ತುರ್ತು ಚಿಕಿತ್ಸೆ ವೇಳೆ ಥಟ್ ಅಂತ ನೆನಪಾಗುವ ಆಪತ್ಬಾಂಧವ ಅಂದ್ರೆ 108 ಅಂಬ್ಯುಲೆನ್ಸ್. ಆದ್ರೆ ಅಂಬ್ಯುಲೆನ್ಸ್ ಚಾಲಕರ ಬದುಕೇ ತುಂಬಾ ದುಸ್ತರವಾಗಿದ್ದು, ನೋವಿನಲ್ಲಿಯೇ ಹೋರಾಡುವವರ ಜೀವ ಉಳಿಸಲು ಧಾವಿಸುವ ಸಿಬ್ಬಂದಿಗಳ ಬದುಕು ಬೀದಿಗೆ ಬಂದಿದೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಮೇ.10): ತುರ್ತು ಚಿಕಿತ್ಸೆ ವೇಳೆ ಥಟ್ ಅಂತ ನೆನಪಾಗುವ ಆಪತ್ಬಾಂಧವ ಅಂದ್ರೆ 108 ಅಂಬ್ಯುಲೆನ್ಸ್. ಆದ್ರೆ ಅಂಬ್ಯುಲೆನ್ಸ್ ಚಾಲಕರ ಬದುಕೇ ತುಂಬಾ ದುಸ್ತರವಾಗಿದ್ದು, ನೋವಿನಲ್ಲಿಯೇ ಹೋರಾಡುವವರ ಜೀವ ಉಳಿಸಲು ಧಾವಿಸುವ ಸಿಬ್ಬಂದಿಗಳ ಬದುಕು ಬೀದಿಗೆ ಬಂದಿದೆ.
undefined
ಹೀಗೆ ಹೋರಾಟಕ್ಕೆ ಸಜ್ಜಾಗಿರುವ ಸಿಬ್ಬಂದಿಗಳು. ಸಂಬಳವಿಲ್ಲದೇ ಪರದಾಡ್ತಿರುವ ಅಂಬ್ಯುಲೆನ್ಸ್ ಚಾಲಕರು. ಹೌದು, ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಆವರಣ. ದಿನದ 12 ಗಂಟೆಗಳ ಕಾಲ,ತಮ್ಮ ಪ್ರಾಣದ ಹಂಗು ತೊರೆದು, ಮತ್ತೊಬ್ಬರ ಜೀವ ಉಳಿಸಲು ಶ್ರಮಿಸುವ 108 ಅಂಬ್ಯುಲೆನ್ಸ್ ಸಿಬ್ಬದಿ ಕಣ್ಣೀರಿನ ಕಥೆ ಇದು.ಇಲ್ಲಿ 127 ಜನ ಸಿಬ್ಬಂದಿ ಸರ್ಕಾರಿ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಗ್ರೀನ್ ಹೆಲ್ತ್‌ಸರ್ವೀಸ್ ಸಂಸ್ಥೆ(Green Healthcare Institute)ಯಲ್ಲಿ ಗುತ್ತಿಗೆ ಆಧಾರದಮೇಲೆ ಸೇವೆ ಸಲ್ಲಿಸ್ತಿದ್ದಾರೆ. ಆದ್ರೆ ಇವರಿಗೆ ಯಾವುದೇ ಖಾಯಂ ಭದ್ರತೆ ಇಲ್ಲ.ಅಲ್ದೇ ಸಂಬಳವನ್ನು ಸಹ ಸಂಸ್ಥೆ ಸರಿಯಾಗಿ ಕೊಡ್ತಿಲ್ಲ. ಸುಮಾರು ಮೂರು ತಿಂಗಳಿಗೊಮ್ಮೆ ನೀಡುವ ಸಂಬಳದಿಂದಾಗಿ ಈ ಕಾಯಕವನ್ನೇ ನಂಬಿಜೀವನ ಸಾಗಿಸುವ ಚಾಲಕರು ಹಾಗು ಸಿಬ್ಬಂದಿಗಳು ಹೈರಾಣಾಗಿದ್ದಾರೆ.
