Published : Feb 11, 2026, 06:49 AM ISTUpdated : Feb 11, 2026, 10:41 PM IST

Karnataka News Live: ಬೆಂಗಳೂರಲ್ಲಿ ಡಬಲ್‌ ಮರ್ಡರ್‌ - ಪುತ್ರನಿಂದಲೇ ಹ*ತ್ಯೆಯಾದ ನಿವೃತ್ತ ಸೈನಿಕ ನವೀನ್‌ ಭಟ್‌, ದಂತವೈದ್ಯೆ ಶ್ಯಾಮಲಾ ಭಟ್‌!

ಸಾರಾಂಶ

ಬೆಂಗಳೂರು: ಅಧಿಕಾರ ಹಂಚಿಕೆ ವಿಚಾರದಲ್ಲಿ ಉಂಟಾಗಿರುವ ಗೊಂದಲ ನಿವಾರಣೆಗೆ ಹೈಕಮಾಂಡ್‌ ನಾಯಕರು ವಿಳಂಬ ಮಾಡದೇ ತಮ್ಮ ನಿರ್ಣಯ ತಿಳಿಸಬೇಕು ಎಂದು ಕಾಂಗ್ರೆಸ್‌ ಶಾಸಕ ಆರ್‌.ವಿ.ದೇಶಪಾಂಡೆ ಆಗ್ರಹಿಸಿದರು. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ದೇಶಪಾಂಡೆ, ಅಧಿಕಾರ ಹಂಚಿಕೆ ಕುರಿತಂತೆ ಹೈಕಮಾಂಡ್‌ ನಿರ್ಣಯವೇ ಅಂತಿಮ ಎಂದು ಸಿಎಂ ಮತ್ತು ಡಿಸಿಎಂ ತಿಳಿಸಿದ್ದಾರೆ. ಹೀಗಾಗಿ ವಿಳಂಬ ಮಾಡದೇ ಹೈಕಮಾಂಡ್‌ ನಾಯಕರು ನಿರ್ಣಯ ಹೇಳಬೇಕು. ಗೊಂದಲ ಹೆಚ್ಚುವಂತಾಗಬಾರದು. ಜವಾಬ್ದಾರಿ ಸ್ಥಾನದಲ್ಲಿರುವವರು ಜವಾಬ್ದಾರಿಯಿಂದ ನಿರ್ಧಾರ ಮಾಡಬೇಕು ಎಂದರು. 

ಯಾವುದೇ ವಿಚಾರವಾದರೂ ಏನು ಮಾತನಾಡಬೇಕು, ಯಾವುದನ್ನು ಮಾತನಾಡಬಾರದು ಎಂಬುದನ್ನು ಮಾತನಾಡುವ ವ್ಯಕ್ತಿಗೆ ತಿಳಿದಿರಬೇಕು. ಯಾವ ರೀತಿ ಮಾತನಾಡಬೇಕು ಎಂದು ನಾವು ಹೇಳಲು ಆಗುವುದಿಲ್ಲ. ಅಧಿಕಾರ ಹಂಚಿಕೆ ವಿಚಾರವಾಗಿ ಚರ್ಚೆ ಆಗುವ ಅವಶ್ಯಕತೆಯೇ ಇಲ್ಲ ಎಂದರು.

10:41 PM (IST) Feb 11

ಬೆಂಗಳೂರಲ್ಲಿ ಡಬಲ್‌ ಮರ್ಡರ್‌ - ಪುತ್ರನಿಂದಲೇ ಹ*ತ್ಯೆಯಾದ ನಿವೃತ್ತ ಸೈನಿಕ ನವೀನ್‌ ಭಟ್‌, ದಂತವೈದ್ಯೆ ಶ್ಯಾಮಲಾ ಭಟ್‌!

ಬೆಂಗಳೂರಿನ ವಿಜ್ಞಾನ ನಗರದಲ್ಲಿ ನಡೆದ ಘೋರ ದುರಂತದಲ್ಲಿ, ಮಗನೊಬ್ಬ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನ್ನ ತಂದೆ-ತಾಯಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಆರೋಪಿ ರೋಹನ್ ಭಟ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರೆಸಿದ್ದಾರೆ.
Read Full Story

09:17 PM (IST) Feb 11

ಕರ್ನಾಟಕ ಪೊಲೀಸ್ ವರ್ಗಾವಣೆ - 129 ಇನ್ಸ್‌ಪೆಕ್ಟರ್, 23 ಡಿವೈಎಸ್ಪಿಗಳ ಎತ್ತಂಗಡಿ; ಬೆಂಗಳೂರು ಪೊಲೀಸರಿಗಿಲ್ಲ ಭಾಗ್ಯ!

ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಯಲ್ಲಿ ಆಡಳಿತಾತ್ಮಕ ಸುಧಾರಣೆಗಾಗಿ 129 ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಮತ್ತು 23 ಡಿವೈಎಸ್ಪಿ ದರ್ಜೆಯ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ರಾಜ್ಯದಾದ್ಯಂತ ಈ 'ಮೇಜರ್ ಸರ್ಜರಿ' ನಡೆದರೂ, ಬೆಂಗಳೂರು ನಗರದ ಆಂತರಿಕ ವರ್ಗಾವಣೆ ಪಟ್ಟಿ ಬಿಡುಗಡೆಯಾಗಿಲ್ಲ.

Read Full Story

07:37 PM (IST) Feb 11

ಮೈಸೂರು- ಕುಶಾಲನಗರ ರೈಲ್ವೆ ಯೋಜನೆ ಪುನಾರಂಭಿಸಲು ಸಂಸದ ಯದುವೀರ್‌ ಮನವಿ, ರೈಲ್ವೆಯೇ ಇಲ್ಲದ ಕೊಡಗಿಗೆ ಶೀಘ್ರ ಸಿಹಿಸುದ್ದಿ?

