Published : Mar 28, 2025, 06:34 AM ISTUpdated : Mar 28, 2025, 11:13 PM IST

Karnataka News Live 28th March ಎಲ್ಲವೂ ದುಬಾರಿ : CSK vs RCB: ತಮಿಳರ ಕೋಟೆಯಲ್ಲಿ ಕನ್ನಡಿಗರ ಕಮಾಲ್‌, 17 ವರ್ಷಗಳ ಬಳಿಕ ಚೆನ್ನೈ ತಂಡವನ್ನ ಚೆಪಾಕ್‌ನಲ್ಲಿ ಮಣಿಸಿದ ಆರ್‌ಸಿಬಿ!

ಸಾರಾಂಶ

ಬೆಂಗಳೂರು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಐಆರ್‌ಸಿ) ಏ.1ರಿಂದ ಅನ್ವಯವಾಗುವಂತೆ ವಾರ್ಷಿಕ ವಿದ್ಯುತ್ ದರ ಪರಿಷ್ಕರಣೆ ಮಾಡಿದ್ದು, ಗೃಹ ಬಳಕೆ ಗ್ರಾಹಕರಿಗೆ ವಿದ್ಯುತ್ ದರ, ನಿಗದಿತ ಶುಲ್ಕ ಹೆಚ್ಚಳ ಮೂಲಕ ಬರೆ ಹಾಕಿದೆ. ಇದೇ ವೇಳೆ ಕೈಗಾರಿಕೆ ಹಾಗೂ ವಾಣಿಜ್ಯ ಸಂಪರ್ಕಗಳಿಗೆ ಶುಲ್ಕ ಕಡಿತದ ಯುಗಾದಿ ಕೊಡುಗೆ ನೀಡಿದೆ. ಕೆಂಆರ್‌ಸಿ ಆದೇಶದ ಪರಿಣಾಮ ಏ.1ರಿಂದ 2025-26 ಅನ್ವಯವಾಗುವಂತೆ ಗೃಹ ಬಳಕೆದಾರರಿಗೆ ವಿದ್ಯುತ್ ದರ ಪ್ರತಿ ಯುನಿಟ್‌ಗೆ 26 ಪೈಸೆ ಹಾಗೂ ನಿಗದಿತ ಶುಲ್ಕ ಪ್ರತಿ ಕಿ.ವ್ಯಾಟ್‌ ಗೆ ಬರೋಬ್ಬರಿ 25 ರು. ಹೆಚ್ಚಳ ಆಗಲಿದೆ. ಇದರಿಂದಾಗಿ 3 ಕಿ.ವ್ಯಾಟ್ ಸಾಮರ್ಥದ ವಿದ್ಯುತ್ ಸಂಪರ್ಕ ಹೊಂದಿದ್ದು, ಮಾಸಿಕ 100 ಯುನಿಟ್ ವಿದ್ಯುತ್ ಬಳಸುತ್ತಿರುವ ಗ್ರಾಹಕನಿಗೆ ಪ್ರತಿ ಯುನಿಟ್‌ಗೆ 36 ಪೈಸೆ ಹೆಚ್ಚಳದಿಂದ 36 ರು. ಹೊರೆಯಾಗಲಿದೆ. ಇದೀಗ 10 ಪೈಸೆ ಕಡಿತದಿಂದ 10 ರು. ಹೊರೆ ಕಮ್ಮಿ ಆಗಲಿದ್ದು, 100 ಯುನಿಟ್‌ಗೆ 26 ರು. ಹೆಚ್ಚುವರಿ ಶುಲ್ಕ ಭರಿಸಬೇಕಾಗುತ್ತದೆ. ಇನ್ನು 3 ಕಿ.ವ್ಯಾಟ್‌ಗೆ ಪ್ರತಿ ಕಿ.ವ್ಯಾಟ್‌ಗೆ ಮಾಸಿಕ 120 ರು.ಗಳಂತೆ 360 ರು. ನಿಗದಿತ ಶುಲ್ಕ ಪಾವತಿಸುತ್ತಿದ್ದವರು ಇದೀಗ ಪ್ರತಿ ಕಿ.ವ್ಯಾಟ್‌ಗೆ 145 ರು.ಗಳಂತೆ 435 ರು. ಪಾವತಿ ಮಾಡಬೇಕಾಗಿದ್ದು 75 ರು. ಹೊರೆ ತಗುಲ ಲಿದೆ. ಹೀಗಾಗಿ 101 ರು. ಹೊರೆಯಾಗಲಿದೆ.ಇದರ ಜೊತೆಗೆ ಈಗಾಗಲೇ ಬೆಲೆ ಏರಿಕೆ ಬಿಸಿಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ರಾಜ್ಯ ಸರ್ಕಾರ ಯುಗಾದಿ ಹಬ್ಬದ ವೇಳೆ ಹೊಸ ಶಾಕ್‌ ನೀಡಿದೆ. ಎಲ್ಲಾ ಮಾದರಿಯ ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಪ್ರತಿ ಲೀಟರ್‌ಗೆ ನಾಲ್ಕು ರು. ಹೆಚ್ಚಳ ಮಾಡಿದೆ. ಈ ದರ ಹೆಚ್ಚಳ ಏ.1ರಿಂದ ಅನ್ವಯವಾಗುವಂತೆ ಜಾರಿಗೆ ಬರಲಿದೆ.

Karnataka News Live 28th March  ಎಲ್ಲವೂ ದುಬಾರಿ  : CSK vs RCB: ತಮಿಳರ ಕೋಟೆಯಲ್ಲಿ ಕನ್ನಡಿಗರ ಕಮಾಲ್‌, 17 ವರ್ಷಗಳ ಬಳಿಕ ಚೆನ್ನೈ ತಂಡವನ್ನ ಚೆಪಾಕ್‌ನಲ್ಲಿ ಮಣಿಸಿದ ಆರ್‌ಸಿಬಿ!

