ಮರದ ಕೆಳಗೆ ನಿಂತಿದ್ದ ವೇಳೆ ಸಿಡಿಲು ಬಡಿದು ರೈತ ಮಹಿಳೆ ಹಾಗೂ ಶ್ವಾನ ದುರ್ಮರಣಕ್ಕೀಡಾದ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಬೋನಸಪೂರ ಗ್ರಾಮದಲ್ಲಿ ನಡೆದಿದೆ. ಸ್ವಪ್ನಾ(48), ಸಿಡಿಲಿಗೆ ಬಲಿಯಾದ ರೈತ ಮಹಿಳೆ.
ಕಲಬುರಗಿ (ಮೇ.10): ಮರದ ಕೆಳಗೆ ನಿಂತಿದ್ದ ವೇಳೆ ಸಿಡಿಲು ಬಡಿದು ರೈತ ಮಹಿಳೆ ಹಾಗೂ ಶ್ವಾನ ದುರ್ಮರಣಕ್ಕೀಡಾದ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಬೋನಸಪೂರ ಗ್ರಾಮದಲ್ಲಿ ನಡೆದಿದೆ.
ಸ್ವಪ್ನಾ(48), ಸಿಡಿಲಿಗೆ ಬಲಿಯಾದ ರೈತ ಮಹಿಳೆ. ಮೃತ ಮಹಿಳೆಯ 20 ವರ್ಷದ ಮಗ ಜ್ಞಾನೇಶ್ವರ್ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
undefined
ಗುಡುಗು-ಸಿಡಿಲಿನೊಂದಿಗೆ ಮಳೆ ಆರಂಭವಾದಾಗ ಮರದ ಕೆಳಗೆ ನಿಂತಿದ್ದ ಮಹಿಳೆ, ಮಹಿಳೆಯ ಹಿಂದೆ ತೆರಳಿದ್ದ ಸಾಕು ನಾಯಿಯೂ ಮರದ ಕೆಳಗೆ ನಿಂತಿತ್ತು. ಈ ವೇಳೆ ಗುಡುಗು-ಮಿಂಚಿನೊಂದಿಗೆ ಮಳೆ ಅರ್ಭಟ ಜೋರಾಗಿದೆ. ಮರದ ಕೆಳಗೆ ನಿಂತಿದ್ದ ಮಹಿಳೆಗೆ ಭಾರೀ ಶಬ್ದದೊಂದಿಗೆ ಸಿಡಿಲು ಬಡಿದಿದೆ. ತೀವ್ರ ಗಾಯಗೊಂಡ ಮಹಿಳೆ ಹಾಗೂ ನಾಯಿ ಸ್ಥಳದಲ್ಲೇ ಮೃತಪಟ್ಟರೆ, ತುಸು ದೂರದಲ್ಲಿದ್ದ ಮಗ ಜ್ಞಾನೇಶ್ವರ್‌ಗೂ ಸಿಡಿಲಿನ ಹೊಡೆತಕ್ಕೆ ಗಂಭೀರ ಗಾಯಗೊಂಡಿದ್ದಾನೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗ ಜ್ಞಾನೇಂದ್ರ. ಘಟನೆ ಸಂಬಂಧ ಕುಂಚಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲಬುರಗಿ: ಎತ್ತಿನಬಂಡಿಯಲ್ಲಿ ಮನೆಗೆ ಬರುವಾಗ ಸಿಡಿಲು ಬಡಿದು ಬಾಲಕ ದುರ್ಮರಣ!
ಸಿಡಿಲು ಬಡಿದು ತೆಂಗಿನ ಮರಕ್ಕೆ ಬೆಂಕಿ
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಬಿರುಗಾಳಿ ಗುಡುಗು-ಮಿಂಚಿನೊಂದಿಗೆ ಅಬ್ಬರಿಸುತ್ತಿರುವ ಮಳೆಗೆ ಮರಗಿಡಗಳು, ವಿದ್ಯುತ್ ಕಂಬಗಳು ಉರುಳಿಬಿದ್ದು, ಕೆಲವೆಡೆ ಬೆಳೆಗಳು ನಾಶವಾಗಿವೆ. ಇದೇ ವೇಳೆ ಕಡೂರು ಪಟ್ಟಣದ ಹರುವನಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ತೆಂಗಿನ ಮರ ಹೊತ್ತಿ ಉರಿದ ಘಟನೆ ನಡೆದಿದೆ.
ಕರ್ನಾಟಕಕ್ಕೆ 5 ದಿನ ಚಂಡಮಾರುತ ಭೀತಿ: ರಾಜ್ಯದ 23 ಜಿಲ್ಲೆಗಳಲ್ಲಿ ಬಿರುಗಾಳಿಯೊಂದಿಗೆ ಮಳೆ ಸಾಧ್ಯತೆ
ಕಡೂರು ಪಟ್ಟಣ ಸೇರಿದಂತೆ ಸುತ್ತಮುತ್ತ ಅರ್ಧಗಂಟೆಗೂ ಹೆಚ್ಚು ಕಾಲ ಭಾರೀ ಮಳೆ ಸುರಿದಿದೆ. ಬರದಿಂದ ಕಂಗೆಟ್ಟಿದ್ದ ರೈತರು ಹಾಗೂ ಜನರಲ್ಲಿ ಮಳೆ ಸಂತಸ ತಂದಿದೆ. ಆದರೆ ಕೆಲವಡೆ ಗಾಳಿ, ಗುಡುಗು-ಮಿಂಚಿನ ಮಳೆಯ ಅರ್ಭಟದಿಂದ ಕೆಲವಡೆ ಅವಾಂತರ ಸೃಷ್ಟಿಸಿದೆ.