ಚಾಲಕರು ತೂಕಡಿಸಿದರೆ ಬರುತ್ತೆ ಅಲಾರ್ಮ್ ಸಂದೇಶ!

By Kannadaprabha News  |  First Published Jun 10, 2021, 10:22 AM IST
  • ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಹೊಸ ವ್ಯವಸ್ಥೆ
  • ನಿಗಮದ ಬಸ್‌ಗಳಿಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ
  • ‘ಕೊಲಿಜಿಯನ್‌ ವಾರ್ನಿಂಗ್‌ ಸಿಸ್ಟಂ’(ಸಿಡಬ್ಲುಎಸ್‌) ಮತ್ತು ‘ಡ್ರೈವರ್‌ ಡ್ರೋಜಿನೆಸ್‌ ಡಿಟೆಕ್ಷನ್‌ ಸಿಸ್ಟಮ್‌’

 ಬೆಂಗಳೂರು (ಜೂ.10):  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ನಿಗಮದ ಬಸ್‌ಗಳಿಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಳವಡಿಕೆಗೆ ನಿರ್ಧರಿಸಿದೆ.

‘ಕೊಲಿಜಿಯನ್‌ ವಾರ್ನಿಂಗ್‌ ಸಿಸ್ಟಂ’(ಸಿಡಬ್ಲುಎಸ್‌) ಮತ್ತು ‘ಡ್ರೈವರ್‌ ಡ್ರೋಜಿನೆಸ್‌ ಡಿಟೆಕ್ಷನ್‌ ಸಿಸ್ಟಮ್‌’(ಡಿಡಿಎಸ್‌) ಎಂಬ ತಂತ್ರಜ್ಞಾನ ಇದಾಗಿದೆ. ಚಾಲಕ ಬಸ್‌ ಚಾಲನೆ ವೇಳೆ ನಿದ್ರೆಗೆ ಜಾರಿದರೆ, ಆತನನ್ನು ಅಲಾರ್ಮ್ ಮೂಲಕ ಎಚ್ಚರಿಸುವ ಹಾಗೂ ಮುಂಬದಿ ಚಲಿಸುವ ವಾಹನಗಳ ಬಗ್ಗೆ ಚಾಲಕನಿಗೆ ಮಾಹಿತಿ ರವಾನಿಸಲಿದೆ. ಅಂತೆಯೆ ವಾಹನದ ಪ್ರತಿ ಚಲನೆಯ ಬಗ್ಗೆ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಲಿದೆ. ಈ ತಂತ್ರಜ್ಞಾನವು ಸುರಕ್ಷಿತ ಚಾಲನೆ ಹಾಗೂ ಅಪಘಾತಗಳನ್ನು ತಪ್ಪಿಸಲು ಸಹಕಾರಿಯಾಗಲಿದೆ. ಹೀಗಾಗಿ ಮೊದಲ ಹಂತದಲ್ಲಿ 1,044 ಬಸ್ಸುಗಳಿಗೆ ಈ ತಂತ್ರಜ್ಞಾನ ಅಳವಡಿಸಲು ತೀರ್ಮಾನಿಸಲಾಗಿದೆ.

Tap to resize

Latest Videos

ಕೇರಳಕ್ಕೆ ಪಾಲಾಗಿಲ್ಲ, KSRTC ಬಳಸಲು ಕರ್ನಾಟಕಕ್ಕೆ ನಿಷೇಧವಿಲ್ಲ: ಡಿಸಿಎಂ ಸವದಿ! .

ತಂತ್ರಜ್ಞಾನ ಹೀಗೆ ಕೆಲಸ ಮಾಡುತ್ತೆ: ಒಂದು ಕ್ಯಾಮರಾ ಚಾಲಕನಿಗೆ ಅಭಿಮುಖವಾಗಿ ಇರಲಿದೆ. ಮತ್ತೊಂದು ಕ್ಯಾಮರಾ ಬಸ್ಸಿನ ಮುಂಭಾಗಕ್ಕೆ ಅಳವಡಿಸಲಾಗುತ್ತದೆ. ಬಸ್ಸಿನ ಮುಂಭಾಗದ ಕ್ಯಾಮರಾ ರಾತ್ರಿ ವೇಳೆ ಸುಮಾರು ಇನ್ನೂರು ಮೀಟರ್‌ ದೂರದಲ್ಲಿರುವ ವಾಹನದ ಬಗ್ಗೆ ಚಾಲಕನಿಗೆ ಮಾಹಿತಿ ರವಾನಿಸಲಿದೆ. ಅಂತೆಯೇ ಚಾಲಕನಿಗೆ ಅಭಿಮುಖವಾಗಿರುವ ಕ್ಯಾಮರಾವು ಚಾಲಕನಿಗೆ ನಿದ್ರೆ ಮಂಪರು ಆವರಿಸಿದರೆ ಅಥವಾ ನಿದ್ರೆಗೆ ಜಾರಿದರೆ ತಕ್ಷಣ ಅಲಾರಾಮ್‌ ಮಾಡಿ ಎಚ್ಚರಿಸಲಿದೆ.

ಕೈತಪ್ಪಿದ KSRTC : ಬಾಬಾಸಾಹೇಬ್ ಸಾರಿಗೆ ಎಂದು ಹೆಸರಿಡಲು ಸುಮಲತಾ ಮನವಿ

ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಕೆಎಸ್‌ಆರ್‌ಟಿಸಿ ಬಸ್ಸುಗಳಿಗೆ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಅಳವಡಿಕೆಗೆ ತೀರ್ಮಾನಿಸಲಾಗಿದೆ. ಮೊದಲ ಹಂತದಲ್ಲಿ ಕೆಎಸ್‌ಆರ್‌ಟಿಸಿಯ 1,044 ಬಸ್ಸಿಗಳಿಗೆ ಈ ತಂತ್ರಜ್ಞಾನ ಅಳವಡಿಸಲಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟುಬಸ್ಸುಗಳಿಗೆ ವಿಸ್ತರಿಸಲಾಗುವುದು

- ಲಕ್ಷ್ಮಣ ಸವದಿ, ಸಾರಿಗೆ ಸಚಿವ

ಚಾಲನೆಯ ಕುರಿತಾದ ದತ್ತಾಂಶ ಸಂಗ್ರಹಕ್ಕೆ ಅವಕಾಶವಿದ್ದು, ಚಾಲಕನ ಮೌಲ್ಯಮಾಪನಕ್ಕೂ ಇದು ಉಪಯೋಗವಾಗಲಿದೆ. ಚಾಲನೆಯ ದತ್ತಾಂಶ ವಿಶ್ಲೇಷಿಸಿ ಚಾಲಕರಿಗೆ ತರಬೇತಿ ನೀಡಲು ಅನುಕೂಲವಾಗಲಿದೆ.

click me!