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, ನನೆಗುದಿಗೆ ಬಿದ್ದಿರುವ ಮೈಸೂರು–ಕುಶಾಲನಗರ ರೈಲು ಯೋಜನೆಗೆ ಮರುಚಾಲನೆ ನೀಡಲು ಮತ್ತು ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಲು ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.  

Read Full Story

07:17 PM (IST) Feb 11

ಅರವಿಂದ್ ರೆಡ್ಡಿಗೆ ಬೆದರಿಕೆ ಪತ್ರ ಪ್ರಕರಣ, ಸ್ಯಾಂಡಲ್‌ವುಡ್ ನಟಿಯ ಗೆಳೆಯ ವೈಶಾಕ್ ಬಂಧನ ಕ್ರಮಕ್ಕೆ ಹೈಕೋರ್ಟ್ ಅಸಮಾಧಾನ

ಸ್ಯಾಂಡಲ್‌ವುಡ್ ನಟಿಯ ಗೆಳೆಯ ಬಿ.ಕೆ. ವೈಶಾಕ್  ಬಂಧನ ಪ್ರಕ್ರಿಯೆಯಲ್ಲಿ ಕಾನೂನು ಪಾಲಿಸದ ಪೊಲೀಸರು ಮತ್ತು ಮ್ಯಾಜಿಸ್ಟ್ರೇಟ್ ನಡೆಗೆ ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನೋಟಿಸ್ ನೀಡದೆ ಬಂಧಿಸಿರುವುದು  ಸಂವಿಧಾನಾತ್ಮಕ ಹಕ್ಕುಗಳ ಉಲ್ಲಂಘನೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. 

Read Full Story

07:02 PM (IST) Feb 11

ಜೈಲಲ್ಲೇ ವ್ಯಾಲಂಟೈನ್‌ ಡೇ ಆಚರಿಸಲಿರುವ ಅನೈತಿಕ ಪ್ರೇಮಿಗಳು; ಕಮಲಾಕರ್‌, ಸುಚಿತ್ರಾಗೆ ಕೋರ್ಟ್‌ ಶಾಕ್‌!

ಸಿದ್ಧಾಪುರದ ಸಂಚಲನಕಾರಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ಸುಚಿತ್ರಾ ಮತ್ತು ಜ್ಯೋತಿಷಿ ಕಮಲಾಕರ ಭಟ್ ಸೇರಿದಂತೆ ಐವರ ನ್ಯಾಯಾಂಗ ಬಂಧನವನ್ನು ಫೆಬ್ರವರಿ 21ರವರೆಗೆ ವಿಸ್ತರಿಸಲಾಗಿದೆ. ಸಿದ್ಧಾಪುರ JMFC ನ್ಯಾಯಾಲಯ ಈ ಆದೇಶ ನೀಡಿದೆ.

Read Full Story

06:28 PM (IST) Feb 11

ಟಾಕ್ಸಿಕ್ ಸಿನಿಮಾ ಬಿಡುಗಡೆಗೂ ಮೊದಲೇ ದಾಖಲೆ, ವಿದೇಶದಲ್ಲಿ 105 ಕೋಟಿ ರೂ ಬಾಚಿಕೊಂಡ ಯಶ್ ಮೂವಿ

ಟಾಕ್ಸಿಕ್ ಸಿನಿಮಾ ಬಿಡುಗಡೆಗೂ ಮೊದಲೇ ದಾಖಲೆ, ಕಳೆದ ತಿಂಗಳು ಟಾಕ್ಸಿಕ್ ಟ್ರೇಲರ್ ರಿಲೀಸ್ ಆಗಿತ್ತು. ಇಷ್ಟೇ ನೋಡಿ, ಇದೀಗ ಟಾಕ್ಸಿಕ್ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದ್ದು ಮಾತ್ರವಲ್ಲ, ಈಗಲೇ 105 ಕೋಟಿ ರೂಪಾಯಿ ಬಾಚಿಕೊಂಡಿದೆ.

 

Read Full Story

06:23 PM (IST) Feb 11

ಲೈಂಗಿಕ ದೌರ್ಜನ್ಯ ಪ್ರಕರಣ - ಸಂಗೀತ ನಿರ್ದೇಶಕ ಸಾಧು ಕೋಕಿಲ, ನಟ ಮಂಡ್ಯ ರಮೇಶ್‌ಗೆ ಬಿಗ್ ರಿಲೀಫ್

ನಟರಾದ ಸಾಧು ಕೋಕಿಲ ಮತ್ತು ಮಂಡ್ಯ ರಮೇಶ್ ಅವರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಮೈಸೂರಿನ ಮಹಿಳೆಯೊಬ್ಬರು ದಾಖಲಿಸಿದ್ದ ದೂರಿನಲ್ಲಿ ಸಮರ್ಪಕ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ, ನ್ಯಾಯಾಲಯವು  ಕೇಸ್ ರದ್ದುಪಡಿಸಿ ಆದೇಶಿಸಿದೆ.

Read Full Story

06:21 PM (IST) Feb 11

'ಜಗದ್ಧಾತ್ರಿ'ಯಾಗಿ ನಟಿ ಮೋಕ್ಷಿತಾ ಪೈ ಎಂಟ್ರಿ! ಕ್ರೈಂ ಬ್ರ್ಯಾಂಚ್​ ಆಫೀಸರ್​- ಏನಿದು ಸ್ಟೋರಿ? ನಾಯಕ ಯಾರು?

ಬಿಗ್‌ಬಾಸ್ ಹಾಗೂ 'ಪಾರು' ಖ್ಯಾತಿಯ ಮೋಕ್ಷಿತಾ ಪೈ ಇದೀಗ 'ಜಗದ್ಧಾತ್ರಿ' ಎಂಬ ಹೊಸ ಧಾರಾವಾಹಿಯ ಮೂಲಕ ಜೀ ಕನ್ನಡಕ್ಕೆ ಮರಳುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಅವರು ಕ್ರೈಂ ಬ್ರ್ಯಾಂಚ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಇದು ತೆಲುಗಿನ ಜನಪ್ರಿಯ ಸೀರಿಯಲ್‌ನ ರಿಮೇಕ್ ಆಗಿದೆ. ನಟ ಯಾರು? 

