LIVE NOW
Published : Sep 23, 2026, 07:29 AM ISTUpdated : Sep 23, 2026, 12:01 PM IST

Karnataka News Live: Bengaluru - 3 ದಿನದಲ್ಲಿ ಏರ್‌ಪೋರ್ಟ್‌ನಲ್ಲಿ 30 ಕೋಟಿ ರು., ಡ್ರಗ್ಸ್, ಚಿನ್ನ ಜಪ್ತಿ; ಒಳ ಉಡುಪು, ದೇಹದಲ್ಲಿ ಚಿನ್ನ ಸಾಗಾಟ

ಸಾರಾಂಶ

‘ರಾಜ್ಯ ಸರ್ಕಾರದ ಬಳಿ ಹಣವಿಲ್ಲ. ಹೊಸ ಯೋಜನೆಗಳಿಗೆ ಅನುದಾನವಿಲ್ಲ, ಹೊಸ ಸಾಲ ಪಡೆಯಲು ಅರ್ಹತೆಯೂ ಇಲ್ಲ ಎಂಬುದಾಗಿ ಖುದ್ದು ಆರ್ಥಿಕ ಇಲಾಖೆಯೇ ಸ್ಪಷ್ಟಪಡಿಸಿದೆ’ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ತಿಳಿಸಿದ್ದಾರೆ.

ಮಂಗಳವಾರ ವಿಧಾನಸಭೆಯಲ್ಲಿ ಬರ ಸಮಸ್ಯೆಗಳ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆರ್ಥಿಕ ಸಂಕಷ್ಟದ ಬಗ್ಗೆ ಇದೇ ತಿಂಗಳ 17ರಂದು ಆರ್ಥಿಕ ಇಲಾಖೆ ಬರೆದ ಪತ್ರ ತೋರಿಸಿದರು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಮಂಗಳೂರಿಗೆ ಹೋಗಿ ಸಚಿವ ಸಂಪುಟ ಸಭೆ ನಡೆಸುವುದಕ್ಕೆ ಮುನ್ನವೇ ಈ ಪತ್ರ ಬರೆಯಲಾಗಿದೆ ಎಂದರು.

ರಾಜ್ಯದಲ್ಲಿ ಮಳೆ ಕೊರತೆಯಿಂದ ಭೀಕರ ಬರ ಬಂದಿದ್ದರೆ ಸರ್ಕಾರದಲ್ಲಿ ಹಣಕ್ಕೆ ಬರ ಉಂಟಾಗಿದೆ. ಆರ್ಥಿಕ ಇಲಾಖೆಯೇ ಸರ್ಕಾರಕ್ಕೆ ಕಪಾಳ ಮೋಕ್ಷ ಮಾಡಿದೆ. ಆರ್ಥಿಕ ಇಲಾಖೆಯೇ ತನ್ನ ಪತ್ರದಲ್ಲಿ ಸರ್ಕಾರದ ಅಳಿದುಳಿದ ಮಾನ ಮರ್ಯಾದೆ ಕಳೆದಿದೆ. ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸುವ ಮುನ್ನವೇ ಹೊಸ ಯೋಜನೆಗಳಿಗೆ ಹಣವಿಲ್ಲ ಎಂದು ಸ್ಪಷ್ಟ ಅಭಿಪ್ರಾಯ ತಿಳಿಸಿದೆ. ಇದು ಸರ್ಕಾರದ ದಿವಾಳಿತನಕ್ಕೆ ಸಾಕ್ಷಿ ಎಂದು ಟೀಕಿಸಿದರು.

12:01 PM (IST) Sep 23

Bengaluru - 3 ದಿನದಲ್ಲಿ ಏರ್‌ಪೋರ್ಟ್‌ನಲ್ಲಿ 30 ಕೋಟಿ ರು., ಡ್ರಗ್ಸ್, ಚಿನ್ನ ಜಪ್ತಿ; ಒಳ ಉಡುಪು, ದೇಹದಲ್ಲಿ ಚಿನ್ನ ಸಾಗಾಟ

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ವಿದೇಶದಿಂದ ಬಂದ ಪ್ರಯಾಣಿಕರಿಂದ ಬರೋಬ್ಬರಿ ₹29.75 ಕೋಟಿ ಮೌಲ್ಯದ ಗಾಂಜಾ ಹಾಗೂ ಚಿನ್ನವನ್ನು ಜಪ್ತಿ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ 8 ಮಂದಿಯನ್ನು ಬಂಧಿಸಿ, ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
Read Full Story