11:13 PM (IST) Mar 28

CSK vs RCB: ತಮಿಳರ ಕೋಟೆಯಲ್ಲಿ ಕನ್ನಡಿಗರ ಕಮಾಲ್‌, 17 ವರ್ಷಗಳ ಬಳಿಕ ಚೆನ್ನೈ ತಂಡವನ್ನ ಚೆಪಾಕ್‌ನಲ್ಲಿ ಮಣಿಸಿದ ಆರ್‌ಸಿಬಿ!

ಚೆನ್ನೈನಲ್ಲಿ RCB ಐತಿಹಾಸಿಕ ಗೆಲುವು ಸಾಧಿಸಿದೆ. 17 ವರ್ಷಗಳ ಬಳಿಕ CSK ತಂಡವನ್ನು ಅವರದೇ ನೆಲದಲ್ಲಿ ಸೋಲಿಸಿದೆ. ರಜತ್ ಪಾಟೀದಾರ್ ನೇತೃತ್ವದ ತಂಡದ ಅದ್ಭುತ ಪ್ರದರ್ಶನ.

ಪೂರ್ತಿ ಓದಿ

10:44 PM (IST) Mar 28

PM Kisan Update: ಈ ರಾಜ್ಯದ ರೈತರಿಗೆ ಸಿಗಲಿದೆ ವರ್ಷಕ್ಕ 9 ಸಾವಿರ ಹಣ? ಯಾವಾಗ ಬರಲಿದೆ 20ನೇ ಕಂತು..

PM Kisan 20th Installment Update:  ಪಿಎಂ ಕಿಸಾನ್ ನಿಧಿ ಯೋಜನೆಯಡಿ, ರೈತರು ಈಗ 20 ನೇ ಕಂತಿಗಾಗಿ ಕಾಯುತ್ತಿದ್ದಾರೆ. ಆದರೆ, ಒಂದು ರಾಜ್ಯದ ರೈತರು ವಾರ್ಷಿಕ 6000 ರೂ.ಗಳ ಬದಲಿಗೆ 9000 ರೂ.ಗಳನ್ನು ಪಡೆಯುಲಿದ್ದಾರೆ.

 

 

ಪೂರ್ತಿ ಓದಿ

09:20 PM (IST) Mar 28

CSK vs RCB: ಟಿಮ್‌ ಡೇವಿಡ್‌ ಹ್ಯಾಟ್ರಿಕ್‌ ಸಿಕ್ಸರ್ಸ್‌ ಬಲ, ಚೆನ್ನೈಗೆ 197 ಗುರಿ ನೀಡಿದ ಆರ್‌ಸಿಬಿ!

ಚೆನ್ನೈ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ 196 ರನ್ ಗಳಿಸಿದೆ. ರಜತ್ ಪಾಟಿದಾರ್ ಅರ್ಧಶತಕ ಮತ್ತು ಕೊನೆಯಲ್ಲಿ ಟಿಮ್ ಡೇವಿಡ್ ಸಿಕ್ಸರ್ ನೆರವಿನಿಂದ ಉತ್ತಮ ಮೊತ್ತ ದಾಖಲಿಸಿದೆ.

ಪೂರ್ತಿ ಓದಿ

09:08 PM (IST) Mar 28

CSK vs RCB: ಧೋನಿ ಮಿಂಚಿನ ಸ್ಟಂಪಿಂಗ್‌ಗೆ ಅಚ್ಚರಿ ಬಿದ್ದ ಕ್ರಿಕೆಟ್‌ ಜಗತ್ತು!

ಚೆನ್ನೈ vs ಆರ್‌ಸಿಬಿ ಪಂದ್ಯದಲ್ಲಿ ಧೋನಿ ಮಿಂಚಿನ ಸ್ಟಂಪಿಂಗ್ ಮಾಡಿದ್ದಾರೆ. 43 ವರ್ಷ ವಯಸ್ಸಿನಲ್ಲೂ ಧೋನಿ ವಿಕೆಟ್ ಕೀಪಿಂಗ್ ಚುರುಕುತನಕ್ಕೆ ಕ್ರಿಕೆಟ್ ಜಗತ್ತು ಅಚ್ಚರಿ ವ್ಯಕ್ತಪಡಿಸಿದೆ.

ಪೂರ್ತಿ ಓದಿ

08:44 PM (IST) Mar 28

ಡಿಸೆಂಬರ್‌ ವೇಳೆಗೆ ಕಂಟೋನ್ಮೆಂಟ್‌-ವೈಟ್‌ಫೀಲ್ಡ್‌ ಹಳಿ ಚತುಷ್ಪಥ ಪೂರ್ಣ, ಧ್ವಂಸವಾಗಲಿದೆ ಬೈಯ್ಯಪ್ಪನಹಳ್ಳಿ ಮೆಟ್ರೋ FOB!

ಬೆಂಗಳೂರು ಕಂಟೋನ್ಮೆಂಟ್-ವೈಟ್‌ಫೀಲ್ಡ್ ರೈಲ್ವೆ ಮಾರ್ಗದ ಚತುಷ್ಪಥ ರೈಲ್ವೆ ಟ್ರ್ಯಾಕ್‌ ಯೋಜನೆಯು ಡಿಸೆಂಬರ್ 2025 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದ ಮೇಲಿನ ಸ್ಕೈವಾಕ್ ಅನ್ನು ಕೆಡವಲು ನೈಋತ್ಯ ರೈಲ್ವೆ ಯೋಜಿಸುತ್ತಿದೆ.