Read Full Story

06:09 PM (IST) Feb 11

ಶೀಘ್ರದಲ್ಲಿ Bhargavi LLB Serial ಮುಗಿತಿದ್ಯಾ? ಹೊಸ ಅಧ್ಯಾಯದ ಸೂಚನೆಯಾ?

'ಭಾರ್ಗವಿ LLB' ಧಾರಾವಾಹಿಯಲ್ಲಿ ಏನಾಗಲಿದೆ ಎಂಬ ಕುತೂಹಲ ಶುರುವಾಗಿದೆ. ವಿಶಿಷ್ಟ ಕಥೆ ಮೂಲಕ ಮನಗೆದ್ದಿರುವ ಈ ಸೀರಿಯಲ್‌, ಈಗ ಸೀರಿಯಲ್ ದಿಕ್ಕನ್ನೇ ಬದಲಿಸುವ ತಿರುವಿನಲ್ಲಿದೆ. ಇಷ್ಟುದಿನ ವಕೀಲೆಯಾಗಿ ಅನ್ಯಾಯದ ವಿರುದ್ಧ ಸಿಡಿದೇಳುತ್ತಿದ್ದ ಭಾರ್ಗವಿಯ ಬದುಕಿನಲ್ಲಿ ಈಗ ವಿಧಿ ಆಟ ಆಡಿದೆ. 

 

Read Full Story

06:07 PM (IST) Feb 11

‘ಆ’​ ವಿಡಿಯೋ ಇಟ್ಕೊಂಡು ಭಟ್ಟನಿಗೆ ಸುಚಿತ್ರಾ ‘ಹನಿ’ಟ್ರ್ಯಾಪ್? ಮುಸ್ಲಿಂ ಮಹಿಳೆ ಜೊತೆಯೂ ಕಮಲಾಕರ ಮದುವೆ!

ಜ್ಯೋತಿಷಿ ಕಮಲಾಕರ ಮತ್ತು ರೀಲ್ಸ್ ರಾಣಿ ಸುಚಿತ್ರಾ ಅವರ ಅಪರಾಧದ ಹಿನ್ನೆಲೆ ಬಯಲಾಗಿದೆ. ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಇವರಿಬ್ಬರ ಹಿಂದೆ ಹಲವು ಮದುವೆಗಳು, ಮೋಸದ ಜಾಲ ಹಾಗೂ ಸುಪಾರಿ ನೀಡಿದ ಕರಾಳ ಕಥೆಯಿದೆ. ಸುಚಿತ್ರಾಳ ಆಪ್ತೆಯೇ ಇವರ ಸಂಬಂಧ ಮತ್ತು ಅಪರಾಧದ ಬಗ್ಗೆ ಸತ್ಯ ಬಾಯಿಬಿಟ್ಟಿದ್ದಾಳೆ.

Read Full Story

05:29 PM (IST) Feb 11

ಐಷಾರಾಮಿ ರೆಸಾರ್ಟ್‌ ಹೊಂದಿರುವ ಕನ್ನಡದ ಸೆಲೆಬ್ರಿಟಿಗಳಿವರು! ಎಲ್ಲೆಲ್ಲಿದೆ ಗೊತ್ತಾ?

Sandalwood Celebrities Resort News: ಕನ್ನಡದ ಅನೇಕ ನಟ-ನಟಿಯರು ನಿರೂಪಣೆ, ನಟನೆ ಜೊತೆಗೆ ಉದ್ಯಮವನ್ನು ಕೂಡ ಹೊಂದಿದ್ದಾರೆ. ಕೆಲವು ಸೆಲೆಬ್ರಿಟಿಗಳು ರೆಸಾರ್ಟ್‌ ಕೂಡ ಹೊಂದಿದ್ದಾರೆ. ಅವರು ಯಾರು? ಎಲ್ಲಿದೆ? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

Read Full Story

05:13 PM (IST) Feb 11

ಫೆ.12ರಂದು ದೇಶವ್ಯಾಪಿ ಪ್ರತಿಭಟನೆ, ಭಾರತ ಬಂದ್! ಕರ್ನಾಟಕದಲ್ಲಿ ನಾಳೆ ಶಾಲಾ ಕಾಲೇಜುಗಳ ಕಥೆ ಏನು?

ಫೆಬ್ರವರಿ 12, 2026 ರಂದು ಕಾರ್ಮಿಕ ಮತ್ತು ರೈತ ಸಂಘಟನೆಗಳು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ. ಈ ಬಂದ್‌ನಿಂದಾಗಿ ಕರ್ನಾಟಕದಲ್ಲಿ ಶಾಲೆಗಳಿಗೆ ಅಧಿಕೃತ ರಜೆ ಘೋಷಿಸಿಲ್ಲವಾದರೂ, ಸ್ಥಳೀಯ ಪರಿಸ್ಥಿತಿ ಅವಲಂಬಿಸಿ ರಜೆ ನೀಡುವ ಸಾಧ್ಯತೆಯಿದೆ.

Read Full Story

05:07 PM (IST) Feb 11

70ರ ದಶಕಕ್ಕೆ ಜಾರಿದ Naa Ninna Bidalaare ಹಿತಾ - ಎಷ್ಟೂಂತ ಹೃದಯ ಕದೀತಿಯಮ್ಮಾ ಎಂದ ಫ್ಯಾನ್ಸ್​

‘ನಾ ನಿನ್ನ ಬಿಡಲಾರೆ’ ಧಾರಾವಾಹಿಯ ಬಾಲ ನಟಿ ಹಿತಾ, ತನ್ನ ಅದ್ಭುತ ನಟನೆ ಮತ್ತು ಗಾಯನ ಪ್ರತಿಭೆಯಿಂದ ಗಮನ ಸೆಳೆದಿದ್ದಾಳೆ. ಇತ್ತೀಚೆಗೆ, ಹಳೆಯ ಹಿಂದಿ ಹಾಡೊಂದಕ್ಕೆ ರೆಟ್ರೋ ಶೈಲಿಯಲ್ಲಿ ರೀಲ್ಸ್ ಮಾಡಿ, ತನ್ನ ಮನೋಜ್ಞ ಅಭಿನಯದಿಂದ ನೆಟ್ಟಿಗರ ಹೃದಯ ಗೆದ್ದಿದ್ದಾಳೆ.
Read Full Story

04:44 PM (IST) Feb 11

Photos - ಒಂದಲ್ಲ, ಎರಡಲ್ಲ, ಮೂರು ಮದುವೆಯಾದ ದಕ್ಷಿಣ ಭಾರತದ ನಟಿಯರು!

