Published : Apr 01, 2025, 07:26 AM ISTUpdated : Apr 01, 2025, 11:43 PM IST

Karnataka News Live 1st April 2025 : ನಿತ್ಯಾನಂದನ ನಿಧನ ಸುದ್ದಿ ಅಲ್ಲಗೆಳೆದ ಕೈಲಾಸ, ಸ್ಪಷ್ಟನೆ ಬೆನ್ನಲ್ಲೇ ಹೆಚ್ಚಿದ ಅನುಮಾನ

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏ.2ರಂದು ಹೈಕಮಾಂಡ್ ಭೇಟಿಗಾಗಿ ದೆಹಲಿಗೆ ತೆರಳಲು ಅನುವಾಗುತ್ತಿದ್ದಂತೆಯೇ ಕಾಂಗ್ರೆಸ್‌ನಲ್ಲಿ ವಿಧಾನಪರಿಷತ್ ಸ್ಥಾನಾಕಾಂಕ್ಷಿಗಳ ಲಾಬಿ ಮೇರೆ ಮೀರಿದೆ. ಲಭ್ಯವಿರುವ ನಾಲ್ಕು ಸ್ಥಾನಗಳಿಗೆ 40ಕ್ಕೂ ಹೆಚ್ಚು ಮಂದಿ ಪೈಪೋಟಿ ನಡೆಸಿದ್ದಾರೆ. ವಿವಿಧ ಕ್ಷೇತ್ರದ ಸಾಧಕರನ್ನು ವಿಧಾನಪರಿಷತ್ತಿಗೆ ನಾಮಕರಣ ಮಾಡಲು ನಾಲ್ಕು ಸ್ಥಾನ ಲಭ್ಯವಿದೆ. ಸಿ.ಪಿ.ಯೋಗಶ್ವರ್ (ಒಕ್ಕಲಿಗ), ಪ್ರಕಾಶ್ ರಾಠೋಡ್ (ಎಸ್‌ಸಿ), ಕೆ.ಎಂ.ತಿಪ್ಪೇಸ್ವಾಮಿ (ಹಿಂದುಳಿದ) ಹಾಗೂ ಯು.ಬಿ. ವೆಂಕಟೇಶ್ (ಬ್ರಾಹ್ಮಣ) ಅವರ ಅವಧಿ ಪೂರ್ಣಗೊಂಡ ಕಾರಣಕ್ಕೆ ತೆರವಾಗಿರುವ ಸ್ಥಾನಗಳಿವು. ಕಾಂಗ್ರೆಸ್ ನಾಯಕತ್ವ ಈ ಸ್ನಾನಗಳನ್ನು ಬಹುತೇಕ ಯಾವ ಸಮುದಾಯದಿಂದ ತೆರವಾಗಿದೆಯೋ ಅದೇ ಸಮುದಾಯಕ್ಕೆ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ. ಇದರಿಂದಾಗಿ ಒಕ್ಕಲಿಗ, ಎಸ್‌ಸಿ (ಬಲಗೈ), ಹಿಂದುಳಿದ ವರ್ಗ ಹಾಗೂ ಬ್ರಾಹ್ಮಣಸಮುದಾಯಕ್ಕೆ ಈ ಸ್ಥಾನ ಲಭ್ಯವಾಗಬೇಕು. ಆದರೆ, ಬ್ರಾಹ್ಮಣ ಸಮುದಾಯದ ಬದಲಾಗಿ ಅಲ್ಪಸಂಖ್ಯಾತ ಸಮುದಾಯ ವಿಶೇಷವಾಗಿ, ಕ್ರಿಶ್ಚಿಯನ್ ಸಮುದಾಯಕ್ಕೆ ಆ ಸ್ಥಾನ ನೀಡಬಹುದೇ ಎಂಬ ಚಿಂತನೆಯೂ ಇದೆ ಎನ್ನಲಾಗಿದೆ. 

Karnataka News Live 1st April 2025 : ನಿತ್ಯಾನಂದನ ನಿಧನ ಸುದ್ದಿ ಅಲ್ಲಗೆಳೆದ ಕೈಲಾಸ, ಸ್ಪಷ್ಟನೆ ಬೆನ್ನಲ್ಲೇ ಹೆಚ್ಚಿದ ಅನುಮಾನ

11:43 PM (IST) Apr 01

ನಿತ್ಯಾನಂದನ ನಿಧನ ಸುದ್ದಿ ಅಲ್ಲಗೆಳೆದ ಕೈಲಾಸ, ಸ್ಪಷ್ಟನೆ ಬೆನ್ನಲ್ಲೇ ಹೆಚ್ಚಿದ ಅನುಮಾನ

ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ನಿಧನ ಅನ್ನೋ ಸುದ್ದಿ ಎಲ್ಲೆಡೆ ಹರಿಡಾದ ಬೆನ್ನಲ್ಲೇ ಇದೀಗ ಕೈಲಾಸ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸ್ಪಷ್ಟನೆ ನೀಡಿದೆ. ನಿತ್ಯಾನಂದ ಸಕ್ರಿಯವಾಗಿದ್ದಾರೆ, ಆರೋಗ್ಯವಾಗಿದ್ದಾರೆ. ಆದರೆ ಈ ರೀತಿ ಅವಮಾನಿಸವು ಕೆಲಸವನ್ನು ಸಹಿಸಲ್ಲ ಎಂದು ಎಚ್ಚರಿಕೆ ನೀಡಿದೆ. ಆದರೆ ಈ ಸ್ಪಷ್ಟನೆ ಇದೀಗ ಮತ್ತಷ್ಟು ಅನುಮಾನ ಹೆಚ್ಚಿಸಿದೆ. 
 

ಪೂರ್ತಿ ಓದಿ

11:42 PM (IST) Apr 01

Lakshmi Nivasa Serial: ಸಮುದ್ರಕ್ಕೆ ಹಾರಿದ ಜಾನು ಪಾತ್ರ ಮುಗೀತಾ? ಪಾತ್ರಧಾರಿ ಬದಲಾಗ್ತಿದ್ದಾರಾ?

