71ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ಕಾಗೋಡು ತಿಮ್ಮಪ್ಪ, ನಟ ಅಶೋಕ್ ಸೇರಿ 71 ಸಾಧಕರಿಗೆ ಒಲಿದ ಗೌರವ!

Published : Oct 30, 2026, 05:04 PM IST
Kannada Rajyotsava award

ಸಾರಾಂಶ

71ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 71 ಮಂದಿ ಗಣ್ಯರಿಗೆ ರಾಜ್ಯ ಸರ್ಕಾರವು ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಿದೆ. ಕಾಗೋಡು ತಿಮ್ಮಪ್ಪ, ನಟ ಅಶೋಕ್, ಬಿ.ವಿ. ಆಚಾರ್ಯ ಸೇರಿದಂತೆ ಹಲವು ದಿಗ್ಗಜರು ಈ ಗೌರವಕ್ಕೆ ಭಾಜನರಾಗಿದ್ದಾರೆ.

ಬೆಂಗಳೂರು (ಅ.30): 71ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 71 ಮಂದಿ ಗಣ್ಯ ಸಾಧಕರಿಗೆ ರಾಜ್ಯ ಸರ್ಕಾರವು ಪ್ರತಿಷ್ಠಿತ ‘ರಾಜ್ಯೋತ್ಸವ ಪ್ರಶಸ್ತಿ’ ಯನ್ನು ಪ್ರಕಟಿಸಿದೆ. ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಶಾಂತಲಾ ಎಂ. ಅಧಿಕೃತ ಆದೇಶ ಹೊರಡಿಸಿದ್ದಾರೆ.

ಹಿರಿಯ ರಾಜಕಾರಣಿ ಹಾಗೂ ಮಾಜಿ ಸಭಾಪತಿ ಕಾಗೋಡು ತಿಮ್ಮಪ್ಪ, ಖ್ಯಾತ ಹಿರಿಯ ನಟ ಅಶೋಕ್, ಮಾಜಿ ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ, ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ, ಬಾಡಿಬಿಲ್ಡರ್ ‘ಜಿಮ್ ರವಿ’ (ಎ.ವಿ. ರವಿ), ಮಾಜಿ ಮುಖ್ಯ ಕಾರ್ಯದರ್ಶಿ ತೆರೇಸಾ ಭಟ್ಟಾಚಾರ್ಯ ಸೇರಿದಂತೆ ನಾಡಿನ ಹಲವು ದಿಗ್ಗಜರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

71 ಸಾಧಕರ ಕ್ಷೇತ್ರವಾರು ಸಂಪೂರ್ಣ ಪಟ್ಟಿ ಇಲ್ಲಿದೆ:

1. ಜಾನಪದ ಕ್ಷೇತ್ರ (7)

ಶ್ರೀ ದಾವಲಸಾಬ ಅತ್ತಾರ (ಕೊಪ್ಪಳ)

ಶ್ರೀಮತಿ ಗೌರಮ್ಮ (ಚಾಮರಾಜನಗರ)

ಶ್ರೀ ಪಾಂಡಪ್ಪ ದೇವಲಪ್ಪ ಲಮಾಣಿ (ಗದಗ)

ಶ್ರೀ ಎ.ಆರ್. ಸತ್ಯನಾರಾಯಣ (ಬೆಂಗಳೂರು ದಕ್ಷಿಣ)

ಶ್ರೀ ಈರಣ್ಣ ರುದ್ರಾಕ್ಷಿ (ರಾಯಚೂರು)

ಶ್ರೀ ಶಿವಲಿಂಗಪ್ಪ ಎಂ. (ಕೊಪ್ಪಳ)

ಶ್ರೀ ಸುರೇಶ ರಾಮಚಂದ್ರ ಜೋಶಿ (ವಿಜಯಪುರ)

2. ಸಂಗೀತ ಕ್ಷೇತ್ರ (3)

ಡಾ. ಸಿ.ಎ. ಶ್ರೀಧರ್ (ಮೈಸೂರು)

ಡಾ. ಎ. ನಾರಾಯಣ ಸ್ವಾಮಿ (ಹಾಸನ)

ಶ್ರೀ ವಿ. ಮುರಳಿ (ಬೆಂಗಳೂರು ಗ್ರಾಮಾಂತರ)

3. ನೃತ್ಯ ಕ್ಷೇತ್ರ (1)

ಡಾ. ಸತ್ಯನಾರಾಯಣ ರಾಜು (ಬೆಂಗಳೂರು ನಗರ)

4. ಚಲನಚಿತ್ರ / ಕಿರುತೆರೆ (3)