Actress Who Married Thrice: ವೈಯಕ್ತಿಕ ಕಾರಣಗಳಿಂದಾಗಿ ಕೆಲವು ನಟಿಯರು ಒಂದಲ್ಲ, ಎರಡಲ್ಲ, ಮೂರು ಬಾರಿ ಮದುವೆಯಾಗಿದ್ದಾರೆ. ಇವರ ಸಿನಿಮಾ ಕರಿಯರ್‌ ಚೆನ್ನಾಗಿದ್ದರೂ ಕೂಡ, ವೈಯಕ್ತಿಕ ಜೀವನದಲ್ಲಿ ಏರಿಳಿತ, ಸೋಲು ಹೆಚ್ಚಿತ್ತು. ಹಾಗಾದರೆ ಯಾರು? ಯಾರು ಮೂರು ಮದುವೆಯಾದರು? ಇನ್ನಷ್ಟು ಮಾಹಿತಿ ಇಲ್ಲಿದೆ.

 

Read Full Story

04:19 PM (IST) Feb 11

Tejaswini weds Virat - ಸೀರಿಯಲ್​ನಲ್ಲಿ ಲವ್​- ರಿಯಲ್ಲಾಗಿ ಸಪ್ತಪದಿ ತುಳಿದ ತಾರಾ ಜೋಡಿ; ಸುಂದರ ಫೋಟೋಗಳು

ಕನ್ನಡ ಕಿರುತೆರೆ ನಟಿ ತೇಜಸ್ವಿನಿ ಆಚಾರ್ ಅವರು ಸಹನಟ ವಿರಾಟ್ ವತ್ಸಲ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 'ಸಂಘರ್ಷ' ಧಾರಾವಾಹಿಯ ಸೆಟ್‌ನಲ್ಲಿ ಪ್ರೀತಿಸಿ, ಇದೀಗ ದಾವಣಗೆರೆಯಲ್ಲಿ ವಿವಾಹವಾಗಿದ್ದಾರೆ. ಈ ಜೋಡಿ 'ರಾಧಿಕಾ' ಧಾರಾವಾಹಿಯಲ್ಲಿಯೂ ಒಟ್ಟಿಗೆ ನಟಿಸಿದ್ದರು.
Read Full Story

04:15 PM (IST) Feb 11

ಸಾರಿ ಮಮ್ಮಿ, ಪಾಪ…ಐ ಲವ್ ಯು, ನವೋದಯ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿ ಸಾವಿಗೆ ಶರಣು, ಹೆತ್ತವರ ಕಣ್ಣೀರಲ್ಲಿ ಮುಳುಗಿಸಿದ!

ಬೀದರ್ ಜಿಲ್ಲೆಯ ಬಸವಕಲ್ಯಾಣದ ನವೋದಯ ಹಾಸ್ಟೆಲ್‌ನಲ್ಲಿ 10ನೇ ತರಗತಿ ವಿದ್ಯಾರ್ಥಿ ಶರತ್ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ "ಸಾರಿ ಮಮ್ಮಿ, ಪಾಪ… I love you" ಎಂದು ಬರೆದ ಡೆತ್‌ನೋಟ್ ಪತ್ತೆಯಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

Read Full Story

03:55 PM (IST) Feb 11

ದೊಡ್ಡದಾಗಿ ಮದ್ವೆ ಮಾಡ್ಕೋತೀರಿ ₹10 ಕೊಡೋ ಯೋಗ್ಯತೆ ಇಲ್ವಾ? ಮದುವೆ ಮಂಟಪದಲ್ಲಿ ಮಂಗಳಮುಖಿಯರ ರಂಪಾಟ!

ಚಿಕ್ಕಮಗಳೂರಿನ ರಂಗಣ್ಣನ ಛತ್ರದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ನುಗ್ಗಿದ ಇಬ್ಬರು ಮಂಗಳಮುಖಿಯರು, ₹10,000 ಹಣಕ್ಕಾಗಿ ಪಟ್ಟು ಹಿಡಿದು ವಧು-ವರರ ಮುಂದೆಯೇ ರಂಪಾಟ ನಡೆಸಿದ್ದಾರೆ. ಅಸಭ್ಯವಾಗಿ ವರ್ತಿಸಿ, ಪ್ರಶ್ನಿಸಿದವರಿಗೆ ಬೆದರಿಕೆ ಹಾಕಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Read Full Story

03:40 PM (IST) Feb 11

2028ರವರೆಗೂ ಸಿದ್ದರಾಮಯ್ಯ ಫಿಕ್ಸ್ - ಆಮೇಲೆ ಬೀದಿ ದಾಸಯ್ಯನ್ನ ಸಿಎಂ ಮಾಡಿದ್ರೂ ಒಕೆ' ಜಮೀರ್ ಸ್ಫೋಟಕ ಹೇಳಿಕೆ!

Zameer Ahmed Khan Bold Statement ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ಹಂಪಿಯಲ್ಲಿ, 2028ರವರೆಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಹೇಳುವ ಮೂಲಕ ಸಿಎಂ ಬದಲಾವಣೆ ಚರ್ಚೆಗೆ ತೆರೆ ಎಳೆದಿದ್ದಾರೆ. 

