ಭ್ರಷ್ಟಾಚಾರದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಫಸ್ಟ್‌: ಮಾಜಿ ಶಾಸಕ ಸುರೇಶ್‌ಗೌಡ ವಾಗ್ದಾಳಿ

Published : Aug 17, 2023, 05:28 AM IST
ಭ್ರಷ್ಟಾಚಾರದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ  ಫಸ್ಟ್‌: ಮಾಜಿ ಶಾಸಕ ಸುರೇಶ್‌ಗೌಡ ವಾಗ್ದಾಳಿ

ಸಾರಾಂಶ

ಭ್ರಷ್ಟಾಚಾರದಲ್ಲಿ ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಮೊದಲ ಸ್ಥಾನದಲ್ಲಿದ್ದಾರೆ. ಸುಮಾರು 300 ರಿಂದ 400 ಕೋಟಿ ರು. ಲೂಟಿ ಹೊಡೆದಿದ್ದಾನೆ ಎಂದು ಮಾಜಿ ಶಾಸಕ ಸುರೇಶ್‌ಗೌಡ ಏಕ ವಚನದಲ್ಲೇ ವಾಗ್ದಾಳಿ ನಡೆಸಿದರು.

ಮಂಡ್ಯ (ಆ.17) :  ಭ್ರಷ್ಟಾಚಾರದಲ್ಲಿ ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಮೊದಲ ಸ್ಥಾನದಲ್ಲಿದ್ದಾರೆ. ಸುಮಾರು 300 ರಿಂದ 400 ಕೋಟಿ ರು. ಲೂಟಿ ಹೊಡೆದಿದ್ದಾನೆ ಎಂದು ಮಾಜಿ ಶಾಸಕ ಸುರೇಶ್‌ಗೌಡ ಏಕ ವಚನದಲ್ಲೇ ವಾಗ್ದಾಳಿ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರ ಭ್ರಷ್ಟಾಚಾರ ಮಾಡಿ ದುಡ್ಡನ್ನು ಏರ್‌ಲಿ¶್ಟ… ಮಾಡುತ್ತಿದೆ. ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಜೆಸಿಬಿಯಲ್ಲಿ ಹಣ ತುಂಬುತ್ತಿದ್ದಾರೆ ಎನ್ನುತ್ತಿದ್ದರು. ಆದರೆ, ಈ ಸರ್ಕಾರ ಭ್ರಷ್ಟಹಣವನ್ನು ಏರ್‌ಲಿ¶್ಟ… ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಸರ್ಕಾರದ ಸಚಿವರು ರಾಜ್ಯವನ್ನೇ ಲೂಟಿ ಹೊಡೆಯುತ್ತಿದ್ದಾರೆ. ಭ್ರಷ್ಟಾಚಾರದಲ್ಲಿ ಚಲುವರಾಯಸ್ವಾಮಿ ಮೊದಲ ಸ್ಥಾನದಲ್ಲಿದ್ದಾರೆ. ಅಧಿಕಾರ ಸಿಕ್ಕಾಗ ಜನಗಳಿಗೆ ಒಳ್ಳೆಯದು ಮಾಡಬೇಕು. ಆದರೆ, ಇವರು ಕಡಿಮೆ ಎಂದರೂ ಇಲ್ಲಿವರೆಗೆ 300-400 ಕೋಟಿ ರು. ಲೂಟಿ ಹೊಡೆದಿದ್ದಾನೆ ಎಂದು ಆರೋಪಿಸಿದರು.

ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ಏರ್‌ಲಿಫ್ಟ್‌ ಮೂಲಕ ಹಣ ಸಾಗಿಸ್ತಿದೆ: ಜೆಡಿಸ್‌ ನಾಯಕ ಆರೋಪ

ಟ್ರಾನ್ಸ್‌ಫರ್‌ನಲ್ಲಿ .150 ಕೋಟಿ, ಜಲಧಾರೆ ಯೋಜನೆ .100 ಕೋಟಿ ನಂತೆ ಅಧಿಕಾರಗಳ ಬಳಿ ಲೂಟಿ ಮಾಡಲಾಗುತ್ತಿದೆ. .300 ಕೋಟಿಗಳನ್ನು ಚಲುವರಾಯಸ್ವಾಮಿ ಒಬ್ಬರೇ ಮಾಡಿದ್ದಾರೆ. ಇಡೀ ಕಾಂಗ್ರೆಸ್‌ ಹಣ ಏರ್‌ಲಿ¶್ಟ… ಮಾಡ್ತಿದೆ. ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ಗೆ ಕರ್ನಾಟಕದಿಂದ ಫಂಡ್‌ ಹೋಗುತ್ತಿದೆ ಎಂದು ದೂರಿದರು.

ಪತ್ರ ಬರೆದಿದ್ದು ಸತ್ಯ; ಬೆಂಗಳೂರಿನಲ್ಲಿ ರಾಜೀ ಸಂಧಾನ:

ರಾಜ್ಯಪಾಲರಿಗೆ ಕೃಷಿ ಸಚಿವರ ವಿರುದ್ಧ ಅಧಿಕಾರಗಳ ಪತ್ರ ವಿಚಾರವಾಗಿ ಬೆಂಗಳೂರಿನ ಹೋಟೆಲ… ಒಂದರಲ್ಲಿ ರಾಜೀ ಸಂಧಾನ ನಡೆದಿದೆ. ಚಲುವರಾಯಸ್ವಾಮಿ ವಿರುದ್ಧ ಕೃಷಿ ಅಧಿಕಾರಗಳು ಪತ್ರ ಬರೆದಿದ್ದು ಸತ್ಯ ಎಂದರು.