ಶ್ರೀ ಕೆ. ವೆಂಕಟರಮಣ (ಬಾಬಾಜಿ) (ಧಾರವಾಡ)

ಶ್ರೀ ಅಶೋಕ್ - ಹಿರಿಯ ನಟ (ಬೆಂಗಳೂರು ಗ್ರಾಮಾಂತರ)

ಶ್ರೀ ಕೆ.ಎಸ್. ರವೀಂದ್ರನಾಥ್ (ಬೆಂಗಳೂರು ನಗರ)

5. ಯಕ್ಷಗಾನ (1)

ಶ್ರೀ ಗೋಪಾಲ ಗಾಣಿಗ (ಉಡುಪಿ)

6. ಬಯಲಾಟ (1)

ಶ್ರೀಮತಿ ಹುಲಿಗೆಮ್ಮ (ಬಳ್ಳಾರಿ)

7. ರಂಗಭೂಮಿ ಕ್ಷೇತ್ರ (6)

ಶ್ರೀ ಡಿ. ಕೆಂಪಣ್ಣ ಬಿನ್ ಲೇಟ್ ದ್ಯಾವಪ್ಪ (ಬೆಂಗಳೂರು ಗ್ರಾಮಾಂತರ)

ಶ್ರೀಮತಿ ಕೆ. ಜಯಲಕ್ಷ್ಮಿ ಪಾಟೀಲ್ (ಧಾರವಾಡ)

ಶ್ರೀ ಜಿ.ಡಿ. ತಿಮ್ಮಯ್ಯ (ಚಿತ್ರದುರ್ಗ)

ಶ್ರೀಮತಿ ಕೆ.ಆರ್. ಸುಮತಿ (ಮೈಸೂರು)

ಶ್ರೀ ಹೆಚ್.ವಿ. ಪುಟ್ಟವೀರಪ್ಪ (ಬೆಂಗಳೂರು ದಕ್ಷಿಣ)

ಶ್ರೀ ಹೊನ್ನ ನಾಯಕ (ಮೈಸೂರು)

8. ಶಿಲ್ಪಕಲೆ (2)

ಶ್ರೀ ಜಿ.ಬಿ. ಹಂಸಾನಂದ ಆಚಾರ್ಯ (ವಿಜಯನಗರ)

ಶ್ರೀ ಕಾಡಪ್ಪ ಪರಶುರಾಮ ಗಾಡಿವಡ್ಡರ್ (ಬೆಳಗಾವಿ)

9. ಚಿತ್ರಕಲೆ (1)

ಶ್ರೀ ಸಿ.ಬಿ. ಸೋಮಶೆಟ್ಟಿ (ಬೀದರ್)

10. ಕರಕುಶಲ (1)

ಶ್ರೀಮತಿ ಶಾಂತಾಬಾಯಿ (ಬೀದರ್)

11. ಕೃಷಿ ಕ್ಷೇತ್ರ (2)

ಶ್ರೀ ಹೆಚ್.ಕೆ. ಶ್ರೀಕಂಠು (ಬೆಂಗಳೂರು ದಕ್ಷಿಣ)

ಶ್ರೀ ಬಿ.ಎ. ಚನ್ನಪ್ಪಗೌಡ (ಬೆಂಗಳೂರು)

12. ಪರಿಸರ ಕ್ಷೇತ್ರ (1)

ಡಾ. ಸ್ವಾಮಿ ಆನಂದ್ ಆರ್. (ಮೈಸೂರು)

13. ವಿಜ್ಞಾನ ಮತ್ತು ತಂತ್ರಜ್ಞಾನ (2)

ಪ್ರೊ. ರಾಜಾಸಾಬ್ ಎ.ಎಚ್. (ಕಲಬುರಗಿ)

ಡಾ. ರಾಜಶೇಖರ ಮೂರ್ತಿ (ಹೊರದೇಶ - ಕೆನಡಾ)

14. ಮಾಧ್ಯಮ ಕ್ಷೇತ್ರ (2)

ಶ್ರೀ ಡಿ. ಉಮಾಪತಿ - ಹಿರಿಯ ಪತ್ರಕರ್ತರು (ಚಿತ್ರದುರ್ಗ)

ಶ್ರೀಮತಿ ಎಂ.ಪಿ. ಸುಶೀಲ (ಬೆಂಗಳೂರು ನಗರ)

15. ಮಾಧ್ಯಮ / ಛಾಯಾಚಿತ್ರ (1)

ಶ್ರೀ ವಿಶ್ವನಾಥ್ ಸುವರ್ಣ (ದಕ್ಷಿಣ ಕನ್ನಡ)

16. ಸಂಕೀರ್ಣ ಕ್ಷೇತ್ರ (7)

