Published : Mar 22, 2025, 07:32 AM ISTUpdated : Mar 22, 2025, 11:37 PM IST

Karnataka News Live 22nd March: ಮೈದಾನಕ್ಕೆ ನುಗ್ಗಿ ಕೊಹ್ಲಿ ಕಾಲಿಗೆ ಬಿದ್ದು ನಮಸ್ಕರಿಸಿದ ಅಭಿಮಾನಿ,ನೋಯಿಸದಂತೆ ಸೂಚನೆ

ಸಾರಾಂಶ

ಬೆಂಗಳೂರು (ಮಾ.11): ಹನಿಟ್ರ್ಯಾಪ್‌, ಮುಸ್ಲಿಂ ಮೀಸಲು ವಿಧಾನಸಭೆಯಲ್ಲಿ ಕೋಲಾಹಲ ಎಬ್ಬಿಸಿದೆ. ಸ್ಪೀಕರ್‌ ಯುಟಿ ಖಾದರ್‌ ಅವರಿದ್ದ ಪೀಠಕ್ಕೆ ನುಗ್ಗಿ ಅವರ ಮುಖದ ಮೇಲೆ ಬಿಜೆಪಿ ಸದಸ್ಯರು ಕಾಗದ ಎಸೆದಿದ್ದಾರೆ. ಇದರ ಬೆನ್ನಲ್ಲಯೇ ಸ್ಪೀಕರ್‌ 18 ಶಾಸಕರನ್ನು 6 ತಿಂಗಳ ಕಾಲ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಸಭಾಧ್ಯಕ್ಷರಿಗೆ ಅಗೌರವ ತೋರಿದ್ದಕ್ಕೆ ಶಿಕ್ಷೆ ನೀಡಲಾಗಿದೆ ಎಂದು ತಿಳಿಸಿದ್ದು, ಮಾರ್ಷಲ್‌ಗಳು 18 ಶಾಸಕರುನ್ನು ಎತ್ತಿ ಹೊರಹಾಕಿದ್ದಾರೆ. ಒಂದೇ ಬಾರಿಗೆ 18 ಶಾಸಕರನ್ನು 6 ತಿಂಗಳ ಕಾಲ ಅಮಾನತು ಮಾಡಿರುವುದು ರಾಜ್ಯದ ಇತಿಹಾಸದಲ್ಲೇ ಇದೇ ಮೊದಲಾಗಿದೆ.
 

Karnataka News Live 22nd March: ಮೈದಾನಕ್ಕೆ ನುಗ್ಗಿ ಕೊಹ್ಲಿ ಕಾಲಿಗೆ ಬಿದ್ದು ನಮಸ್ಕರಿಸಿದ ಅಭಿಮಾನಿ,ನೋಯಿಸದಂತೆ ಸೂಚನೆ

11:37 PM (IST) Mar 22

ಮೈದಾನಕ್ಕೆ ನುಗ್ಗಿ ಕೊಹ್ಲಿ ಕಾಲಿಗೆ ಬಿದ್ದು ನಮಸ್ಕರಿಸಿದ ಅಭಿಮಾನಿ,ನೋಯಿಸದಂತೆ ಸೂಚನೆ

ಕೆಕೆಆರ್ ವಿರುದ್ದ ಚೇಸಿಂಗ್ ಮಾಡುತ್ತಿರುವ ವೇಳೆ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿದ್ದಾನೆ. ನೇರವಾಗಿ ಬಂದು ಕ್ರೀಸ್‌ನಲ್ಲಿದ್ದ ವಿರಾಟ್ ಕೊಹ್ಲಿ ಕಾಲಿಗೆ ಬಿದ್ದು ನಮಸ್ಕರಿಸಿದ್ದಾನೆ. ಈ ಘಟನೆ ವಿಡಿಯೋ ಭಾರಿ ಸದ್ದು ಮಾಡುತ್ತಿದೆ.

ಪೂರ್ತಿ ಓದಿ

10:54 PM (IST) Mar 22

ಭರ್ಜರಿ ಗೆಲುವಿನೊಂದಿಗೆ ಐಪಿಎಲ್ 2025 ಆರಂಭಿಸಿದ ಆರ್‌ಸಿಬಿ, ಈ ಸಲಾ ನಮ್ದೇ ಆಟ, ನಮ್ಗೆ ಕಿರೀಟ

ಕೆಕೆಆರ್ ವಿರುದ್ಧದ ಐಪಿಎಲ್ 2025 ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿ ಗೆಲುವು ದಾಖಲಿಸಿದೆ. ಕಳೆದ ಹಲವು ಆವೃತ್ತಿಗೆ ಹೋಲಿಸಿದರೆ ಈ ಬಾರಿ ಆರ್‌ಸಿಬಿ ಆಟ ಅಭಿಮಾನಿಗಳ ಆತ್ಮವಿಶ್ವಾಸ ಹೆಚ್ಚಿಸಿದೆ. ಹೀಗಾಗಿ ಈ ಸಲಾ ನಮ್ದೆ  ಆಟ, ನಮ್ಗೆ ಕಿರೀಟ.

ಪೂರ್ತಿ ಓದಿ

10:46 PM (IST) Mar 22

ಭದ್ರಾ ನದಿಯಲ್ಲಿ ಸಾಲು ಸಾಲು ಅನಾಹುತ: ನದಿಗೆ ಹಾರಿ ಯುವಕ ಸಾವಿಗೆ ಶರಣು!

ಭದ್ರಾ ನದಿಯಲ್ಲಿ ಸಾಲು ಸಾಲು ಅನಾಹುತಗಳ ಸರಣಿಗೆ ಕಾರಣವಾಗುತ್ತಿದೆ. ಒಂದೇ ವಾರದ ಅಂತರದಲ್ಲಿ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಭದ್ರಾ ನದಿಯಲ್ಲಿ ಇಬ್ಬರು ಯುವಕರು ಸೇರಿ ನಾಲ್ಕು ಮೃತದೇಹ ಪತ್ತೆಯಾಗಿದೆ. 