11:34 AM (IST) Sep 23

Bengaluru - ದ್ವಿಚಕ್ರ ವಾಹನ ಸವಾರರಿಗೆ ಗುಡ್‌ನ್ಯೂಸ್; ಇನ್ಮೇಲೆ ಈ ರಸ್ತೆ ಟೋಲ್ ಫ್ರೀ, ಶೀಘ್ರವೇ ಆದೇಶ

ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ನ 20 ವರ್ಷಗಳ ನಿರ್ವಹಣಾ ಒಪ್ಪಂದ ಮುಕ್ತಾಯವಾಗುತ್ತಿದ್ದು, ಇದನ್ನು ಎನ್‌ಎಚ್ಎಐ ತನ್ನ ವಶಕ್ಕೆ ಪಡೆಯಲಿದೆ. ಇದರಿಂದಾಗಿ ಶೀಘ್ರದಲ್ಲೇ ದ್ವಿಚಕ್ರ ವಾಹನಗಳಿಗೆ ಟೋಲ್ ಶುಲ್ಕ ಸಂಪೂರ್ಣ ಉಚಿತವಾಗುವ ನಿರೀಕ್ಷೆಯಿದೆ. ಅಲ್ಲದೆ, ಇತರ ವಾಹನಗಳ ಟೋಲ್ ದರವೂ ಗಣನೀಯವಾಗಿ ಕಡಿಮೆಯಾಗುವ ಸಾಧ್ಯತೆಯಿದೆ.
Read Full Story

11:27 AM (IST) Sep 23

ಓಝೋನ್ ಅರ್ಬಾನಾ ಬಹುಕೋಟಿ ವಂಚನೆ, ಇಡಿ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ , 423 ಕೋಟಿ ಆಸ್ತಿ ಜಪ್ತಿ!

ಕೆಂಪೇಗೌಡ ವಿಮಾನ ನಿಲ್ದಾಣದ ಸಮೀಪ 'ಓಝೋನ್ ಅರ್ಬಾನಾ' ಟೌನ್‌ಶಿಪ್ ನಿರ್ಮಾಣದ ಹೆಸರಿನಲ್ಲಿ ಬಹುಕೋಟಿ ವಂಚನೆ ಎಸಗಿದ ಆರೋಪದ ಮೇಲಿನ ಇ.ಡಿ ಪ್ರಕರಣವನ್ನು ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ. ಫ್ಲ್ಯಾಟ್ ನೀಡದೆ 180ಕ್ಕೂ ಹೆಚ್ಚು ಖರೀದಿದಾರರಿಗೆ ವಂಚಿಸಿದ ಹಿನ್ನೆಲೆಯಲ್ಲಿ ಕಂಪನಿಯ 423.38 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ.
Read Full Story

11:13 AM (IST) Sep 23

Ballari Farmers - ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೈತರ ಉತ್ತರ - 3 ದಿನ ಭಗೀರಥ ಪ್ರಯತ್ನ!

ಕುರುಗೋಡು ಬಳಿ ತುಂಗಭದ್ರಾ ಉಪ ವಿತರಣಾ ನಾಲೆಯಲ್ಲಿ ಹೂಳು ಮತ್ತು ಮುಳ್ಳಿನ ಗಿಡಗಳು ಬೆಳೆದು ರೈತರಿಗೆ ನೀರಿನ ಸಮಸ್ಯೆ ಎದುರಾಗಿತ್ತು. ಅಧಿಕಾರಿಗಳು ಸ್ಪಂದಿಸದ ಕಾರಣ, ರೈತರು ತಾವೇ 1.5 ಲಕ್ಷ ರೂ. ಸಂಗ್ರಹಿಸಿ ಕಾಲುವೆಯನ್ನು ಸ್ವಚ್ಛಗೊಳಿಸಿದ್ದಾರೆ.
Read Full Story