ಶ್ರೀಮತಿ ರುಕ್ಮಿಣಿ ಬಾಯಿ ನಾಗಪ್ಪ ವಾಪ್ಕರ್ (ಬಾಗಲಕೋಟೆ)

ಡಾ. ಡಿ.ಎಸ್. ಚೌಗಲೆ (ಬೆಳಗಾವಿ)

ಶ್ರೀ ಬೆಳ್ಳೂರು ಶಂಕರ್ ನಾರಾಯಣ ದ್ವಾರಕನಾಥ್ (ಬೆಂಗಳೂರು)

ಶ್ರೀ ರವಿ ಪ್ರವೀಣ್ ನೊರೊನ್ಹಾ (ಬೆಂಗಳೂರು)

ಶ್ರೀ ಎಂ.ಆರ್. ಜೈಶಂಕರ್ (ಚಿಕ್ಕಮಗಳೂರು)

ಶ್ರೀ ಪ್ರಸಾದ್ ಬಿದ್ದಪ್ಪ - ಫ್ಯಾಷನ್ ತಜ್ಞ (ಕೊಡಗು)

ಶ್ರೀ ವಾಸಪ್ಪ ಯಲ್ಲಪ್ಪ ಕುಸುಗೂರ (ಹಾವೇರಿ)

17. ಸಂಕೀರ್ಣ / ವಾಸ್ತುಶಾಸ್ತ್ರ (1)

ಶ್ರೀ ಬಿ.ಪಿ. ಆರಾಧ್ಯ (ಬೆಂಗಳೂರು ದಕ್ಷಿಣ)

18. ಸಮಾಜ ಸೇವೆ (9)

ಪೂಜ್ಯ ಶ್ರೀ ಜಗದ್ಗುರು ಡಾ. ಅನ್ನದಾನೇಶ್ವರ ಮಹಾಶಿವಯೋಗಿ (ಗದಗ)

ಶ್ರೀ ಬಸವರಾಜು (ಮಂಡ್ಯ)

ಶ್ರೀ ಕಾಗೋಡು ತಿಮ್ಮಪ್ಪ - ಹಿರಿಯ ರಾಜಕೀಯ ಧುರೀಣ (ಶಿವಮೊಗ್ಗ)

ಡಾ. ಎಸ್.ಎಂ. ಎಲಿ (ದಾವಣಗೆರೆ)

ಡಾ. ಜಿ.ಎಸ್. ಚಂದ್ರಶೇಖರ್ - ಆದರ್ಶ ಚಾರಿಟಬಲ್ ಟ್ರಸ್ಟ್ (ಉತ್ತರ ಕನ್ನಡ)

ಡಾ. ಶಿವಾನಂದ ಮಹಾಸ್ವಾಮಿ (ಕಲಬುರಗಿ)

ಶ್ರೀ ಕೃಷ್ಣೇಗೌಡ ಬಿನ್ ವೆಂಕಟರಾಯಪ್ಪ (ಚಿಕ್ಕಬಳ್ಳಾಪುರ)

ಶ್ರೀ ಎ.ಸಿ. ಭಂಡಾರಿ - ಅಖಿಲ ಭಾರತ ತುಳು ಒಕ್ಕೂಟ (ದಕ್ಷಿಣ ಕನ್ನಡ)

ಶ್ರೀಮತಿ ಗುರಮ್ಮ ಹಂಪಯ್ಯ ಸಂಕಿನಮಠ (ಬಾಗಲಕೋಟೆ)

19. ವೈದ್ಯಕೀಯ ಕ್ಷೇತ್ರ (2)

ಡಾ. ವಿಜಯೇಂದ್ರ ಹೊನ್ನೂರಪ್ಪ (ಬೆಂಗಳೂರು)

ಡಾ. ಸುಜಾತ ಮಲ್ಲಿಕಾರ್ಜುನ ಜಾಲಿ (ಬೆಳಗಾವಿ)

20. ಆಡಳಿತ ಕ್ಷೇತ್ರ (2)

ಶ್ರೀಮತಿ ತೆರೆಸಾ ಭಟ್ಟಾಚಾರ್ಯ - ಮಾಜಿ ಮುಖ್ಯ ಕಾರ್ಯದರ್ಶಿ (ಬೆಂಗಳೂರು ನಗರ)

ಡಾ. ಕೆ.ಎಸ್. ಸೋಮಶೇಖರ್ (ನವದೆಹಲಿ)

21. ಇಂಜಿನಿಯರಿಂಗ್ ಕ್ಷೇತ್ರ (1)