Lakshmi Nivasa Serial Episode: ʼಲಕ್ಷ್ಮೀ ನಿವಾಸʼ ಧಾರಾವಾಹಿಯಲ್ಲಿ ಜಾಹ್ನವಿ ಸಮುದ್ರಕ್ಕೆ ಹಾರಿದ್ದಾಳೆ. ಹಾಗಾದರೆ ಈ ಪಾತ್ರದ ಕಥೆ ಏನು? ಪಾತ್ರ ಬದಲಾಗತ್ತಾ? ಏನು ಕಥೆ?

ಪೂರ್ತಿ ಓದಿ

10:51 PM (IST) Apr 01

ಎಲಾನ್ ಮಸ್ಕ್ ಸ್ಪೆಸ್ ಎಕ್ಸ್ ಹೂಡಿಕೆದಾರನಿಂದ 5,160 ಕೋಟಿಗೆ ಹಲ್ದಿರಾಮ್ ಪಾಲು ಖರೀದಿ

ಎಲಾನ್ ಮಸ್ಕ್ ಸ್ಪೇಸ್ ಎಕ್ಸ್ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ ಹೂಡಿಕೆದಾರನಿಂದ ಇದೀಗ ಭಾರತದ ಜನಪ್ರಿಯ ಬ್ರ್ಯಾಂಡ್ ಹಲ್ದಿರಾಮ್‌ನ ಶೇಕಡಾ 6ರಷ್ಟು ಪಾಲು ಖರೀದಿಸಿದೆ. 
 

ಪೂರ್ತಿ ಓದಿ

09:50 PM (IST) Apr 01

ಅಂಬಾನಿಯ 15 ಸಾವಿರ ಕೋಟಿಯ ಆ್ಯಂಟಿಲಿಯಾ ಮನೆಯ ಮೊದಲ ಕರೆಂಟ್ ಬಿಲ್ ಎಷ್ಟಿತ್ತು?

ಮುಕೇಶ್ ಅಂಬಾನಿ ನೀತಾ ಅಂಬಾನಿಯ ವಿಶ್ವದ ಅತೀ ದುಬಾರಿ ಮನೆ ಆ್ಯಂಟಿಲಿಯಾ ಹಲವು ಕೌತುಗಳ ಆಗರ. ಇದೀಗ ಇದೇ ಆ್ಯಂಟಿಲಿಯಾ ಮನೆಯ ಮೊದಲ ಕರೆಂಟ್ ಬಿಲ್ ಮಾಹಿತಿ ಬಹಿರಂಗವಾಗಿದೆ. ಇದು 2010ರ ಎಲೆಕ್ಟ್ರಿಸಿಟಿ ಬಿಲ್. ಈ ಮೊತ್ತ ಒಬ್ಬ ಸರಾಸರಿ ವ್ಯಕ್ತಿ 30 ವರ್ಷದ ದುಡಿಗೆ ಸಮ.

ಪೂರ್ತಿ ಓದಿ

09:04 PM (IST) Apr 01

ಆರೋಗ್ಯ ಮೊದಲೋ, ಕೆಲಸ ಮೊದಲೋ? ಆಸ್ಪತ್ರೆ ಐಸಿಯುನಿಂದ ಬೆಂಗಳೂರಿನ ಸಿಇಒ ಸಂದೇಶ

ಡೆಡ್‌ಲೈನ್, ಟಾರ್ಗೆಟ್, ಸ್ಯಾಲರಿ ಹೈಕ್, ಬೆಸ್ಟ್ ಎಂಪ್ಲಾಯ್, ಕಮಿಟ್‌ಮೆಂಟ್, ಹೀಗೆ ಕೆಲಸದಲ್ಲೇ ತಲ್ಲೀನರಾಗುವ ವೃತ್ತಿಪರರಿಗೆ ಬೆಂಗಳೂರು ಮೂಲದ ಕಂಪನಿಯ ಸಿಇಒ ಇದೀಗ ಆಸ್ಪತ್ರೆಯ ಐಸಿಯುವಿನಿಂದ ಮಹತ್ವದ ಸಂದೇಶ ನೀಡಿದ್ದಾರೆ. 
 

ಪೂರ್ತಿ ಓದಿ

08:49 PM (IST) Apr 01

ನಿಮ್ಮ ಬ್ಯಾಂಕ್ ಖಾತೆಗೆ ತಪ್ಪಾಗಿ ಬೇರೊಬ್ಬರ ಹಣ ಬಂದರೆ ಖರ್ಚು ಮಾಡಬಹುದೇ? ಹಣ ಡ್ರಾ ಮಾಡಿದರೆ ಏನಾಗುತ್ತೆ?

ನಿಮ್ಮ ಖಾತೆಗೆ ತಪ್ಪಾಗಿ ಲಕ್ಷಾಂತರ ಹಣ ಬಂದರೆ ಏನು ಮಾಡಬೇಕು? ಅದನ್ನು ಖರ್ಚು ಮಾಡಿದರೆ ಏನಾಗುತ್ತದೆ? ಈ ಬಗ್ಗೆ ಬ್ಯಾಂಕ್ ನಿಯಮಗಳು ಏನು ಹೇಳುತ್ತವೆ ಎಂಬುದನ್ನು ಇಲ್ಲಿ ತಿಳಿಯಿರಿ.

ಪೂರ್ತಿ ಓದಿ

08:11 PM (IST) Apr 01

ರಾಜ್ಯದಲ್ಲಿ ಮತ್ತೊಂದು ಬೆಲೆ ಏರಿಕೆ ಶಾಕ್; ಇಂದಿನಿಂದಲೇ ಡೀಸೆಲ್ ಬೆಲೆ ಹೆಚ್ಚಳ

ಕರ್ನಾಟಕ ಜನತೆ ಇದೀಗ ಅಕ್ಷರಶಃ ನಲುಗಿ ಹೋಗಿದ್ದಾರೆ. ಪ್ರತಿ ದಿನ ಒಂದಲ್ಲಾ ಒಂದು ಬೆಲೆ ಏರಿಕೆಯಾಗುತ್ತಿದೆ. ಹಾಲು, ವಿದ್ಯುತ್ ಸೇರಿದಂತೆ ಹಲವು ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಲಾಗಿದೆ. ಇದರ ಬೆನ್ನಲ್ಲೇ ರಾಜ್ಯದಲ್ಲಿ ಡೀಸೆಲ್ ಬೆಲೆ ಏರಿಕೆಯಾಗಿದೆ.

