LIVE NOW
Published : Sep 29, 2026, 06:55 AM ISTUpdated : Sep 29, 2026, 09:06 AM IST

Karnataka News Live: Mysuru dasara - ಬೆಳಗ್ಗೆ ಅಸಮಾಧಾನ-ಸಂಜೆ ಸಮಾಧಾನ.. ಇದು ಯತೀಂದ್ರ- ತನ್ವೀರ್‌ ಕಥೆ ಅಷ್ಟಕ್ಕೂ ಆಗಿದ್ದೇನು?!

ಸಾರಾಂಶ

ಬೆಂಗಳೂರು: ರಾಜ್ಯದ ಬರದ ಬಗ್ಗೆ ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲು ಸರ್ವಪಕ್ಷ ನಿಯೋಗದೊಂದಿಗೆ ಬಾರದಿದ್ದರೆ, ಬಿಜೆಪಿಯವರದ್ದು ಕಪಟ ನಾಟಕ ಎಂಬುದು ಸಾಬೀತಾಗುತ್ತದೆ. ಬಿಜೆಪಿ ಬಾರದಿದ್ದರೂ ರೈತರ ಹಿತಕ್ಕಾಗಿನಾವೇ ಅಗತ್ಯ ಕ್ರಮತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ದೆಹಲಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರ ವಿಚಾರದಲ್ಲಿ ಸರ್ವಪಕ್ಷ ನಿಯೋಗದೊಂದಿಗೆ ಹೋಗುವುದಿಲ್ಲ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದರು. ವಿರೋಧ ಪಕ್ಷಗಳು ಸರ್ವಪಕ್ಷ ನಿಯೋಗದೊಂದಿಗೆ ಬಾರದಿದ್ದರೆ, ರೈತರ ಹಿತಾಸಕ್ತಿಯನ್ನು ಸರ್ಕಾರ ಕಡೆಗಣಿಸುವುದಿಲ್ಲ. ರಾಜ್ಯದ ರೈತರ ಹಿತ ಕಾಪಾಡಲು ಏನು ಮಾಡಬೇಕೋ ಅದನ್ನು ನಾವು ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಬಿಜೆಪಿಯವರ ಈ ನಡೆಯಿಂದ ರಾಜ್ಯದ ರೈತರ ಬಗ್ಗೆ ಅವರಿಗೆ ಕಾಳಜಿ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ರೈತರಿಗೆ 25000 ರು, 50000 ರು. ಪರಿಹಾರ ನೀಡಿ ಎಂದು ಹೇಳುವವರು ಕೇಂದ್ರ ಸರ್ಕಾರದ ಬಳಿ ಮಾತನಾಡಿ ಅವರೂ ಪರಿಹಾರ ಕೊಡಿಸಬೇಕು ಎಂದು ಆಗ್ರಹಿಸಿದರು.

09:06 AM (IST) Sep 29

Mysuru dasara - ಬೆಳಗ್ಗೆ ಅಸಮಾಧಾನ-ಸಂಜೆ ಸಮಾಧಾನ.. ಇದು ಯತೀಂದ್ರ- ತನ್ವೀರ್‌ ಕಥೆ ಅಷ್ಟಕ್ಕೂ ಆಗಿದ್ದೇನು?!

ಮೈಸೂರು ದಸರಾ ಗಜಪಡೆ ಮಾವುತರ ಉಪಾಹಾರ ಕೂಟಕ್ಕೆ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತಡವಾಗಿ ಬಂದಿದ್ದಕ್ಕೆ ಶಾಸಕ ತನ್ವೀರ್ ಸೇಠ್ ಅಸಮಾಧಾನಗೊಂಡು ಹೊರನಡೆದಿದ್ದರು. ಆದರೆ ಸಂಜೆ ನಡೆದ ಯುವ ಸಂಭ್ರಮದಲ್ಲಿ ಇಬ್ಬರೂ ಒಟ್ಟಿಗೆ ಕುಳಿತುಕೊಳ್ಳುವ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
Read Full Story

08:46 AM (IST) Sep 29

Gandhi Jayanti - ಗಾಂಧೀಜಿ ಮೊದಲ ಬಾರಿಗೆ ಬೆಂಗಳೂರಿಗೆ ಬಂದಾಗ ಆನಂದ್ ರಾವ್ ಸರ್ಕಲ್‌ನ ಈ ಮನೆಯಲ್ಲಿದ್ರು! ಆ ಘಟನೆ ಇಂದಿಗೂ ಕುತೂಹಲ!

