ಬೆಂಗಳೂರು: ಗೃಹಜ್ಯೋತಿ ಗ್ಯಾರಂಟಿ ಯೋಜನೆಯ ಮರುಪರಿಶೀಲನೆಗೆ ಇದ್ದ ಕಾಲಾವಕಾಶವನ್ನು ಮತ್ತೆ ಅ.31ರ ವರೆಗೆ ವಿಸ್ತರಿಸಿ ಸರ್ಕಾರ ಆದೇಶಿಸಿದೆ. ಬಾಕಿ ಇರುವ ಫಲಾನುಭವಿಗಳು ಕೂಡಲೇ ಅಗತ್ಯ ದಾಖಲೆಗಳನ್ನು ನೀಡಿ ಮರು ಪರಿಶೀಲನೆ ಮಾಡಿಸಬೇಕು. ಇಲ್ಲದಿದ್ದರೆ ಯೋಜನೆ ಕಡಿತದ ಎಚ್ಚರಿಕೆ ನೀಡಲಾಗಿದೆ.
ಈ ಮೊದಲು ಯೋಜನೆಯ ಮರು ಪರಿಶೀಲನೆಗೆ ಸೆ.30 ಕೊನೆಯ ದಿನವಾಗಿತ್ತು. ಜು.1ರಿಂದ ಆರಂಭವಾಗಿದ್ದ ಮನೆ ಮನೆ ಪರಿಶೀಲನಾ ಕಾರ್ಯ ಸೆ.30ರ ಗಡುವು ಮುಗಿದರೂ ಶೇ.100ರಷ್ಟು ಪೂರ್ಣಗೊಂಡಿರಲಿಲ್ಲ. ಯೋಜನೆಯ ಸೌಲಭ್ಯ ಪಡೆಯುತ್ತಿರುವವರ ಪೈಕಿ ಶೇ.98ರಷ್ಟು ಫಲಾನುಭವಿಗಳು ಮರು ಪರಿಶೀಲನೆ ಮಾಡಿಸಿದ್ದಾರೆ. ಇನ್ನುಳಿದ ಶೇ.2ರಷ್ಟು ಫಲಾನುಭವಿಗಳಿಗಾಗಿ ಮತ್ತೆ ಮಾಸಾಂತ್ಯದ ವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ. ಗೃಹಜ್ಯೋತಿ ಸೌಲಭ್ಯ ಪಡೆಯುತ್ತಿರುವ ಮನೆ ಮಾಲೀಕರು ಮತ್ತು ಬಾಡಿಗೆದಾರರ ಸೂಕ್ತ ದಾಖಲೆಗಳ ಮೂಲಕ ಮರುಪರಿಶೀಲನೆ ಪ್ರಕ್ರಿಯೆ ಮಾಡಿಸಬೇಕೆಂದು ಸೂಚಿಸಲಾಗಿದೆ
09:33 AM (IST) Oct 13
09:32 AM (IST) Oct 13
ಮಂಗಳೂರು ವಿಭಾಗದ ಕೆಎಸ್‌ಆರ್‌ಟಿಸಿ ವತಿಯಿಂದ ದೇಶದ ಮೂರು ಪ್ರಮುಖ ನಗರಗಳಿಗೆ ಹೊಸ ಬಸ್ ಸೇವೆಗಳನ್ನು ಅಕ್ಟೋಬರ್ 12 ರಿಂದ ಆರಂಭಿಸಲಾಗಿದೆ. ವೋಲ್ವೋ ಮಲ್ಟಿ ಆಕ್ಸಿಲ್ ಮತ್ತು ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ಬಸ್‌ಗಳು ಈ ಮಾರ್ಗಗಳಲ್ಲಿ ಸಂಚರಿಸಲಿದ್ದು, ಪ್ರಯಾಣಿಕರು ಮುಂಗಡ ಬುಕ್ಕಿಂಗ್ ಮಾಡಬಹುದು.
