ದಕ್ಷಿಣ ಭಾರತವನ್ನು ಪ್ರತ್ಯೇಕ ರಾಷ್ಟ್ರವನ್ನಾಗಿ ಮಾಡಬೇಕೆಂಬ ಹೇಳಿಕೆ ನೀಡಿ ದೇಶಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿರುವ ಡಿ.ಕೆ.ಸುರೇಶ್ ವಿರುದ್ಧ ರಾಮನಗರ ಬಿಎಸ್‌ಪಿ ಮುಖಂಡರು ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಮನಗರ (ಫೆ.8): ದಕ್ಷಿಣ ಭಾರತವನ್ನು ಪ್ರತ್ಯೇಕ ರಾಷ್ಟ್ರವನ್ನಾಗಿ ಮಾಡಬೇಕೆಂಬ ಹೇಳಿಕೆ ನೀಡಿ ದೇಶಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿರುವ ಡಿ.ಕೆ.ಸುರೇಶ್ ವಿರುದ್ಧ ರಾಮನಗರ ಬಿಎಸ್‌ಪಿ ಮುಖಂಡರು ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ರಾಮನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯ ಬಿಎಸ್‌ಪಿ ಖಜಾಂಚಿ ಚಿನ್ನಪ್ಪ ಹಾಗಡೆ, ಡಿಕೆ ಸುರೇಶ್ ಮೂರು ಬಾರಿ ಸಂಸದರಾಗಿದ್ದಾರೆ. ಆದರೆ ಬೆಂಗಳೂರು ಗ್ರಾಮಾಂತರಕ್ಕೆ ಅವರ ಕೊಡುಗೆ ಏನಿದೆ ಎಂದು ಪ್ರಶ್ನಿಸಿದರು. ಕೇವಲ ಕುಟುಂಬದ ಆಸ್ತಿ ಕಾಪಾಡಿಕೊಳ್ಳಲು ಸಂಸದರಾಗಿದ್ದಾರೆ. ಅವರು ಯಾವುದೇ ಹೊಸ ಯೋಜನೆ ಸಹ ತಂದಿಲ್ಲ. ಇದೀಗ ದಕ್ಷಿಣ ಭಾರತ ಪ್ರತ್ಯೇಕ ರಾಷ್ಟ್ರ ಎಂದು ದೇಶ ವಿಭಜನೆ ಹೇಳಿಕೆ ನೀಡುವ ಮೂಲಕ ಚುನಾವಣೆ ಗಿಮಿಕ್ ಮಾಡ್ತಾ ಇದ್ದಾರೆ. ಸಂಸದರಾಗಿ ಏನು ಮಾಡಬೇಕಿತ್ತೋ ಅದು ಮಾಡಿಲ್ಲ. ಅವರ ತಪ್ಪು ಮರೆಮಾಚಲು ಕಾಂಗ್ರೆಸ್ ನವರು ದೆಹಲಿ ಚಲೋ ಮಾಡಿದ್ದಾರೆ. ದೆಹಲಿಗೆ ಹೋಗಿ ಒಂದು ಟ್ರಿಪ್ ಮಾಡಿಕೊಂಡು ಬಂದಿದ್ದಾರೆ ಎಷ್ಟೇ. ಬೆಂಗಳೂರು ಗ್ರಾಮಾಂತರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶ ವಿಭಜನೆಯ ಅಸ್ತ್ರ ಕರ್ನಾಟಕದಿಂದ ಶುರು: ನಿರ್ಮಲಾ ಸೀತಾರಾಮನ್
ಕೇಂದ್ರ ಸರ್ಕಾರ ರಾಜ್ಯಕ್ಕೆ ತೆರಿಗೆ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ ದಕ್ಷಿಣ ಭಾರತ ಪ್ರತ್ಯೇಕ ರಾಷ್ಟ್ರದ ಹೇಳಿಕೆ ನೀಡಿದ್ದ ಡಿಕೆ ಸುರೇಶ್. ಸಂಸದ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಸಹ ಖಂಡಿಸಿದ್ದರು, ಈಗಾಗಲೇ ದೇಶ ವಿಭಜನೆ ಮಾಡಿರುವ ಕಾಂಗ್ರೆಸ್‌ಗೆ ಇನ್ನೂ ಸಮಾಧಾನವಾಗಿಲ್ಲವೇ ಎಂದು ಪ್ರಶ್ನಿಸಿದ್ದರು. ಇತ್ತ ಬಿಜೆಪಿ ಶಾಸಕರು, ಸಂಸದರು ಡಿಕೆ ಸುರೇಶ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ನಿವಾಸಕ್ಕೆ ಮುತ್ತಿಗೆ ಹಾಕಿದ್ದರು. ಇದೀಗ ರಾಮನಗರ ಬಿಎಸ್‌ಪಿ ಮುಖಂಡರು ಸಹ ಡಿಕೆ ಸುರೇಶ್ ವಿರುದ್ಧ ತಿರುಗಿಬಿದ್ದಿದ್ದಾರೆ.
ದೇಶ ಒಡೆದ ಮೇಲೂ ತೃಪ್ತಿ ಇಲ್ಲವೆ? ಡಿಕೆ ಸುರೇಶ್ ಪ್ರತ್ಯೇಕ ರಾಷ್ಟ್ರ ಹೇಳಿಕೆ ಖಂಡಿಸಿದ ಪ್ರಧಾನಿ ಮೋದಿ!