
ಬೆಂಗಳೂರು (ಮಾ.12): ಗ್ಯಾರಂಟಿ ಯೋಜನೆಗಳಲ್ಲಿಯೇ ಅತ್ಯಂತ ಮಹತ್ವಾಕಾಂಕ್ಷಿ ಕಾರ್ಯಕ್ರಮಗಳಲ್ಲಿ ಒಂದಾಗಿದ್ದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಶಕ್ತಿ ಯೋಜನೆಯಿಂದ ಇಲ್ಲಿಯವರೆಗೂ ಕೆಎಸ್‌ಆರ್‌ಟಿಸಿ ಲಾಭದಲ್ಲಿದೆ ಎಂದೇ ರಾಜ್ಯ ಸರ್ಕಾರ ಹೇಳಿಕೊಂಡು ಬರುತ್ತಿತ್ತು. ಇದೇ ಮೊದಲ ಬಾರಿಗೆ ಶಕ್ತಿಯಿಂದ ನಷ್ಟವಾಗಿರುವ ಬಗ್ಗೆ ವಿಧಾನಮಂಡಲದಲ್ಲಿ ಮಾಹಿತಿ ನೀಡಿದೆ. ವಿಧಾನಪರಿಷತ್‌ನಲ್ಲಿ ರಾಜ್ಯದ ಸಾರಿಗೆ ನಿಗಮಗಳ ಲಾಭ-ನಷ್ಟದ ಬಗ್ಗೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಕಳೆದ ಐದು ವರ್ಷದಿಂದ ಸಾರಿಗೆ ನಿಗಮ ಎದುರಿಸಿದ ನಷ್ಟದ ಮಾಹಿತಿ ನೀಡಿದ್ದಾರೆ. ಅದರೊಂದಿಗೆ ಶಕ್ತಿ ಯೋಜನೆ ಬಳಿಕ ಸಾರಿಗೆ ನಿಗಮಗಳು ಎದುರಿಸಿದ ನಷ್ಟಗಳ ಅಂಕಿ-ಅಂಶ ಕೂಡ ಪ್ರಕಟವಾಗಿದೆ.
ಶಕ್ತಿ ಯೋಜನೆ ಇಂದಾಗಿ ಕೆಎಸ್‌ಆರ್‌ಟಿಸಿಗೆ 1500 ಕೋಟಿ ನಷ್ಟವಾಗಿದ್ದರೆ, ಬಿಎಂಟಿಸಿಗೆ 1544 ಕೋಟಿ ರೂಪಾಯಿ ನಷ್ಟವಾಗಿದೆ. ಕಲ್ಯಾಣ ಕರ್ನಾಟಕ ಸಾರಿಗೆ 777 ಕೋಟಿ ನಷ್ಟ ಅನುಭವಿಸಿದ್ದರೆ, ವಾಯುವ್ಯ ಕರ್ನಾಟಕ ಸಾರಿಗೆ 1386 ಕೋಟಿ ನಷ್ಟ ಎದುರಿಸಿದೆ. ಇದು ಕಳೆದ ಐದು ವರ್ಷಗಳಲ್ಲಿ ರಾಜ್ಯ ಸಾರಿಗೆ ನಿಗಮಗಳು ಎದುರಿಸಿರುವ ನಷ್ಟವಾಗಿದೆ ಎಂದುಸ ಮಾಹಿತಿ ನೀಡಲಾಗಿದೆ.
ಶಕ್ತಿ ಯೋಜನೆಯ ಪೂರ್ತಿ ಮೊತ್ತ ಸರ್ಕಾರದಿಂದ ಪಡೆಯುತ್ತಿದ್ದೇವೆ. ಪ್ರಪಂಚದ ಯಾವುದೇ ಭಾಗದಲ್ಲಿಯೂ ಸಾರಿಗೆ ನಿಗಮ ನಷ್ಟದಲ್ಲಿಯೇ ಇವೆ. 40% ಬಸ್ ಗಳು ನಷ್ಟದಲ್ಲಿ ಓಡಾಡುತ್ತಿದೆ. 30% ಬಸ್ ಯಾವುದೆ ಲಾಭ ನಷ್ಟ ಇಲ್ಲದೆ ಓಡುತ್ತಿವೆ. 30% ಮಾತ್ರ ಬಸ್ ಮಾತ್ರವೇ ಲಾಭದಲ್ಲಿದೆ ಎಂದು ರಾಮಲಿಂಗಾ ರೆಡ್ಡಿ ಮಾಹಿತಿ ನೀಡಿದ್ದಾರೆ.