ಪೂರ್ತಿ ಓದಿ

10:22 PM (IST) Mar 22

ಸುಶಾಂತ್ ಸಿಂಗ್ ರಜಪೂತ್ ಪ್ರಕರಣ, 4 ವರ್ಷ ತನಿಖೆ ಬಳಿಕ ಸಾವಿನ ಕಾರಣ ಬಿಚ್ಚಿಟ್ಟ ಸಿಬಿಐ ವರದಿ

ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣ ಸಮಾಪ್ತಿ ವರದಿಯನ್ನು ಸಿಬಿಐ ಕೋರ್ಟ್‌ಗೆ ಸಲ್ಲಿಸಿದೆ. ಈ ವರದಿಯಲ್ಲಿ ಸುಶಾಂತ್ ಸಾವಿಗೆ ಕಾರಣವನ್ನು ಹೇಳಿದೆ. ಅಷ್ಟಕ್ಕೂ ನಿಗೂಢ ಪ್ರಕರಣ ಕುರಿತು ಸಿಬಿಐ ತನಿಖೆಯಲ್ಲಿ ಪತ್ತೆಯಾಗಿದ್ದೇನು?

ಪೂರ್ತಿ ಓದಿ

10:05 PM (IST) Mar 22

ರಾವಣ ಸಾಯುವ ಮೊದಲು ಹೇಳಿದ್ದು ಈ ಮೂರು ಮಾತುಗಳು.. ಬದುಕಿದ್ದಾಗಲೇ ಅರಿವಾಗಿಬಿಟ್ಟರೆ..!?

ಈ ಮೂರು ನುಡಿ ಮುತ್ತುಗಳನ್ನು ರಾವಣ ತಾನು ಸಾಯುವುದಕ್ಕಿಂತ ಮುಂಚೆ ಹೇಳಿದ್ದಾನೆ ಎನ್ನಲಾಗಿದೆ. ಈ ಮೂರೂ ಮಾತುಗಳಿಗೆ ಸಾಕಷ್ಟು ಉತ್ತಮ ಅರ್ಥವಿದೆ. ಜೊತೆಗೆ, ಸಾಯುವ ಸಮಯದಲ್ಲಿ ಯಾರೂ ಸುಳ್ಳು ಹೇಳುವುದಿಲ್ಲ.. ಇಲ್ಲಿ.. 

ಪೂರ್ತಿ ಓದಿ

09:24 PM (IST) Mar 22

ಆರ್‌ಸಿಬಿಗೆ 175 ರನ್ ಟಾರ್ಗೆಟ್, ಐಪಿಎಲ್ 2015ರ ಮೊದಲ ಗೆಲುವು ಪಕ್ಕಾ?

ಐಪಿಎಲ್ 2025 ಟೂರ್ನಿಯ ಉದ್ಘಟನಾ ಪಂದ್ಯದಲ್ಲಿ ಕೆಕೆಆರ್ 174 ರನ್ ಸಿಡಿಸಿದೆ. ಇದೀಗ ಗೆಲುವಿಗೆ ಆರ್‌ಸಿಬಿ 175 ರನ್ ಚೇಸ್ ಮಾಡಬೇಕಿದೆ. ಇದೀಗ ಈ ಪಂದ್ಯದಲ್ಲಿ ಆರ್‌ಸಿಬಿ ಗೆಲುವು ಪಕ್ಕಾ ಎನ್ನುತ್ತಿದೆ.

ಪೂರ್ತಿ ಓದಿ

08:40 PM (IST) Mar 22

ಅಂಬಾನಿ, ಅದಾನಿ ಅಲ್ಲ, 2025ರ ಬಿಲೇನಿಯರ್ ಪೈಕಿ ಈ 94 ವರ್ಷದ ಉದ್ಯಮಿಗೆ ಮಾತ್ರ ಲಾಭ

2025ರ ಬಿಲೇನಿಯರ್ ಪೈಕಿ ಮುಕೇಶ್ ಅಂಬಾನಿ, ಗೌತಮ್ ಅದಾನಿ ಸೇರಿದಂತೆ ವಿಶ್ವದ ಹಲವು ದಿಗ್ಗಜರ ಸಂಪತ್ತು ಕುಸಿತ ಕಂಡಿದೆ. ಆದರೆ ಈ 94 ವರ್ಷದ ಉದ್ಯಮಿಯ ಸಂಪತ್ತು ಬರೋಬ್ಬರಿ 21.5 ಬಿಲಿಯನ್ ಡಾಲರ್ ಏರಿಕೆ ಕಂಡಿದೆ. 

ಪೂರ್ತಿ ಓದಿ

08:02 PM (IST) Mar 22

ಉದ್ಯೋಗ ಪರೀಕ್ಷೆ ಪೇಪರ್‌ ಲೀಕ್ ಪ್ರಕರಣ: ರಾಜಸ್ಥಾನದಲ್ಲಿ 86 ಸರ್ಕಾರಿ ನೌಕರರ ವಜಾ!

ರಾಜಸ್ಥಾನದಲ್ಲಿ ಪೇಪರ್ ಲೀಕ್ ಪ್ರಕರಣದಲ್ಲಿ ಭಾರಿ ಕ್ರಮ! 86 ಸರ್ಕಾರಿ ನೌಕರರ ವಜಾ, 189 ಜನರ ಮೇಲೆ ತನಿಖೆ ಮುಂದುವರೆದಿದೆ. ಈ ವಂಚನೆ ಹೇಗೆ ಬಯಲಾಯಿತು ಎಂದು ತಿಳಿಯಿರಿ.