ಪೂರ್ತಿ ಓದಿ

08:02 PM (IST) Apr 01

ಇದು ಭರ್ಜರಿ ಸುದ್ದಿ, EPFO Auto Claim Settlement ಮಿತಿ 5 ಲಕ್ಷಕ್ಕೆ ಏರಿಕೆ!

ಸರ್ಕಾರವು ಪಿಎಫ್ ಹಿಂಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸಲು ಆಟೋ-ಸೆಟಲ್ಮೆಂಟ್ ಮಿತಿಯನ್ನು 1 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಿದೆ. ಇದರಿಂದ ಇಪಿಎಫ್‌ಒದ 7.5 ಕೋಟಿಗೂ ಹೆಚ್ಚು ಸದಸ್ಯರಿಗೆ ಅನುಕೂಲವಾಗಲಿದೆ. ಈ ನಿರ್ಧಾರವನ್ನು ಕೇಂದ್ರ ಟ್ರಸ್ಟಿಗಳ ಮಂಡಳಿಗೆ ಸಲ್ಲಿಕೆ ಮಾಡಲಾಗುತ್ತದೆ.

ಪೂರ್ತಿ ಓದಿ

07:48 PM (IST) Apr 01

ಕದ್ದು ಮುಚ್ಚಿ ವ್ಯಾಟ್ಸಾಪ್ ಖಾತೆ ನೋಡಿ ಪತಿಯನ್ನು ಜೈಲಿಗೆ ಕಳುಹಿಸಿದ ಪತ್ನಿ

ಕದ್ದು ಮುಚ್ಚಿ ಪತಿಯ ವ್ಯಾಟ್ಸಾಪ್ ಖಾತೆ ತೆರೆದು ನೋಡಿದ್ದಾಳೆ. ಮೆಸೇಜ್, ಫೋಟೋ, ವಿಡಿಯೋ ನೋಡಿ ಪತ್ನಿ ಆಘಾತಗೊಂಡಿದ್ದಾಳೆ. ತಕ್ಷಣವೇ ಪೊಲೀಸರಿಗೆ ಕರೆ ಮಾಡಿ ಪತಿಯನ್ನು ಜೈಲಿಗಟ್ಟುವಲ್ಲೂ ಯಶಸ್ವಿಯಾಗಿದ್ದಾಳೆ. ಅಷ್ಟಕ್ಕೂ ಪತಿ ವ್ಯಾಟ್ಸಾಪ್ನಲ್ಲಿ ಏನಿತ್ತು?
 

ಪೂರ್ತಿ ಓದಿ

07:10 PM (IST) Apr 01

12 ಲಕ್ಷ ಸರ್ಕಾರಿ ನೌಕರರಿಗೆ 2% ಡಿಎ ಹೆಚ್ಚಳ, ಆದ್ರೂ ನೌಕರರು ಖುಷಿಯಾಗಿಲ್ಲ!

ರಾಜಸ್ಥಾನದ ಭಜನ್ ಲಾಲ್ ಸರ್ಕಾರವು ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದೆ. 2% ಡಿಎ ಹೆಚ್ಚಳ ಮಾಡಿದ್ದು, ಈಗ ಡಿಎ 55%ಕ್ಕೆ ಏರಿಕೆಯಾಗಿದೆ. ಆದರೆ, ನೌಕರರು ಮಾತ್ರ ಖುಷಿಯಾಗಿಲ್ಲ.

ಪೂರ್ತಿ ಓದಿ

06:44 PM (IST) Apr 01

ಕನ್ನಡಿಗರಿಗೆ ಕುಡಿಯಲು ನೀರಿಲ್ಲ, ಕೃಷ್ಣ-ಭೀಮಾ ನದಿಗೆ ನೀರು ಬಿಡಿ: ಮಹಾರಾಷ್ಟ್ರಕ್ಕೆ ಪತ್ರ ಬರೆದ ಸಿದ್ದರಾಮಯ್ಯ!

ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಹಿನ್ನೆಲೆ ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಕೃಷ್ಣಾ ನದಿಗೆ 2 ಟಿಎಂಸಿ ಹಾಗೂ ಭೀಮಾ ನದಿಗೆ 1 ಟಿಎಂಸಿ ನೀರು ಹರಿಸುವಂತೆ ಮನವಿ ಮಾಡಿದ್ದಾರೆ.

ಪೂರ್ತಿ ಓದಿ

06:30 PM (IST) Apr 01

ಇತಿಹಾಸದ ಪುಟಗಳಲ್ಲಿ ಮರೆಯಾದ ವಿಷ್ಯಗಳ ಬಗ್ಗೆ ತಿಳಿಯಲು ಕರ್ನಾಟಕದ ಐತಿಹಾಸಿಕ ಗ್ರಂಥಾಲಯಗಳ ಪಟ್ಟಿ ಇಲ್ಲಿದೆ

ಕರ್ನಾಟಕವು ಹಲವಾರು ಐತಿಹಾಸಿಕ ಮತ್ತು ಪ್ರಮುಖ ಗ್ರಂಥಾಲಯಗಳನ್ನು ಹೊಂದಿದೆ. ಓರಿಯೆಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್‌ನಿಂದ ಬ್ರಿಟಿಷ್ ಕೌನ್ಸಿಲ್ ಗ್ರಂಥಾಲಯದವರೆಗೆ, ಈ ಗ್ರಂಥಾಲಯಗಳು ಜ್ಞಾನ ಮತ್ತು ಸಂಸ್ಕೃತಿಯನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ಪೂರ್ತಿ ಓದಿ

06:17 PM (IST) Apr 01

ಕೆಂಪೇಗೌಡ ವಿಮಾನ ನಿಲ್ದಾಣ ಜಾಲತಾಣದಲ್ಲಿ ಕನ್ನಡ ಭಾಷಾ ಆಯ್ಕೆ! ಟಿಕೆಟ್ ಬುಕಿಂಗ್, ವೇಳಾಪಟ್ಟಿ ಕನ್ನಡದಲ್ಲೇ ಲಭ್ಯ!

