ಕೊರೋನಾ 2ನೇ ಅಲೆ ಹೋಗಿಲ್ಲ, ಕಠಿಣ ಕ್ರಮದ ಎಚ್ಚರಿಕೆ ಕೊಟ್ಟ ಸಚಿವ ಸುಧಾಕರ್

By Suvarna News  |  First Published Jul 13, 2021, 5:35 PM IST

* ಕೊರೋನಾ ಎರಡನೇ ಅಲೆ ವಿಚಾರ
* ಸಾರ್ವಜನಿಕರಿಗೆ ಎಚ್ಚರಿಕೆ ಕೊಟ್ಟ ಸಚಿವ ಸುಧಾಕರ್
* ಕಠಿಣ ಕ್ರಮದ ಎಚ್ಚರಿಕೆ ಕೊಟ್ಟ ಆರೋಗ್ಯ ಸಚಿವರು


ಚಿಕ್ಕಬಳ್ಳಾಪುರ, (ಜುಲೈ.13): ಕೇರಳ ಮಹಾರಾಷ್ಟ್ರ ಸೇರಿ ಕೆಲ ರಾಜ್ಯಗಳಲ್ಲಿ ಕೋರೋನಾ ಹೆಚ್ಚಾಗುತ್ತಿದೆ. ಜನರೇ ಬಹಳ ಎಚ್ಚರಿಕೆಯಿಂದ ಇರಬೇಕು‌ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಇಂದು (ಮಂಗಳವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ರಾಜ್ಯಗಳಲ್ಲಿ 2ನೇ ಅಲೆ ಸಂಪೂರ್ಣವಾಗಿ ಹೋಗಿಲ್ಲ. ಅನ್‌ಲಾಕ್ ಮಾಡಿರುವ ಉದ್ದೇಶ ಸಂಪೂರ್ಣ ಕೋರೋನಾ ನಿರ್ಮೂಲನೆ ಆಗಿದೆ ಅಂತಲ್ಲ. ಜನಜೀವನ ಅಸ್ತವ್ಯಸ್ಥ ಆಗಬಾರದು ಜೀವನೋಪಾಯ ತೊಂದರೆ ಆಗಬಾರದು ಎಂದು ಅನ್‌ಲಾಕ್ ಮಾಡಿದ್ದೀವಿ, ತಪ್ಪಾಗಿ ಅರ್ಥೈಸಿಕೊಂಡು ವಿರುದ್ಧವಾಗಿ ನಡೆದುಕೊಂಡರೆ ಮತ್ತೆ ಅಪಾಯ ಎದುರಾಗುತ್ತೆ ಎಂದು ಎಚ್ಚರಿಕ ನೀಡಿದರು.

Latest Videos

undefined

ಮತ್ತೆ ಲಾಕ್‌ಡೌನ್ ಎಚ್ಚರಿಕೆ ಕೊಟ್ಟ ಸಿಎಂ ಯಡಿಯೂರಪ್ಪ

 ದೇವಸ್ಥಾನ ಧಾರ್ಮಿಕ ಸ್ಥಳಗಳಲ್ಲಿ ಪೂಜೆಗೆ ಮಾತ್ರ ಅವಕಾಶವಿದೆ. ಜಾತ್ರೆ ರಥೋತ್ಸವ ದೊಡ್ಡ ಸಮಾರಂಭ ಮಾಡುವ ಹಾಗಿಲ್ಲ.ಮದುವೆ ಗಳಲ್ಲೂ ಸಹ 100ಜನ ಮಾತ್ರ ಇರಬೇಕು. 500-10000 ಜನ ಸೇರಿರೋದು ಸರ್ಕಾರದ ಗಮನಕ್ಕೆ ಬಂದಿದೆ. ಇದು, ಹೀಗೆ ಮುಂದುವರೆದರೆ ಮತ್ತೆ ಸರ್ಕಾರದಿಂದ‌ ಕಠಿಣ ಕ್ರಮ ಜರಗಿಸುವುದು ಅನಿವಾರ್ಯ ಎಂದು ಸ್ಪಷ್ಟಪಡಿಸಿದರು.

click me!