ಪೂರ್ತಿ ಓದಿ

07:51 PM (IST) Mar 22

ಯುವಕರು ರಾಜಕಾರಣಕ್ಕೆ ಬರಲಿ: ಸಚಿವ ಸಂತೋಷ್ ಲಾಡ್

ದೇಶ ಮತ್ತು ರಾಜ್ಯದಲ್ಲಿ ಬದಲಾವಣೆಯ ಹೊಸತನದ ಗಾಳಿ ಬೀಸಬೇಕಾದರೆ ಯುವಕರು ರಾಜಕಾರಣಕ್ಕೆ ಬರಬೇಕು ಎಂದು ಸಚಿವ ಸಂತೋಷ್ ಲಾಡ್ ಹೇಳಿದರು. 

ಪೂರ್ತಿ ಓದಿ

07:47 PM (IST) Mar 22

ಮುಂಬೈ ಚೋಕ್ಸಿ ಸಹೋದರರ ಮೇಲೆ ಇಡಿ ದಾಳಿ! ಕೋಟಿಗಟ್ಟಲೆ ಆಸ್ತಿ ಪತ್ತೆ, ಕಪ್ಪು ಹಣದ ಸತ್ಯ ಬಯಲಾಗುತ್ತಾ?

ಇಡಿ ಚೋಕ್ಸಿ ಸಹೋದರರ ವಿರುದ್ಧ ಕಪ್ಪು ಹಣದ ಪ್ರಕರಣದಲ್ಲಿ ದೂರು ದಾಖಲಿಸಿದೆ. ಅವರು ಬ್ರಿಟಿಷ್ ವರ್ಜಿನ್ ದ್ವೀಪಗಳಲ್ಲಿ ಒಂದು ಆಫ್‌ಶೋರ್ ಘಟಕವನ್ನು ಹೊಂದಿದ್ದಾರೆ ಮತ್ತು ಸಿಂಗಾಪುರದಲ್ಲಿ ಬ್ಯಾಂಕ್ ಖಾತೆಯನ್ನು ಹೊಂದಿದ್ದಾರೆ ಎಂಬುದು ಆರೋಪ.

ಪೂರ್ತಿ ಓದಿ

07:43 PM (IST) Mar 22

ಯಶ್ ಒಂದೇ ಒಂದು ಪೋಸ್ಟರ್‌ಗೆ ರಣಬೀರ್ ಕಪೂರ್, ಆಲಿಯಾ, ವಿಕ್ಕಿ ಕೌಶಾಲ್ ಕಂಗಾಲು

ರಾಕಿಂಗ್ ಸ್ಟಾರ್ ಯಶ್ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ ಒಂದು ಪೋಸ್ಟ್‌ಗೆ ಬಾಲಿವುಡ್ ಕಂಗಾಲಾಗಿದೆ. ಘಟಾನುಘಟಿ ಸ್ಟಾರ್ಸ್ ರಣಬೀರ್ ಕಪೂರ್, ಅಲಿಯಾ ಭಟ್, ವಿಕ್ಕಿ ಕೌಶಾಲ್ ಇದೀಗ ಆತಂಕಗೊಂಡಿದ್ದಾರೆ.

ಪೂರ್ತಿ ಓದಿ

07:24 PM (IST) Mar 22

ಪುರಾತನ ದೈವಾರಾಧನೆ 'ಕೋಲ' ಡಾಕ್ಯುಮೆಂಟರಿ ಬಿಡುಗಡೆ; ಮೊದಲ ವಿಭಿನ್ನ ಪ್ರಯತ್ನಕ್ಕೆ ಜೈಕಾರ!

'ಕೋಲ' ಹೆಸರಿನ ಈ ಡಾಕ್ಯುಮೆಂಟರಿ ಬಿಡುಗಡೆ ಬಳಿಕ ಬಹಳಷ್ಟು ಮೆಚ್ಚುಗೆ ಗಳಿಸುತ್ತಿದೆ. ಕಾರಣ, ರಿಷಬ್ ಶೆಟ್ಟಿಯವರ 'ಕಾಂತಾರ'ದ ಮಾದರಿಯಲ್ಲೇ ಇದರಲ್ಲಿ ಕೂಡ ದೈವಾರಾಧನೆ ಬಗ್ಗೆ ಹೇಳಲಾಗಿದೆ. ಜೊತೆಗೆ, ಇದು ಸಿನಿಮಾ..

ಪೂರ್ತಿ ಓದಿ

07:23 PM (IST) Mar 22

IPL 2025ರ ಉದ್ಘಾಟನಾ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ, ಪ್ಲೇಯಿಂಗ್ 11ನಲ್ಲಿ ಯಾರಿದ್ದಾರೆ?

ಐಪಿಎಲ್ 2025 ಟೂರ್ನಿ ಆರಂಭಗೊಂಡಿದೆ. ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. 

ಪೂರ್ತಿ ಓದಿ

07:08 PM (IST) Mar 22

ಆಧುನಿಕ ಭರಾಟೆಯಲ್ಲಿ ಸಂಸ್ಕೃತಿ, ಬಾಂಧವ್ಯ ಕಣ್ಮರೆ: ಕೇಂದ್ರ ಸಚಿವ ಎಚ್‌ಡಿಕೆ ಬೇಸರ

ಆಧುನಿಕ ಭರಾಟೆಯ ನಡುವೆ ನಮ್ಮ ಸಂಸ್ಕೃತಿ, ಸಂಸ್ಕಾರ, ಬಾಂಧವ್ಯ ಕಣ್ಮರೆಯಾಗುತ್ತಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು. 