Read Full Story

03:24 PM (IST) Feb 11

ಮಂಗಳೂರು - ಮೊಹಮ್ಮದ್ ಜೊತೆ ವೈಶಾಲಿ ರನ್ನಿಂಗ್ ಮದುವೆ, ವಿದೇಶದಿಂದ ಓಡೋಡಿ ಬಂದ ತಂದೆ, ಮಗಳೊಂದಿಗೆ ಮಾತಾಡಿಲ್ಲವೆಂದು ಗೋಳಾಟ

ಮಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕಾಸರಗೋಡಿನ ಯುವತಿ, ಅನ್ಯಕೋಮಿನ ಯುವಕನೊಂದಿಗೆ ನೋಂದಣಿ ಮದುವೆಯಾಗಿದ್ದಾಳೆ. ಮಗಳಿಗೆ ಬ್ರೈನ್‌ವಾಶ್ ಮಾಡಿ, ಬ್ಲ್ಯಾಕ್‌ಮೇಲ್ ಮೂಲಕ ಕರೆದೊಯ್ಯಲಾಗಿದೆ ಎಂದು ಪೋಷಕರು ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story

03:21 PM (IST) Feb 11

ಸ್ಕೂಲ್ ಬಸ್ ಹರಿದು ಇಬ್ಬರು ಮಕ್ಕಳು ದಾರುಣ ಸಾವು; ಅಪ್ಪ ಹಾಲು ತರಲು ಮಕ್ಕಳ ಕರೆದೊಯ್ದರೆ, ರಕ್ತದ ಹೊಳೆ ಹರಿಯಿತು!

ಬೆಂಗಳೂರಿನ ಥಣಿಸಂದ್ರದಲ್ಲಿ ಬೈಕ್ ಮೇಲೆ ಶಾಲಾ ಬಸ್ ಹರಿದು ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಾಲು ತರಲು ಮಕ್ಕಳನ್ನು ಕರೆದೊಯ್ಯುತ್ತಿದ್ದ ಪೊಲೀಸ್ ಕಾನ್ಸ್‌ಟೇಬಲ್ ನಾಗನಗೌಡ ಪ್ರಾಣಾಪಾಯದಿಂದ ಪಾರಾಗಿದ್ದು, ಅವರ ಮಗಳು ಮತ್ತು ಅಣ್ಣನ ಮಗಳು ದುರಂತದಲ್ಲಿ ಸಾವನ್ನಪ್ಪಿದ್ದಾರೆ.

Read Full Story

03:18 PM (IST) Feb 11

ದರೋಡೆಗೆ ಯತ್ನಿಸಿ ಫಿಲ್ಮಿ ಸ್ಟೈಲ್‌ನಲ್ಲಿ ಟ್ರಾಪ್, ಮಾಲೀಕ ಬರುವವರೆಗೂ ನೆಲದ ಮೇಲೆ ಮಲಗಿದ ಕಳ್ಳ

ದರೋಡೆಗೆ ಯತ್ನಿಸಿ ಫಿಲ್ಮಿ ಸ್ಟೈಲ್‌ನಲ್ಲಿ ಟ್ರಾಪ್, ಇಬ್ಬರು ಕಳ್ಳರ ಪೈಕಿ ಒಬ್ಬ ಎಸ್ಕೇಪ್ ಆದರೆ ಮತ್ತೊಬ್ಬನಿಗೆ ಸಾಧ್ಯವಾಗಲಿಲ್ಲ. ಸಿನೀಮಿಯಾ ಶೈಲಿಯ ಕಳ್ಳತನ ಅದೇ ಶೈಲಿಯಲ್ಲಿ ಟ್ರಾಪ್ ಆಗಿದ್ದಾನೆ. ಕೊನೆಗೆ ಮಾಲೀಕ ಬಾಗಿಲು ತೆರೆಯುವವರೆಗೆ ನೆಲದ ಮೇಲೆ ಮಲಗಿದ್ದಾನೆ.

Read Full Story

02:55 PM (IST) Feb 11

Dubai gold in India - ದುಬೈನ ಶುದ್ಧ ಚಿನ್ನವನ್ನು ಭಾರತದಲ್ಲಿ ಮಾರಿದ್ರೆ ಇಷ್ಟು ಲಾಭ ಆಗೋದು ಪಕ್ಕಾ!

Dubai gold in India: ಭಾರತದಲ್ಲಿ ಬಂಗಾರ ದುಬಾರ, ದುಬೈನಲ್ಲಿ ಕಡಿಮೆ ಬೆಲೆಗೆ ಬಂಗಾರ ಸಿಗುವುದು ಎಂದು ಕೆಲವರು ಲೆಕ್ಕಾಚಾರ ಹಾಕಿರುತ್ತಾರೆ. ಹಾಗಾದರೆ ದುಬೈನಿಂದ ಭಾರತಕ್ಕೆ ಎಷ್ಟು ಬಂಗಾರವನ್ನು ತರಬಹುದು ಎಂಬ ಬಗ್ಗೆ ಮಾಹಿತಿ ಇದೆ.

 

Read Full Story

02:34 PM (IST) Feb 11

ಡಿಕೆಶಿ ಖರೀದಿಸಿದ ₹2.8 ಕೋಟಿ ಲೆಕ್ಸಸ್ ಕಾರಿನ ವಿಶೇಷತೆ ಏನು? ಕೆಲವೇ ಮಂದಿಯಲ್ಲಿದೆ ಈ ಕಾರು

ಡಿಕೆಶಿ ಖರೀದಿಸಿದ ₹2.8 ಕೋಟಿ ಲೆಕ್ಸಸ್ ಕಾರಿನ ವಿಶೇಷತೆ ಏನು? ಕೆಲವೇ ಮಂದಿಯಲ್ಲಿದೆ ಈ ಕಾರು, ವಿಶೇಷ ಅಂದರೆ ಸೇಮ್ ಲೆಕ್ಸಸ್ LM 350h ಕಾರು ಹೊಂದಿದ ಎರಡನೇ ರಾಜಕಾರಣಿ ಡಿಕೆ ಶಿವಕುಮಾರ್. ಇನ್ನು ಉದ್ಯಮಿ, ಸೆಲೆಬ್ರೆಟಿಗಳು ಸೇರಿ 7 ಮಂದಿಯಲ್ಲಿದೆ ಈ ಕಾರು. 