ಡಾ. ಕೆ.ಎನ್. ವೆಂಕಟ್ ಕೃಷ್ಣಾರಾವ್ (ಚಿಕ್ಕಬಳ್ಳಾಪುರ)

22. ಸಾಹಿತ್ಯ ಕ್ಷೇತ್ರ (6)

ಡಾ. ಇಂದಿರಾ ಹೆಗ್ಗಡೆ (ದಕ್ಷಿಣ ಕನ್ನಡ)

ಶ್ರೀ ವೀರಹನುಮಾನ್ (ರಾಯಚೂರು)

ಪ್ರೊ. ನಾರಾಯಣಘಟ್ಟ (ನಾಹೋಂ) (ತುಮಕೂರು)

ಶ್ರೀ ಸಿ.ಬಿ. ಮಹೇಶ್ವರಪ್ಪ ಚಟ್ನಳ್ಳಿ (ಚಿಕ್ಕಮಗಳೂರು)

ಡಾ. ಕರಿಗೌಡ ಬೀಚನಹಳ್ಳಿ (ತುಮಕೂರು)

ಡಾ. ಸಿದ್ಧರಾಮ ಹೊನ್ಕಲ್ (ಯಾದಗಿರಿ)

23. ಶಿಕ್ಷಣ ಕ್ಷೇತ್ರ (4)

ಡಾ. ಫಾ|| ಜೋಸೆಫ್ ಸಿ.ಸಿ. - ಉಪಕುಲಪತಿಗಳು, ಕ್ರೈಸ್ಟ್ ವಿಶ್ವವಿದ್ಯಾಲಯ (ಬೆಂಗಳೂರು ನಗರ)

ಶ್ರೀ ಶಾಂತಪ್ಪ ಪಂ ದಶವಂತ (ವಿಜಯಪುರ)

ಶ್ರೀಮತಿ ಸಂಗೀತಾ ಎನ್. ಕಟ್ಟೀಮನಿ (ಕಲಬುರಗಿ)

ಪ್ರೊ. ಎನ್.ಎಸ್. ರಂಗರಾಜು (ಮೈಸೂರು)

24. ನ್ಯಾಯಾಂಗ ಕ್ಷೇತ್ರ (1)

ಶ್ರೀ ಬಿ.ವಿ. ಆಚಾರ್ಯ - ಹಿರಿಯ ನ್ಯಾಯವಾದಿಗಳು (ಉಡುಪಿ)

25. ಹೊರನಾಡು / ಹೊರದೇಶ (1)

ಶ್ರೀ ರಮೇಶ್ ಆರ್. ಗೌಡ - ಮಾಜಿ ಅಧ್ಯಕ್ಷರು, ಅಕ್ಕ (ಅಮೆರಿಕ)

26. ಕ್ರೀಡಾ ಕ್ಷೇತ್ರ (3)

ಶ್ರೀ ಎ.ವಿ. ರವಿ (ಜಿಮ್ ರವಿ) - ದೇಹದಾರ್ಢ್ಯ ಪಟು (ಕೋಲಾರ)

ಡಾ. ಎ.ಬಿ. ಸುಬ್ಬಯ್ಯ - ಹಾಕಿ ದಿಗ್ಗಜ (ಕೊಡಗು)

ಶ್ರೀ ಎಂ. ಗಿರೀಶ್ (ಬೆಂಗಳೂರು)

ಈ ಬಾರಿಯ ಪ್ರಶಸ್ತಿಯಲ್ಲಿ ಪ್ರಾದೇಶಿಕ ಸಮತೋಲನ ಕಾಯ್ದುಕೊಳ್ಳಲಾಗಿದ್ದು, ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ, ಕರಾವಳಿ, ಹಳೆ ಮೈಸೂರು ಹಾಗೂ ಮಧ್ಯ ಕರ್ನಾಟಕ ಸೇರಿದಂತೆ ಎಲ್ಲಾ ಭಾಗಗಳ ಗಣ್ಯರಿಗೆ ಸೂಕ್ತ ಪ್ರಾತಿನಿಧ್ಯ ನೀಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ, ರಾಜ್ಯದಲ್ಲಿ ಮತ್ತೆ ಮಳೆ ಆರ್ಭಟ; 14 ಜಿಲ್ಲೆಗಳಿಗೆ ಯಲ್ಲೋ ಅಲರ್ಟ್!
ಬಿಜೆಪಿ ನಾಯಕ ರೇಣುಕಾಚಾರ್ಯ ಪುತ್ರನ ಮದುವೆಗೆ ಸಿದ್ದರಾಮಯ್ಯಗೆ ಆಹ್ವಾನ, ಹೊನ್ನಾಳಿ ಸೊಸೆ ಯಾರು?