108 ಸಿಬ್ಬಂದಿ ಮುಷ್ಕರದಿಂದ ಹಿಂದೆ ಸರಿದಿದ್ದಾರೆ, ಸರ್ಕಾರದಿಂದ ವೇತನ ಪಾವತಿ ಬಾಕಿ ಇಲ್ಲ - ದಿನೇಶ್ ಗುಂಡೂರಾವ್
ಮನೆಯ ಬಾಡಿಗೆ ಕಟ್ಟಲಾಗದೇ,ಅವರ ಮಕ್ಕಳ ಶಾಲಾ ಶುಲ್ಕ ಹಾಗು ಪುಸ್ತಕ ಕೊಡಿಸಲು ಸಹ ಆಗದೇ ಕಂಗಾಲಾಗಿದ್ದಾರೆ. ಈ ಬಗ್ಗೆ ಸಂಸ್ಥೆ ಹಾಗು ಸರ್ಕಾರದ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ. ಒಬ್ಬರ ಮೇಲೊಬ್ಬರು ಹೇಳಿಕೊಂಡು ಹಾವು-ಏಣಿ ಆಟ ಆಡ್ತಿದ್ದಾರೆಂದು ಅಂಬ್ಯುಲೆನ್ಸ್ ಸಿಬ್ಬಂದಿ ಹಿಡಿಶಾಪ ಹಾಕಿದ್ದಾರೆ.
ಇನ್ನು ಈ ಅವಾಂತರದಿಂದಾಗಿ ಸಿಬ್ಬಂದಿ ಬದುಕು ಬೀದಿಗೆ ಬಂದಿದೆ. ಇಂತಹ ವೇಳೆ ಸರ್ಕಾರದ ನಿಯಮಾವಳಿಯಂತೆ ಸಂಬಳ ನೀಡದೇ ಅದನ್ನು ಸಹ ಕಡಿತಗೊಳಿಸಿದ್ದಾರೆಂಬ ಆರೋಪ ಕೇಳಿ ಬಂದಿದ್ದು, ಕೂಡಲೇ ಪ್ರತಿ ತಿಂಗಳು ಸಂಬಳ ಕೊಡಬೇಕು ಅಗತ್ಯ ಭದ್ರತೆಯನ್ನು ಅಂಬ್ಯುಲೆನ್ಸ್ ಸಿಬ್ಬಂದಿಗಳಿಗೆ ನೀಡಬೇಕು ಇಲ್ಲವಾದ್ರೆ ಸಾಮೂಹಿಕ ರಜೆ ಹಾಕುವುದಾಗಿ ಸರ್ಕಾರಕ್ಕೆ ಎಚ್ಚರಿಸಿದ್ದಾರೆ
ರಾಜ್ಯದಲ್ಲಿ ಇಂದು ರಾತ್ರಿಯಿಂದ ಹೆಲ್ತ್ ಎಮರ್ಜೆನ್ಸಿ: 8 ಗಂಟೆ ನಂತರ ಪೋರ್ಟ್ 108 ಅಂಬ್ಯೂಲೆನ್ಸ್ ಸೇವೆ ಇಲ್ಲ!
ಒಟ್ಟಾರೆ 108 ಅಂಬ್ಯುಲೆನ್ಸ್ ಸಿಬ್ಬಂದಿಗಳ ಗೋಳು ಕೇಳುವವರಿಲ್ಲ ಎಂಬಂತಾಗಿದೆ. ಗ್ರೀನ್ ಸಂಸ್ಥೆ ಹಾಗು ಸರ್ಕಾರದ ಹಾವು ಏಣಿ ಆಟದಿಂದಾಗಿ ಸಿಬ್ಬಂದಿಗಳು ಬೇಸತ್ತಿದ್ದಾರೆ. ಇನ್ನಾದ್ರು ಸರ್ಕಾರ ಎಚ್ಚೆತ್ತು ಈ ಶ್ರಮ ಜೀವಿಗಳಸಂಕಷ್ಟ ಪರಿಹರಿಸಲು ಮುಂದಾಗಬೇಕಿದೆ