ಪೂರ್ತಿ ಓದಿ

08:34 PM (IST) Mar 28

ಗೋಬಿ ಮಹೇಶ್‌ನ ವಿವಾದಾತ್ಮಕ ಕೃತ್ಯ: ಹಿಂದೂ ಹುಡುಗಿ ಮುಸ್ಲಿಂ ಯುವಕನೊಂದಿಗಿನ ಮದುವೆಗೆ ಹಿಂದೂ ಸಂಘಟನೆಗಳ ತೀವ್ರ ಆಕ್ಷೇಪ

ಚಿಕ್ಕಮಗಳೂರಿನಲ್ಲಿ ಲವ್ ಜಿಹಾದ್‌ಗೆ ಹಿಂದೂಗಳೇ ಬೆಂಬಲ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿಯ ಮದುವೆಗೆ ಬೆಂಬಲ ನೀಡಿದ ಗೋಬಿ ಸ್ಟಾಲ್ ಮಾಲೀಕನ ವಿರುದ್ಧ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರವೆಂದು ಗೋಬಿ ಮಹೇಶ್ ದೂರು ದಾಖಲಿಸಿದ್ದಾರೆ.

ಪೂರ್ತಿ ಓದಿ

08:13 PM (IST) Mar 28

ಕೊಡಗು: ನಡುರಾತ್ರಿ ನರಮೇಧ, ವರ್ಷದ ಹಿಂದೆ ವರಿಸಿದ್ದವನೇ ನಾಲ್ವರನ್ನೂ ಮುಗಿಸಿದನಾ?

ಕೊಡಗಿನಲ್ಲಿ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಕುಟುಂಬವೊಂದು ದುರಂತ ಅಂತ್ಯ ಕಂಡಿದೆ. ನಾಲ್ವರು ಮಲಗಿದ್ದಲ್ಲೇ ಹತ್ಯೆಯಾಗಿದ್ದು, ಕುಟುಂಬದ ಸದಸ್ಯನೋರ್ವ ನಾಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ.

ಪೂರ್ತಿ ಓದಿ

07:59 PM (IST) Mar 28

ಬೆಂಗಳೂರು-ತುಮಕೂರು ಪ್ಲ್ಯಾಂಟ್‌ಗೆ ಪ್ರಚಂಡ ಬಂಪರ್‌, ಇತಿಹಾಸದಲ್ಲೇ ಅತಿದೊಡ್ಡ ಆರ್ಡರ್‌ ಪಡೆದ ಎಚ್‌ಎಎಲ್!

ಪ್ರಚಂಡ್ ವಿಮಾನವು ಆಕಾಶದಿಂದ ನೆಲಕ್ಕೆ ಮತ್ತು ಆಕಾಶದಿಂದ ಆಕಾಶಕ್ಕೆ ಕ್ಷಿಪಣಿಗಳನ್ನು ಹಾರಿಸುವ ಸಾಮರ್ಥ್ಯವನ್ನು ಹೊಂದಿದ್ದು, ಶತ್ರುಗಳ ವಾಯು ರಕ್ಷಣಾ ಕಾರ್ಯಾಚರಣೆಗಳನ್ನು ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿದೆ.

ಪೂರ್ತಿ ಓದಿ

07:41 PM (IST) Mar 28

ವಿದೇಶದಲ್ಲಿ ಪುನೀತ್ ರಾಜ್‌ಕುಮಾರ್ ಪಾಸ್‌ಪೋರ್ಟ್‌ ಪಡೆದ ಆಫೀಸರ್; ಪಕ್ಕದಲ್ಲಿದ್ದ ಹೆಸರು ನೋಡಿ ಗಾಬರಿ ಆಗಿದ್ದು ಯಾಕೆ?

ಅಪ್ಪು ವಿದೇಶದಲ್ಲಿ ಪ್ರಯಾಣ ಮಾಡುವಾಗ ಅಣ್ಣಾವ್ರ ಅಭಿಮಾನಿ ಸಿಕ್ಕ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಪಾಸ್‌ಪೋರ್ಟ್‌ನಲ್ಲಿ ಏನಿತ್ತು......

ಪೂರ್ತಿ ಓದಿ

07:36 PM (IST) Mar 28

ಕೇವಲ 10 ಗ್ರಾಂ ಮರದ ತುಂಡಿಗೆ 1 ಕೆಜಿ ಚಿನ್ನದ ಬೆಲೆ! ಭಾರತದಲ್ಲೂ ಬೆಳೆಯುತ್ತೆ ಈ ಮರ!

ಕೈನಮ್ ಎಂಬ ಅಗರ್‌ವುಡ್ ಪ್ರಭೇದದ ಮರವು ಜಗತ್ತಿನ ಅತ್ಯಂತ ದುಬಾರಿ ಮರವಾಗಿದ್ದು, 10 ಗ್ರಾಂ ಮರದ ತುಂಡಿಗೆ 1 ಕೆಜಿ ಚಿನ್ನದ ಬೆಲೆ ಇದೆ. ಈ ಮರವು ಆಗ್ನೇಯ ಏಷ್ಯಾ, ಭಾರತ, ಚೀನಾ, ಮಧ್ಯಪ್ರಾಚ್ಯ ಪ್ರದೇಶಗಳಲ್ಲಿ ಕಂಡುಬರುತ್ತದೆ ಮತ್ತು ಸುಗಂಧ ದ್ರವ್ಯ ಉದ್ಯಮಕ್ಕೆ ಅತ್ಯಗತ್ಯವಾಗಿದೆ.

ಪೂರ್ತಿ ಓದಿ

07:24 PM (IST) Mar 28

2025 ರಿಂದ ವರ್ಷದಲ್ಲಿ ಮೂರು ಬಾರಿ ಸಿಎ ಫೈನಲ್ಸ್ ಪರೀಕ್ಷೆ: ICAI

ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) 2025 ರಿಂದ ಸಿಎ ಫೈನಲ್ ಪರೀಕ್ಷೆಗಳನ್ನು ವರ್ಷಕ್ಕೆ ಮೂರು ಬಾರಿ ನಡೆಸಲು ನಿರ್ಧರಿಸಿದೆ. ಈ ಹಿಂದೆ ವರ್ಷಕ್ಕೆ ಎರಡು ಬಾರಿ ಮಾತ್ರ ಪರೀಕ್ಷೆ ನಡೆಸಲಾಗುತ್ತಿತ್ತು.