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ತನ್ನ ಅಧಿಕೃತ ಅಂತರ್ಜಾಲ ತಾಣದಲ್ಲಿ ಕನ್ನಡ ಭಾಷಾ ಆಯ್ಕೆಯನ್ನು ಪರಿಚಯಿಸಿದೆ. ಇದು ಸ್ಥಳೀಯ ಪ್ರಯಾಣಿಕರಿಗೆ ವಿಮಾನ ನಿಲ್ದಾಣದ ಸೇವೆಗಳನ್ನು ಕನ್ನಡದಲ್ಲಿ ಪಡೆಯಲು ಅನುವು ಮಾಡಿಕೊಡುತ್ತದೆ.

ಪೂರ್ತಿ ಓದಿ

06:08 PM (IST) Apr 01

ಕೈಗಟುಕುವ ದರದ ಮಾರುತಿ ಸುಜುಕಿ ಸಿಯಾಜ್ ಕಾರು ಉತ್ಪಾದನೆ ಸ್ಥಗಿತ, ಭಾವುಕ ವಿದಾಯ

ಕಳೆದ ಒಂದು ದಶಕದಿಂದ ಕೈಗೆಟುಕುವ ದರದಲ್ಲಿ ಲಭ್ಯವಿದ್ದ ಪ್ರೀಮಿಯಂ ಸೆಡಾನ್ ಕಾರಾದ ಮಾರುತಿ ಸುಜುಕಿ ಸಿಯಾಜ್ ಉತ್ಪಾದನೆ ಸ್ಥಗಿತಗೊಳಿಸಿದೆ. ಸಿಯಾಜ್ ಭಾವುಕ ವಿದಾಯ ಹೇಳಿದೆ.

ಪೂರ್ತಿ ಓದಿ

05:24 PM (IST) Apr 01

ರತನ್ ಟಾಟಾ ಬಿಟ್ಟು ಹೋದ 3800 ಕೋಟಿ ರೂ ಆಸ್ತಿ ಹಂಚಿಕೆ ಬಹಿರಂಗ, ಯಾರಿಗೆ ಎಷ್ಟೆಷ್ಟು?

ರತನ್ ಟಾಟಾ ನಿಧನದ ಬಳಿಕ ಅವರ ಆಸ್ತಿ ಕುರಿತು ತೀವ್ರ ಕುತೂಹಲ ಮನೆ ಮಾಡಿತ್ತು. ಆಸ್ತಿ ಹಂಚಿಕೆಗೆ ರತನ್ ಟಾಟಾ ವಿಲ್ ಬರೆದಿಟ್ಟಿದ್ದರು. ಈ ವಿಲ್ ಪ್ರಕಾರ ಯಾರಿಗೆ ಎಷ್ಟೆಷ್ಟು ಕೋಟಿ ರೂ ಆಸ್ತಿ ಹಂಚಿಕೆ ಮಾಡಲಾಗಿದೆ? ಯಾರಿಗೆ ಎಷ್ಟು ಸಿಕ್ಕಿದೆ. ಎಲ್ಲಾ ಮಾಹಿತಿ ಬಹಿರಂಗವಾಗಿದೆ.

ಪೂರ್ತಿ ಓದಿ

05:09 PM (IST) Apr 01

ರಂಜಾನ್ ಸಂಭ್ರಮ: ಮನೆಮುಂದೆ ಆಡುತ್ತಿದ್ದ 2 ವರ್ಷದ ಮಗು ಮೇಲೆ ಕಾರು ಹರಿಸಿದ 15 ವರ್ಷದ ಬಾಲಕ!

ರಂಜಾನ್ ಆಚರಣೆಯ ವೇಳೆ 15 ವರ್ಷದ ಬಾಲಕ ಚಲಾಯಿಸಿದ ಕಾರು ಹರಿದು 2 ವರ್ಷದ ಮಗು ಸಾವನ್ನಪ್ಪಿದೆ. ಮನೆಯ ಹೊರಗೆ ಆಡುತ್ತಿದ್ದ ಮಗುವಿನ ಮೇಲೆ ಕಾರು ಹರಿದ ಪರಿಣಾಮ ಸ್ಥಳದಲ್ಲಿಯೇ ಮಗು ಮೃತಪಟ್ಟಿದೆ.

ಪೂರ್ತಿ ಓದಿ

04:20 PM (IST) Apr 01

40 ಲಕ್ಷ ಸಾಲ ಮಾಡಿ ಅಮೆರಿಕಾಗೆ ಹೋದ, ಕೆಲಸ ಸಿಗದೆ ವಾಪಸ್ಸು, ಈಗ ಸಾಲದ ಮೇಲೆ ಸಾಲ!

ಅಮೆರಿಕದಲ್ಲಿ ಉದ್ಯೋಗ ಸಿಗದೆ ಸಾಲದ ಸುಳಿಯಲ್ಲಿ ಸಿಲುಕಿದ ಯುವಕನ ಕಥೆ ಇದು. 40 ಲಕ್ಷ ಸಾಲ ಮಾಡಿ ಅಮೆರಿಕದಲ್ಲಿ ಮಾಸ್ಟರ್ಸ್ ಮಾಡಿದರೂ, ಉದ್ಯೋಗವಿಲ್ಲದೆ ಊರಿಗೆ ಮರಳುವಂತಾಗಿದೆ.