ಪೂರ್ತಿ ಓದಿ

07:01 PM (IST) Mar 22

ಯಾವುದೇ ಕೃಷಿ ವಿಶ್ವವಿದ್ಯಾಲಯಗಳನ್ನು ಮುಚ್ಚಲ್ಲ: ಸಚಿವ ಚಲುವರಾಯಸ್ವಾಮಿ

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ (ತಿದ್ದುಪಡಿ) ವಿಧೇಯಕಕ್ಕೆ ವಿಧಾನಪರಿಷತ್ತಿನಲ್ಲಿ ಅಂಗೀಕಾರ ದೊರೆಯಿತು. ವಿಧೇಯಕ ಮಂಡಿಸಿ ಮಾತನಾಡಿದ ಕೃಷಿ ಸಚಿವ ಚಲುವರಾಯಸ್ವಾಮಿ, ಮಂಡ್ಯ ಜಿಲ್ಲೆಯಿಂದ ಅನೇಕರು ಸಚಿವರಾಗಿದ್ದಾರೆ. 

ಪೂರ್ತಿ ಓದಿ

06:58 PM (IST) Mar 22

ಅಂತೂ ಇಂತೂ ಮಳೆ ಕಂಡ ಬೆಂಗಳೂರಿಗರು, ವರುಣನ ಆರ್ಭಟಕ್ಕೆ ಅವಾಂತರವೋ ಅವಾಂತರ!

ಬೆಂಗಳೂರಿನ ಹಲವೆಡೆ ವರುಣ ಅಬ್ಬರಿಸಿದ್ದು, ಆಲಿಕಲ್ಲು ಮಳೆಯಾಗಿದೆ. ಯಲಹಂಕದಲ್ಲಿ ರಸ್ತೆಗಳು ಜಲಾವೃತವಾಗಿ, ಸಂಚಾರ ಅಸ್ತವ್ಯಸ್ತಗೊಂಡಿದೆ. ಹಲವೆಡೆ ಮರಗಳು ಧರೆಗುರುಳಿದ್ದು, ಗೋಡೆ ಕುಸಿದಿದೆ.

ಪೂರ್ತಿ ಓದಿ

06:30 PM (IST) Mar 22

ಮಕರ ರಾಶಿಯವರನ್ನು ಬಿಟ್ಟು ಹೋಗುವ ಸಾಡೇಸಾತಿ: ಯಾವ ರಾಶಿಗೆ ಕಾದಿದೆ ಗ್ರಹಚಾರ? ಯಾರು ನಿರಾಳ?

ಇದೇ ಮಾರ್ಚ್​ 29ರಂದು ಶನಿ ಗ್ರಹವು ತನ್ನ ದಾರಿಯನ್ನು ಬದಲಿಸಿದ್ದಾನೆ. ಯಾರಿಗೆ ಸಾಡೇಸಾತಿ ಆರಂಭವಾಗಲಿದೆ? ಯಾರು ನಿರಾಳರಾಗಲಿದ್ದಾರೆ? ಯಾರಿಗೆ ಕಾದಿದೆ ಗ್ರಹಚಾರ? ಇಲ್ಲಿದೆ ಡಿಟೇಲ್ಸ್​
 

ಪೂರ್ತಿ ಓದಿ

05:48 PM (IST) Mar 22

ಈ ಎರಡು IPL ತಂಡಗಳು ಭಾರತ-ಪಾಕಿಸ್ತಾನ ಇದ್ದಂಗೆ ಎಂದ ಹರ್ಭಜನ್ ಸಿಂಗ್!

2025ರ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿದ್ದು, ಪಂದ್ಯಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಹರ್ಭಜನ್ ಸಿಂಗ್ ಈ ಎರಡು ತಂಡಗಳನ್ನು ಭಾರತ-ಪಾಕಿಸ್ತಾನ ತಂಡಗಳಿಗೆ ಹೋಲಿಸಿದ್ದಾರೆ.

ಪೂರ್ತಿ ಓದಿ

05:43 PM (IST) Mar 22

ಈ ವರ್ಷ ತೆರೆಗೆ ಬರಲ್ಲ ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾ; ಮತ್ತೆ ಯಾವಾಗ?

ಕನ್ನಡದ ರಾಕಿಂಗ್ ಸ್ಟಾರ್ ಯಶ್ ಫ್ಯಾನ್ಸ್​​ಗೆ ಬೇಸರದ ಸುದ್ದಿ ಇದೆ. ಈ ವರ್ಷ ತೆರೆಗೆ ಬರಲ್ಲ ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾ..! ಟಾಕ್ಸಿಕ್ ನೋಡಲು ಇನ್ನೂ ಒಂದು ವರ್ಷ..

ಪೂರ್ತಿ ಓದಿ

05:42 PM (IST) Mar 22

Yash Toxic Movie Release Date: ಬಹುನಿರೀಕ್ಷಿತ ʼಟಾಕ್ಸಿಕ್ʼ‌ ಸಿನಿಮಾ ರಿಲೀಸ್‌ ಡೇಟ್‌ ಘೋಷಿಸಿದ ನಟ ಯಶ್!‌

ನಟ ಯಶ್‌ ಅವರು ʼಟಾಕ್ಸಿಕ್ʼ‌ ಸಿನಿಮಾದ ರಿಲೀಸ್‌ ದಿನಾಂಕವನ್ನು ಸೋಶಿಯಲ್‌ ಮೀಡಿಯಾದಲ್ಲಿ ಘೋಷಣೆ ಮಾಡಿದ್ದಾರೆ.

ಪೂರ್ತಿ ಓದಿ

05:38 PM (IST) Mar 22

ಮೃತ ವ್ಯಕ್ತಿ ಆಹಾರ ಸೇವನೆ ಮಾಡೋದು ನಿಜನಾ? ಈ ಪ್ರಯೋಗ ಮಾಡಿ ನೋಡಿ ಎಂದ ಘೋಸ್ಟ್​ ಹಂಟರ್​ ಇಮ್ರಾನ್​

 ಮೃತಪಟ್ಟ ಬಳಿಕ 12, 14... ಹೀಗೆ ಕೆಲ ದಿನಗಳ ಬಳಿಕ ಅವರ ಇಷ್ಟದ ಆಹಾರಗಳನ್ನು ಇಡುವ ಸಂಪ್ರದಾಯವಿದೆ. ಆಗ ಏನಾಗುತ್ತೆ? ಆಹಾರ ಸೇವನೆ ಮಾಡ್ತಾರಾ ಎನ್ನುವ ಪ್ರಶ್ನೆಗೆ ಪ್ರಯೋಗವೊಂದನ್ನು ಮಾಡಿನೋಡುವಂತೆ ಹೇಳಿದ್ದಾರೆ ಖ್ಯಾತ ಘೋಸ್ಟ್​ ಹಂಟರ್​ ಇಮ್ರಾನ್​.
 