11:02 AM (IST) Sep 23

ಬೆಳೆ ರಕ್ಷಣೆಗೆ ದಿನಕ್ಕೆ 5 ಸಾವಿರ ಬಾಡಿಗೆ ಟ್ಯಾಂಕರ್‌ನಿಂದ ನೀರುಣಿಸಿದ ಕೊಟ್ಟೂರಿನ ರೈತ

ಮಳೆ ಕೊರತೆಯಿಂದಾಗಿ ಕೊಟ್ಟೂರು ತಾಲೂಕಿನಲ್ಲಿ ಬೆಳೆಗಳು ಸಂಪೂರ್ಣವಾಗಿ ಒಣಗುತ್ತಿವೆ. ಇದನ್ನು ತಪ್ಪಿಸಲು ನಿಂಬಳಗೆರೆ ಗ್ರಾಮದ ರೈತ ಗಂಗಾಧರ ಅವರು ದಿನಕ್ಕೆ 5 ಸಾವಿರ ರೂ. ಬಾಡಿಗೆ ನೀಡಿ ಟ್ಯಾಂಕರ್ ಮೂಲಕ ನೀರು ಹಾಯಿಸುತ್ತಿದ್ದಾರೆ.

Read Full Story

10:45 AM (IST) Sep 23

ಭಾರತ ಪಾಕಿಸ್ತಾನ ಸೇರಿ ವಿಶ್ವದ 8 ಯುದ್ಧ ನಿಲ್ಲಿಸಿದ್ದೇ ನಾನು - ಮತ್ತೊಮ್ಮೆ ಕೊಚ್ಚಿಕೊಂಡ ಟ್ರಂಪ್! ಇರಾನ್‌ಗೆ ಎಚ್ಚರಿಕೆ

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, ಭಾರತ-ಪಾಕಿಸ್ತಾನ ಸೇರಿದಂತೆ 8 ಯುದ್ಧಗಳನ್ನು ತಾನೇ ನಿಲ್ಲಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಆದರೆ, ಈ ಮಧ್ಯಸ್ಥಿಕೆಯ ಪ್ರತಿಪಾದನೆಯನ್ನು ಭಾರತ ಸರ್ಕಾರ ಸಂಪೂರ್ಣವಾಗಿ ತಳ್ಳಿಹಾಕಿದೆ. ಜೊತೆಗೆ ರಷ್ಯಾ-ಉಕ್ರೇನ್ ಯುದ್ಧ ಶಮನ ಹಾಗೂ ಇರಾನ್ ಪರಮಾಣು ಶಸ್ತ್ರಾಸ್ತ್ರ ನಿಯಂತ್ರಣದ ಬಗ್ಗೆಯೂ ಅವರು ಪ್ರಸ್ತಾಪಿಸಿದ್ದಾರೆ.
Read Full Story

09:20 AM (IST) Sep 23

ಲೋಕಾಯುಕ್ತ ದಾಳಿ - 8 ಸರ್ಕಾರಿ ಅಧಿಕಾರಿಗಳ ಮನೇಲಿ ₹23 ಕೋಟಿ ಅಕ್ರಮ ಆಸ್ತಿ ಪತ್ತೆ; ಯಾರ ಬಳಿ ಎಷ್ಟಿದೆ ಗೊತ್ತಾ?

ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಮೇಲೆ ರಾಜ್ಯದ 8 ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಈ ವೇಳೆ ಬರೋಬ್ಬರಿ 23.24 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ, ನಗದು ಹಾಗೂ ಚಿನ್ನಾಭರಣಗಳನ್ನು ಪತ್ತೆಹಚ್ಚಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

Read Full Story

09:12 AM (IST) Sep 23

e-Aasthi 2.0 - ಬೆಂಗಳೂರು ಆಸ್ತಿ ಮಾಲೀಕರಿಗೆ ಗುಡ್‌ನ್ಯೂಸ್ - ‘ಇ-ಆಸ್ತಿ 2.0’ ಲೋಕಾರ್ಪಣೆ, ಏನೆಲ್ಲ ಸೌಲಭ್ಯ? ಇಲ್ಲಿದೆ ಮಾಹಿತಿ

Krishna Byre Gowda launches e-Aasthi 2.0: ಬೆಂಗಳೂರಿನ ಆಸ್ತಿ ಮಾಲೀಕರಿಗಾಗಿ ಸರ್ಕಾರವು ಸರಳ, ಪಾರದರ್ಶಕವಾದ 'ಇ-ಆಸ್ತಿ 2.0' ವ್ಯವಸ್ಥೆ ಜಾರಿಗೆ ತಂದಿದೆ. ಮಧ್ಯವರ್ತಿಗಳ ಹಾವಳಿಯಿಲ್ಲದೆ ಆನ್‌ಲೈನ್ ಮೂಲಕವೇ ಆಸ್ತಿ ದಾಖಲೆಗಳನ್ನು ಪರಿಶೀಲಿಸಲು ಮತ್ತು ತಿದ್ದುಪಡಿ ಮಾಡಲು ಇದು ಅವಕಾಶ ಕಲ್ಪಿಸುತ್ತದೆ.

