
ಬೆಂಗಳೂರು (ಅ.26) ಅತೀ ದೊಡ್ಡ ಡೇಟಾ ಸೆಂಟರ್ ನಿರ್ಮಾಣಕ್ಕೆ ಕರ್ನಾಟಕ ಮುಂದಾಗಿದೆ. ಬೆಂಗಳೂರು ಮಾತ್ರವಲ್ಲ, ಮೈಸೂರು, ಹುಬ್ಬಳ್ಳಿ, ಮಂಗಳೂರು ಸೇರಿದಂತೆ ಪ್ರಮುಖ ನಗರಗಳ ಡೇಟಾ ಸೆಂಟರ್ ಜೊತೆ ಲಿಂಕ್ ಮಾಡಲು ಮಹತ್ವದ ಯೋಜನೆ ರೆಡಿಯಾಗಿದೆ. ರಾಜ್ಯದಲ್ಲಿ ಡೇಟಾ ಸೆಂಟರ್ ಅವಶ್ಯಕತೆ ಹಾಗೂ ಬೇಡಿಕೆ ಹೆಚ್ಚಾಗುತ್ತಿದೆ. ಇದಕ್ಕೆ ಅನುಗುಣವಾಗಿ ಭವಿಷ್ಯದಲ್ಲಿ ಎದುರಾಗುವ ಸವಾಲಗಳನ್ನು ಗಮನದಲ್ಲಿಟ್ಟುಕೊಂಡು ಅತೀ ದೊಡ್ಡ ಡೇಟಾ ಸೆಂಟರ್ ನಿರ್ಮಾಣ ಮಾಡಲಾಗುತ್ತಿದೆ. ಬರೋಬ್ಬರಿ 300 ಏಕರೆ ಪ್ರದೇಶದಲ್ಲಿ ಈ ಡೇಟಾ ಸೆಂಟರ್ ತಲೆ ಎತ್ತಲಿದೆ.
ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (KIADB)ಈ ಡೇಟಾ ಸೆಂಟರ್ ನಿರ್ಮಾಣಕ್ಕಾಗಿ 1,000 ಏಕರೆ ಭೂಮಿ ಬಳಸಿಕೊಳ್ಳಲು ಮುಂದಾಗಿದೆ. ಹೊಸಕೋಟೆ -ಕೋಲಾರ ಕೈಗಾರಿಕಾ ವಲಯದ ತಾವರೆಕೆರೆ ಬಳಿ ಈ ಡೇಟಾ ಸೆಂಟರ್ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಇದು ಅತ್ಯಂತ ಸಾಮರ್ಥ್ಯದ GW ಡೇಟಾ ಸೆಂಟರ್ ಆಗಿ ಕಾರ್ಯನಿರ್ವಹಿಸಲಿದೆ. ಈ ಡೇಟಾ ಸೆಂಟರ್ ವಿವಿಧ ನಗರಗಳಲ್ಲಿರುವ 25–30 MW ಎಡ್ಜ್ ಡೇಟಾ ಸೆಂಟರ್ ಜೊತೆ ಲಿಂಕ್ ಮಾಡಲಾಗುತ್ತದೆ.
ಬೆಂಗಳೂರಿನಲ್ಲಿ ನಿರ್ಮಾಣಗೊಳ್ಳಲಿರುವ ಈ ಡೇಟಾ ಸೆಂಟರ್‌ನಿಂದ ಬೆಂಳೂರು ಸೇರಿದಂತೆ ಕರ್ನಾಟಕದಲ್ಲಿರುವ ಐಟಿ ಸೆಂಟರ್‌ಗೂ ನರೆವಾಗಲಿದೆ. ಇದರಿಂದ ಬೇರೆ ಬಹುರಾಷ್ಟ್ರೀಯ ಕಂಪನಿಗಳು ಬೆಂಗಳೂರಿನತ್ತ ಆಕರ್ಷಿತಗೊಳ್ಳಲು ಸಾಧ್ಯವಾಗುತ್ತದೆ. ಇಷ್ಟೇ ಅಲ್ಲ ಡಿಜಿಟಲ್ ಎಕಾನಮಿ ಸೇರಿದಂತೆ ಹಲವು ರೀತಿಯಲ್ಲಿ ರಾಜ್ಯದ ಬೆಳವಣಿಗೆಯಲ್ಲೂ ಈ ಡೇಟಾ ಸೆಂಟರ್ ನೆರವಾಗಲಿದೆ.
ವರದಿಗಳ ಪ್ರಕಾರ ಈ ಯೋಜನೆಯನ್ನು 18 ತಿಂಗಳಲ್ಲಿ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಬೃಹತ್ ಡೇಟಾ ಕೇಂದ್ರ ನಿರ್ಮಾಣ ಮಾಡಿ ಅದಕ್ಕೆ ಪೂರಕವಾಗಿ ತಾಂತ್ರಿಕ ಬೆಂಬಲ ನೀಡಲು ತಂತ್ರಜ್ಞರಿಂದ ವರದಿ ಕೇಳಲಾಗಿದೆ. ಕಟ್ಟಡ ನಿರ್ಮಾಣ, ತಂತ್ರಜ್ಞಾನದ ಬೆಂಬಲ ಸೇರಿದಂತೆ ಎಲ್ಲಾ ಕಾರ್ಯಗಳು ಪೂರ್ಣಗೊಳ್ಳಲು 18 ತಿಂಗಳ ಕಾಲಾವಧಿ ನೀಡಲಾಗಿದೆ. ಈ ಮೂಲಕ ಕರ್ನಾಟಕ ದೇಶದಲ್ಲಿ ಅತೀ ಮಹತ್ವದ ಹಾಗೂ ಸುಸಜ್ಜಿತ ಡೇಟಾ ಸೆಂಟರ್ ಹೊಂದಿರು ರಾಜ್ಯಗಳ ಪಾಲಿಗೆ ಸೇರಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