ಬಿಎಸ್‌ಎನ್ಎಲ್‌ಗೆ ಗುಡ್ ಬೈ ಹೇಳಿದ ರಾಜ್ಯ ಪೊಲೀಸ್ ಇಲಾಖೆ: ಜಿಯೋಗೆ ಫೋರ್ಟ್ ಆಗಲು ಸರ್ಕಾರದ ಆದೇಶ

By Kannadaprabha NewsFirst Published Feb 22, 2023, 10:43 AM IST
Highlights

ರಾಜ್ಯ ಸರ್ಕಾರದಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನೀಡಿದ್ದ ಬಿಎಸ್‌ಎನ್‌ಎಲ್‌ನ ಸಿಯುಜಿ/ಬೀಟ್‌ ಸಿಮ್‌ ಕಾರ್ಡ್‌ಗಳನ್ನು ರಿಲೆಯನ್ಸ್‌ ಜಿಯೋ ಸಿಮ್‌ ಕಾರ್ಡ್‌ಗೆ ಬದಲಾಯಿಸಲು ಸರ್ಕಾರ ಆದೇಶಿಸಿದೆ.

ಬೆಂಗಳೂರು (ಫೆ.22): ರಾಜ್ಯ ಸರ್ಕಾರದಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನೀಡಿದ್ದ ಬಿಎಸ್‌ಎನ್‌ಎಲ್‌ನ ಸಿಯುಜಿ/ಬೀಟ್‌ ಸಿಮ್‌ ಕಾರ್ಡ್‌ಗಳನ್ನು ರಿಲೆಯನ್ಸ್‌ ಜಿಯೋ ಸಿಮ್‌ ಕಾರ್ಡ್‌ಗೆ ಬದಲಾಯಿಸಲು ಸರ್ಕಾರ ಆದೇಶಿಸಿರುವ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ತಮ್ಮ ಸಿಯುಜಿ ಸಿಮ್‌ ಕಾರ್ಡ್‌ನಿಂದ ಜಿಯೊ ಸಿಮ್‌ ಕಾರ್ಡ್‌ಗೆ ಪೋರ್ಟ್‌ ಆಗುವಂತೆ ಕಮ್ಯುನಿಕೇಶನ್‌, ಲಾಜಿಸ್ಟಿಕ್ಸ್‌ ಆ್ಯಂಡ್‌ ಮಾಡ್ರನೈಸೇಷನ್‌ ವಿಭಾಗದ ಎಡಿಜಿಪಿ ಸತ್ತೋಲೆ ಹೊರಡಿಸಿದ್ದಾರೆ.

ಜಿಯೋಗೆ ಪೋರ್ಟ್‌ ಅಗುವ ಮುನ್ನ ಬಾಕಿ ಶುಲ್ಕದ ಬಗ್ಗೆ ಪರಿಶೀಲಿಸಿ ಸಂಬಂಧಪಟ್ಟವರ ಗಮನಕ್ಕೆ ತರಬೇಕು. ಹೊಸ ಜಿಯೋ ಸಿಮ್‌ ಕಾರ್ಡ್‌ಗಳನ್ನು ಸಂಬಂಧಪಟ್ಟ ಘಟಕಗಳಿಗೆ ತಲುಪಿಸಲಾಗುವುದು. ಪೊಲೀಸ್‌ ಇಲಾಖೆಯಲ್ಲಿ 38347 ಬಿಎಸ್‌ಎನ್‌ಎಲ್‌ ಸಕ್ರಿಯ ಸಂಪರ್ಕಗಳಿವೆ. ಹೀಗಾಗಿ ಈ ಪೋರ್ಟಿಂಗ್‌ ಪ್ರಕ್ರಿಯೆಯನ್ನು ಹಂತ ಹಂತವಾಗಿ ಮಾಡಲಾಗುವುದು. ಮೊದಲಿಗೆ ಮೊಬೈಲ್‌ ಸಂಪರ್ಕಗಳಿಗೆ ಸಂಬಂಧಿಸಿದಂತೆ ಪೋರ್ಟಿಂಗ್‌ ಕೈಗೆತ್ತಿಕೊಳ್ಳಲಾಗುವುದು. ಪೋರ್ಟಿಂಗ್‌ ಪ್ರಕ್ರಿಯೆ ನಿರ್ವಹಿಸಲು ಪೊಲೀಸ್‌ ಇಲಾಖೆಯ ಪ್ರತಿ ಪ್ರತಿ ಘಟಕಕ್ಕೆ ನೋಡಲ್‌ ಅಧಿಕಾರಿ ನೇಮಿಸುವುದಾಗಿ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಮಂಡ್ಯದಲ್ಲಿ ವಿಜಯೇಂದ್ರಗೆ ಅದ್ಧೂರಿ ಸ್ವಾಗತ: ಹಳ್ಳಿಕಾರ್‌ ತಳಿ ಹೋರಿ ಗಿಫ್ಟ್‌ ಕೊಟ್ಟ ಅಭಿಮಾನಿ

