ದಾವಣಗೆರೆ: ಬಾಗಲಕೋಟೆ, ದಾವಣಗೆರೆ ದಕ್ಷಿಣಕ್ಷೇತ್ರಗಳ ಉಪಚುನಾವಣೆಯಲ್ಲಿ ಯಾರೇ ಗೆದ್ದರೂ, ಸೋತರೂ ರಾಜ್ಯ ಸರ್ಕಾರವೇನೂ ಬಿದ್ದು ಹೋಗುವುದಿಲ್ಲ. ಕೇಂದ್ರ ಸರ್ಕಾರಕ್ಕೂ ಏನೂ ಆಗುವುದಿಲ್ಲ. ಉಪ ಚುನಾವಣೆ ಫಲಿತಾಂಶ ಎರಡೂ ಸರ್ಕಾರಗಳ ಸಾಧನೆ ಮೇಲೆ ನೀಡುವ ಸಂದೇಶ ಎಂದು ಮಾಜಿ ಸಂಸದ, ಕಾಂಗ್ರೆಸ್ ಹಿರಿಯ ಮುಖಂಡ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ, ಡಿ. ಕೆ.ಶಿ. ಇಬ್ಬರೂ ಕಾಂಗ್ರೆಸ್ ಸರ್ಕಾರ ಕೊಟ್ಟ ಭರವಸೆಗಳನ್ನು ವೇಗವಾಗಿ ಈಡೇರಿಸುವ ಕೆಲಸ ಮಾಡಿದ್ದಾರೆ. 2014ರಲ್ಲಿ ಅಧಿಕಾರಕ್ಕೆ ಬರುವಾಗ ವಿದೇಶದಲ್ಲಿರುವ ಕಪ್ಪುಹಣ ತರುತ್ತೇವೆಂದು ನರೇಂದ್ರ ಮೋದಿ ಹೇಳಿದ್ದರು. ಬೆಲೆ ಇಳಿಸುತ್ತೇವೆ ಎಂದಿದ್ದರು. ಆದರೆ, ಅದು ಯಾವುದನ್ನೂ ಮಾಡಲಿಲ್ಲ. ವಚನ ಭ್ರಷ್ಟರು ಯಾರಾದರೂ ಇದ್ದರೆ ಅದು ಬಿಜೆಪಿಯವರು. ಆರ್‌ಎಸ್‌ಎಸ್ ನೋಂದಣಿಯಾಗಿಲ್ಲ. ಮತ್ತೊಂದು ಕಡೆ ಹಣದ ಲೆಕ್ಕ ಇಲ್ಲ ಎಂದರು. ದಾವಣಗೆರೆ ಚುನಾವಣೆ ಕಾಂಗ್ರೆಸ್ ಹಾಗೂ ಆರೆಸ್ಸೆಸ್- ಬಿಜೆಪಿಯ ಸಿದ್ಧಾಂತಗಳ ವಿರುದ್ಧದ ಸಂಘರ್ಷವಾಗಿದೆ. ರಾಜ್ಯದ ಶೇ.56ರಷ್ಟಿರುವ ಪರಿಶಿಷ್ಟರ ಬಗ್ಗೆ ಅಭಿಮಾನವಿದ್ದಿದ್ದರೆ ಮೋದಿ ಸರ್ಕಾರ, ಎಸ್ಸಿ-ಎಸ್ಟಿ ಮೀಸಲಾತಿ ಕಾಯ್ದೆಯನ್ನು ಸಂವಿಧಾನದ 9ನೇ ಷೆಡ್ಯೂಲ್‌ಗೆ ಸೇರಿಸಬಹುದಿತ್ತು. ಈ ಜನರಿಗೆ ಸಾಮಾಜಿಕ ಕೊಡಲಿ ಪೆಟ್ಟು ನೀಡಿರುವ ಬಿಜೆಪಿ ಎಸ್ಸಿ-ಎಸ್ಟಿ, ಅಹಿಂದ ಮತಗಳನ್ನು ಹೇಗೆ ಕೇಳುತ್ತದೆ? ಎಂದು ಪ್ರಶ್ನಿಸಿದರು.
11:00 PM (IST) Mar 30
ಸಿಡಿಲಿಗೆ ಶಿವಮೊಗ್ಗ ಕೋಳಿ ಫಾರಂ ಮಾಲೀಕ ಬಲಿ, ಮಳೆಗಾಲ ಆರಂಭಕ್ಕೂ ಮುನ್ನವೇ ಆತಂಕ ಶುರುವಾಗಿದೆ. ಶಿವಮೊಗ್ಗದ ಕೆಲೆವೆಡೆ ಸಿಡಿಲಿನ ಆಘಾತ ಜನರನ್ನು ಬೆಚ್ಚಿ ಬೀಳಿಸಿದೆ. ಅಂಗಡಿಯಲ್ಲಿದ್ದಾಗ ಈ ಘಟನೆ ನಡೆದಿದೆ.
