ಕಾಸರಗೋಡಿನಿಂದ ಕೇರಳಕ್ಕೆ ಕನ್ನಡಿಗರ ಎಚ್ಚರಿಕೆ ಕರೆಗಂಟೆ, ನ.1ರಂದು ಕಾಸರಗೋಡು ಡಿಸಿ ಕಚೇರಿ ಎದುರು ಕನ್ನಡಿಗರ ಧರಣಿ

Published : Oct 26, 2025, 05:41 PM IST
pinarayi vijayan

ಸಾರಾಂಶ

ನ.1 ರಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ, ಕಾಸರಗೋಡಿನ ಕನ್ನಡಪರ ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಲಿವೆ. ಈ ಸಂದರ್ಭದಲ್ಲಿ, ಮಲೆಯಾಳ ಭಾಷಾ ಹೇರಿಕೆ ವಿರೋಧ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ಸೇರಿದಂತೆ 18 ಪ್ರಮುಖ ಬೇಡಿಕೆಯನ್ನು ಕೇರಳ ಸಿಎಂಗೆ ಸಲ್ಲಿಸಲಾಗುವುದು.

ಮಂಗಳೂರು: ಕರ್ನಾಟಕ ಸಮಿತಿ ಕಾಸರಗೋಡು ಇದರ ನೇತೃತ್ವದಲ್ಲಿ ಗಡಿನಾಡಿನ ವಿವಿಧ ಕನ್ನಡ ಪರ ಸಂಘಟನೆಗಳ ಸಹಭಾಗಿತ್ವದಲ್ಲಿ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ದಿನ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಯಲಿದೆ. ಬಳಿಕ ಪ್ರಧಾನ 18 ಬೇಡಿಕೆಗಳನ್ನು ಒಳಗೊಂಡಿರುವ ಮನವಿ ಪತ್ರವನ್ನು ಕನ್ನಡ ಸಂಘಟನೆಗಳ ನಿಯೋಗ ಜಿಲ್ಲಾಧಿಕಾರಿ ಅವರ ಮೂಲಕ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಸಲ್ಲಿಸಲಿದೆ.

ಏನೆಲ್ಲ ಬೇಡಿಕೆ?

ಕೇರಳ ಮಲೆಯಾಳ ಭಾಷಾ ಮಸೂದೆ (2025) ಮೂಲಕ ಕಾಸರಗೋಡಿನ ಕನ್ನಡಿಗರ ಮೇಲೆ ಮಲೆಯಾಳ ಭಾಷೆಯನ್ನು ಹೇರುವ ಹುನ್ನಾರನಿಲ್ಲಿಸಬೇಕು ಮತ್ತು ಕೇರಳದಲ್ಲಿ ಭಾಷಾ ಅಲ್ಪಸಂಖ್ಯಾತರಾದ ಕನ್ನಡಿಗರ/ತಮಿಳರ ಹಿತರಕ್ಷಣೆ ಕಾಪಾಡಬೇಕು. ಸರ್ಕಾರದ ಹಾಗೂ ಸ್ಥಳೀಯ ಆಡಳಿತ ಸಂಸ್ಥೆಗಳ ಎಲ್ಲ ಪ್ರಕಟಣೆ, ಅರ್ಜಿ ಫಾರಂ, ರಶೀದಿ, ಸುತ್ತೋಲೆ ಕನ್ನಡದಲ್ಲಿಯೂ ಒದಗಿಸಬೇಕು. ಎಲ್ಲ ಬಸ್ಸುಗಳಲ್ಲಿ ರಾಷ್ಟ್ರೀಯ ಹೆದ್ದಾರಿ (ತಲಪಾಡಿಯಿಂದ ಚೆರ್ಕಳ ತನಕ) ಮತ್ತು ರಾಜ್ಯ ಹೆದ್ದಾರಿಯ ಬದಿಯಲ್ಲಿ ಪ್ರದರ್ಶಿಸಿರುವ ಸ್ಥಳನಾಮಗಳನ್ನು ಪ್ರದರ್ಶಿಸಬೇಕು. ಕನ್ನಡದಲ್ಲಿಯೂ ಬರೆದು