ಪೂರ್ತಿ ಓದಿ

07:21 PM (IST) Mar 28

ಹುಬ್ಬಳ್ಳಿಗೆ ಯುಗಾದಿ ಹಬ್ಬಕ್ಕೆ ವಿಶೇಷ ರೈಲು ಬಿಟ್ಟ ಭಾರತೀಯ ರೈಲ್ವೆ ಇಲಾಖೆ!

ಯುಗಾದಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ದಟ್ಟಣೆ ಹೆಚ್ಚಾಗುವ ಕಾರಣ, ದಕ್ಷಿಣ ಮಧ್ಯ ರೈಲ್ವೆಯು ಗುಂಟೂರು ಮತ್ತು ಎಸ್.ಎಸ್.ಎಸ್. ಹುಬ್ಬಳ್ಳಿ ನಡುವೆ ವಿಶೇಷ ರೈಲುಗಳನ್ನು ಓಡಿಸಲಿದೆ. ಈ ರೈಲುಗಳು ಮಾರ್ಚ್ 31 ಮತ್ತು ಏಪ್ರಿಲ್ 1 ರಂದು ಸಂಚರಿಸಲಿವೆ.

ಪೂರ್ತಿ ಓದಿ

06:40 PM (IST) Mar 28

Myanmar earthquake 2025: ಬಹುಮಹಡಿ ಕಟ್ಟಡದಲ್ಲಿದ್ದಾಗ ಭೂಕಂಪ ಸಂಭವಿಸಿದರೆ ತಕ್ಷಣ ಏನು ಮಾಡಬೇಕು?

ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಪ್ರಬಲ ಭೂಕಂಪದ ಸಂದರ್ಭದಲ್ಲಿ ಬಹುಮಹಡಿ ಕಟ್ಟಡದಲ್ಲಿರುವಾಗ ಹೇಗೆ ಸುರಕ್ಷಿತವಾಗಿರಬೇಕೆಂದು ಈ ಲೇಖನ ವಿವರಿಸುತ್ತದೆ. ಭೂಕಂಪ ಸಂಭವಿಸಿದಾಗ ತೆಗೆದುಕೊಳ್ಳಬೇಕಾದ ಕ್ರಮಗಳು, ನಂತರದ ಸುರಕ್ಷತಾ ಕ್ರಮಗಳು ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ.

ಪೂರ್ತಿ ಓದಿ

06:36 PM (IST) Mar 28

ಯುಗಾದಿ ಗಿಫ್ಟ್‌ ನೀಡಿದ ಸರ್ಕಾರ, ನೌಕರರ ಡಿಎ ಶೇ.2 ರಷ್ಟು ಏರಿಕೆ, ಎಷ್ಟಾಗಲಿದೆ ಗೊತ್ತಾ ಪ್ರತಿ ತಿಂಗಳ ವೇತನ?

ಕೇಂದ್ರ ಸರ್ಕಾರವು ಯುಗಾದಿ ಹಬ್ಬದ ಸಂದರ್ಭದಲ್ಲಿ ತನ್ನ ಉದ್ಯೋಗಿಗಳ ತುಟ್ಟಿ ಭತ್ಯೆಯನ್ನು ಶೇ. 2ರಷ್ಟು ಹೆಚ್ಚಿಸಿದೆ. ಈ ನಿರ್ಧಾರದಿಂದ 1.15 ಕೋಟಿ ಉದ್ಯೋಗಿಗಳಿಗೆ ಅನುಕೂಲವಾಗಲಿದ್ದು, ಸರ್ಕಾರದ ಖಜಾನೆಗೆ 6614 ಕೋಟಿ ರೂಪಾಯಿ ಹೊರೆಯಾಗಲಿದೆ.

ಪೂರ್ತಿ ಓದಿ

06:22 PM (IST) Mar 28

ಮುಂಬೈ ನೋಡಲು ಮನೆಬಿಟ್ಟ ಮಗ 14 ವರ್ಷಗಳ ಬಳಿಕ ಸಿಕ್ಕ: ಇಲ್ಲಿ ಹೆತ್ತಮ್ಮ, ಅಲ್ಲಿ ಸಾಕಮ್ಮ... ಭಾವುಕ ಘಟನೆ ಇಲ್ಲಿದೆ...

14 ವರ್ಷಗಳ ಹಿಂದೆ ಕಾಣಿಯಾಗಿದ್ದ ಬಾಲಕನೊಬ್ಬ ಈಗ ಯುವಕನಾಗಿ ಹೆತ್ತವರ ಮುಂದೆ ಕಾಣಿಸಿಕೊಂಡಿದ್ದಾರೆ. ಅತ್ತ ಇಷ್ಟು ವರ್ಷ ಸಾಕಿದ ಅಮ್ಮ- ಇತ್ತ ಹೆತ್ತವರು... ಭಾವುಕ ಕಥೆ ಇಲ್ಲಿದೆ..
 

ಪೂರ್ತಿ ಓದಿ

06:05 PM (IST) Mar 28

Insomnia in Teens: ಹದಿಹರೆಯದವರಲ್ಲಿ ನಿದ್ರೆ: ಕಾರಣಗಳು, ಪರಿಣಾಮಗಳು ಮತ್ತು ಪರಿಹಾರಗಳು

ಹದಿಹರೆಯದವರಲ್ಲಿ ನಿದ್ರೆಯ ಕೊರತೆಯು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಜೀವನಶೈಲಿ ಬದಲಾವಣೆಗಳು ಮತ್ತು ವೈದ್ಯಕೀಯ ಚಿಕಿತ್ಸೆಯ ಮೂಲಕ ನಿದ್ರೆಯ ಗುಣಮಟ್ಟವನ್ನು ಸುಧಾರಿಸಬಹುದು.

ಪೂರ್ತಿ ಓದಿ

06:01 PM (IST) Mar 28

ಥೈಲ್ಯಾಂಡ್‌-ಮಯನ್ಮಾರ್‌ ಭೂಕಂಪದ Impact: ಗುಜರಾತ್‌ಗೆ ಆಗಲಿದೆ ಬೆಟ್ಟದಷ್ಟು ನಷ್ಟ!