ಪೂರ್ತಿ ಓದಿ

04:14 PM (IST) Apr 01

ಜಪಾನ್ ವರದಿ ಬೆನಲ್ಲೇ ಶುರುವಾಗಿದೆ ಮೆಘಾಕ್ವೇಕ್ ಆತಂಕ, 3 ಲಕ್ಷ ಜನರ ಬಲಿಪಡೆಯಲಿದೆ ಎಂದ ವರದಿ

ಇದೀಗ ಎಲ್ಲೆಡೆ ಮೆಘಾಕ್ವೇಕ್ ಆತಂಕ ಹೆಚ್ಚಾಗುತ್ತಿದೆ. ಜಪಾನ್ ಸರ್ಕಾರ ಮುಂದಿಟ್ಟ ಅಧಿಕೃತ ವರದಿ ಪ್ರಕಾರ ಈ ಮೆಘಾಕ್ವೇಕ್ ಬರೋಬ್ಬರಿ 3 ಲಕ್ಷ ಮಂದಿಯನ್ನು ಬಲಿಪಡೆಯಲಿದೆ ಎಂದಿದೆ. ಏನಿದು ಮೆಘಾಕ್ವೇಕ್? 
 

ಪೂರ್ತಿ ಓದಿ

03:58 PM (IST) Apr 01

ಮುಂದಿನ ದೊಡ್ಡ ಹೆಜ್ಜೆಯ ಬಗ್ಗೆ ಬಿಗ್ ಅಪ್‌ಡೇಟ್ ಕೊಟ್ಟ ಕಿಂಗ್ ಕೊಹ್ಲಿ! ಫ್ಯಾನ್ಸ್‌ಗಿದು ಗುಡ್‌ ನ್ಯೂಸ್!

ವಿರಾಟ್ ಕೊಹ್ಲಿ 2027ರ ಏಕದಿನ ವಿಶ್ವಕಪ್ ಗೆಲ್ಲುವ ಗುರಿಯನ್ನು ಹೊಂದಿದ್ದಾರೆ. ಅವರು 2027ರವರೆಗೂ ಏಕದಿನ ಕ್ರಿಕೆಟ್ ಆಡುವುದಾಗಿ ಹೇಳಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಸಂತಸ ತಂದಿದ್ದಾರೆ.

ಪೂರ್ತಿ ಓದಿ

03:52 PM (IST) Apr 01

BSNL ಗ್ರಾಹಕರಿಗೆ ಕಡಿಮೆ ಬೆಲೆಯ IPL ರೀಚಾರ್ಜ್ ಪ್ಲಾನ್! ಅನ್‌ಲಿಮಿಟೆಡ್ ಆಫರ್ ಮಿಸ್ ಮಾಡ್ಕೋಬೇಡಿ!

ಬಿಎಸ್ಎನ್ಎಲ್ IPL ಸೀಸನ್‌ನಲ್ಲಿ ಗ್ರಾಹಕರಿಗೆ ತಂದಿದೆ ಭರ್ಜರಿ ರೀಚಾರ್ಜ್ ಪ್ಲಾನ್ ತಂದಿದೆ. 4ಜಿ ಸೇವೆ ಮತ್ತು ಟವರ್ ಹಾಕಿ ನೆಟ್‌ವರ್ಕ್ ಸರಿಪಡಿಸೋಕೆ ಮುಂದಾಗಿರುವ ಬಿಎಸ್‌ಎನ್‌ಎಲ್ ಇದೀಗ ಐಪಿಎಲ್ ಪ್ರೇಮಿಗಳಿಗೆ 251 ರೂಪಾಯಿ ಪ್ಲಾನ್ ಮೂಲಕ ಭರ್ಜರಿ ಕೊಡುಗೆ ನೀಡಿದೆ.

ಪೂರ್ತಿ ಓದಿ

03:33 PM (IST) Apr 01

ವಿದೇಶದಲ್ಲಿ ಕೆಲಸದ ಕೊಡಿಸುವ ಆಮಿಷವೊಡ್ಡಿ ಬಲತ್ಕಾರ: ಪಾದ್ರಿಗೆ ಜೀವಾವಧಿ ಶಿಕ್ಷೆ

ಬೇಕರಿಯಲ್ಲಿ ಪರಿಚಯವಾದ ಯುವತಿಯನ್ನು ಪ್ರಾರ್ಥನಾ ಸಭೆಗೆ ಆಹ್ವಾನಿಸಿ ಸಭ್ಯವಾಗಿ ನಡೆದುಕೊಂಡು ನಂಬಿಕೆ ಗಳಿಸಿದ ನಂತರ ಕಿರುಕುಳ ನೀಡಲಾಗಿತ್ತು.

ಪೂರ್ತಿ ಓದಿ

03:13 PM (IST) Apr 01

ಬೆಂಗಳೂರಿನ ಅತ್ಯಂತ ದುಬಾರಿ ಮುತ್ತು; ಒಂದು ಕಿಸ್ಸಿಗೆ 50 ಸಾವಿರ ರೂ. ಚಾರ್ಜ್ ಮಾಡುವ ಕಿಸ್ಸಿಂಗ್ ಟೀಚರ್!

ಬೆಂಗಳೂರಿನಲ್ಲಿ ದುಬಾರಿ ಮುತ್ತಿನ ಕಹಾನಿಯೊಂದು ಬೆಳಕಿಗೆ ಬಂದಿದೆ. ಖಾಸಗಿ ಶಾಲಾ ಶಿಕ್ಷಕಿಯೊಬ್ಬಳು ಮುತ್ತಿಗೆ 50 ಸಾವಿರ ರೂ. ಚಾರ್ಜ್ ಮಾಡುತ್ತಿದ್ದಳು. ಈಕೆಯ ಹನಿಟ್ರ್ಯಾಪ್ ಗ್ಯಾಂಗ್ ಅನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಪೂರ್ತಿ ಓದಿ

03:10 PM (IST) Apr 01

ಮನೆಯಲ್ಲೇ ಸುಲಭವಾಗಿ ಬೆಳೆಯಿರಿ ಡ್ರ್ಯಾಗನ್ ಫ್ರೂಟ್: ನೀವು ಮಾಡಬೇಕಾಗಿದ್ದಿಷ್ಟೇ

ಡ್ರ್ಯಾಗನ್ ಫ್ರೂಟ್ ಅನ್ನು ಮನೆಯಲ್ಲಿ ಬೆಳೆಯಲು ಸಾಧ್ಯವೇ ಎಂದು ಹಲವರಿಗೆ ಅನುಮಾನವಿದೆ. ಆದರೆ ಇದನ್ನು ಸಣ್ಣ ಕುಂಡದಲ್ಲಿಯೂ ಬೆಳೆಯಬಹುದು.