09:29 PM (IST) Mar 30
05:13 PM (IST) Mar 30
ಜೂ.4ರಂದು ತೆರೆಗೆ ಬರಲಿರುವ ಯಶ್ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’. ಚಿತ್ರಕ್ಕೆ ಕಿಯಾರಾ ನಾಯಕಿ. ಅವರನ್ನೇ ಆಯ್ಕೆ ಮಾಡಿದ್ದೇಕೆ ಎಂಬುದಕ್ಕೆ ಕಾರಣ ನೀಡಿದ ನಿರ್ದೇಶಕಿ ಗೀತು. ಶಿಸ್ತು, ಪ್ರಾಮಾಣಿಕತೆ ಇಷ್ಟವಾಗಿ ಕಿಯಾರಾಗೆ ನಾಯಕಿ ಪಟ್ಟ ಎಂದು ವಿವರಣೆ.
04:38 PM (IST) Mar 30
ವೈದ್ಯರನ್ನು ಅವಧಿಗೂ ಮುನ್ನ ಬದಲಾಯಿಸುವುದರಿಂದ ಆಗುವ ತಕ್ಷಣದ ಪರಿಣಾಮವೆಂದರೆ ‘ರೀಸೆಟ್ ಬಟನ್ ಎಫೆಕ್ಟ್’ (ಮತ್ತೆ ಮೊದಲಿನಿಂದ ಆರಂಭವಾಗುವ ಪ್ರಕ್ರಿಯೆ). ವೈದ್ಯಕೀಯ ವಿಜ್ಞಾನವು ಸಾಕ್ಷ್ಯಾಧಾರಿತವಾಗಿ ನಡೆಯುತ್ತದೆ.
02:30 PM (IST) Mar 30
ಬೆಂಗಳೂರಿನಲ್ಲಿ ಜೀವಂತ ವ್ಯಕ್ತಿಗೆ ಮರಣ ಪ್ರಮಾಣ ಪತ್ರ ನೀಡಿದ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಬಿಪಿಎಲ್ ಕಾರ್ಡ್ ಲಾಭಕ್ಕಾಗಿ ಪತಿಯ ದಾಖಲೆ ಬಳಸಿ ಅನ್ಯ ವ್ಯಕ್ತಿಗೆ ಚಿಕಿತ್ಸೆ ಕೊಡಿಸಿ, ಆತ ಮೃತಪಟ್ಟಾಗ ಪತಿಯ ಹೆಸರಲ್ಲೇ ಮರಣ ಪ್ರಮಾಣ ಪತ್ರ ಬರುವಂತೆ ಮಾಡಿದ್ದು ಸ್ವತಃ ಪತ್ನಿಯೇ ಎಂಬುದು ಬಯಲಾಗಿದೆ.
01:01 PM (IST) Mar 30
ಹುಲಿ ಜೊತೆ ಸೆಲ್ಫೀ ಫೋಟೊ ತೆಗೆದುಕೊಳ್ಳೋದು ಅಂದ್ರೆ ಸಾಮಾನ್ಯ ಮಾತಲ್ಲ. ಗಟ್ಟಿ ಗುಂಡಿಗೆ ಇದ್ದವರು ಮಾತ್ರ ಹುಲಿರಾಯನ ಜೊತೆ ಫೋಟೋ ತೆಗೆಸಿಕೊಳ್ಳಬಹುದು. ಅದರಲ್ಲೂ ಹೆಣ್ಣು ಹುಲಿ ಜೊತೆ ನಮ್ಮ ಗಂಡುಗಳು ಮುಗಿಬಿದ್ದು ಸೆಲ್ಫೀ ತೆಗೆದುಕೊಂಡ 'ಸಾಹಸ'ದ ಪ್ರಸಂಗ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದೆ.
12:59 PM (IST) Mar 30
'ಕರ್ನಾಟಕ ರತ್ನ' ಖ್ಯಾತಿಯ ʻಸಾಹಸ ಸಿಂಹʼ ಡಾ. ವಿಷ್ಣುವರ್ಧನ್ ಮೊಮ್ಮಗ ಜ್ಯೇಷ್ಠವರ್ಧನ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ವಿಷ್ಣುವರ್ಧನ್ ಅಳಿಯ ನಟ ಅನಿರುದ್ಧ್ ಜತ್ಕರ್ ಮಗನಾಗಿರುವ ಜ್ಯೇಷ್ಠ, ಕುಟುಂಬದ ಪರಂಪರೆ ಎಂಬಂತೆ ನೇರವಾಗಿ ನಟನೆಗೆ ಇಳಿಯಲಿಲ್ಲ.