ಪೂರ್ತಿ ಓದಿ

05:28 PM (IST) Mar 22

ಬಾಂಗ್ಲಾದೇಶದಿಂದ ಕಾಪಿ ಮಾಡುವಷ್ಟು ಬಡವಾಯ್ತಾ ಬಾಲಿವುಡ್? ಸಿಕಂದರ್ ಹಾಡಿಗೆ ಭಾರಿ ಟೀಕೆ

ಹಾಲಿವುಡ್‌ನಿಂದ ಕಾಪಿ ಹೊಡೆದ್ರೂ ಪರ್ವಾಗಿಲ್ಲ, ಆದರೆ ಬಾಂಗ್ಲಾದೇಶದಿಂದ ಕಾಪಿ ಮಾಡುವಷ್ಟು ಬಡವಾಯ್ತಾ ಬಾಲಿವುಡ್? ಈ ಪ್ರಶ್ನೆಯನ್ನು ಅಭಿಮಾನಿಗಳು ಕೇಳುತ್ತಿದ್ದರೆ. ಕಾರಣ ಸಲ್ಮಾನ್ ಖಾನ್ ರಶ್ಮಿಕಾ ಮಂದಣ್ಣ ಅಭಿನಯದ ಸಿಕಂದರ್ ಚಿತ್ರದ ಈ ಹಾಡು.
 

ಪೂರ್ತಿ ಓದಿ

05:06 PM (IST) Mar 22

ಪ್ರತ್ಯರ್ಥ ಚಿತ್ರ ವಿಮರ್ಶೆ: ಹೊಸ ಹುಡುಗರ ಕುತೂಹಲಕರ ಸಸ್ಪೆನ್ಸ್ ಥಿಲ್ಲ‌ರ್‌ ಪ್ರೇಮಕತೆ

ಪ್ರೇಮಕತೆಯಲ್ಲಿ ಒಂದು ಮಹಾ ತಿರುವು ಎದುರಾಗುತ್ತದೆ. ಪೊಲೀಸ್ ಅಧಿಕಾರಿಯೊಬ್ಬರು ತನಿಖೆ ಶುರು ಮಾಡುತ್ತಾರೆ. ಆ ತನಿಖೆಯಲ್ಲಿ ಅಚ್ಚರಿದಾಯಕ ಅಂಶಗಳೆಲ್ಲಾ ಎದುರಾಗುತ್ತಾ ಹೋಗುತ್ತವೆ.  ಇಲ್ಲಿ ಪ್ರೇಮದ ನವಿರುತನವಿದೆ. 

ಪೂರ್ತಿ ಓದಿ

04:46 PM (IST) Mar 22

Narayana Narayana Film Review: ದುರಾಸೆಯ, ಅತಿಯಾಸೆಯ ಕಥನ. ಇದ್ದಕ್ಕಿದ್ದಂತೆ ಶ್ರೀಕೃಷ್ಣ ಪರಮಾತ್ಮ ಪ್ರತ್ಯಕ್ಷ

ಈ ಕತೆ ಆರಂಭವಾಗುವುದು ಹಳ್ಳಿಯ ನಾಲ್ವರು ಗೆಳೆಯರಿಂದ. ಅವರ ಪೋಕರಿತನ, ಪ್ರೇಮ ಪ್ರಸಂಗಗಳು, ಒದ್ದಾಟಗಳು, ಹಾರಾಟಗಳು, ಒಟ್ಟಾರೆ ಹಗುರ ಸನ್ನಿವೇಶಗಳು ಕತೆಯನ್ನು ಮಧ್ಯಂತರಕ್ಕೆ ತಲುಪಿಸುತ್ತವೆ.

ಪೂರ್ತಿ ಓದಿ

04:43 PM (IST) Mar 22

ಆ ನಿರ್ದೇಶಕ ನನ್ನ...ಸೆಟ್‌ನಲ್ಲಿ ನಡೆದ ಘಟನೆ ಬಿಚ್ಚಿಟ್ಟ ಹಾಟ್ ನಟಿ ಅವನೀತ್

ಬಂಟಿ ನಿನ್ನ ಸಾಬೂನ್ ಸ್ಲೋನಾ ಎಂದು ಜಾಹೀರಾತು ಮೂಲಕ ಎಲ್ಲರ ಮನೆಗಿದ್ದ ಹುಡುಗಿ ಇದೀಗ ಹಾಟ್ ಬ್ಯೂಟಿಯಾಗಿ ಹಲವು ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ನಟಿ ಅವನೀತ್ ಇದೀಗ ಸೆಟ್‌ನಲ್ಲಿ ನಡೆದ ಘಟನೆಯೊಂದನ್ನು ಬಿಚ್ಚಿಟ್ಟಿದ್ದಾರೆ.

ಪೂರ್ತಿ ಓದಿ

03:51 PM (IST) Mar 22

ಬೇಸಿಗೆಯಲ್ಲಿ ಒಂದು ತಿಂಗಳು ಜೀರಿಗೆ ನೀರು ಕುಡಿದು ನೋಡಿ, ಪ್ರಯೋಜನಗಳು ಬೆಟ್ಟದಷ್ಟು!