ಪೂರ್ತಿ ಓದಿ

03:05 PM (IST) Apr 01

ಸಿನಿ ಕರಿಯರ್ ಅಂತ್ಯಗೊಳ್ಳುತ್ತಿದ್ದಂತೆ ಸೀರಿಯಲ್‌ನತ್ತ ಮುಖ ಮಾಡಿದ್ರಾ ಮಹಾಕುಂಭ ಬೆಡಗಿ ಮೊನಾಲಿಸಾ?

ಮಹಾಕುಂಭದಲ್ಲಿ ವೈರಲ್ ಆಗಿ ಬಳಿಕ ಬಾಲಿವುಡ್ ಸಿನಿಮಾದಲ್ಲಿ ಚಾನ್ಸ್ ಗಿಟ್ಟಿಸಿಕೊಂಡ ಮೊನಾಲಿಸಾ ಸಿನಿಮಾ ಕರಿಯರ್ ಆರಂಭಗೊಳ್ಳುವ ಮೊದಲೇ ಅಂತ್ಯಗೊಂಡಿತಾ? ನಿರ್ದೇಶಕನ ಬಂಧನದಿಂದ ಮೊನಾಲಿಸಾ ಮುಂದಿನ ನಡೆ ಏನು?
 

ಪೂರ್ತಿ ಓದಿ

03:05 PM (IST) Apr 01

'ಪಾಪ ಅವರು ಬಡವರು' : RCBಯನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ ವಿರೇಂದ್ರ ಸೆಹ್ವಾಗ್!

ವಿರೇಂದ್ರ ಸೆಹ್ವಾಗ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಐಪಿಎಲ್ 2025ರ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದಕ್ಕೆ ಕಾಲೆಳೆದಿದ್ದಾರೆ. ಆರ್‌ಸಿಬಿ ಸತತ ಎರಡು ಪಂದ್ಯಗಳನ್ನು ಗೆದ್ದರೂ, ಟ್ರೋಫಿ ಗೆಲ್ಲದ ಬಗ್ಗೆ ಸೆಹ್ವಾಗ್ ಟೀಕಿಸಿದ್ದಾರೆ.

ಪೂರ್ತಿ ಓದಿ

02:42 PM (IST) Apr 01

'ಕೈಲಾಸವಾಸಿ', ಸ್ವಯಂ ಘೋಷಿತ 'ದೇವ ಮಾನವ' ನಿತ್ಯಾನಿಂದ ನಿಜಕ್ಕೂ ವಿಧಿವಶರಾದ್ರಾ? ಏಪ್ರಿಲ್‌ ಫೂಲ್?‌

ಕಾಂಟ್ರವರ್ಸಿಗಳಿಂದ ಚರ್ಚೆಯಾಗುವ ನಿತ್ಯಾನಂದ ಈ ಬಾರಿ ಇನ್ನಿಲ್ಲ ಎನ್ನಲಾಗುತ್ತಿದೆ. ಹಾಗಾದರೆ ಸತ್ಯ ಏನು? 

ಪೂರ್ತಿ ಓದಿ

02:36 PM (IST) Apr 01

ಮೈಮರೆತು ರೀಲ್ಸ್ ಮಾಡ್ತಿದ್ದ ಯುವತಿಯ ಕಾಲಿನ ನಡುವೆ ಬಂದ 8 ಅಡಿ ಉದ್ದದ ನಾಗರಹಾವು! ಮುಂದೇನಾಯ್ತು?

ಇನ್‌ಸ್ಟಾಗ್ರಾಮ್ ರೀಲ್ಸ್ ಮಾಡುವಾಗ ಯುವತಿಯ ಕಾಲುಗಳ ಬಳಿ 8 ಅಡಿ ಉದ್ದನೆಯ ವಿಷಕಾರಿ ನಾಗರ ಹಾವು ಬಂದಿದೆ. ಮುಂದೇನಾಯ್ತು ಎಂಬುದನ್ನು ನೀವೇ ನೋಡಿ..

ಪೂರ್ತಿ ಓದಿ

02:07 PM (IST) Apr 01

ಅನಸ್ತೇಶಿಯಾ ಓವರ್‌ಡೋಸ್: ದಂತ ಚಿಕಿತ್ಸೆಗೆ ಬಂದಿದ್ದ 9 ವರ್ಷದ ಬಾಲಕಿ ಸಾವು

ಮನೆಗೆ ಹೋಗುವ ದಾರಿಯಲ್ಲಿ 9 ವರ್ಷದ ಬಾಲಕಿ ಮಲಗಿದ್ದಳು. ಅರಿವಳಿಕೆ ನಂತರದ ಸಾಮಾನ್ಯ ನಿದ್ರೆ ಎಂದು 9 ವರ್ಷದ ಬಾಲಕಿಯ ತಾಯಿ ಭಾವಿಸಿದ್ದರು. ಆದರೆ ಮನೆಗೆ ಬಂದ ನಂತರವೂ ಮಗು ಅಲುಗಾಡದೆ ಇದ್ದಾಗ ಪೋಷಕರು ತುರ್ತು ಸಹಾಯ ಕೋರಿದರು.

ಪೂರ್ತಿ ಓದಿ

01:29 PM (IST) Apr 01

RCB ಟಿ-20 ಮ್ಯಾಚ್ ನೋಡೋಕೆ ಸಮಯ ವಿಸ್ತರಿಸಿದ ನಮ್ಮ ಮೆಟ್ರೋ; ಆದ್ರೆ ಚೆನ್ನೈ ಮೆಟ್ರೋ ಫ್ರೀ ಟಿಕೆಟ್ ನೀಡಿತ್ತು!

ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಗಳಿಗಾಗಿ ಮೆಟ್ರೋ ಸೇವೆಯನ್ನು ವಿಸ್ತರಿಸಲಾಗಿದೆ. ಆರ್‌ಸಿಬಿ ಪಂದ್ಯಗಳ ದಿನಗಳಲ್ಲಿ ರಾತ್ರಿ 12.30ರವರೆಗೆ ಮೆಟ್ರೋ ಲಭ್ಯವಿರುತ್ತದೆ.

ಪೂರ್ತಿ ಓದಿ

01:17 PM (IST) Apr 01

ಪತ್ನಿಯ ರೀಲ್ಸ್‌ ಕ್ರೇಜ್‌ನಿಂದ ಸಂಕಷ್ಟಕ್ಕೆ ಸಿಲುಕಿದ ಗಂಡ: ಪೊಲೀಸ್‌ ಗಂಡನಿಗೆ ಅಮಾನತಿನ ಶಿಕ್ಷೆ

ಮಹಿಳೆಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗುವುದಕ್ಕೋಸ್ಕರ ರಸ್ತೆಯ ಜೀಬ್ರಾ ಕ್ರಾಸಿಂಗ್ ಮೇಲೆ ಡಾನ್ಸ್ ಮಾಡಿದ್ದಾಳೆ. ಅಲ್ಲದೇ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾಳೆ. ಅದು ಈಗ ವೈರಲ್ ಆಗಿದೆ. ವೈರಲ್ ಆಗುತ್ತಿದ್ದಂತೆ ಪೊಲೀಸರು ಆಕೆಯ ಬದಲು ಆಕೆಯ ಗಂಡನಿಗೆ ಶಿಕ್ಷೆ ನೀಡಿದ್ದಾರೆ.

ಪೂರ್ತಿ ಓದಿ

12:55 PM (IST) Apr 01

ಬೆಂಗಳೂರಿನಲ್ಲಿ ಹೋಟೆಲ್ ತಿಂಡಿ ತಿನಿಸುಗಳ ಬೆಲೆ ಏರಿಕೆ; ಗ್ರಾಹಕರ ನಾಲಗೆ ಸುಡ್ತಿದೆ ಕಾಫಿ, ಟೀ!

ಹಾಲು, ಮೊಸರಿನ ದರ ಹೆಚ್ಚಳದಿಂದಾಗಿ ಬೆಂಗಳೂರಿನ ಹೋಟೆಲ್‌ಗಳಲ್ಲಿ ಚಹಾ, ಕಾಫಿ ಸೇರಿದಂತೆ ಹಾಲಿನ ಖಾದ್ಯಗಳ ಬೆಲೆ ಏರಿಕೆಯಾಗಲಿದೆ. ಕಾಫಿ ಪುಡಿ ದರ ಏರಿಕೆ ಮತ್ತು ಹಾಲಿನ ದರ ಹೆಚ್ಚಳದಿಂದ ಹೋಟೆಲ್ ಉದ್ಯಮಕ್ಕೆ ಹೊಡೆತ.

ಪೂರ್ತಿ ಓದಿ

12:48 PM (IST) Apr 01

ಸಚಿವ ರಾಜಣ್ಣ ಪುತ್ರ ಎಂಎಲ್‌ಸಿ ರಾಜೇಂದ್ರ ಕೊಲೆಗೆ ಸುಪಾರಿ, ಐವರು ರೌಡಿಗಳ ವಿರುದ್ಧ ಎಫ್‌ಐಆರ್‌

ತುಮಕೂರಿನಲ್ಲಿ ಎಂಎಲ್‌ಸಿ ರಾಜೇಂದ್ರ ರಾಜಣ್ಣ ಕೊಲೆಗೆ ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲಾಗಿದೆ. ಹನಿಟ್ರ್ಯಾಪ್ ನಂಟು, ಹಣಕಾಸಿನ ವ್ಯವಹಾರ ಹಾಗೂ ರೌಡಿಗಳ ಸ್ಕೆಚ್ ಬಗ್ಗೆ ತನಿಖೆ ನಡೆಯುತ್ತಿದೆ.

ಪೂರ್ತಿ ಓದಿ

12:27 PM (IST) Apr 01

ಮುಂಬೈನಲ್ಲಿ ಕೋಟ್ಯಾಂತರ ರೂ. ಬೆಲೆ ಬಾಳುವ ಮನೆ ಖರೀದಿಸಿದ ಬಿಗ್‌ಬಾಸ್ ಒಟಿಟಿ ಫೇಮ್ ಮನಿಷಾ

ಬಿಗ್ ಬಾಸ್ ಖ್ಯಾತಿಯ ಮನಿಷಾ ರಾಣಿ ಮುಂಬೈನಲ್ಲಿ ಮೊದಲ ಮನೆ ಖರೀದಿಸಿದ್ದಾರೆ. 4.98 ಕೋಟಿ ಬೆಲೆಯ ಐಷಾರಾಮಿ ಅಪಾರ್ಟ್ಮೆಂಟ್ ಗೋರೆಗಾಂವ್‌ನಲ್ಲಿದೆ.

ಪೂರ್ತಿ ಓದಿ

12:27 PM (IST) Apr 01

ಮುಂದಿನ 4 ದಿನ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮಳೆ ಸಾಧ್ಯತೆ!

ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮುಂದಿನ ಐದು ದಿನ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಬೆಂಗಳೂರಿನಲ್ಲಿ ಏಪ್ರಿಲ್ 2 ರಿಂದ 4 ರವರೆಗೆ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಪೂರ್ತಿ ಓದಿ

12:24 PM (IST) Apr 01

ತಮಿಳುನಾಡು ವಿಧಾನಸಭಾ ಚುನಾವಣೆ: ಬಿಜೆಪಿ-ಎಐಡಿಎಂಕೆ ಮೈತ್ರಿಗಾಗಿ ಅಣ್ಣಾ ಮಲೈ ರಾಜ್ಯಾಧ್ಯಕ್ಷ ಸ್ಥಾನ ಬಲಿಪಶು?

