ರಾಜ್ಯ ಪೊಲೀಸ್‌ ಪಡೆ ದೇಶದಲ್ಲೇ ವಿಶ್ವಾಸಾರ್ಹ

Kannadaprabha News   | Asianet News
Published : Jul 14, 2021, 08:49 AM IST
ರಾಜ್ಯ ಪೊಲೀಸ್‌ ಪಡೆ ದೇಶದಲ್ಲೇ ವಿಶ್ವಾಸಾರ್ಹ

ಸಾರಾಂಶ

ಕರ್ನಾಟಕ ಪೊಲೀಸ್‌ ಪಡೆ ಅತ್ಯಂತ ವಿಶ್ವಾಸಾರ್ಹ ಮತ್ತು ದಕ್ಷ ಪೊಲೀಸ್‌ ಪಡೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮೆಚ್ಚುಗೆ 

ಬೆಂಗಳೂರು (ಜು.14):  ಕರ್ನಾಟಕ ಪೊಲೀಸ್‌ ಪಡೆ ಅತ್ಯಂತ ವಿಶ್ವಾಸಾರ್ಹ ಮತ್ತು ದಕ್ಷ ಪೊಲೀಸ್‌ ಪಡೆ ಎಂದು ಇಡೀ ದೇಶದಲ್ಲಿ ಹೆಸರಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧ ಮುಂದೆ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್‌ ಇಲಾಖೆ ಪುನಶ್ಚೇತನಕ್ಕಾಗಿ 50 ಬಸ್‌ಗಳಿಗೆ ಚಾಲನೆ, ‘ಪೊಲೀಸ್‌ ಆರೋಗ್ಯ ಭಾಗ್ಯ ಪುನಶ್ಚೇತನ ಯೋಜನೆ’, ಮಕ್ಕಳ ಶಿಕ್ಷಣಕ್ಕೆ ‘ಪೊಲೀಸ್‌ ವಿದ್ಯಾನಿಧಿ’ ಯೋಜನೆಗೆ ಚಾಲನೆ ನೀಡಿದರು. ಇದೇ ವೇಳೆ ‘ಸೀನ್‌ ಆಫ್‌ ಕ್ರೈಂ ಆಫೀಸರ್ಸ್‌’ ಹುದ್ದೆಗೆ ಆದೇಶ ಪತ್ರ ನೀಡಿದರು.

ಭಯೋತ್ಪಾದಕರನ್ನು ಮಟ್ಟ ಹಾಕಲು ಸಜ್ಜಾಗಿದೆ ಸ್ಪೆಷಲ್ ಆಪರೇಷನ್ ಟೀಂ 'ಗರುಡ'

ಬಳಿಕ ಮಾತನಾಡಿದ ಅವರು, ಹೊಸದಾಗಿ‘ಸೀನ್‌ ಆಫ್‌ ಕ್ರೈಂ ಅಧಿಕಾರಿ’ಗಳ ಹುದ್ದೆ ಸೃಷ್ಟಿಸಿ 206 ಹೊಸ ಹುದ್ದೆಗಳಿಗೆ ಮಂಜೂರಾತಿ ನೀಡಲಾಗಿದೆ. ಆಧುನಿಕ ತಂತ್ರಜ್ಞಾನ ಯುಗದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲು, ತನಿಖೆಯ ನಿಖರತೆಯನ್ನು ಹೆಚ್ಚಿಸಲು ಹಾಗೂ ಅಪರಾಧ ಪ್ರಕರಣಗಳನ್ನು ಸಾಬೀತುಪಡಿಸಲು ಹೊಸ ಹುದ್ದೆ ಸಹಕಾರಿಯಾಗಲಿದೆ ಎಂದರು.

10,032 ವಸತಿ ಗೃಹಗಳನ್ನು ನಿರ್ಮಿಸಲಾಗುವುದು, ಇದಕ್ಕಾಗಿ 25 ಕೋಟಿ ರು. ಮೀಸಲಿಡಲಾಗಿದೆ. ಪೊಲೀಸ್‌ ಠಾಣೆಗಳು ಸ್ವಂತ ಕಟ್ಟಡ ಹೊಂದಲು ಮುಂದಿನ ಐದು ವರ್ಷದಲ್ಲಿ ಒಟ್ಟು 200 ಕೋಟಿ ರು. ವೆಚ್ಚ ಮಾಡಲಾಗುವುದು.ಕರಾವಳಿ ಕಾವಲು ಪಡೆಯನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಬಲಪಡಿಸಲಾಗುತ್ತದೆ ಎಂದು ಹೇಳಿದರು

ಗೃಹ ಸಚಿವ ಬಸವರಾಜ ಬೊಮ್ಮಾಯಿ, ಶಾಸಕ ರಿಜ್ವಾನ್‌ ಅರ್ಷದ್‌, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌, ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌, ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂಥ್‌ ಇತರರು ಉಪಸ್ಥಿತರಿದ್ದರು.