09:14 AM (IST) Oct 13
ವಿಜಯಪುರದಿಂದ ಬೀಳಗಿಗೆ ಪ್ರಯಾಣಿಸುತ್ತಿದ್ದ ದಂಪತಿ ಆಕಸ್ಮಿಕವಾಗಿ ಬಸ್‌ನಲ್ಲಿ ಚಿನ್ನಾಭರಣ ಹಾಗೂ ದಾಖಲೆಗಳಿದ್ದ ಬ್ಯಾಗ್ ಮರೆತು ಇಳಿದಿದ್ದರು. ಕೋಲ್ಹಾರ ಬಸ್ ನಿಲ್ದಾಣದ ಸಾರಿಗೆ ನಿಯಂತ್ರಕ ಸುರೇಶ್ ಚಲವಾದಿ ಅವರು ಟಿಕೆಟ್ ಆಧಾರದ ಮೇಲೆ ಬಸ್ ಪತ್ತೆಹಚ್ಚಿದ್ದಾರೆ. ಬಳಿಕ ಆ ಬ್ಯಾಗನ್ನು ಸುರಕ್ಷಿತವಾಗಿ ದಂಪತಿಗೆ ಮರಳಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
08:43 AM (IST) Oct 13
ಬಿಗ್ ಬಾಸ್ ಮನೆಯಿಂದ ಸಂಗೀತಾ ಭಟ್ ಹೊರ ನಡೆದಿರೋದು ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿತ್ತು. ಸಂಗೀತಾ ಭಟ್‌ಗೆ ಆಗಿದ್ದೇನು? ಶೋ ಅರ್ಧಕ್ಕೆ ನಿಲ್ಲಿಸಿ ಯಾಕೆ ಹೊರಬಂದರು ಎಂದು ಅಭಿಮಾನಿಗಳು ಕೇಳಲು ಶುರುಮಾಡಿದ್ದರು. ಇದೀಗ ಅವರೇ ಅದಕ್ಕೆಲ್ಲ ಉತ್ತರ ನೀಡಿದ್ದಾರೆ.
08:39 AM (IST) Oct 13
08:28 AM (IST) Oct 13
08:20 AM (IST) Oct 13
ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಅದ್ದೂರಿ ಚಾಲನೆ ನೀಡಲಾಗಿದೆ. ಇಂದಿನಿಂದ 'ಯುವ ದಸರಾ' ಕಾರ್ಯಕ್ರಮಗಳು ನಡೆಯಲಿದ್ದು, ಬಹುಭಾಷಾ ನಟ ಪ್ರಭುದೇವ ಇಂದು ಯುವ ದಸರಾ ಉದ್ಘಾಟಿಸಲಿದ್ದಾರೆ. ಇಂದು ಸಂಜೆ ಆರು ಗಂಟೆಯಿಂದ ನಡೆಯಲಿರುವ ಕಾರ್ಯಕ್ರಮಗಳ ವಿವರ, ಸ್ಥಳದ ಸಂಪೂರ್ಣ ವಿವರ ಇಲ್ಲಿದೆ.
08:19 AM (IST) Oct 13
08:03 AM (IST) Oct 13
07:59 AM (IST) Oct 13
ರಾಯಚೂರಿನ ಓಪೆಕ್ ಆಸ್ಪತ್ರೆಯ ಟ್ರಾಮಾ ಕೇರ್ ಸೆಂಟರ್‌ನಲ್ಲಿ ವೈದ್ಯಕೀಯ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆಯ ತಲೆಯಲ್ಲಿ ಹುಳುಗಳು ಬೆಳೆದಿವೆ. ಮೂರು ದಿನಗಳಿಂದ ಐಸಿಯುನಲ್ಲಿದ್ದರೂ ಸರಿಯಾದ ಚಿಕಿತ್ಸೆ ನೀಡದ ಕಾರಣ ಈ ಅಮಾನವೀಯ ಘಟನೆ ನಡೆದಿದೆ.
07:53 AM (IST) Oct 13
07:42 AM (IST) Oct 13
ಸಚಿವರು 27 ವಿಧಾನಸಭಾ ಕ್ಷೇತ್ರಗಳ 80ಕ್ಕೂ ಹೆಚ್ಚು ಕಾಮಗಾರಿ ಕಡತಗಳನ್ನು 2 ತಿಂಗಳಿಂದ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಎನ್.ಆರ್.ರಮೇಶ್ ಆರೋಪಿಸಿದ್ದಾರೆ. ಕಡತಗಳ ಅನುಮೋದನೆಗೆ ಶೇ.5ರಷ್ಟು ಕಮಿಷನ್ ಕೇಳಲಾಗುತ್ತಿದೆ ಹಾಗೂ ಸಚಿವರ ಬೆಂಬಲಿಗರು ಸರ್ಕಾರಿ ಜಾಗ ಕಬಳಿಸಿದ್ದಾರೆ ಎಂದು ಅವರು ಬಹಿರಂಗ ಪತ್ರದಲ್ಲಿ ದೂರಿದ್ದಾರೆ.
07:32 AM (IST) Oct 13
07:24 AM (IST) Oct 13
07:13 AM (IST) Oct 13
07:12 AM (IST) Oct 13