Read Full Story

09:02 AM (IST) Sep 23

ಮಂಗಳೂರಿಗೆ ಬಂದ ತಿರುಪತಿ ತಿಮ್ಮಪ್ಪ; ಸರ್ಕಾರ ಕೊಟ್ಟ 10 ಎಕರೆ ಜಾಗದಲ್ಲಿ ಬೃಹತ್ ದೇಗುಲ ನಿರ್ಮಾಣ!

ಬೆಂಗಳೂರಿನ ನಂತರ ಇದೇ ಮೊದಲ ಬಾರಿಗೆ ಮಂಗಳೂರಿನ ಹೊರವಲಯದಲ್ಲಿ ಟಿಟಿಡಿ ವತಿಯಿಂದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ನಿರ್ಮಾಣವಾಗಲಿದೆ. ರಾಜ್ಯ ಸಚಿವ ಸಂಪುಟವು ಈ ಯೋಜನೆಗೆ 10 ಎಕರೆ ಜಾಗವನ್ನು ಮಂಜೂರು ಮಾಡಿದ್ದು, ಡಿಸೆಂಬರ್‌ನಲ್ಲಿ ಶಿಲಾನ್ಯಾಸ ನೆರವೇರುವ ಸಾಧ್ಯತೆಯಿದೆ.

Read Full Story

08:57 AM (IST) Sep 23

ಹೇಮಾವತಿ ನಾಲೆ ಕಾಮಗಾರಿ ವೇಳೆ ಪುರಾತನ ವಿಗ್ರಹಗಳು ಪತ್ತೆ; ಪ್ರಾಚ್ಯವಸ್ತು ಇಲಾಖೆ ಸಿಬ್ಬಂದಿ ನಾಪತ್ತೆ!

ಹಾಸನ ಜಿಲ್ಲೆಯ ನವಿಲೆ-ಆದಿಹಳ್ಳಿ ಬಳಿ ಹೇಮಾವತಿ ನಾಲೆ ಕಾಮಗಾರಿ ವೇಳೆ ಪುರಾತನ ಲಕ್ಷ್ಮೀನಾರಾಯಣ ಮತ್ತು ಉಮಾಮಹೇಶ್ವರಿ ವಿಗ್ರಹಗಳು ಪತ್ತೆಯಾಗಿವೆ. ಪ್ರಾಚ್ಯವಸ್ತು ಇಲಾಖೆಯ ನಿರ್ಲಕ್ಷ್ಯ ಖಂಡಿಸಿರುವ ಗ್ರಾಮಸ್ಥರು, ತಕ್ಷಣವೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಒತ್ತಾಯಿಸಿದ್ದಾರೆ.

Read Full Story

08:42 AM (IST) Sep 23

ಮಹಿಳಾ ಪಿಎಸ್‌ಐಗೆ ಕಪಾಳಮೋಕ್ಷ ಪ್ರಕರಣ - ಶಾಸಕ ಸುರೇಶ್‌ಗೌಡ ಪುತ್ರಿ ಐಶ್ವರ್ಯಾಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು

ಕರ್ತವ್ಯದಲ್ಲಿದ್ದ ಮಹಿಳಾ ಪಿಎಸ್‌ಐಗೆ ಕಪಾಳಮೋಕ್ಷ ಮಾಡಿದ್ದ ಶಾಸಕ ಸುರೇಶ್‌ಗೌಡ ಅವರ ಪುತ್ರಿ ಐಶ್ವರ್ಯಾಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ. ನ್ಯಾಯಾಲಯದ ಸೂಚನೆಯಂತೆ ಐಶ್ವರ್ಯಾ ಅವರು ಪಿಎಸ್‌ಐ ಬಳಿ ವಿಡಿಯೋ ಮೂಲಕ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.