2026ರ ತಮಿಳುನಾಡು ಚುನಾವಣೆಯಲ್ಲಿ ಬಿಜೆಪಿ ಮೈತ್ರಿಗಾಗಿ ಪ್ರಯತ್ನಿಸುತ್ತಿದೆ. ಎಐಡಿಎಂಕೆ ಅಣ್ಣಾ ಮಲೈ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಪಟ್ಟು ಹಿಡಿದಿದ್ದು, ಮೈತ್ರಿಗಾಗಿ ಅಣ್ಣಾ ಮಲೈ ಬಲಿಯಾಗುವ ಸಾಧ್ಯತೆ ಇದೆ.

ಪೂರ್ತಿ ಓದಿ

11:58 AM (IST) Apr 01

ಇಂದಿನಿಂದ ನೆಹರು ತಾರಾಲಯ ಪ್ರವೇಶ ಶುಲ್ಕ ₹100ಗೆ ಏರಿಕೆ!

ಬೆಂಗಳೂರಿನ ಜವಹಾರ್‌ಲಾಲ್ ನೆಹರು ತಾರಾಲಯದ ಸ್ಕೈ ಥಿಯೇಟರ್‌ನ ಪ್ರವೇಶ ಶುಲ್ಕವನ್ನು ಶೇ.25ರಷ್ಟು ಹೆಚ್ಚಿಸಲಾಗಿದೆ. ವಯಸ್ಕರ ಟಿಕೆಟ್ ದರ ₹75 ರಿಂದ ₹100ಕ್ಕೆ ಏರಿಕೆಯಾಗಿದೆ. ನಿರ್ವಹಣಾ ವೆಚ್ಚ ಹೆಚ್ಚಳದಿಂದ ದರ ಪರಿಷ್ಕರಣೆ ಮಾಡಲಾಗಿದೆ.

ಪೂರ್ತಿ ಓದಿ

11:49 AM (IST) Apr 01

ಧೋನಿಗೆ 10 ಓವರ್‌ ಬ್ಯಾಟ್ ಮಾಡಲು ಆಗಲ್ಲ: ಹೊಸ ಬಾಂಬ್ ಸಿಡಿಸಿದ ಸ್ಟಿಫನ್ ಪ್ಲೆಮಿಂಗ್!

ಧೋನಿ ನಿವೃತ್ತಿಯ ಬಗ್ಗೆ ಸಿಎಸ್‌ಕೆ ಕೋಚ್ ಫ್ಲೆಮಿಂಗ್ ಹೇಳಿಕೆ ನೀಡಿದ್ದು, ಇದು ಪರ-ವಿರೋಧ ಚರ್ಚೆಗೆ ಕಾರಣವಾಗಿದೆ. ಧೋನಿ ಆಟದ ಕೊಡುಗೆ ಮತ್ತು ತಂಡದ ನಿರ್ವಹಣೆಯ ಬಗ್ಗೆ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿವೆ.

ಪೂರ್ತಿ ಓದಿ

11:40 AM (IST) Apr 01

ನಂಬರ್ ಪ್ಲೇಟ್ ಮಿಷನ್‌ಗೆ ಸಿಲುಕಿದ ಯುವತಿಯ ಬೆರಳು!

ತೈಕಾಡ್ ಜಂಕ್ಷನ್‌ನಲ್ಲಿರುವ ನಂಬರ್‌ಪ್ಲೇಟ್ ಡಿಸೈನಿಂಗ್ ಅಂಗಡಿಯಲ್ಲಿ 24 ವರ್ಷದ ಯುವತಿಯ ಬೆರಳು ಕೆಲಸದ ವೇಳೆ ಡಿಸೈನಿಂಗ್ ಯಂತ್ರದಲ್ಲಿ ಸಿಲುಕಿಕೊಂಡಿತ್ತು

ಪೂರ್ತಿ ಓದಿ

11:38 AM (IST) Apr 01

IPL 2025 ಲಖನೌಗಿಂದು ತವರಲ್ಲಿ ಪಂಜಾಬ್ ಕಿಂಗ್ಸ್‌ ಚಾಲೆಂಜ್

ಲಖನೌ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಪಂತ್ ಮತ್ತು ಅಯ್ಯರ್ ನಾಯಕತ್ವದಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಸ್ಪಿನ್ನರ್‌ಗಳ ಪಾತ್ರ ನಿರ್ಣಾಯಕವಾಗಲಿದೆ.

ಪೂರ್ತಿ ಓದಿ

11:12 AM (IST) Apr 01

ಮೆಟ್ರೋ, ಹಾಲು ದರ ಹೆಚ್ಚಳ ಬೆನ್ನಲ್ಲೇ ಮತ್ತೊಂದು ಬೆಲೆ ಏರಿಕೆ ಬರೆ; ಇಂದಿನಿಂದ ಕಸ ವಿಲೇವಾರಿಗೂ ಬಿಬಿಎಂಪಿ ಶುಲ್ಕ ವಸೂಲಿ!

ಬೆಂಗಳೂರಿನಲ್ಲಿ ತ್ಯಾಜ್ಯ ನಿರ್ವಹಣೆಗೆ ಆಸ್ತಿ ತೆರಿಗೆಯಲ್ಲಿ ಹೊಸ ಶುಲ್ಕವನ್ನು ಬಿಬಿಎಂಪಿ ವಿಧಿಸಿದೆ. ಆಸ್ತಿ ವಿಸ್ತೀರ್ಣಕ್ಕೆ ಅನುಗುಣವಾಗಿ ಶುಲ್ಕವನ್ನು ನಿಗದಿಪಡಿಸಲಾಗಿದೆ, ಏಪ್ರಿಲ್ 1 ರಿಂದ ಇದು ಜಾರಿಗೆ ಬರಲಿದೆ.

ಪೂರ್ತಿ ಓದಿ

More Trending News