ಮಯನ್ಮಾರ್ ಮತ್ತು ಥೈಲ್ಯಾಂಡ್‌ನಲ್ಲಿನ ಭೂಕಂಪದಿಂದ ಗುಜರಾತ್ ಮೂಲದ ಕಂಪನಿಗಳ ರಫ್ತಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಜವಳಿ, ಔಷಧ, ರಾಸಾಯನಿಕ ರಫ್ತುಗಳಿಗೆ ಹಾನಿಯಾಗುವ ಸಾಧ್ಯತೆ ಇದ್ದು, ಸಾಗಣೆ ಮತ್ತು ಪಾವತಿಗಳ ಮೇಲೆ ಪರಿಣಾಮ ಬೀರಬಹುದು.

ಪೂರ್ತಿ ಓದಿ

05:29 PM (IST) Mar 28

Myanmar earthquake 2025: ಭೂಕಂಪಗಳು ಹೇಗೆ ಸಂಭವಿಸುತ್ತವೆ? ಅದರ ತೀವ್ರತೆ ಮತ್ತು ವಿನಾಶ ಸಂಪೂರ್ಣ ವಿವರ ಇಲ್ಲಿದೆ

ಮ್ಯಾನ್ಮಾರ್‌ನಲ್ಲಿ 7.2 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಬ್ಯಾಂಕಾಕ್‌ನಲ್ಲೂ ಕಂಪನ ಉಂಟಾಗಿದೆ. ಎರಡು ಬಾರಿ ಭೂಮಿ ಕಂಪಿಸಿದ ಪರಿಣಾಮವಾಗಿ ಕಟ್ಟಡಗಳು ಕುಸಿಯುವ ಭೀತಿ ಎದುರಾಗಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ.

ಪೂರ್ತಿ ಓದಿ

05:09 PM (IST) Mar 28

ಬಾಡಿಗೆದಾರರಿಗೆ ಆದಾಯತೆರಿಗೆ ಇಲಾಖೆ ಶಾಕ್​: ದಂಡ-ಶಿಕ್ಷೆ ಆಗ್ಬಾರ್ದು ಎಂದ್ರೆ ಕೂಡಲೇ ಈ ರೀತಿ ಮಾಡಿ...

ಹೆಚ್ಚು ಬಾಡಿಗೆಯನ್ನು ಪಾವತಿಸುತ್ತಿದ್ದರೆ ಟಿಡಿಎಸ್​ ಸಲ್ಲಿಸುವುದು ಅನಿವಾರ್ಯವಾಗಿದೆ. ಇಲ್ಲದಿದ್ದರೆ ಆದಾಯ ತೆರಿಗೆ ಇಲಾಖೆಯಿಂದ ಭಾರಿ ದಂಡ ಇಲ್ಲವೇ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಡಿಟೇಲ್ಸ್​ ಇಲ್ಲಿದೆ...
 

ಪೂರ್ತಿ ಓದಿ

04:57 PM (IST) Mar 28

ಯತ್ನಾಳ್ ಉಚ್ಚಾಟನೆ: ನಾವು ಜೊತೆಗಿದ್ದೇವೆ ಎಂಬ ಸಂದೇಶ ಸಾರಿದ ಟೀಂ, ಸಭೆಯ ನಿರ್ಣಯಗಳೇನು?

ಬೆಂಗಳೂರಿನಲ್ಲಿ ನಡೆದ ರಾಜಕೀಯ ಸಭೆಯಲ್ಲಿ ಯತ್ನಾಳ್ ತಂಡವು ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿತು ಮತ್ತು ಪಕ್ಷದ ಹೈಕಮಾಂಡ್‌ನ ಕೆಲವು ನಿರ್ಣಯಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು. ವಿಜಯೇಂದ್ರ ವಿರುದ್ಧ ಹೋರಾಟ ಮುಂದುವರೆಸಲು ಮತ್ತು ಯತ್ನಾಳ್ ಉಚ್ಛಾಟನೆ ಮರುಪರಿಶೀಲನೆಗೆ ಮನವಿ ಮಾಡಲು ನಿರ್ಧರಿಸಲಾಯಿತು.

ಪೂರ್ತಿ ಓದಿ

04:41 PM (IST) Mar 28

ಐವಿಎಫ್ ಸಹಾಯವಿಲ್ಲದೇ 66ನೇ ವಯಸ್ಸಿನಲ್ಲಿ 10ನೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಜರ್ಮನಿಯ ಅಲೆಕ್ಸಾಂಡ್ರಾ ಹಿಲ್ಡೆಬ್ರಾಂಡ್ 66ನೇ ವಯಸ್ಸಿನಲ್ಲಿ 10ನೇ ಮಗುವಿಗೆ ಜನ್ಮ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಪೂರ್ತಿ ಓದಿ

04:27 PM (IST) Mar 28

ಭೂಕಂಪವಾಗುವುದಕ್ಕೂ ಮುಂಚೆ ಸಿಗುವ 10 ಸುಳಿವುಗಳು, ಅರ್ಥ ಮಾಡಿಕೊಂಡರೆ ಜೀವ ಉಳಿಯುತ್ತೆ!

ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನಲ್ಲಿ ಭೂಕಂಪದಿಂದ ಭಾರಿ ಹಾನಿಯಾಗಿದೆ! ಭೂಕಂಪದ ಮುಂಚೆ ಎಚ್ಚರಿಸುವ 10 ವಿಷಯಗಳು ನಿಮಗೆ ಗೊತ್ತಾ? ಸೂಚನೆ ಅರ್ಥ ಮಾಡಿಕೊಂಡರೆ ಜೀವ ಉಳಿಸಬಹುದು.

ಪೂರ್ತಿ ಓದಿ

04:00 PM (IST) Mar 28

ಕೊಡಗಿನಲ್ಲಿ ಬರ್ಬರ ಹತ್ಯೆ, ಒಂದೇ ಕುಟುಂಬದ ನಾಲ್ವರನ್ನು ಕತ್ತಿಯಿಂದ ಕಡಿದು ಕೊಲೆ!

ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ಕತ್ತಿಯಿಂದ ಕೊಚ್ಚಿ ನಾಲ್ವರನ್ನು ಕೊಲೆ ಮಾಡಲಾಗಿದೆ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಗಿರೀಶ್ ಎಂಬಾತ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ.

ಪೂರ್ತಿ ಓದಿ

03:45 PM (IST) Mar 28

ಶಿಂಧೆ ವಿರುದ್ಧ ಅವಹೇಳನ: ಮಹಾರಾಷ್ಟ್ರ ಕೇಸ್‌ಗೆ ಮದ್ರಾಸ್‌ ಹೈಕೋರ್ಟ್‌ಗೆ ಕಮ್ರಾ ಅರ್ಜಿ ಸಲ್ಲಿಸಿದ್ದೇಕೆ?

ಹಾಸ್ಯನಟ ಕುನಾಲ್ ಕಮ್ರಾ, ಏಕನಾಥ್ ಶಿಂಧೆ ವಿರುದ್ಧ ಅವಹೇಳನಕಾರಿ ಹಾಸ್ಯ ಮಾಡಿದ ಕಾರಣಕ್ಕೆ ನಿರೀಕ್ಷಣಾ ಜಾಮೀನು ಕೋರಿ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಮಹಾರಾಷ್ಟ್ರದಲ್ಲಿ ನಡೆದ ಪ್ರಕರಣಕ್ಕೆ ಮದ್ರಾಸ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದೇಕೆ ಕಮ್ರಾ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಪೂರ್ತಿ ಓದಿ

03:32 PM (IST) Mar 28

ಕಿಯಾದಿಂದ ಬಿಡುಗಡೆಯಾಗುತ್ತಿದೆ ಹೊಸ ಪ್ರಿಮಿಯಂ MPV ಕಾರು, ಇನ್ನೋವಾ ಕ್ರೈಸ್ಟಾಗಿಂತ ಕಡಿಮೆ ಬೆಲೆ

ಕಿಯಾ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಎಂಪಿವಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಕ್ಯಾರೆನ್ಸ್ ಆಧಾರಿತ ಈ ಕಾರು ಇನ್ನೋವಾ ಕ್ರೈಸ್ಟಾ ಕಾರಿಗೆ ಪೈಪೋಟಿ ನೀಡಲಿದೆ. ವಿಶೇಷ ಅಂದರೆ ಇದರ ಬೆಲೆ ಕಡಿಮೆ. 
 

ಪೂರ್ತಿ ಓದಿ

03:19 PM (IST) Mar 28

10 ಸೆಕೆಂಡ್‌ಗಳಲ್ಲಿ ವಿನಾಶ! ಮ್ಯಾನ್ಮಾರ್-ಥೈಲ್ಯಾಂಡ್ ಭೂಕಂಪದ ಭಯಾನಕ ವಿಡಿಯೋಗ

ಮ್ಯಾನ್ಮಾರ್-ಥೈಲ್ಯಾಂಡ್ ಭೂಕಂಪದ ವಿಡಿಯೋ: ಮಾರ್ಚ್ 28 ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ಗೆ ಕರಾಳ ದಿನವಾಗಿತ್ತು. 7.7 ತೀವ್ರತೆಯ ಭೂಕಂಪ ಎಲ್ಲವನ್ನೂ ನಾಶ ಮಾಡಿತು. ಭೂಕಂಪದ ಲೈವ್ ವಿಡಿಯೋಗಳು ಇಲ್ಲಿವೆ.

ಪೂರ್ತಿ ಓದಿ

03:17 PM (IST) Mar 28

ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೆ ರೋಹಿತ್ ಶರ್ಮಾ ಗೈರು?

ವರದಿಗಳ ಪ್ರಕಾರ, ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿಯುವ ಸಾಧ್ಯತೆಯಿದೆ. 

ಪೂರ್ತಿ ಓದಿ

02:57 PM (IST) Mar 28

ಹೆಚ್ಚುತ್ತಿರುವ ಕ್ಯಾನ್ಸರ್​ಗೆ ಲಿಪ್​ಸ್ಟಿಕ್ಕೂ ಕಾರಣ! 17.49 ಬಿಲಿಯನ್ ಡಾಲರ್​ ಉದ್ಯಮದ ಶಾಕಿಂಗ್​ ಡಿಟೇಲ್ಸ್​ ಇಲ್ಲಿದೆ...

ಪ್ರತಿದಿನವೂ ಲಿಪ್​ಸ್ಟಿಕ್​ ಹಚ್ಚಿಕೊಳ್ಳುವುದು ಕೆಲವರಿಗೆ ಅನಿವಾರ್ಯ ಆಗಿರುವ ಈ ಸಂದರ್ಭದಲ್ಲಿ, ಇದಕ್ಕೆ ಸಂಬಂಧಿಸಿದ ಶಾಕಿಂಗ್​ ವರದಿ ಬಂದಿದೆ. ಇಲ್ಲಿದೆ ನೋಡಿ ಡಿಟೇಲ್ಸ್​...
 

ಪೂರ್ತಿ ಓದಿ

02:57 PM (IST) Mar 28

AI ಈ 3 ಉದ್ಯೋಗದ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದ ಬಿಲ್ ಗೇಟ್ಸ್! ಯಾವುವು ಈ ಕೆಲಸಗಳು?