ಈ ಜೀರಿಗೆಯನ್ನು ಕುದಿಸಿ ನೀರನ್ನು ಮುಖ್ಯವಾಗಿ ಈ ಬೇಸಿಗೆಯಲ್ಲಿ ಒಂದು ತಿಂಗಳು ತೆಗೆದುಕೊಂಡರೆ.. ಯಾವ ಪ್ರಯೋಜನಗಳು ಸಿಗುತ್ತವೆ ಎಂದು ಈಗ ತಿಳಿಯೋಣ..

ಪೂರ್ತಿ ಓದಿ

03:29 PM (IST) Mar 22

ಆರ್‌ಸಿಬಿ, ಸಿಎಸ್‌ಕೆ ಕೈಬಿಟ್ಟ ಸೆಹ್ವಾಗ್; ಇದೇ ನಾಲ್ಕು ತಂಡಗಳು ಪ್ಲೇ ಆಫ್‌ಗೇರಲಿವೆ ಎಂದ ವೀರೂ!

ಐಪಿಎಲ್ 2025ರ ಪ್ಲೇ ಆಫ್ ಪ್ರವೇಶಿಸುವ ತಂಡಗಳ ಬಗ್ಗೆ ಕ್ರಿಕೆಟ್ ಪಂಡಿತರು ಭವಿಷ್ಯ ನುಡಿದಿದ್ದಾರೆ. ವಿರೇಂದ್ರ ಸೆಹ್ವಾಗ್ ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸುವುದಿಲ್ಲ ಎಂದಿದ್ದಾರೆ, ಆದರೆ ಹರ್ಷಾ ಭೋಗ್ಲೆ ಆರ್‌ಸಿಬಿ ಪ್ರವೇಶಿಸಲಿದೆ ಎಂದು ಹೇಳಿದ್ದಾರೆ.

ಪೂರ್ತಿ ಓದಿ

03:26 PM (IST) Mar 22

ಭಾರತೀಯ ರೈಲ್ವೆಯಲ್ಲಿ LHB ಕೋಚ್‌-ICF ಕೋಚ್‌ ಎಂದರೇನು? ಆಕ್ಸಿಡೆಂಟ್‌ ಆದಾಗ ಹೆಚ್ಚಿನ ರಕ್ಷಣೆ ಸಿಗುವುದೆಲ್ಲಿ?

ಭಾರತೀಯ ರೈಲ್ವೆಯಲ್ಲಿ LHB ಮತ್ತು ICF ಕೋಚ್‌ಗಳು ಬಳಕೆಯಲ್ಲಿದ್ದು, ಇವೆರಡರ ನಡುವೆ ಹಲವು ವ್ಯತ್ಯಾಸಗಳಿವೆ. LHB ಕೋಚ್‌ಗಳು ಸುರಕ್ಷತೆ, ವೇಗ ಹಾಗೂ ಪ್ರಯಾಣಿಕರ ಸೌಕರ್ಯಕ್ಕೆ ಹೆಚ್ಚು ಹೆಸರುವಾಸಿಯಾಗಿದ್ದು, ICF ಕೋಚ್‌ಗಳು ಹಳೆಯ ತಂತ್ರಜ್ಞಾನವನ್ನು ಹೊಂದಿವೆ.

ಪೂರ್ತಿ ಓದಿ

03:06 PM (IST) Mar 22

ಕೆಬಿಸಿ ಮೂಲಕ ನಿಜಕ್ಕೂ ಕರೋಡ್‌ಪತಿಯಾಗಿದ್ದು ಅಮಿತಾಬ್ ಬಚ್ಚನ್, 150 ಎಪಿಸೋಡ್‌ನಿಂದ ಗಳಿಸಿದ್ದೆಷ್ಟು?

ಕೌನ ಬನೇಗಾ ಕರೋಡ್‌ಪತಿ? ಈ ರಿಯಾಲಿಟಿ ಶೋ ಮೂಲಕ ಸ್ಪರ್ಧಿಗಳು ಯಾರೆಲ್ಲಾ ಕೋಟ್ಯಾಧೀಶರಾಗಿದ್ದಾರೋ ಇಲ್ವೋ ಗೊತ್ತಿಲ್ಲ. ಆದರೆ ಹೋಸ್ಟ್ ಅಮಿತಾಬ್ ಬಚ್ಚನ್ ನಿಜಕ್ಕೂ ಕರೋಡ್‌ಪತಿಯಾಗಿದ್ದಾರೆ. ಕಾರಣ ಇತ್ತೀಚೆಗೆ ಮುಕ್ತಾಯಗೊಂಡ ಕೆಬಿಸಿ16ನೇ ಒಂದೇ ಆವತ್ತಿ ಮೂಲಕ ಅಮಿತಾಬ್ ಗಳಿಸಿದ್ದೆಷ್ಟು ಕೋಟಿ ಗೊತ್ತಾ?

ಪೂರ್ತಿ ಓದಿ

02:39 PM (IST) Mar 22

ಬಾಯಿಗೆ ಬಂದಂತೆ ಮಾತು... ಐಪಿಎಲ್‌ 2025 ಕಾಮೆಂಟರಿ ಟೀಮ್‌ನಿಂದ ಇರ್ಫಾನ್‌ ಪಠಾಣ್‌ ಕಿಕ್‌ಔಟ್!

ಐಪಿಎಲ್ 2025ರ ಕಾಮೆಂಟರಿ ತಂಡದಿಂದ ಇರ್ಫಾನ್ ಪಠಾಣ್ ಅವರನ್ನು ಕೈಬಿಡಲಾಗಿದೆ. ಕೆಲವು ಆಟಗಾರರ ಬಗ್ಗೆ ವೈಯಕ್ತಿಕವಾಗಿ ಕಾಮೆಂಟ್ ಮಾಡಿದ್ದಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ. ಇದೀಗ ಇರ್ಫಾನ್ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ.

ಪೂರ್ತಿ ಓದಿ

01:19 PM (IST) Mar 22

'ರಾಜಣ್ಣ ಅಂಥವರಲ್ಲ, ಹಲೋ ಅಂದ್ರೆ ವಾಟ್ ಅಂತಾರೆ..', ಡಿಕೆಶಿ ಹನಿಟ್ರ್ಯಾಪ್ ಹೇಳಿಕೆಗೆ ಎಂಬಿ ಪಾಟೀಲ್ ತಿರುಗೇಟು!