ಕರ್ನಾಟಕದ 19 ಅಧಿಕಾರಿಗಳಿಗೆ ಪೊಲೀಸ್ ಮೆಡಲ್ ಗೌರವ

ಹೊಸ ಯುಗ ಪ್ರಾರಂಭಿಸಿದ್ದೇವೆ : ಬೊಮ್ಮಾಯಿ

ದೇಶದಲ್ಲಿಯೇ ಮೊದಲ ಬಾರಿಗೆ, ಅಪರಾಧ ಶೋಧನೆಯಲ್ಲಿ ಕರ್ನಾಟಕ ರಾಜ್ಯವು ಹೊಸ ಯುಗವನ್ನು ಪ್ರಾರಂಭಿಸಿದೆ ಗೃಹ ಸಚಿವ ಬಸವರಾಜ… ಬೊಮ್ಮಾಯಿ ಹೇಳಿದ್ದಾರೆ.

ಅಪರಾಧ ನಡೆದ ಕೂಡಲೇ ವಿಜ್ಞಾನದ ಜ್ಞಾನ ಇರುವಂತಹ ಎಫ್‌ಎಸ್‌ಎಲ… ಅಧಿಕಾರಿ ಘಟನಾ ಸ್ಥಳಕ್ಕೆ ಹೋಗಬೇಕು. ಕೆಲವೇ ನಿಮಿಷಗಳಲ್ಲಿ ಸಾಕ್ಷಿ ಸಂರಕ್ಷಣೆ ಮಾಡಬೇಕಾದದ್ದು ಬಹಳ ಮುಖ್ಯ. ಹೀಗಾಗಿ 206 ಹುದ್ದೆಗಳನ್ನು ಮಂಜೂರು ಮಾಡಲಾಗಿದ್ದು, ಅವರಿಗೆ ವಿಶೇಷ ತರಬೇತಿ ನೀಡಿ ಪ್ರತಿ ಜಿಲ್ಲೆಗೂ ನೇಮಕ ಮಾಡಲಾಗುವುದು. ಅತ್ಯಂತ ಹೇಯ, ದೊಡ್ಡ ಕೃತ್ಯಕ್ಕೆ ಈ ಸಿಬ್ಬಂದಿಗಳನ್ನು ಬಳಸಲಾಗುವುದು. ಪೊಲೀಸ್‌ ಇಲಾಖೆಯಲ್ಲಿ ಮಹತ್ವದ ತಿರುವು ಪಡೆದ ದಿನವಾಗಿದೆ ಎಂದು ಅಭಿಪ್ರಾಯಪಟ್ಟರು.

ಪೊಲೀಸ್‌ ಇಲಾಖೆ ಪುನಶ್ಚೇತನಕ್ಕಾಗಿ 50 ಬಸ್‌ಗಳಿಗೆ ಚಾಲನೆ, ಪೊಲೀಸ್‌ ಆರೋಗ್ಯ ಭಾಗ್ಯ ಪುನಶ್ಚೇತನ ಯೋಜನೆ, ಮಕ್ಕಳ ಶಿಕ್ಷಣಕ್ಕೆ ಪೊಲೀಸ್‌ ವಿದ್ಯಾನಿಧಿ ಯೋಜನೆಗೆ ಮಂಗಳವಾರ ವಿಧಾನಸೌಧದ ಮುಂದೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಚಾಲನೆ ನೀಡಿದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತಿತರರು ಉಪಸ್ಥಿತರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ
ಬಿಡಿಎ ಸೈಟ್ ತಗೊಂಡ್ರೆ ಚಿಪ್ಪೇ ಗತಿ; ಕೆಂಪೇಗೌಡ ಲೇಔಟ್ ಸೈಟ್ ತಗೊಂಡು 10 ವರ್ಷವಾದ್ರೂ ಸೈಟೂ ಇಲ್ಲ, ಸಾಲನೂ ಸಿಗ್ತಿಲ್ಲ!