ಕೃತಕ ಬುದ್ಧಿಮತ್ತೆ ಅನೇಕ ಉದ್ಯೋಗಗಳನ್ನು ಕಸಿದುಕೊಳ್ಳುತ್ತದೆ ಎಂಬ ವಾದದ ನಡುವೆ, ಬಿಲ್ ಗೇಟ್ಸ್ AIನಿಂದ ಯಾವುದೇ ಪರಿಣಾಮ ಬೀರದ 3 ಉದ್ಯೋಗಗಳ ಬಗ್ಗೆ ಮಾತನಾಡಿದ್ದಾರೆ. ಜಾಗತಿಕ ಮಟ್ಟದಲ್ಲಿ ಈ ಮೂರು ಮಾನವ ಉದ್ಯೋಗದ ಮೇಲೆ AI ಪರಿಣಾಮ ಬೀರುವುದಿಲ್ಲ ಎಂದುಹೇಳಿದ್ದಾರೆ.

ಪೂರ್ತಿ ಓದಿ

02:51 PM (IST) Mar 28

ನಟಿ ದಿಶಾ ಪಟಾನಿ ಡಿನ್ನರ್ ಡೇಟ್ ವಿಡಿಯೋ ಬಹಿರಂಗ, ಜೊತೆಗಿರುವುದು ಯಾರು?

ಬಾಲಿವುಡ್ ನಟಿ ದಿಶಾ ಪಟಾನಿ ಡೇಟಿಂಗ್, ರಿಲೇಶನ್‌ಶಿಪ್ ಕುರಿತು ಹಲವು ಸುದ್ದಿಗಳು ಹರಿದಾಡಿದೆ. ಇದೀಗ ದಿಶಾ ಪಟಾನಿ ಡಿನ್ನರ್ ಡೇಟ್ ವಿಡಿಯೋ ಬಹಿರಂಗವಾಗಿದೆ. ದಿಶಾ ಪಟಾನಿ ಯಾರ ಜೊತೆಗೆ ಡಿನ್ನರ್ ಡೇಟ್‌ನಲ್ಲಿದ್ದಾರೆ? 

ಪೂರ್ತಿ ಓದಿ

01:36 PM (IST) Mar 28

ವೃದ್ಧ ದಂಪತಿ ₹6 ಲಕ್ಷ ಕೊಟ್ಟರೂ ಬೆದರಿಕೆ ನಿಲ್ಲಿಸದ ಸೈಬರ್ ವಂಚಕರು; ಮಾನಕ್ಕೆ ಹೆದರಿ ಪ್ರಾಣವನ್ನೇ ಬಿಟ್ಟರು!

ಬೆಳಗಾವಿಯಲ್ಲಿ ಸೈಬರ್ ವಂಚಕರ ಬೆದರಿಕೆಗೆ ಹೆದರಿ ವೃದ್ಧ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಗ್ನ ಚಿತ್ರಗಳನ್ನು ವೈರಲ್ ಮಾಡುವುದಾಗಿ ಬೆದರಿಸಿ 6 ಲಕ್ಷ ರೂ. ಪಡೆದರೂ ಮತ್ತೆ ಹಣಕ್ಕಾಗಿ ಪೀಡಿಸಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪೂರ್ತಿ ಓದಿ

01:36 PM (IST) Mar 28

ಎಕ್ಸ್ ಗರ್ಲ್‌ಫ್ರೆಂಡ್‌ ಜೊತೆ ಗಂಡನ ಫೋಟೋ: ಎಣ್ಣೆ ಬಿಸಿ ಮಾಡಿ ಗಂಡನ ಖಾಸಗಿ ಭಾಗಕ್ಕೆ ಎರಚಿದ ಪತ್ನಿ

ಕೇರಳದಲ್ಲಿ ಪತ್ನಿಯೊಬ್ಬಳು ಗಂಡನ ಮರ್ಮಾಂಗಕ್ಕೆ ಬಿಸಿ ಎಣ್ಣೆ ಸುರಿದಿದ್ದಾಳೆ. ಗಂಡನ ಮೊಬೈಲ್‌ನಲ್ಲಿ ಮಾಜಿ ಗೆಳತಿಯ ಫೋಟೋ ನೋಡಿದ್ದಕ್ಕೆ ಆಕೆ ಈ ಕೃತ್ಯ ಎಸಗಿದ್ದಾಳೆ. ಗಂಡನ ಸ್ಥಿತಿ ಗಂಭೀರವಾಗಿದೆ.

ಪೂರ್ತಿ ಓದಿ

01:29 PM (IST) Mar 28

ಮ್ಯಾನ್ಮಾರ್‌ನಲ್ಲಿ ಎರಡು ಪ್ರಬಲ ಭೀಕರ ಭೂಕಂಪ: ಸಾವು ನೋವು ಅಪಾರ ನಷ್ಟ!

ಮ್ಯಾನ್ಮಾರ್‌ನಲ್ಲಿ 7.7 ಮತ್ತು 6.4 ತೀವ್ರತೆಯ ಎರಡು ಪ್ರಬಲ ಭೂಕಂಪಗಳು ಸಂಭವಿಸಿದ್ದು, ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲೂ ಕಂಪನದ ಅನುಭವವಾಗಿದೆ. ಬ್ಯಾಂಕಾಕ್‌ನಲ್ಲಿ ನಿರ್ಮಾಣ ಹಂತದ ಕಟ್ಟಡ ಮತ್ತು ಮ್ಯಾನ್ಮಾರ್‌ನಲ್ಲಿ ಸೇತುವೆಯೊಂದು ಕುಸಿದಿದೆ.

ಪೂರ್ತಿ ಓದಿ

01:16 PM (IST) Mar 28

ಯತ್ನಾಳ್ ಉಚ್ಚಾಟನೆಯಿಂದ ಶಾಕ್, ನಮೋ ಆ್ಯಪ್‌ನಲ್ಲಿ ಬಿಜೆಪಿ ಸದಸ್ಯತ್ವ ರದ್ದುಗೊಳಿಸಿದ ಬೆಂಬಲಿಗರು

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹೊಸ ತಲೆನೋವು ಶುರುವಾಗಿದೆ. ಇದೀಗ ಯತ್ನಾಳ್ ಬೆಂಬಲಿಗರು ನಮೋ ಆ್ಯಪ್ ಮೂಲಕ ಮಾಡಿಕೊಂಡಿದ್ದ ಬಿಜೆಪಿ ಪ್ರಾಥಮಿಕ ಸದಸ್ಯತ್ವವನ್ನು ರದ್ದುಗೊಳಿಸಿದ್ದಾರೆ.