Read Full Story

02:31 PM (IST) Feb 11

ಇಡ್ಲಿ-ದೋಸೆಗೆ ಕಡಲೆಬೀಜ, ತೆಂಗಿನಕಾಯಿ ಚಟ್ನಿ ತಿಂದು ಬೇಸರವಾಗಿದ್ಯಾ? ಮಾಡ್ಕೊಳ್ಳಿ ಕುಡು ಚಟ್ನಿ

ಇಡ್ಲಿ, ದೋಸೆಗೆ ಯಾವಾಗಲೂ ಮಾಡುವ ಕಾಯಿ ಅಥವಾ ಕಡಲೆಬೀಜ ಚಟ್ನಿಗಿಂತ ವಿಭಿನ್ನವಾದ, ರುಚಿಕರವಾದ ಕುಡು ಚಟ್ನಿ ಮಾಡುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಹುರುಳಿ ಕಾಳು ಮತ್ತು ಇತರ ಸಾಮಗ್ರಿಗಳನ್ನು ಬಳಸಿ ತಯಾರಿಸುವ ಈ ಚಟ್ನಿ ಆರೋಗ್ಯಕ್ಕೂ ಉತ್ತಮವಾಗಿದ್ದು, ಚಪಾತಿ ಮತ್ತು ಅನ್ನದೊಂದಿಗೂ ಸವಿಯಬಹುದು.
Read Full Story

02:27 PM (IST) Feb 11

Alien Life - ಅನ್ಯಗ್ರಹ ಜೀವಿಗಳಿಗಾಗಿ ಹುಡುಕಾಟ, ನೀರೊಂದೇ ಸಾಲದು, ಈ 2 ಅಂಶಗಳೂ ಬೇಕೇ ಬೇಕು!

ಅನ್ಯಗ್ರಹ ಜೀವಿಗಳನ್ನು ಹುಡುಕಲು ನೀರಿದ್ದರೆ ಸಾಕಾ? ಖಂಡಿತ ಇಲ್ಲ. ಹೊಸ ಸಂಶೋಧನೆಯ ಪ್ರಕಾರ, ರಂಜಕ ಮತ್ತು ಸಾರಜನಕ ಕೂಡ ಅತ್ಯಗತ್ಯ. ಒಂದು ಗ್ರಹ ನಿಜವಾಗಿಯೂ ವಾಸಯೋಗ್ಯವಾಗಲು ಬೇಕಾದ 'ಕೆಮಿಕಲ್ ಗೋಲ್ಡಿಲಾಕ್ಸ್ ಜೋನ್' ಬಗ್ಗೆ ತಿಳಿಯಿರಿ.

Read Full Story

02:12 PM (IST) Feb 11

Kamalakar Bhat case - ಕೊ*ಲೆ ದಿನ ಆಗಿದ್ದೇನು? ಐದೇ ನಿಮಿಷದಲ್ಲಿ ನಡೆದ ಘೋರ ಘಟನೆ ಬಗ್ಗೆ ಮೃತ ವಸಂತ್​ ಪತ್ನಿ ರಿವೀಲ್​

ಜ್ಯೋತಿಷಿ ಕಮಲಾಕರ ಭಟ್ ಮತ್ತು ಸುಚಿತ್ರಾ ನಾಯ್ಕ್ ಪ್ರಕರಣದಲ್ಲಿ ಮೃತಪಟ್ಟ ವಸಂತ್ ಅವರ ಪತ್ನಿ, ಘಟನೆಯ ದಿನ ನಡೆದ ಆಘಾತಕಾರಿ ಸತ್ಯಗಳನ್ನು ಬಹಿರಂಗಪಡಿಸಿದ್ದಾರೆ. ಕೇವಲ ಐದೇ ನಿಮಿಷಗಳಲ್ಲಿ ನಡೆದ ಆ ಘಟನೆಯ ಬಗ್ಗೆ ರಿವೀಲ್​ ಮಾಡಿದ್ದಾರೆ.

Read Full Story

02:01 PM (IST) Feb 11

ಆಳಂದ ಶಿವಲಿಂಗಕ್ಕೆ ಪೂಜೆ - ಹೈಕೋರ್ಟ್ ಮೆಟ್ಟಿಲೇರಿದ ಆಂದೋಲ ಶ್ರೀ; ಡಿಸಿ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಮರ!

ಆಳಂದ ದರ್ಗಾದಲ್ಲಿರುವ ರಾಘವ ಚೈತನ್ಯ ಶಿವಲಿಂಗಕ್ಕೆ ಶಿವರಾತ್ರಿಯಂದು ಪೂಜೆ ಸಲ್ಲಿಸಲು 15 ಜನರಿಗೆ ಅನುಮತಿ ಕೋರಿ ಆಂದೋಲ ಮಠದ ಸಿದ್ದಲಿಂಗ ಸ್ವಾಮೀಜಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಸರ್ಕಾರ, ಜಿಲ್ಲಾಡಳಿತವು ವಕ್ಫ್ ಸಮಿತಿಯೊಂದಿಗೆ ಸೇರಿ ಪೂಜೆಗೆ ಅಡ್ಡಿಪಡಿಸಲು ಷಡ್ಯಂತ್ರ ರೂಪಿಸುತ್ತಿದೆ ಎಂದು ಆರೋಪಿಸಿದರು.

Read Full Story

01:31 PM (IST) Feb 11

ಡಿಕೆಶಿ ಮನೆಗೆ ಬಂತು 2.8 ಕೋಟಿ ರೂ ಬೆಲೆಯ ಲೆಕ್ಸಸ್ ಕಾರು, ಅಧಿಕಾರ ಬದಲಾವಣೆ ಸೂಚನೆಯೇ?