ಸಚಿವ ಎಂಬಿ ಪಾಟೀಲ್ ಅವರು ಹನಿಟ್ರ್ಯಾಪ್ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ರಾಜಣ್ಣ ಅವರು ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಹನಿಟ್ರ್ಯಾಪ್ ಒಂದು ಕೆಟ್ಟ ಚಾಳಿ ಎಂದು ಅವರು ಹೇಳಿದ್ದಾರೆ.

ಪೂರ್ತಿ ಓದಿ

01:09 PM (IST) Mar 22

ಈಗ ಖರೀದಿಸಿ, ಇಲ್ಲದಿದ್ದರೆ ಪಶ್ಚಾತ್ತಾಪ ಪಡ್ತೀರಿ! ಈ 10 ಷೇರುಗಳು ಭರ್ಜರಿ ರಿಟರ್ನ್ ನೀಡೋದು ಗ್ಯಾರಂಟಿ!

 ಷೇರು ಮಾರುಕಟ್ಟೆಯಲ್ಲಿ ಮತ್ತೆ ಚೇತರಿಕೆ ಕಾಣುತ್ತಿದೆ. ವಿದೇಶಿ ಹೂಡಿಕೆ ಹೆಚ್ಚಳದಿಂದ ಹೂಡಿಕೆಗೂ ಅವಕಾಶ ಸಿಗುತ್ತಿದೆ. ಈ ಚೇತರಿಕೆಯ ವಾತಾವರಣದಲ್ಲಿ, ಬ್ರೋಕರೇಜ್ ಹೌಸ್‌ಗಳು ದೀರ್ಘಾವಧಿಯಲ್ಲಿ ಉತ್ತಮ ಆದಾಯವನ್ನು ನೀಡಬಲ್ಲ 10 ಫಂಡಮೆಂಟಲ್‌ ಸ್ಟ್ರಾಂಗ್‌ ಆಗಿರುವ ಷೇರುಗಳನ್ನು ಹೆಸರಿಸಿದ್ದಾರೆ.

ಪೂರ್ತಿ ಓದಿ

12:59 PM (IST) Mar 22

ಕಾರ್‌ ದೈತ್ಯ ಟೋಯೋಟಾ ಬಿಗ್‌ ಪ್ಲ್ಯಾನ್‌, ದೇಶದ ಮೊಟ್ಟಮೊದಲ R&D ಕೇಂದ್ರ ಬೆಂಗಳೂರಿನಲ್ಲಿ ಸ್ಥಾಪನೆ!

ಟೊಯೋಟಾ ಮೋಟಾರ್ ಕಾರ್ಪೋರೇಷನ್ ಭಾರತದಲ್ಲಿ ತನ್ನ ಮೊದಲ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಬೆಂಗಳೂರಿನಲ್ಲಿ ಸ್ಥಾಪಿಸುತ್ತಿದೆ. ಇದು ಭಾರತದಲ್ಲಿ ಟೊಯೋಟಾದ ಮೊದಲ ಆರ್‌ & ಡಿ ಘಟಕವಾಗಿದ್ದು, 2027ರ ವೇಳೆಗೆ ಇಂಜಿನಿಯರ್‌ಗಳ ಸಂಖ್ಯೆಯನ್ನು 1 ಸಾವಿರಕ್ಕೆ ಏರಿಕೆ ಮಾಡುವ ಗುರಿಯನ್ನು ಹೊಂದಿದೆ.

ಪೂರ್ತಿ ಓದಿ

12:54 PM (IST) Mar 22

FIR ಗೆ ಮೊದಲು ದಾಖಲೆ ಸಂಗ್ರಹಿಸೋದು ತಪ್ಪು: ಹೈಕೋರ್ಟ್ ಮಹತ್ವದ ತೀರ್ಪು!

ಲೋಕಾಯುಕ್ತ ಪೊಲೀಸರು ಎಫ್‌ಐಆರ್‌ ದಾಖಲಿಸುವ ಮುನ್ನ ದಾಖಲೆ ಸಂಗ್ರಹಿಸುವುದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಉಲ್ಲಂಘನೆ ಎಂದು ಹೈಕೋರ್ಟ್ ಹೇಳಿದೆ. ಪೂರ್ವಾನುಮತಿ ಪಡೆಯದೆ ತನಿಖೆ ನಡೆಸುವಂತಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ಪೂರ್ತಿ ಓದಿ

12:23 PM (IST) Mar 22

ಸಿಎಂ ಪರ ಮಾತಾಡಿದ್ರೆ ಕೆಲವರಿಗೆ ಹೊಟ್ಟೆ ಕಿಚ್ಚು, 'ಹನಿಟ್ರ್ಯಾಪ್' ಕುರಿತು ಹೆಚ್‌ಸಿ ಮಹದೇವಪ್ಪ ಸ್ಫೋಟಕ ಹೇಳಿಕೆ!

ಸಚಿವ ರಾಜಣ್ಣ ಹನಿಟ್ರ್ಯಾಪ್ ಕುರಿತು ಮಾತನಾಡಿದ ಮಹದೇವಪ್ಪ, ಹನಿಟ್ರ್ಯಾಪ್ ಮಾಡುವವರಿಗೆ ಸಿಎಂ ಪರ ವಿರುದ್ಧ ಎಂಬುದು ಇರೋಲ್ಲ. ಸಿದ್ದರಾಮಯ್ಯ ಅವರೇ ಮುಂದಿನ ಮೂರು ಬಜೆಟ್ ಮಂಡಿಸುತ್ತಾರೆ ಎಂದರು. ಹನಿ ಟ್ರ್ಯಾಪ್ ಮಾಡೋರಿಗೆ ಕಠಿಣ ಶಿಕ್ಷೆಯಾಗುವ ಕಾನೂನು ಜಾರಿಗೆ ಬರಬೇಕು ಎಂದು ಒತ್ತಾಯಿಸಿದರು.

