ಸಿದ್ದರಾಮಯ್ಯ, ಡಿಕೆ ಶಿವಕುಮಾರ ಅವರೇ ನಿಮಗೆ ನೇರವಾಗಿ ಹೇಳ್ತಿದ್ದೇನೆ. ನೀವುಗಳು ನನ್ನ ಧ್ವನಿ ಅಡಗಿಸುವ ಕೆಲಸ ಮಾಡಿದ್ರೆ ಅದು ಮೂರ್ಖರ ಪರಮಾವಧಿ ಅಂತಾ ಹೇಳಬೇಕಾಗುತ್ತೆ. ಈ ಹೋರಾಟದಲ್ಲಿ 16 ಕೇಸನ್ನ ದಾಖಲು ಮಾಡಿದ್ರು. 16 ಅಲ್ಲ ಇನ್ನೂ 100 ಕೇಸ್ ಹಾಕಿದ್ರೂ ನಾರಾಯಣಗೌಡ್ರು ಧ್ವನಿಯನ್ನು ನಿಮ್ಮ ಕೈಲಿ ಅಡಗಿಸೋಕೆ ಸಾಧ್ಯವಿಲ್ಲಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ವಾಗ್ದಾಳಿ ನಡೆಸಿದರು
ಹಾಸನ (ಫೆ.8): ಬೆಂಗಳೂರಲ್ಲಿ ದೊಡ್ಡ ದೊಡ್ಡ ಉದ್ಯಮಗಳು, ಕಟ್ಟಡಳು, ಮಾಲ್ ಗಳು ತಲೆಯೆತ್ತಿವೆ ಅದರಲ್ಲಿ ಮಾಲ್ ಆಫ್ ಏಷ್ಯಾ ಅನ್ನೋದು ದೊಡ್ಡ ಮಾಲ್. ಅಲ್ಲಿ ಕನ್ನಡ ನಾಮಫಲಕ ಹಾಕಿ ಅಂದಿದ್ದಕ್ಕೆ ನನ್ನ ಮೇಲೆ ಕೇಸ್ ಹಾಕಿ ಕೋರ್ಟ್ ಗೆ ಹೋದ್ರು. ನಾನು ಅಲ್ಲೇ ಪ್ರತಿಜ್ಞೆ ಮಾಡಿದ್ದೇನೆ. ಒಂದು ಮಾಲ್ ಆಫ್ ಏಷ್ಯಾ ಗುರಿಯಾಗಬಾರದು, ಇಡೀ ಬೆಂಗಳೂರು ಗುರಿಯಾಗಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ತಿಳಿಸಿದರು.
ಇಂದು ಹಾಸನದಲ್ಲಿ ಮಾತನಾಡಿದ ಅವರು, ಇಡೀ ಬೆಂಗಳೂರು ಕನ್ನಡೀಕರಣ ಆಗ್ತಾ ಇದೆ. ರಾಜ್ಯವೇ ಕನ್ನಡೀಕರಣ ಆಗಬೇಕು ಅನ್ನೋ ಪ್ರತಿಜ್ಞೆ ಕರ್ನಾಟಕ ರಕ್ಷಣಾ ವೇದಿಕೆ ತೆಗೆದುಕೊಂಡಿದೆ. ಶೇಕಡಾ 60 - 40 ನಾಮಫಲಕ ಇರಬೇಕು ಅನ್ನೋ ಗುರಿ ಇಟ್ಕೊಂಡು ಹೋರಾಟಕ್ಕೆ ಕೈ ಹಾಕಿದೆ. ಕರ್ನಾಟಕಕ್ಕೆ ಬಂದಿರೋ ಉತ್ತರ ಭಾರತದ ಉದ್ಯಮಿಗಳು ಕಣ್ಣು,ಕಿವಿ ತೆರೆಸೋ ಹೋರಾಟ ಆಯ್ತು. ಅವರು ಹಿಂದೆ ಸರ್ಕಾರದ ಮೇಲೆ ಒತ್ತಡ ಹಾಕಿ, ಸರ್ಕಾರಗಳಿಗೆ ಏನೇನು ಸಲ್ಲಿಸಬೇಕೋ ಎಲ್ಲ ಕಪ್ಪಕಾಣಿಕೆಗಳನ್ನು ಸಲ್ಲಿಸಿ ನಾನು 14 ದಿನ ಜೈಲಿಗೆ ಹೋಗುವ ಹಾಗೆ ಹುನ್ನಾರವನ್ನು ಅನೇಕರು ಮಾಡಿದ್ರು. ನನ್ನ 14 ದಿನ ಜೈಲಿಗೆ ಕಳಿಸಿದ್ದಾರೆ, ಸರ್ಕಾರ, ಈ ವ್ಯವಸ್ಥೆ ಅಂತೇಳಿ ನಾನೇನು ಹೆದರಿದೋನು ಅಲ್ಲ, ಮತ್ತೆ ಜೈಲಿಂದ ಬಂದೆ ಮತ್ತೆ ಜೈಲಿಗೆ ಕಳಿಸಿದ್ರು. ಮತ್ತೆ ಜೈಲಿಗೆ ಕಳಿಸೋಕೆ ತಯಾರಿ ಮಾಡಿಕೊಂಡು ಕೂತಿದ್ರು. ಆದ್ರೂ ಸಹ ಅಂಜದೇ ಅಳುಕದೇ ನನ್ನ ಹೋರಾಟವನ್ನು ಮುಂದುವರಿಸಿದ್ದೇನೆ.