ಕಾಸರಗೋಡು ಮತ್ತು ಮಂಜೇಶ್ವರ ತಾಲೂಕಿನ ಎಲ್ಲ ಕನ್ನಡ ಮಾಧ್ಯಮ ಶಾಲೆಗಳಲ್ಲಿರುವ ಸಂಸ್ಕೃತ, ಇಂಗ್ಲೀಷ್, ಹಿಂದಿ, ಡ್ರಾಯಿಂಗ್, ಸಂಗೀತ, ಫಿಸಿಕಲ್ ಎಜುಕೇಶನ್ ಟೀಚರ್‌ಮೊದಲಾದ ಹುದ್ದೆಗಳಿಗೆ ಕನಿಷ್ಠ 1ರಿಂದ ಹತ್ತಿರ ತನಕ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದವರನ್ನು ನೇಮಿಸಲು ಈಗಿರುವ ಸರ್ಕಾರಿ ಆದೇಶದಲ್ಲಿ ಸೂಕ್ತ ತಿದ್ದುಪಡಿ ತರಬೇಕು ಹಾಗೂ ಮೂಲವಿಷಯಗಳಿಗೆ ಸಂಬಂಧಿಸಿದ ಶಿಕ್ಷಕರ ಕೈಪಿಡಿಯನ್ನು ಕನ್ನಡದಲ್ಲಿ ಒದಗಿಸಬೇಕು.

ಶಾಲಾ ಕಲೋತ್ಸವಗಳಲ್ಲಿ ಮಲೆಯಾಳಂ ಮಾಧ್ಯಮದ ವಿದ್ಯಾರ್ಥಿಗಳಗೆ ಇರುವ ಎಲ್ಲ ಸ್ಪರ್ಧೆಗಳನ್ನು ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೂ ಒದಗಿಸಬೇಕು. ಈ ಹಕ್ಕುಗಳನ್ನು ಅಧಿಕೃತ ಲಕೃತ ಕೈಪಿಡಿಗಳಲ್ಲಿ ಸೇರಿಸಬೇಕು. ಕಾಸರಗೋಡು, ಮಂಜೇಶ್ವರ, ಕಾರಡ್ಕ ಬೋಕ್ ನಲ್ಲಿರುವ ಎಲ್ಲ ಅಂಗನವಾಡಿಗಳಲ್ಲಿ ಕನ್ನಡ ಬಲ್ಲ ಅಂಗನವಾಡಿ ಟೀಚರುಗಳನ್ನು ಹಾಗೂ ಕನ್ನಡ ಬಲ್ಲ ಐಸಿಡಿಎಸ್ ಸೂಪರ್‌ವೈಸರ್, ಕನ್ನಡ ಬಲ್ಲ ಸಿಡಿಪಿಒ ಅವರನ್ನು ನೇಮಿಸಲು ಈಗಿರುವ ಕನಿಷ್ಠ ಅರ್ಹತೆಯಲ್ಲಿ ಸೂಕ್ತ ತಿದ್ದುಪಡಿ ತರಬೇಕು. ಕಾಸರಗೋಡು ಮತ್ತು ಮಂಜೇಶ್ವರ ತಾಲೂಕಿನ ವಿವಿಧ ಸರ್ಕಾರಿ ಇಲಾಖೆಗಳಲ್ಲಿರುವ ಎಲ್.ಡಿ ಕರ್ಕ್ (ಕನ್ನಡ ಬಲ್ಲ) ಹುದ್ದೆಗೆ ಕನಿಷ್ಠ ಎಸ್.ಎಸ್.ಎಲ್.ಸಿ ತನಕ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿರಬೇಕು ಎಂಬ ಸರ್ಕಾರಿ ಆದೇಶಕ್ಕೆ ತಿದ್ದುಪಡಿ ತರಬೇಕು.

ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಬಲ್ಲವರು

ಕಾಸರಗೋಡು ಮತ್ತು ಮಂಜೇಶ್ವರ ತಾಲೂಕಿನ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಬಲ್ಲ ಎಲ್.ಡಿ ಕ್ಲರ್ಕ್ /ಎಲ್.ಡಿ ಟೈಪಿಸ್ಟ್ (ಕನ್ನಡ) ಹಾಗೂ ಕನ್ನಡ ಬಲ್ಲ ಪಂಚಾಯತ್ ಸೆಕ್ರೆಟರಿ, ಕನ್ನಡ ಬಲ್ಲ ಆಯುರ್ವೇದ ಮೆಡಿಕಲ್ ಆಫೀಸರುಗಳನ್ನು ನೇಮಿಸಲು ಕ್ರಮ ಕೈಗೊಳ್ಳಬೇಕು. ರೈಲ್ವೆ, ಬ್ಯಾಂಕಿಂಗ್, ಅಂಚೆ ಇಲಾಖೆಗಳಲ್ಲಿ ಗಡಿ ಪ್ರದೇಶದ ಕನ್ನಡಿಗರಿಗೆ ಉದ್ಯೋಗ  ನೇಮಕಾತಿಗಾಗಿ ಅರ್ಜಿ ಸಲ್ಲಿಸಲು ಅವಕಾಶ ಒದಗಿಸಬೇಕು ಮತ್ತು ಪರೀಕ್ಷೆಗೆ ಗಡಿ ಪ್ರದೇಶದವರಿಗೆ ಅವರವರ ಶಾಲೆಯಲ್ಲಿ ಕಲಿತ ಭಾಷೆಯಲ್ಲಿ ಅಂದರೆ ಕನ್ನಡದಲ್ಲಿ ಬರೆಯಲು ಅನುಮತಿ ನೀಡಬೇಕು.

ಕಾಸರಗೋಡಿನ ಅತೀ ಹಿಂದುಳಿದ ಜನಾಂಗದವರಾದ ನೇಮಕಾತಿ ಕೊರಗ ಜನಾಂಗದ ಅಭಿವೃದ್ಧಿಗಾಗಿ ಪೋಲಿಸ್, ಫಾರೆಸ್ಟ್ ಎಕ್ಸೆಸ್, ಫಯರ್‌ಅಂಡ್ ಫಾರೆಸ್ಟ್ ಇಲಾಖೆಗಳಲ್ಲಿ ಕನ್ನಡ ಬಲ್ಲ ಎಸ್.ಟಿ ಕೊರಗರಿಗಾಗಿ ವಿಶೇಷ ನಡೆಸಬೇಕು. ಮಾಯಿಪ್ಪಾಡಿಯಲ್ಲಿರುವ ಅಧ್ಯಾಪಕ ತರಬೇತಿ ಕೇಂದ್ರದಲ್ಲಿ ಕನ್ನಡ ಮಾಧ್ಯಮ ಕೋರ್ಸಿಗೆ ಈಗಿರುವ 44 ಸೀಟುನ್ನು 80ಕ್ಕೆ ಹೆಚ್ಚಿಸಬೇಕು ಹಾಗೂ ಕೊರಗ ಜನಾಂಗದ ಜನರಿಗೆ ಕನಿಷ್ಠ 2 ಸೀಟು ಕಾದಿರಿಸಬೇಕು.

ಉಕ್ಕಿನಡ್ಕ ಮೆಡಿಕಲ್ ಕಾಲೇಜಿನಲ್ಲಿ ಕಾಸರಗೋಡು ಕನ್ನಡಿಗರಿಗೆ ಮೆಡಿಕಲ್ ಮತ್ತು ನರ್ಸಿಂಗ್‌ ಕೋರ್ಸ್‌ಗೆ ಕನಿಷ್ಠ ಶೇ.50 ಸೀಟು ಕಾದಿರಿಸಬೇಕು ಸಹಿತ 18 ಪ್ರಧಾನ ಬೇಡಿಕೆಗಳನ್ನು ಮನವಿಯಲ್ಲಿ ಪಟ್ಟಿ ಮಾಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
'63% ಭ್ರಷ್ಟಾಚಾರ' ಹೇಳಿಕೆ ವಿವಾದ: 'ನನ್ನ ಹೇಳಿಕೆ ತಿರುಚಲಾಗಿದೆ' ಉಪಲೋಕಾಯುಕ್ತ ನ್ಯಾ. ವೀರಪ್ಪ ಸ್ಪಷ್ಟನೆ