ದಕ್ಷಿಣ ಆಫ್ರಿಕಾದಿಂದ ಮರಳಿದ ಬಳಿಕ ಮಹಾತ್ಮ ಗಾಂಧೀಜಿಯವರು ಡಿ.ವಿ. ಗುಂಡಪ್ಪನವರ ಆಹ್ವಾನದ ಮೇರೆಗೆ 1915ರಲ್ಲಿ ಮೊದಲ ಬಾರಿಗೆ ಬೆಂಗಳೂರಿಗೆ ಭೇಟಿ ನೀಡಿದರು. ಈ ವೇಳೆ ಅವರು ಗೋಖಲೆ ಅವರ ಭಾವಚಿತ್ರವನ್ನು ಅನಾವರಣಗೊಳಿಸಿ, ಲಾಲ್‌ಬಾಗ್‌ನಲ್ಲಿ ಸನ್ಮಾನ ಸ್ವೀಕರಿಸಿದರು. ಅಂದಿನ ರೋಚಕ ಘಟನೆಗಳು ಇಲ್ಲಿವೆ.

Read Full Story

08:27 AM (IST) Sep 29

ಹಾಸನ ಮೇಲ್ಸೇತುವೆ ಸಾರ್ವಜನಿಕ ಸಂಚಾರಕ್ಕೆ ಯಾವಾಗ ಮುಕ್ತ? ಕಾಮಗಾರಿ ಪ್ರಗತಿ ಹೇಗಿದೆ?

ಹಾಸನ ನಗರದ ಮೇಲ್ಸೇತುವೆ ಕಾಮಗಾರಿಯನ್ನು ಸಂಸದ ಶ್ರೇಯಸ್‌ ಎಂ. ಪಟೇಲ್ ಪರಿಶೀಲಿಸಿದ್ದು, ಹಾಸನಾಂಬಾ ಜಾತ್ರೆಗೂ ಮುನ್ನ ಸರ್ವಿಸ್ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲು ಸೂಚಿಸಿದ್ದಾರೆ. ಮೇಲ್ಸೇತುವೆಯಲ್ಲಿನ ಕಂಪನ ಹಾಗೂ ಭೂಸ್ವಾಧೀನ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

Read Full Story

08:00 AM (IST) Sep 29

ಗಣಪತಿಗೆ ಹೂವಿನ ಹಾರ, ಕರ್ಪೂರ ತಂದು ಮುಸ್ಲಿಂ ಮಹಿಳೆಯರಿಂದ ವಿಶೇಷ ಪೂಜೆ - ಭಾವೈಕ್ಯತೆಗೆ ಸಾಕ್ಷಿಯಾದ ಮಲ್ಲಿಗೆ ನಗರ!

ಹೂವಿನಹಡಗಲಿಯ ಇಸ್ಲಾಂಪೇಟೆಯಲ್ಲಿ ಗಣೇಶ ವಿಸರ್ಜನೆಗೆ ಎದುರಾಗಿದ್ದ ವಿವಾದ ಸುಖಾಂತ್ಯ ಕಂಡಿದೆ. ಬಿಗಿ ಪೊಲೀಸ್ ಭದ್ರತೆಯಲ್ಲಿ ನಡೆದ ಮೆರವಣಿಗೆಯಲ್ಲಿ ಮುಸ್ಲಿಮರು ಗಣೇಶನಿಗೆ ಪೂಜೆ ಸಲ್ಲಿಸುವ ಮೂಲಕ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದರು.
Read Full Story

07:48 AM (IST) Sep 29

Udupi - ಕ್ರಿಕೆಟ್ ಆಡಿದ 60 ಮಂದಿ ಕ್ರೈಸ್ತ ಧರ್ಮಗುರುಗಳು, ಡಿಕನ್‌ರು; ಹೇಗಿತ್ತು ಪಂದ್ಯ?