ಸಚಿವ ಚಲುವರಾಯಸ್ವಾಮಿ ಬೆಂಗಳೂರಿನ 37 ಕ್ರಸೆಂಟ್‌ ಹೋಟೆಲ್‌ಗೆ ಕರೆಸಿಕೊಂಡು ಅಧಿಕಾರಗಳಿಗೆ ಒತ್ತಡ ಹೇರಿದ್ದಾರೆ. ಎಲ್ಲ ಬಿಗಿ ಭದ್ರತೆ ಮಾಡಿಕೊಂಡು ಅಧಿಕಾರಿಗಳ ಬಳಿ ಪತ್ರ ಬರೆದಿಲ್ಲ ಎಂದು ಸುಳ್ಳು ಹೇಳಿದ್ದಾರೆ. 37 ಕ್ರಸೆಂಟ್‌ ಹೋಟೆಲ… ಹಾಗೂ ಆ ರಸ್ತೆಯ ಸಿಸಿ ಟಿವಿ ದೃಶ್ಯ ತೆಗೆಸಿದರೆ ಯಾವ ಎಡಿ, ಜೆಡಿ ಯಾರೆಲ್ಲಾ ಹೋಗಿದ್ರು ತಿಳಿಯುತ್ತದೆ ಎಂದರು.

ಪೊಲೀಸರು ಇವರನ್ನು ಕೇಳಿ ತನಿಖೆ ಮಾಡುತ್ತಿದ್ದಾರೆ. ಇದರಲ್ಲಿ ಅಮಾಯಕರನ್ನು ಸಿಲುಕಿಸುವ ಪ್ರಯತ್ನ ಮಾಡಲಾಗುತ್ತಿದೆ. ಜೆಡಿ, ಎಡಿಗಳನ್ನು ಬ್ರೈನ್‌ ಮ್ಯಾಪಿಂಗ್‌ ಮಾಡಿದ್ರೆ ಎಷ್ಟುದುಡ್ಡು ಕೊಟ್ಟಿದ್ದೀವಿ ಅಂತ ಬಾಯಿ ಬಿಡುತ್ತಾರೆ. ಬ್ರೈನ್‌ ಮ್ಯಾಪಿಂಗ್‌ ನಮನಗಲ್ಲ, ಚಲುವರಾಯಸ್ವಾಮಿಗೆ ಮಾಡಿದರೆ ಎಲ್ಲೆಲ್ಲಿ ಎಷ್ಟೆಷ್ಟುತಿಂದಿದ್ದಾನೆ ತಿಳಿಯುತ್ತದೆ ಎಂದು ಕಿಡಿಕಾರಿದರು.

ಕಾಂಗ್ರೆಸ್‌ ಪಕ್ಷದ ಯುವ ಅಧ್ಯಕ್ಷ ಸೌಹಾರ್ದ ಕೋ ಆಪರೇಟಿವ್‌ ಸೊಸೈಟಿ ಬೆಂಗಳೂರಿನಲ್ಲಿದ್ದು, ಇಲ್ಲಿ ಸಚಿವ ಚಲುವರಾಯಸ್ವಾಮಿ(Agriculture minister chaluvarayaswamy) ಎಷ್ಟುಬ್ಲಾಕ್‌ ಮನಿ ವೈಟ್‌ ಮಾಡಿದ್ದಾನೆ ಎಂಬುದು ತಿಳಿಯುತ್ತದೆ. ಅದೆಲ್ಲವೂ ಬೆಳಕಿಗೆ ಬರುತ್ತದೆ. ಇಡಿ ಕಣ್ಣು ಬಿಡಲಿದೆ ಎಂದರು.

ಚಲುವರಾಯಸ್ವಾಮಿಯಿಂದ ದ್ವೇಷದ ರಾಜಕಾರಣ: ಶಾಸಕ ಸುರೇಶ್‌ಗೌಡ ಕಿಡಿ

ಬೆಳ್ಳೂರು ಕ್ರಾಸ್‌ನಲ್ಲಿ ಪೆಟ್ರೋಲ… ಬ್ಯಾಂಕ್‌ ಮಾಲೀಕರ ಬಳಿ ಎಷ್ಟುಕಲೆಕ್ಷನ್‌ ಮಾಡ್ತಿದಾನೆ. ಎಲ್ಲವೂ ಜನರಿಗೆ ಗೊತ್ತಿದೆ. ಮೆಜೆಸ್ಟಿಕ್‌ನಲ್ಲಿರುವ ಕೋ ಆಪರೇಟಿವ್‌ ಸೊಸೈಟಿಯನ್ನು ಸರಿಯಾಗಿ ತನಿಖೆ ನಡೆಸಿದರೆ ಸಾಕು. ಯಾವ ಯಾವ ಥಿಯೇಟರ್‌ ತಗೋಳದಕ್ಕೆ ಸಹಾಯ ಆಗಿದೆ ಎಂಬುದು ಗೊತ್ತಾಗುತ್ತೆ. ತಿಂದವನು ಕಕ್ಕಲೇ ಬೇಕು. ಎಲ್ಲ ಮುಂದೆ ಗೊತ್ತಾಗುತ್ತೆದೆ ಎಂದು ಏಕ ವಚನದಲ್ಲೇ ಸಚಿವ ಚಲುವರಾಯಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