ಲೋಕಸಭಾ ಚುನಾವಣೆ: ಸುಮಲತಾರಿಗೆ ಟಿಕೆಟ್ ಕೇಳಿದ್ದರಲ್ಲಿ ತಪ್ಪೇನು? ಮಾಜಿ ಸಚಿವ ಕೆ.ಸಿ. ನಾರಾಯಣಗೌಡ
ಸಿದ್ದರಾಮಯ್ಯ, ಡಿಕೆ ಶಿವಕುಮಾರ ಅವರೇ ನಿಮಗೆ ನೇರವಾಗಿ ಹೇಳ್ತಿದ್ದೇನೆ. ನೀವುಗಳು ನನ್ನ ಧ್ವನಿ ಅಡಗಿಸುವ ಕೆಲಸ ಮಾಡಿದ್ರೆ ಅದು ಮೂರ್ಖರ ಪರಮಾವಧಿ ಅಂತಾ ಹೇಳಬೇಕಾಗುತ್ತೆ. ಈ ಹೋರಾಟದಲ್ಲಿ 16 ಕೇಸನ್ನ ದಾಖಲು ಮಾಡಿದ್ರು. 16 ಅಲ್ಲ ಇನ್ನೂ 100 ಕೇಸ್ ಹಾಕಿದ್ರೂ ನಾರಾಯಣಗೌಡ್ರು ಧ್ವನಿಯನ್ನು ನಿಮ್ಮ ಕೈಲಿ ಅಡಗಿಸೋಕೆ ಸಾಧ್ಯವಿಲ್ಲ. ಅದನ್ನ ಅಡಗಿಸುವ ಶಕ್ತಿ ನಿಮ್ಮಸರ್ಕಾರಕ್ಕಿಲ್ಲ, ನಿಮಗಿಲ್ಲ. ಇಲ್ಲಿ ಕನ್ನಡ ಗೆದ್ದಿದೆ, ಸಿದ್ದರಾಮಯ್ಯನವರು ಸೋತಿದ್ದಾರೆ. ಸಿದ್ದರಾಮಯ್ಯನವರ ಸರ್ಕಾರ ಸೋತಿದೆ
ನನ್ನ ಧ್ವನಿಯನ್ನು ಯಾರೂ ಅಡಗಿಸಲು ಸಾಧ್ಯವಿಲ್ಲ. ಯಾಕೆಂದರೆ ನಾನು ಹೊಯ್ಸಳ ರಾಜ್ಯ, ಹಾಸನದಿಂದ ಬಂದವನು. ನನ್ನ ರಕ್ತದ ಕಣಕಣಗಳಲ್ಲಿಯೂ ಸಹ ಕನ್ನಡ ಅನ್ನೋದು ಅಷ್ಟು ಗಟ್ಟಿಯಾಗಿ ಉಳಿದಿದೆ. ಈಗಲೂ ಹೇಳ್ತಾ ಇದ್ದೀನಿ ನನ್ನ ದೇಹದ ಕೊನೆಯ ರಕ್ತ ಇರೋವರೆಗೂ ಕನ್ನಡಕ್ಕಾಗಿ ಹೋರಾಡಿ ಸಾಯ್ತೇನೆ ಹೊರತು , ಯಾವುದೇ ಸರ್ಕಾರಗಳಿಗೆ ಯಾವುದೇ ವ್ಯವಸ್ಥೆಗಳಿಗೆ ನಾನು ಹೆದರೋದಿಲ್ಲ, ಅಂಜೋದಿಲ್ಲ, ಅಳುಕೋದಿಲ್ಲ ಎಂದು ರಾಜ್ಯಸರ್ಕಾರದ ವಿರುದ್ಧ ಗುಡುಗಿದರು.
ರಾಜ್ಯಪಾಲರಿಗೆ ಕನ್ನಡ, ಕರ್ನಾಟಕ ಇಷ್ಟ ಆಗದಿದ್ರೆ ರಾಜ್ಯದಿಂದ ಹೊರಹೋಗಲು ಸ್ವತಂತ್ರರು: ಕರವೇ ನಾರಾಯಣಗೌಡ
ಕನ್ನಡೀಕರಣಕ್ಕೆ ಫೆ.28 ಗಡುವು:
ಫೆ.28ರೊಳಗೆ ಎಲ್ಲವೂ ಕನ್ನಡ ನಾಮಫಲಕ ಅಳವಡಿಸಿಕೊಳ್ಳಬೇಕು. ಈಗ ನಾವು ಫೆ.28ಕ್ಕೆ ಗಡುವು ಕೊಟ್ಟಿದ್ದೇವೆ. ಕನ್ನಡೀಕರಣ ಆಗಲಿಲ್ಲಂದ್ರೆ 28ರ ನಂತರ ಇಡೀ ಬೆಂಗಳೂರು ಅಲ್ಲ, ಇಡೀ ಪ್ರಪಂಚ ನೋಡಬೇಕು ಆ ರೀತಿಯ ಹೋರಾಟಕ್ಕೆ ನಾವು ಸಜ್ಜಾಗಬೇಕು ಅನ್ನೋ ತೀರ್ಮಾನ ಮಾಡಿದ್ದೇವೆ ಎಂದು ಮುಂದಿನ ಹೋರಾಟ ಇನ್ನಷ್ಟು ತೀವ್ರಗೊಳಿಸುವ ಎಚ್ಚರಿಕೆ ನೀಡಿದ ನಾರಾಯಣಗೌಡರು.