ಡಿಕೆ ಶಿವಕುಮಾರ್ ಮನೆಗೆ ಬಂತು 2.8 ಕೋಟಿ ಬೆಲೆಯ ಲೆಕ್ಸಸ್ ಕಾರು, ಅಧಿಕಾರ ಬದಲಾವಣೆ ಸೂಚನೆಯೇ? ಇತ್ತೀಚಿನ ಕೆಲ ವರ್ಷಗಳಲ್ಲಿ ಸಿಎಂ ಹೊಸ ಕಾರು ಖರೀದಿಸುವುದು, ಬಳಕೆ ಮಾಡುವುದು ಸಾಮಾನ್ಯವಾಗಿದೆ. ಈ ಎಲ್ಲಾ ಬೆಳವಣಿಗೆ ರಾಜ್ಯದಲ್ಲಿ ಅಧಿಕಾರ ಬದಲಾವಣೆಗಳ ಸೂಚನೆಯೇ?

Read Full Story

01:30 PM (IST) Feb 11

ಟಾಕ್ಸಿಕ್ ಸಿನಿಮಾ ಮತ್ತೊಂದು ವಿವಾದ - ಸಂತ ಮಿಕಯೇಲ್ ಮುಂದೆ ಯಶ್ ಅಶ್ಲೀಲ ದೃಶ್ಯ ತೆಗೆಯದಿದ್ದರೆ ಕಾನೂನು ಹೋರಾಟ!

ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾವು ಕ್ರೈಸ್ತ ಧರ್ಮದ ಭಾವನೆಗಳಿಗೆ ಧಕ್ಕೆ ತಂದಿದೆ ಎಂಬ ಆರೋಪದ ಮೇಲೆ ವಿವಾದಕ್ಕೆ ಸಿಲುಕಿದೆ. ಚಿತ್ರದಲ್ಲಿನ ಕೆಲವು ದೃಶ್ಯಗಳು ದೇವದೂತರಿಗೆ ಅಪಮಾನ ಮಾಡಿವೆ ಎಂದು ರಾಷ್ಟ್ರೀಯ ಕ್ರೈಸ್ತ ಒಕ್ಕೂಟ ಆರೋಪಿಸಿದ್ದು, ದೃಶ್ಯಗಳನ್ನು ತೆಗೆದುಹಾಕಲು ಪಟ್ಟು ಹಿಡಿದಿದೆ.

Read Full Story

01:10 PM (IST) Feb 11

Photos - ಮಹಾಶಿವರಾತ್ರಿ ಹಿನ್ನಲೆ ಮಹದೇಶ್ವರ ಬೆಟ್ಟಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ

ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ. ಬೆಂಗಳೂರು, ರಾಮನಗರ, ಕನಕಪುರ ಸೇರಿದಂತೆ ವಿವಿಧ ಜಿಲ್ಲೆಗಳ ಸಾವಿರಾರು ಭಕ್ತರು ಕಾಲ್ನಡಿಗೆಯ ಮೂಲಕ ಮಾದಪ್ಪನ ದರ್ಶನಕ್ಕೆ ಆಗಮಿಸುತ್ತಿದ್ದಾರೆ.

Read Full Story

01:04 PM (IST) Feb 11

ನಂಜನಗೂಡು ಗೋಳೂರು ಜಾತ್ರೇಲಿ ವಿಡಿಯೋ, ರೀಲ್ಸ್ ನಿಷೇಧ; ಡಂಗೂರದ ಮೂಲಕ ₹30 ಸಾವಿರ ದಂಡದ ಎಚ್ಚರಿಕೆ!

ನಂಜನಗೂಡಿನ ಗೋಳೂರು ಗ್ರಾಮದಲ್ಲಿ, ಗ್ರಾಮದೇವತೆಯ ಜಾತ್ರೆಯ ಸಂದರ್ಭದಲ್ಲಿ ಹೆಣ್ಣುಮಕ್ಕಳ ಸುರಕ್ಷತೆಗಾಗಿ ಒಂದು ವಿನೂತನ ಕ್ರಮ ಕೈಗೊಳ್ಳಲಾಗಿದೆ. ಕಿರುಕುಳ ನೀಡುವ ಅಥವಾ ಅನುಮತಿಯಿಲ್ಲದೆ ವಿಡಿಯೋ ಮಾಡುವ ಕಿಡಿಗೇಡಿಗಳಿಗೆ ₹30,000 ದಂಡ ವಿಧಿಸುವುದಾಗಿ ಡಂಗೂರ ಸಾರಿ ಎಚ್ಚರಿಕೆ ನೀಡಲಾಗಿದೆ.

Read Full Story

01:01 PM (IST) Feb 11

ಫ್ರೀ ಆಗಿ ಸಿನಿಮಾ ನೋಡಿ / ಯಾವ ನಾಯಿಗೆ ಬೇಕೋ ನಿನ್ನ ಟಿಕೆಟ್...! ಬೈಕೊಂಡಾದರೂ‌ 'ವಲವಾರ' ನೋಡಿ; ವೀರಕಪುತ್ರ ಶ್ರೀನಿವಾಸ್

ಕನ್ನಡದಲ್ಲಿ ವಲವಾರ ಎನ್ನುವ ಸಿನಿಮಾ ಬಂದಿದ್ದು, ಪ್ರೇಕ್ಷಕರು ಈ ಸಿನಿಮಾದತ್ತ ಮುಖ ಮಾಡಬೇಕಿದೆ. ಈ ಬಗ್ಗೆ ಸಾಮಾಜಿಕ ಹೋರಾಟಗಾರ ವೀರಕಪುತ್ರ ಶ್ರೀನಿವಾಸ್‌ ಅವರು ಫೇಸ್‌ಬುಕ್‌ ಪೋಸ್ಟ್‌ ಹಂಚಿಕೊಂಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