12:47 PM (IST) Mar 30
12:42 PM (IST) Mar 30
ಹುಣಸೂರು ತಾಲೂಕಿನ ದೊಡ್ಡಹೆಜ್ಜೂರು ಗ್ರಾಮದಲ್ಲಿ ಆಟವಾಡುತ್ತಿದ್ದ ಆರೂವರೆ ತಿಂಗಳ ಮಗು, ಒಣಗಿದ ದಾಸವಾಳ ಹೂವನ್ನು ನುಂಗಿ ಉಸಿರುಗಟ್ಟಿ ಸಾವನ್ನಪ್ಪಿದೆ. ಹೂವು ಗಂಟಲಲ್ಲಿ ಸಿಲುಕಿದ್ದರಿಂದ ಉಸಿರಾಟದ ತೊಂದರೆಯಾಗಿ ಅಸ್ವಸ್ಥಗೊಂಡ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
12:07 PM (IST) Mar 30
'ಲೈಫ್ ಈಸ್ ಬ್ಯೂಟಿಫುಲ್' ಮತ್ತು 'ಎವಡೆ ಸುಬ್ರಮಣ್ಯಂ' ಚಿತ್ರಗಳಲ್ಲಿ ಸಣ್ಣ ಪಾತ್ರಗಳಲ್ಲಿ ಮಿಂಚಿದ್ದ ವಿಜಯ್ ಅವರಿಗೆ ಬ್ರೇಕ್ ನೀಡಿದ್ದು ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಅರ್ಜುನ್ ರೆಡ್ಡಿ'. ಸದ್ಯ 'ಕಿಂಗ್‌ಡಮ್' ನಂತರ ವಿಜಯ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರು ಸದ್ಯ 'ರೌಡಿ ಜನಾರ್ದನ' ಎಂಬ ಹೈ-ವೋಲ್ಟೇಜ್ ಆಕ್ಷನ್ ಥ್ರಿಲ್ಲರ್‌ನಲ್ಲಿ ನಟಿಸುತ್ತಿದ್ದಾರೆ.
11:40 AM (IST) Mar 30
ಇತ್ತೀಚೆಗೆ ಯಕ್ಷಗಾನ ಪ್ರದರ್ಶನವೊಂದರಲ್ಲಿ ಪ್ರೇಕ್ಷಕರೊಬ್ಬರು ಶಿಳ್ಳೆ ಹಾಕಿದ್ದಕ್ಕೆ ಕಲಾವಿದ ಅಶೋಕ್ ಭಟ್ ವೇದಿಕೆಯಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯು ಯಕ್ಷಗಾನದಲ್ಲಿ ಶಿಳ್ಳೆ ಹಾಕುವುದು ಮೆಚ್ಚುಗೆಯ ಸಂಕೇತವೇ ಅಥವಾ ಕಲೆಗೆ ತೋರುವ ಅಗೌರವವೇ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.
11:03 AM (IST) Mar 30
ರಾಜ್ಯದಲ್ಲಿ 1ನೇ ತರಗತಿ ಪ್ರವೇಶಕ್ಕೆ ಸರ್ಕಾರವು 60 ದಿನಗಳ ವಯೋಮಿತಿ ಸಡಿಲಿಕೆ ಮಾಡಿರುವುದಕ್ಕೆ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷದಂತೆ 5.5 ವರ್ಷ ಪೂರ್ಣಗೊಂಡ ಎಲ್ಲಾ ಮಕ್ಕಳಿಗೂ ಪ್ರವೇಶ ನೀಡಬೇಕೆಂದು ಆಗ್ರಹಿಸಿ, ಸಾಮಾಜಿಕ ಜಾಲತಾಣಗಳ ಆಂದೋಲನವನ್ನು ಪ್ರಾರಂಭಿಸಿದ್ದಾರೆ.
08:56 AM (IST) Mar 30
ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ, ಐದು ದಿನದ ಮಗುವನ್ನು ಬಿಟ್ಟು ಬಾಣಂತಿಯೊಬ್ಬರು ಆಸ್ಪತ್ರೆಯ ಕಟ್ಟಡದಿಂದ ಜಿಗಿದು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾದ ಈ ಘಟನೆಯ ಹಿಂದೆ ದೆವ್ವದ ಕೈವಾಡವಿದೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದು, ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
08:23 AM (IST) Mar 30
08:02 AM (IST) Mar 30
ಸಕ್ಕರೆ ಸೇವನೆ ಕಡಿಮೆ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಮನವಿ ಮಾಡಿದರು. ಮಾಸಿಕ ಮನ್ ಕೀ ಬಾತ್ ರೇಡಿಯೋ ಭಾಷಣ ಮಾಡಿದ ಅವರು, ‘ಸಕ್ಕರೆ ಸೇವನೆಯನ್ನು ಕಡಿಮೆ ಮಾಡಿ. ಅಡುಗೆ ಎಣ್ಣೆಯ ಬಳಕೆಯನ್ನು ಶೇ.10ರಷ್ಟು ಕಡಿತಗೊಳಿಸಿ.