ಫುಡ್‌ ಡೆಲಿವರಿ ಬಾಯ್ಸ್‌ಗೆ ಪೊಲೀಸ್‌ ಬಿಸಿ: ಸಂಚಾರ ನಿಯಮ ಉಲ್ಲಂಘನೆ ಹಿನ್ನಲೆಯಲ್ಲಿ ಆ್ಯಪ್‌ ಆಧಾರಿತ ಆಹಾರ ಪೂರೈಕೆ ಹಾಗೂ ಸರಕು ಸೇವಾ ಕಂಪನಿಗಳ ಡೆಲವರಿ ಬಾಯ್‌ಗಳಿಗೆ ಸಂಚಾರ ವಿಭಾಗದ ಪೊಲೀಸರು ಬಿಸಿ ಮುಟ್ಟಿಸಿದ್ದು, ಈ ಸಂಬಂಧ ಸೋಮವಾರದಿಂದ ನಗರ ವ್ಯಾಪ್ತಿಯಲ್ಲಿ ಪೊಲೀಸರು ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡಿದ್ದಾರೆ. ಮೊದಲ ದಿನವೇ ನೂರಕ್ಕೂ ಅಧಿಕ ಆಲ್‌ಲೈನ್‌ ಫುಡ್‌ ಡೆಲವರಿ ಬಾಯ್‌ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಹಳೆ ಬಾಕಿ ವಸೂಲಿಗೆ ಕೆಲವರಿಗೆ ನೋಟಿಸ್‌ ನೀಡಿದ್ದಾರೆ.

ಈ ಸಂಬಂಧ ‘ಕನ್ನಡಪ್ರಭ’ ಜತೆ ಮಾತನಾಡಿದ ವಿಶೇಷ ಆಯುಕ್ತ (ಸಂಚಾರ) ಡಾ.ಎಂ.ಸಲೀಂ ಅವರು, ಸಂಚಾರ ನಿಯಮ ಉಲ್ಲಂಘನೆ ಸಂಬಂಧ ಆ್ಯಪ್‌ ಆಧಾರಿತ ಆನ್‌ಲೈನ್‌ ಕಂಪನಿಗಳ ಸರಕು ಹಾಗೂ ಆಹಾರ ಪೂರೈಸುವವರ ಮೇಲೆ ಅಧಿಕ ಪ್ರಕರಣಗಳು ದಾಖಲಾಗಿದ್ದವು ಎಂದು ಹೇಳಿದರು. ಅಲ್ಲದೆ ಇತ್ತೀಚೆಗೆ ಹಳೇ ಪ್ರಕರಣಗಳು ದಂಡ ಪಾವತಿಗೆ ನೀಡಿದ್ದ ಶೇ.50 ರಷ್ಟುವಿನಾಯತಿ ಅವಕಾಶವನ್ನು ಬಹುತೇಕ ಕಂಪನಿಗಳ ಡೆಲಿವರಿ ಬಾಯ್‌ಗಳು ಬಳಕೆ ಮಾಡಿಕೊಂಡಿಲ್ಲ. ಸಿಗ್ನಲ್‌ ಜಂಪ್‌, ಚಾಲನೆ ವೇಳೆ ಮೊಬೈಲ್‌ ಬಳಕೆ, ಏಕಮುಖ ಸಂಚಾರ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಸಂಚಾರ ಹಾಗೂ ಹೆಲ್ಮಟ್‌ ಧರಿಸದೆ ಚಾಲನೆ ಸೇರಿದಂತೆ ಹಲವು ಸಂಚಾರ ನಿಯಮಗಳನ್ನು ಇವರು ಉಲ್ಲಂಘಿಸಿದ್ದಾರೆ ಎಂದು ಸಲೀಂ ತಿಳಿಸಿದರು.

ಗೆಲ್ಸಿದ ಆನೆ ಕಾಡಿಗಟ್ಟಿ ಸ್ವಾರ್ಥಕ್ಕೆ ಕಮಲ ಹಿಡಿದ ಮಹೇಶ್‌: ಡಿ.ಕೆ.ಶಿವಕುಮಾರ್‌

ಹಲವು ಬಾರಿ ಆ್ಯಪ್‌ ಆಧಾರಿತ ಸರಕು ಸೇವಾ ಹಾಗೂ ಆಹಾರ ಪೂರೈಕೆ ಕಂಪನಿಗಳ ಪ್ರತಿನಿಧಿಗಳ ಸಭೆ ನಡೆಸಿ ಸಂಚಾರ ನಿಯಮ ಪಾಲಿಸುವಂತೆ ಸೂಚಿಸಲಾಗಿತ್ತು. ಹೀಗಿದ್ದರೂ ಆ ಕಂಪನಿಗಳ ಸಿಬ್ಬಂದಿ ಕಾನೂನು ಪಾಲಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಡೆಲಿವರಿ ಬಾಯ್‌ಗಳ ಮೇಲೆ ವಿಶೇಷ ಕಾರ್ಯಾರಣೆ ಹಮ್ಮಿಕೊಳ್ಳಲಾಗಿದೆ. ಸಂಚಾರ ಪೊಲೀಸರು ಡೆಲಿವರಿ ಬಾಯ್‌ಗಳ ವಾಹನಗಳನ್ನು ರಸ್ತೆಯಲ್ಲಿ ಅಡ್ಡಗಟ್ಟಿಪರಿಶೀಲಿಸುತ್ತಿದ್ದಾರೆ. ಹಳೆ ದಂಡ ಬಾಕಿ ಇದ್ದರೆ ಅವರಿಗೆ ನೋಟಿಸ್‌ ಕೊಡಲಾಗುತ್ತಿದೆ ಎಂದು ವಿಶೇಷ ಆಯುಕ್ತರು ತಿಳಿಸಿದರು.

click me!