತಿ ಪ್ರಯಾಣಿಕರಿಂದ ಟಿಕೆಟ್ ಮಾಹಿತಿ ಪರಿಶೀಲನೆ ನಡೆಸುತ್ತಿದ್ದಾರೆ. ಖಾಸಗಿ ಬಸ್‌ಗಳಿಗೆ ಹತ್ತಿ ಬಸ್ ದರ ಪರಿಶೀಲನೆ ಮಾಡುತ್ತಿದ್ದಾರೆ. ದೀಪಾವಳಿ ಹಬ್ಬಕ್ಕೂ ಹಿಂದಿನ ಬಸ್ ದರಕ್ಕೂ ಎಷ್ಟು ವ್ಯತ್ಯಾಸವಿದೆ ಎಂದು ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ.
ಹಬ್ಬದ ಕಾರಣ ಜನರು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಇನ್ನು ಹಲವರು ಪವಿತ್ರ ಕ್ಷೇತ್ರಗಳ ದರ್ಶನ ಪಡೆಯಲು ತೆರಳುತ್ತಿದ್ದಾರೆ. ಮತ್ತೆ ಕೆಲವರು ರಜಾ ದಿನವಾಗಿರುವ ಕಾರಣ ಸಣ್ಣ ಸಣ್ಮ ಟ್ರಿಪ್‌ಗಾಗಿ ಬೇರೆ ಬೇರೆ ಊರುಗಳಿಗೆ ತೆರಳುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್ ಮಾಲೀಕರು ಪ್ರಯಾಣಿಕರಿಂದ ದುಪ್ಪಟ್ಟು ದರ ವಸೂಲಿ ಮಾಡುತ್ತಿವೆ. ಈ ಕುರಿತು ಹಲವು ದೂರುಗಳು ದಾಖಲಾಗಿವೆ. ಈ ಹಿನ್ನಲೆಯಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು 8 ತಂಡಗಳನ್ನು ರಚನೆ ಮಾಡಿ ಖಾಸಗಿ ಬಸ್ ಮೇಲೆ ದಾಳಿ ನಡೆಸುತ್ತಿದ್ದಾರೆ.
ದುಬಾರಿ ಹಣ ವಸೂಲಿ ಮಾಡಿದರೆ ಪರ್ಮಿಟ್ ರದ್ದು: ಖಾಸಗಿ ಬಸ್ ಮಾಲೀಕರಿಗೆ ಶ್ರೀರಾಮುಲು ಎಚ್ಚರಿಕೆ
ದೀಪಾವಳಿ ಹಬ್ಬದ ಪ್ರಯುಕ್ತ ಸಾಲು ಸಾಲು ರಜೆ ಇರುವುದರಿಂದ ಜನರು ತಮ್ಮತಮ್ಮ ಊರುಗಳಿಗೆ ತೆರಳಲು ಮೆಜೆಸ್ಟಿಕ್‌ನತ್ತ ಧಾವಿಸುತ್ತಿದ್ದಾರೆ. ಇದರಿಂದ ಭಾರಿ ಜನದಟ್ಟಣೆ ಏರ್ಪಟ್ಟಿದೆ. ಮೆಜೆಸ್ಟಿಕ್ ಸುತ್ತಮುತ್ತ ಟ್ರಾಫಿಕ್ ಜಾಮ್ ಎರ್ಪಟ್ಟಿದೆ.
ಜನರಿಂದ ದುಪ್ಪಟ್ಟು ಹಣ ವಸೂಲಿ ಮಾಡಿದರೆ ಪರ್ಮಿಟ್ ರದ್ದು ಮಾಡಲಾಗುವುದು ಎಂದು ಸಾರಿಗೆ ಸಚಿವ ಬಿ ಶ್ರೀರಾಮಲು ಎಚ್ಚರಿಕೆ ಖಾಸಗಿ ಬಸ್ ಮಾಲೀಕರ ಕಿವಿಗೆ ಬಿದ್ದೇ ಇಲ್ಲ. ಎಚ್ಚರಿಕೆ ನೀಡಿದರೂ ಖಾಸಗಿ ಬಸ್ ಮಾಲೀಕರ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ದುಪ್ಪಟ್ಟು ದರ ವಸೂಲಿ ಮಾಡಲಾಗುತ್ತಿದೆ ಎಂದು ಪ್ರಯಾಣಿಕರು ಸಾರಿಗೆ ಇಲಾಖೆಗೆ ದೂರು ನೀಡಿದ್ದಾರೆ.
ದೀಪಾವಳಿಗೂ ಖಾಸಗಿ ಬಸ್‌ಗಳಿಂದ ಸುಲಿಗೆ: ಟಿಕೆಟ್ ದರ ತ್ರಿಬಲ್..!
ಹಬ್ಬದ ವೇಳೆ ಸುಲಿಗೆ: ಖಾಸಗಿ ಬಸ್ ಪರ್ಮಿಟ್ ರದ್ದು
ಹಬ್ಬಗಳ ನೆಪ ಮಾಡಿಕೊಂಡು ಪ್ರಯಾಣ ದರ ಭಾರೀ ಪ್ರಮಾಣದಲ್ಲಿ ಹೆಚ್ಚಿಸಿ ಪ್ರಯಾಣಿಕರನ್ನು ಸುಲಿಗೆ ಮಾಡುವ ಖಾಸಗಿ ಬಸ್ಸುಗಳ ಪರವಾನಗಿ ರದ್ದುಪಡಿಸಲಾಗುವುದು ಎಂದು ಸಾರಿಗೆ ಸಚಿವ ಶ್ರೀರಾಮುಲು ಎಚ್ಚರಿಕೆ ನೀಡಿದ್ದರು. ಜನಸಂಕಲ್ಪ ಯಾತ್ರೆ ಅಂಗವಾಗಿ ಬುಧವಾರ ಜಿಲ್ಲೆಯ ಹುಣಸಗಿ ಪಟ್ಟಣದಲ್ಲಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಖಾಸಗಿ ಬಸ್‌ಗಳು ಹಬ್ಬದ ಸಮಯದಲ್ಲಿ ಪ್ರಯಾಣಿಕರಿಗೆ ದರ ಹೆಚ್ಚಿಸಿದರೆ ಅಂಥ ಬಸ್‌ಗಳ ಪರವಾನಗಿ ರದ್ದು ಮಾಡಲು ಚಿಂತಿಸಲಾಗುವುದು. ಈ ಸಂಬಂಧ ತಂಡ ರಚನೆ ಮಾಡಲಾಗುವುದು. ಚೆಕ್‌ಪೋಸ್ಟ್‌ಗಳನ್ನು ಹೆಚ್ಚಿಗೆ ಮಾಡಿ ಬಸ್‌ಗಳನ್ನು ಪರಿಶೀಲಿಸಲಾಗುವುದು ಎಂದ ಸಚಿವ ಶ್ರೀರಾಮುಲು, ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