07:41 AM (IST) Mar 30
ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತಮ್ಮ ‘ಮನ್ ಕೀ ಬಾತ್’ ಭಾಷಣದಲ್ಲಿ, ವಿನೂತನ ವಿಧಾನದಲ್ಲಿ ಮೀನು ಸಾಕಣೆ ಮಾಡಿ ಯಶಸ್ಸು ಕಂಡ ಬೆಳಗಾವಿ ತಾಲೂಕಿನ ರೈತ ರಾಜು ಶಿವಲಿಂಗಪ್ಪ ಹುದ್ದಾರ (27) ಅವರನ್ನು ಶ್ಲಾಘಿಸಿದ್ದಾರೆ.
07:21 AM (IST) Mar 30
ಇರಾನ್ ಮೇಲಿನ ವೈಮಾನಿಕ ದಾಳಿ 1 ತಿಂಗಳಿಂದ ನಡೆದಿರುವ ನಡುವೆಯೇ ಅಮೆರಿಕವು ಇದೀಗ ಖಾರ್ಗ್ ದ್ವೀಪದ ಮೇಲೆ ಹಾಗೂ ಹೋರ್ಮುಜ್ ಜಲಸಂಧಿ ಸಮೀಪದ ಪ್ರದೇಶಗಳ ಮೇಲೆ ಭೂಸೇನಾ ಕಾರ್ಯಾಚರಣೆಗೆ ಸಿದ್ಧತೆ ಆರಂಭಿಸಿದೆ ಎಂದು ‘ವಾಷಿಂಗ್ಟನ್ ಪೋಸ್ಟ್’ ಪತ್ರಿಕೆ ವರದಿ ಮಾಡಿದೆ.
07:09 AM (IST) Mar 30
1962-65ರ ಬ್ಯಾಚಿನಲ್ಲಿ ಓದಿದ್ದ ಸಹಪಾಠಿಗಳು 60 ವರ್ಷಗಳ ನಂತರ ತಮ್ಮ 85-86ರ ಇಳಿವಯಸ್ಸಿನಲ್ಲಿ ಮತ್ತೆ ಭೇಟಿಯಾದರು. ಮೂರು ದಿನಗಳ ಕಾಲ ನಡೆದ ಈ ಅಪರೂಪದ ಮರುಮಿಲನದಲ್ಲಿ, 122 ಸಹಪಾಠಿಗಳ ಪೈಕಿ ಉಳಿದಿರುವ 12 ಮಂದಿ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಸಂಭ್ರಮಿಸಿದರು.
07:06 AM (IST) Mar 30
ಎರಡೂವರೆ ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಪ್ರಕರಣದಲ್ಲಿ, ತಾಯಿಯ ಅನುಪಸ್ಥಿತಿಯಲ್ಲಿ ಸಂತ್ರಸ್ತೆಯ ಹೇಳಿಕೆ ದಾಖಲಿಸಿಕೊಂಡ ಅಧೀನ ನ್ಯಾಯಾಲಯದ ಕ್ರಮವನ್ನು ಹೈಕೋರ್ಟ್ ತೀವ್ರವಾಗಿ ಖಂಡಿಸಿದೆ. ಪ್ರಕರಣದಲ್ಲಿ ಹೈಕೋರ್ಟ್ ಹೇಳಿದ್ದೇನು?
07:04 AM (IST) Mar 30
ಇರಾನ್ ಮೇಲಿನ ಯುದ್ಧ ಸೇರಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಲವು ನಿಲುವುಗಳನ್ನು ವಿರೋಧಿಸಿ ಅಮೆರಿಕ ಹಾಗೂ ಯುರೋಪ್‌ನಲ್ಲಿ ‘ನೋ ಕಿಂಗ್ಸ್’ (ಸರ್ವಾಧಿಕಾರ ಬೇಡ) ಹೆಸರಿನ ಬೃಹತ್ ರ್‍ಯಾಲಿ ಹಾಗೂ ಪ್ರತಿಭಟನೆಗಳು ಶನಿವಾರ ನಡೆದಿವೆ.