ಉಡುಪಿಯ ಕನ್ನರ್ಪಾಡಿಯಲ್ಲಿ ಭಾನುವಾರದ ಪೂಜೆಯ ಬಳಿಕ 60 ಮಂದಿ ಕ್ರೈಸ್ತ ಧರ್ಮಗುರುಗಳು ಮತ್ತು ಡಿಕನ್‌ರು ಕ್ರಿಕೆಟ್ ಆಡುವ ಮೂಲಕ ಗಮನ ಸೆಳೆದರು. ವಿಯಾನ್ನಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಯಾನ್ನಿ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.
Read Full Story

07:41 AM (IST) Sep 29

ನಡುರಸ್ತೆಯಲ್ಲಿ 70 ವರ್ಷದ ವೃದ್ಧ ತಾಯಿಯನ್ನು ಬಿಟ್ಟು ಹೋದ ತಮಿಳುನಾಡಿನ ವ್ಯಕ್ತಿ

ಬ್ರಹ್ಮಾವರದಲ್ಲಿ ಮಗನೊಬ್ಬ ತನ್ನ 70 ವರ್ಷದ ವೃದ್ಧ ತಾಯಿಯನ್ನು ಅಪರಿಚಿತ ಸ್ಥಳದಲ್ಲಿ ಅಮಾನವೀಯವಾಗಿ ಬಿಟ್ಟು ಹೋಗಿದ್ದಾನೆ. ಶಾಲೆಯ ಬಳಿ ಅಸಹಾಯಕ ಸ್ಥಿತಿಯಲ್ಲಿದ್ದ ಈಕೆಯನ್ನು ಸಮಾಜಸೇವಕರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Read Full Story

07:38 AM (IST) Sep 29

ಬೆಂಗಳೂರು ದಿಢೀರ್ ಮಳೆಯಿಂದ ಅವಾಂತರ - ಇಂದಿನಿಂದ ಈ ಮೂರು ಜಿಲ್ಲೆಗಳಿಗೆ ಮಳೆ ಎಚ್ಚರಿಕೆ!

ಬೆಂಗಳೂರಿನಲ್ಲಿ ದಿಢೀರ್ ಭಾರಿ ಮಳೆಯಾಗಿದ್ದು, ರಸ್ತೆಗಳಲ್ಲಿ ನೀರು ನಿಂತು ಅವಾಂತರ ಸೃಷ್ಟಿ.. ಇದರ ಬೆನ್ನಲ್ಲೇ ಅಕ್ಟೋಬರ್ 4ರವರೆಗೆ ಕರಾವಳಿ, ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮಳೆಯ ನಡುವೆಯೂ ಎಲ್ ನಿನೋ ಪರಿಣಾಮದಿಂದ ರಾಜ್ಯದಲ್ಲಿ ಉಷ್ಣಾಂಶ ಹೆಚ್ಚಾಗುವ ಆತಂಕ.

Read Full Story

07:18 AM (IST) Sep 29

ಕನಕಪುರ ರಸ್ತೆ ಅಪಘಾತದಲ್ಲಿ ದೇಹದಿಂದ ಬೇರ್ಪಟ್ಟುರಸ್ತೆ ಮೇಲೆ ಮಿಡಿಯುತ್ತಿದ್ದ ಹೃದಯ!

ಕಗ್ಗಲೀಪುರದ ಪಟ್ಟರೇದಪಾಳ್ಯ ಸಮೀಪದ ಕನಕಪುರ ರಸ್ತೆಯಲ್ಲಿ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಸ್ಕೂಟರ್‌ನಲ್ಲಿದ್ದ ಶಿಕ್ಷಕಿ ನಾಗರತ್ನ ಮೃತಪಟ್ಟಿದ್ದಾರೆ. ಅಪಘಾತದ ತೀವ್ರತೆಗೆ ಅವರ ಹೃದಯ ದೇಹದಿಂದ ಬೇರ್ಪಟ್ಟು ರಸ್ತೆಯಲ್ಲಿ ಬಡಿದುಕೊಳ್ಳುತ್ತಿದ್ದ ಭೀಕರ ದೃಶ್ಯ ಕಂಡುಬಂದಿದೆ. ಪೊಲೀಸರು ಟಿಪ್ಪರ್ ಚಾಲಕನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
Read Full Story

More Trending News