ಪೂರ್ತಿ ಓದಿ

12:20 PM (IST) Mar 22

ಐಪಿಎಲ್ ಆರಂಭಕ್ಕೂ ಮುನ್ನವೇ ಡೆಲ್ಲಿ ಕ್ಯಾಪಿಟಲ್ಸ್‌ಗೆ ಡಬಲ್ ಶಾಕ್!

ಕೆ.ಎಲ್.ರಾಹುಲ್ ಐಪಿಎಲ್‌ನ ಆರಂಭಿಕ ಪಂದ್ಯಗಳಿಗೆ ಗೈರಾಗುವ ಸಾಧ್ಯತೆ ಇದ್ದು, ಲಖನೌ ತಂಡಕ್ಕೆ ಶಾರ್ದೂಲ್ ಠಾಕೂರ್ ಸೇರ್ಪಡೆಯಾಗುವ ಸಾಧ್ಯತೆ ಇದೆ. ರಾಜಸ್ಥಾನ ರಾಯಲ್ಸ್‌ನ ಆರಂಭಿಕ 3 ಪಂದ್ಯಗಳಿಗೆ ಸಂಜು ಸ್ಯಾಮ್ಸನ್‌ ಬದಲು ರಿಯಾನ್‌ ಪರಾಗ್‌ ನಾಯಕತ್ವ ವಹಿಸಲಿದ್ದಾರೆ.

ಪೂರ್ತಿ ಓದಿ

12:07 PM (IST) Mar 22

ರಾಜ್ಯದಲ್ಲಿ ಸರ್ಕಾರದಿಂದಲೇ ಸ್ಮಾರ್ಟ್‌ ದಂಧೆ, 'ಮೀಟರ್‌' ಹೆಸರಲ್ಲಿ ಜನರಿಂದ ಹಣ ಲೂಟಿ ಮಾಡ್ತಿರೋದು ಹೇಗೆ?

ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆಯಲ್ಲಿ 15,568 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಬಿಜೆಪಿ ಆರೋಪಿಸಿದೆ. ಕೆಟಿಟಿಪಿ ನಿಯಮ ಉಲ್ಲಂಘಿಸಿ ರಾಜಶ್ರೀ ಎಲೆಕ್ಟ್ರಿಕಲ್ಸ್‌ಗೆ ಲಾಭ ಮಾಡಿಕೊಡಲಾಗಿದೆ ಎಂದು ದೂರಲಾಗಿದೆ.

ಪೂರ್ತಿ ಓದಿ

11:51 AM (IST) Mar 22

ಕರ್ನಾಟಕ ಬಂದ್: ಯಾವುದೇ ಅಹಿತರಕರ ಘಟನೆ ಆಗೋಕೆ ನಾವು ಬಿಡೋಲ್ಲ: ಗೃಹ ಸಚಿವ

ವಾಟಾಳ್ ನಾಗರಾಜ್ ಕರೆ ನೀಡಿದ್ದ ಕರ್ನಾಟಕ ಬಂದ್ ಹಿನ್ನೆಲೆ ಗೃಹ ಸಚಿವ ಪರಮೇಶ್ವರ್ ಅವರು ಅಗತ್ಯ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದ್ದು, ಬಂದ್ ದೊಡ್ಡ ಪ್ರಮಾಣದಲ್ಲಿ ಇಲ್ಲ ಎಂದು ಹೇಳಿದ್ದಾರೆ.

ಪೂರ್ತಿ ಓದಿ

11:24 AM (IST) Mar 22

ಸಿಎಂ, ಶಾಸಕರಿಗೆ ಗರಿಷ್ಠ ವೇತನ ಹೊಂದಿರುವ ದೇಶದ ಐದು ರಾಜ್ಯಗಳು, ಕರ್ನಾಟಕಕ್ಕೆ ಎಷ್ಟನೇ ಸ್ಥಾನ?

ಕರ್ನಾಟಕದ ಶಾಸಕರ ವೇತನವನ್ನು ಶೇ. 100ರಷ್ಟು ಹೆಚ್ಚಿಸಲಾಗಿದೆ. ಇತರ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಶಾಸಕರು ಎಷ್ಟು ವೇತನ ಪಡೆಯುತ್ತಾರೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ತೆಲಂಗಾಣದಲ್ಲಿ ಅತಿ ಹೆಚ್ಚು ವೇತನ ನೀಡಲಾಗುತ್ತಿದೆ.

ಪೂರ್ತಿ ಓದಿ

11:22 AM (IST) Mar 22

ಕರ್ನಾಟಕ ಬಂದ್: ಎಂದಿನಂತೆ ಸರ್ಕಾರಿ ಸೇವೆ, ಮಧ್ಯಾಹ್ನವಾದ್ರೂ ಚಿತ್ರಮಂದಿರದತ್ತ ಸುಳಿಯದ ಜನ!

ಮರಾಠಿಗರ ಕನ್ನಡ ವಿರೋಧಿ ನೀತಿ ಖಂಡಿಸಿ ವಾಟಾಳ್ ನಾಗರಾಜ್ ಕರೆ ನೀಡಿದ ಕರ್ನಾಟಕ ಬಂದ್ ಇಂದು. ಸರ್ಕಾರಿ ಕಚೇರಿಗಳು ತೆರೆದಿದ್ದರೂ, ಚಿತ್ರಮಂದಿರಗಳು ಬೆಂಬಲ ಸೂಚಿಸಿವೆ. ಅಗತ್ಯ ಸೇವೆಗಳು ಲಭ್ಯವಿರುತ್ತವೆ.

ಪೂರ್ತಿ ಓದಿ

More Trending News