ಪೂರ್ತಿ ಓದಿ

12:52 PM (IST) Mar 28

ಶಾಸಕ ಯತ್ನಾಳ್ ಉಚ್ಚಾಟನೆ: 174 ಮಂದಿ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ

ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಬಿಜೆಪಿಯಿಂದ 6 ವರ್ಷ ಉಚ್ಚಾಟನೆ ಮಾಡಿರುವ ಹೈಕಮಾಂಡ್ ನಿಲುವನ್ನು ಖಂಡಿಸಿ ವಿಜಯಪುರ ಜಿಲ್ಲೆಯಲ್ಲಿ ಪಕ್ಷದ 174 ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದಾರೆ. 

ಪೂರ್ತಿ ಓದಿ

12:43 PM (IST) Mar 28

ಜಮ್ಮು ಕಾಶ್ಮೀರದಲ್ಲಿ ಕೇರಳದ ಯೋಧ ಹಾಗೂ ಪತ್ನಿ ಸಾವು

ಜಮ್ಮು ಕಾಶ್ಮೀರದಲ್ಲಿ ಸೈನಿಕನಾಗಿ ಸೇವೆ ಸಲ್ಲಿಸುತ್ತಿದ್ದ ಯೋಧ ಹಾಗೂ ಅವರ ಪತ್ನಿ ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾರೆ. ಈ ದಂಪತಿಗಳ ಸಾವಿಗೆ ಕಾರಣ ತಿಳಿದು ಬಂದಿಲ್ಲ, ತನಿಖೆ ನಡೆಯುತ್ತಿದೆ.

ಪೂರ್ತಿ ಓದಿ

12:34 PM (IST) Mar 28

ಬೆಂಗಳೂರು 2025ರ ಬೆಸ್ಟ್ ಇಡ್ಲಿ, ದೋಸೆ, ಫಿಲ್ಟರ್ ಕಾಫಿ ಪ್ರಶಸ್ತಿ ಪ್ರದಾನ! ಯಾರಿಗೆ ಯಾವ ಅವಾರ್ಡ್ ಸಿಕ್ತು ನೋಡಿ!

ಬೆಂಗಳೂರು ಹೋಟೆಲ್ ಅಸೋಸಿಯೇಷನ್ಸ್ 2025ನೇ ಸಾಲಿನ ಫುಡ್ ಅವಾರ್ಡ್ಸ್‌ನಲ್ಲಿ ಬ್ರಾಹ್ಮಿನ್ಸ್ ಕಾಫಿ ಬಾರ್ ಅತ್ಯುತ್ತಮ ಇಡ್ಲಿ ಪ್ರಶಸ್ತಿ ಪಡೆದುಕೊಂಡಿದೆ.  ಉಳಿದಂತೆ ಬೆಂಗಳೂರಿನ ಬೆಸ್ಟ್ ದೋಸೆ ಹಾಗೂ ಫಿಲ್ಟರ್ ಕಾಫಿ ಸೇರಿದಂತೆ ವಿವಿಧ ಆಹಾರಗಳ ಪ್ರಶಸ್ತಿ ವಿತರಣೆ ಮಾಹಿತಿ ಇಲ್ಲಿದೆ ನೋಡಿ..

ಪೂರ್ತಿ ಓದಿ

12:33 PM (IST) Mar 28

ಎಂಪೂರಾನ್ ಹಿಂದೂಗಳ ವಿರುದ್ಧ ನಡೆಸಿದ ಷಡ್ಯಂತ್ರ ಸಿನಿಮಾ, ಮೋಹನಲಾಲ್, ಪೃಥ್ವಿರಾಜ್ ಟ್ರೋಲ್

ಮೋಹನ್‌ಲಾಲ್ ಪೃಥ್ವಿರಾಜ್ ಅಭಿನಯದ ಎಲ್2 ಎಂಪೂರಾನ್ ಸಿನಿಮಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಿನಿಮಾ ಹಿಂದೂಗಳ ವಿರುದ್ದ ನಡೆಸಿದ ಷಡ್ಯಂತ್ರದ ಪ್ರಚಾರ ಸಿನಿಮಾ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಈ ಸಿನಿಮಾಗೆ ವಿರೋಧ ಯಾಕೆ?

ಪೂರ್ತಿ ಓದಿ

12:26 PM (IST) Mar 28

ಉಚ್ಚಾಟಿತ ಶಾಸಕ ಯತ್ನಾಳ್ ಪರ ಬಿಜೆಪಿಗರ ಅನುಕಂಪ: ಘಟಾನುಘಟಿ ನಾಯಕರು ಹೇಳಿದ್ದೇನು?

ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ ಆರೋಪದಡಿ ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಚಾಟನೆಗೊಂಡಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಪರ ಬಿಜೆಪಿಯ ಕೆಲ ನಾಯಕರು ಅನುಕಂಪದ ಮಾತುಗಳನ್ನಾಡಿದ್ದಾರೆ. 

ಪೂರ್ತಿ ಓದಿ

12:03 PM (IST) Mar 28

ಬೇಸಿಗೆಯಲ್ಲಿ ಜಲಾಶಯ ನಿರ್ವಹಣೆಗೆ ಸಮಿತಿ ರಚನೆ: ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ

ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಅಭಾವ ತಡೆಯಲು ಜಲಾಶಯಗಳ ನಿರ್ವ ಹಣಾ ವ್ಯವಸ್ಥೆ ಬದಲಾವಣೆಗೆ ಸರ್ಕಾರ ಮುಂದಾಗಿದ್ದು, ಈ ಸಂಬಂಧ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯ ಸಮಿತಿ ರಚನೆಗೆ ಸಂಪುಟ ಅನುಮೋದಿಸಿದೆ.

ಪೂರ್ತಿ ಓದಿ

More Trending News