Read Full Story

08:32 AM (IST) Sep 23

Upper bhadra project - 26 ವರ್ಷಗಳ ಬಳಿಕ ಮಧ್ಯ ಕರ್ನಾಟಕಕ್ಕೆ ಹರಿಯಲಿದೆ ತುಂಗಾ ನೀರು! ಈ ನಾಲ್ಕು ಜಿಲ್ಲೆಗಳಿಗೆ ನೀರೋ ನೀರ!

26 ವರ್ಷಗಳಿಂದ ಕೇವಲ ಕಾಗದದ ಮೇಲಿದ್ದ ಭದ್ರಾ ಮೇಲ್ದಂಡೆ ಯೋಜನೆ ಈಗ ಅಂತಿಮ ಹಂತ ತಲುಪಿದ್ದು, ಈ ವರ್ಷಾಂತ್ಯಕ್ಕೆ ಮಧ್ಯ ಕರ್ನಾಟಕಕ್ಕೆ ತುಂಗಾ ನೀರು. ಕೇಂದ್ರ ಸರ್ಕಾರ ಅನುದಾನ ನೀಡದಿದ್ದರೂ ರಾಜ್ಯ ಸರ್ಕಾರವೇ 10 ಸಾವಿರ ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಲಿದೆ, ಕೃಷಿ ಸಚಿವ ಹೇಳಿದ್ದೇನು?.

Read Full Story

07:59 AM (IST) Sep 23

ರೇಣುಕಾಸ್ವಾಮಿ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ - ಪವಿತ್ರಾಗೌಡಗೆ ಬೇಲ್‌ ಸಿಗುತ್ತಾ?, ಸೆ.26ಕ್ಕೆ ಸಿವಿಲ್‌ ಕೋರ್ಟ್ ತೀರ್ಪು

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸ್ನೇಹಿತೆ ಪವಿತ್ರಾ ಗೌಡ ಅವರ ಜಾಮೀನು ಅರ್ಜಿಯ ತೀರ್ಪನ್ನು ಸೆಪ್ಟೆಂಬರ್ 26ರಂದು ನ್ಯಾಯಾಲಯ ಪ್ರಕಟಿಸಲಿದೆ. ಜೈಲಿನಲ್ಲಿ ಸೆಲೆಬ್ರಿಟಿ ಸ್ಟೇಟಸ್‌ನಿಂದ ತೊಂದರೆಯಾಗುತ್ತಿದ್ದು, ಅವರಿಗೆ ಪ್ರತ್ಯೇಕ ಸೆಲ್ ಮತ್ತು ಮೂಲಸೌಕರ್ಯ ಒದಗಿಸುವಂತೆ ಕೋರ್ಟ್ ಸೂಚಿಸಿದೆ.

Read Full Story

07:35 AM (IST) Sep 23

ಸರ್ಕಾರದ ಖಜಾನೆ ಖಾಲಿ, ಹೊಸ ಸಾಲಕ್ಕೂ ಅರ್ಹತೆಯಿಲ್ಲ - ವಿತ್ತ ಇಲಾಖೆ ಪತ್ರ ತೋರಿಸಿದ ಆರ್.ಅಶೋಕ್

ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ಸರ್ಕಾರದ ಬಳಿ ಹೊಸ ಯೋಜನೆಗಳಿಗೆ ಹಣವಿಲ್ಲ ಮತ್ತು ಸಾಲ ಪಡೆಯಲು ಅರ್ಹತೆಯಿಲ್ಲ ಎಂದು ಆರ್ಥಿಕ ಇಲಾಖೆ ಸ್ಪಷ್ಟಪಡಿಸಿದೆ ಎಂದು ಆರ್. ಅಶೋಕ್ ಆರೋಪಿಸಿದ್ದಾರೆ. ಆದರೆ, ಜನರ ಹಿತದೃಷ್ಟಿಯಿಂದ 5 ಗ್ಯಾರಂಟಿಗಳನ್ನು ನೀಡಲಾಗಿದ್ದು, ಯಾವ ಯೋಜನೆ ಸೇರಿಸಬೇಕು ಎಂಬುದು ತಮಗೆ ತಿಳಿದಿದೆ ಎಂದು ಡಿ.ಕೆ. ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ.

Read Full Story

More Trending News