ಪ್ರತಿದಿನ ನಿರ್ವಹಣೆಗೆ 9.75 ಕೋಟಿ ಖರ್ಚಿದೆ. ಲಾಂಗ್ ರೂಟ್ ಬಸ್ ಗಳಿಗೆ ಒಳ್ಳೆ ಶೌಚಾಲಯ ಇರುವಲ್ಲಿಯೇ ನಿಲ್ಲಿಸಲಾಗುತ್ತಿದೆ. ಯಾವುದೆ ದೂರುಗಳಿದ್ದರೆ ತಿಳಿಸಿ ಸರಿಪಡಿಸೋಣ ಎಂದು ಸಚಿವರು ಹೇಳಿದ್ದಾರೆ.
Bengaluru: ಶಕ್ತಿ ಯೋಜನೆಯಿಂದ ಖಾಲಿ ಅಯ್ತ KSRTC ಖಜಾನೆ, ಪೀಣ್ಯ ಬಸ್ ನಿಲ್ದಾಣ ಲೀಸ್‌ಗಿಟ್ಟ ಸರ್ಕಾರ!
ಈ ವೇಳೆ ಶಕ್ತಿ ಯೋಜನೆಯಿಂದ ಆಗಿರುವ ನಷ್ಟ ಎಷ್ಟು ಎಂದು ಪ್ರಶ್ನೆ ಕೇಳಲಾಗಿದೆ. ಇಲ್ಲಿಯವರೆಗೂ 9978 ಕೋಟಿ ಒಟ್ಟು ಶಕ್ ತಿಯೋಜನೆಗೆ ಖರ್ಚಾಗಿದೆ. 448 ಬಿಎಂಟಿಸಿ ಬಸ್ ಖರೀದಿ ಮಾಡಿದ್ದೇವೆ . 2016 ರ ಬಳಿಕ ಈಗ 10 ಸಾವಿರ ಜನರನ್ನ ಕೆಲಸಕ್ಕೆ ತೆಗೆದುಕೊಂಡಿದ್ದೇವೆ. 5360 ಬಸ್ ಗಳನ್ನ ಹೊಸದಾಗಿ ಖರೀದಿಸಲಾಗಿದೆ. 1.90 ಲಕ್ಷ ಟ್ರಿಪ್ ಪ್ರತಿದಿನ ಇರುತ್ತದೆ. ಮೊದಲು 1.40 ಸಾವಿರ ಟ್ರಿಪ್ ಪ್ರತಿದಿನ ಇರುತ್ತಿತ್ತು. 40 ವರ್ಷ ಮೇಲ್ಪಟ್ಟವರಿಗೆ ಜಯದೇವದಲ್ಲಿ ತಪಾಸಣೆ ಮಾಡಲಾಗುತ್ತಿದೆ. ಸಿಬ್ಬಂದಿಯಿಂದ ಒಂದು ತಿಂಗಳಿಗೆ 650 ರೂಪಾಯಿ ಇದಕ್ಕೆ ಪಡೆಯಲಾಗುತ್ತಿದೆ. ಅವರ ಇಡಿ ಕುಟುಂಬಕ್ಕೆ ಚಿಕಿತ್ಸೆ ನೀಡಲು ಇದು ಸಹಾಯವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಬಡವನ ಬೆನ್ನ ಮೇಲೆ ಸರ್ಕಾರದ ಅಂಬಾರಿ, ರಾಜ್ಯದಲ್ಲಿ ಖಾಸಗಿ ಬಸ್‌ಗಿಂತ ಕೆಎಸ್‌ಆರ್‌ಟಿಸಿಯೇ ದುಬಾರಿ!
ಶಕ್ತಿ ಯೋಜನೆ ಜಾರಿ ಬಳಿಕ (2023-24) ಆದ ನಷ್ಟದ ವಿವರ
| KSRTC | BMTC | KKRTC | NWRTC | |
| ಆದಾಯ | 4544 ಕೋಟಿ | 2613 ಕೋಟಿ | 2299 ಕೋಟಿ | 2372 ಕೋಟಿ |
| ವೆಚ್ಚ | 4839 ಕೋಟಿ | 3189 ಕೋಟಿ | 2452 ಕೋಟಿ | 2695 ಕೋಟಿ |
| ಸರ್ಕಾರದ ಸಬ್ಸಡಿ | 248 ಕೋಟಿ | 407 ಕೋಟಿ | 121 ಕೋಟಿ | 142 ಕೋಟಿ |
| ನಷ್ಟ | 295 ಕೋಟಿ | 575 ಕೋಟಿ | 161ಕೋಟಿ | 322 ಕೋಟಿ |
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