ಕಟ್ಟಡ ಕಾರ್ಮಿಕರಿಗೆ ಆಹಾರ ಕಿಟ್‌, ಕೋವಿಡ್‌ ಸುರಕ್ಷಾ ಕಿಟ್‌

By Kannadaprabha News  |  First Published Jun 10, 2021, 8:22 AM IST
  • ಸಂದಿಗ್ಧ ಪರಿಸ್ಥಿತಿಯಲ್ಲಿ ಕಾರ್ಮಿಕರ ನೆರವಿಗೆ ನೀಡಬಹುದಾದಂತಹ ಸೌಲಭ್ಯಗಳ ಕುರಿತಂತೆ ಕಾರ್ಮಿಕ ಸಚಿವರ ಸಭೆ
  •  ಇಲಾಖೆಯ ಅಧಿಕಾರಿಗಳು ಹಾಗೂ ಕಾರ್ಮಿಕ ಸಂಘಟನೆಯ ಪ್ರಮುಖರೊಂದಿಗೆ ಸಭೆ 
  • ಕಟ್ಟಡ ಕಾರ್ಮಿಕರಿಗೆ ಸಹಾಯಧನ ತಲುಪಿಸುವ ಜೊತೆಗೆ ಆಹಾರದ ಕಿಟ್‌ ಹಾಗೂ ಕೋವಿಡ್‌ ಸುರಕ್ಷಾ ಕಿಟ್‌ ವಿತರಣೆ

ಬೆಂಗಳೂರು (ಜೂ.10):  ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಕಾರ್ಮಿಕರ ನೆರವಿಗೆ ನೀಡಬಹುದಾದಂತಹ ಸೌಲಭ್ಯಗಳ ಕುರಿತಂತೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌ ಅವರು ಬುಧವಾರ ಇಲಾಖೆಯ ಅಧಿಕಾರಿಗಳು ಹಾಗೂ ಕಾರ್ಮಿಕ ಸಂಘಟನೆಯ ಪ್ರಮುಖರೊಂದಿಗೆ ಸಭೆ ನಡೆಸಿದರು.

ಕಾರ್ಮಿಕ ಸಂಘಟನೆಗಳ ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ಸವಿಸ್ತಾರವಾಗಿ ಚರ್ಚಿಸಿ ಎಲ್ಲರ ಸಲಹೆಗಳನ್ನು ಸ್ವೀಕರಿಸಿದ ಸಚಿವರು, ಕಟ್ಟಡ ಕಾರ್ಮಿಕರಿಗೆ ಸಹಾಯಧನ ತಲುಪಿಸುವ ಜೊತೆಗೆ ಆಹಾರದ ಕಿಟ್‌ ಹಾಗೂ ಕೋವಿಡ್‌ ಸುರಕ್ಷಾ ಕಿಟ್‌ಗಳನ್ನು ನೀಡಲಾಗುವುದು.

Latest Videos

undefined

ನಮಗೆ ಊರಿಗೆ ಹೋಗೋಕೆ ಹೆಲ್ಪ್ ಮಾಡ್ರಿ.... ಲಾಕ್ಡೌನ್‌ನಿಂದ ಕಾರ್ಮಿಕರ ಬದುಕು ಫುಟ್‌ಪಾತ್‌ಗೆ ...

ಮೊಬೈಲ್ ಕ್ಲಿನಿಕ್‌ಗಳನ್ನು ನೀಡುವುದು ಮತ್ತು ಮಂಡಳಿಯ ಕಾರ್ಯಕ್ರಮಗಳಾದ ಕಟ್ಟಡ ಕಾರ್ಮಿಕರಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸುವಂತಹ ಇಮ್ಯೂನಿಟಿ ಬೂಸ್ಟರ್‌ಗಳನ್ನು ಒದಗಿಸಲಾಗುವುದು ತಿಳಿಸಿದರು. ಈ ಸಂದರ್ಭದಲ್ಲಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಡಾ.ಜಿ ಕಲ್ಪನಾ, ಆಯುಕ್ತ ಅಕ್ರಂ ಪಾಷಾ ಮತ್ತಿತರರು ಉಪಸ್ಥಿತರಿದ್ದರು.

click me!