Read Full Story

12:38 PM (IST) Feb 11

ಬಿಕ್ಲು ಶಿವ ಹತ್ಯೆ ಪ್ರಕರಣ - ನಾಪತ್ತೆಯಾಗಿ ಸಿಐಡಿಗೆ ತಲೆ ಕೆಡಿಸಿದ ಬೈರತಿ ಬಸವರಾಜ್, ವಿದೇಶಕ್ಕೆ ತೆರಳಿರೋದು ಅನುಮಾನ

ರೌಡಿಶೀಟರ್ ಬಿಕ್ಲು ಶಿವ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಬೈರತಿ ಬಸವರಾಜ್ ನಾಪತ್ತೆಯಾಗಿದ್ದು, ಸಿಐಡಿ ತನಿಖೆಗೆ ಸವಾಲಾಗಿದೆ. ಕಳೆದ 15 ದಿನಗಳಿಂದ ಸಂಪರ್ಕಕ್ಕೆ ಸಿಗದ ಅವರ ಪತ್ತೆಗಾಗಿ ಸಿಐಡಿ ದೇಶಾದ್ಯಂತ ಶೋಧ ನಡೆಸುತ್ತಿದ್ದು, ಹೈಕೋರ್ಟ್ ಜಾಮೀನು ರದ್ದುಗೊಳಿಸಿದ ನಂತರ ತನಿಖೆ ಚುರುಕುಗೊಂಡಿದೆ.
Read Full Story

12:25 PM (IST) Feb 11

ಲೈವ್​ಗೆ ಬಂದು ಫ್ಯಾನ್ಸ್​ಗೆ ಗುಡ್​​​ನ್ಯೂಸ್​ ಕೊಟ್ಟ Bigg Boss ರಿಷಾ ಗೌಡ - ಅಭಿಮಾನಿಗಳು ಫುಲ್​ ಖುಷ್​

ಬಿಗ್​ಬಾಸ್​ 12ರ ಸ್ಪರ್ಧಿಯಾಗಿದ್ದ ನಟಿ, ಮಾಡೆಲ್ ರಿಷಾ ಗೌಡ ಅವರು ಇನ್​ಸ್ಟಾಗ್ರಾಮ್​ ಲೈವ್​ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಬಿಗ್​ಬಾಸ್​ ಸ್ಪರ್ಧಿಗಳನ್ನು ಕಣ್ತುಂಬಿಸಿಕೊಳ್ಳುವ ಅವಕಾಶ ಮತ್ತೊಮ್ಮೆ ಸಿಕ್ಕಿದ್ದಕ್ಕೆ ಅಭಿಮಾನಿಗಳು ಫುಲ್​​ ಖುಷ್ ಆಗಿದ್ದಾರೆ. ನಟಿ ಹೇಳಿದ್ದೇನು?

Read Full Story

12:18 PM (IST) Feb 11

ರಾಮಾಯಣದ ಸೃಷ್ಟಿಕರ್ತನನ್ನು ಮರೆಯುವುದು ದೊಡ್ಡ ತಪ್ಪು; ರಾಮನಿಗಿಂತ ವಾಲ್ಮೀಕಿ ಶ್ರೇಷ್ಠ - ಮಹದೇವಪ್ಪ

ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿದ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಧರ್ಮಕ್ಕಿಂತ ಬದುಕು ಶ್ರೇಷ್ಠವಾಗಿದ್ದು, ರಾಮಾಯಣದ ಸೃಷ್ಟಿಕರ್ತ ವಾಲ್ಮೀಕಿಯನ್ನೇ ಕಡೆಗಣಿಸಲಾಗುತ್ತಿದೆ ಎಂದು ಹೇಳಿದರು. ವಾಲ್ಮೀಕಿ ಮತ್ತು ಅಂಬೇಡ್ಕರ್ ಅವರ ವೈಚಾರಿಕ ಚಿಂತನೆಗಳನ್ನು ಪಾಲಿಸಬೇಕೆಂದರು.

Read Full Story

12:09 PM (IST) Feb 11

Saregamapa Kannada Show 2026 - ಮಕ್ಕಳಿಗೋಸ್ಕರ ಸಿಂಗಿಂಗ್‌ ಶೋ ಆಡಿಷನ್‌; ಯಾವಾಗ? ಎಲ್ಲಿ?

Saregamapa Kannada Show: ಮತ್ತೆ ಹೊಸದಾಗಿ ಮಕ್ಕಳಿಗೋಸ್ಕರ ಸರಿಗಮಪ ಶೋ ಪ್ರಸಾರ ಆಗಲಿದೆ. ರಾಜ್ಯದ 31 ಜಿಲ್ಲೆಗಳಲ್ಲಿ ಆಡಿಷನ್ ನಡೆಯಲಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

 

Read Full Story

11:55 AM (IST) Feb 11

ಕನ್ನಡಿಗರ ಮುಂದೆ ಆಟ ನಡೆಯಲ್ಲ- ಸೋತು ಶರಣಾದ ಸೋನು ನಿಗಮ್​ - ಹುಬ್ಬಳ್ಳಿಯಲ್ಲಿ ಕ್ಷಮೆಯಾಚನೆ

ಕನ್ನಡಿಗರನ್ನು ಉಗ್ರ ದಾಳಿಗೆ ಹೋಲಿಸಿ ವಿವಾದ ಸೃಷ್ಟಿಸಿದ್ದ ಗಾಯಕ ಸೋನು ನಿಗಮ್, ಇದೀಗ ಕನ್ನಡಿಗರ ಕ್ಷಮೆ ಕೋರಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ, ಕನ್ನಡಿಗರು ನನ್ನ ಕುಟುಂಬದವರು ಎಂದಿದ್ದಲ್ಲದೆ, 'ಅನಿಸುತಿದೆ ಯಾಕೋ ಇಂದು' ಹಾಡನ್ನು ಹಾಡಿ ರಂಜಿಸಿದ್ದಾರೆ.

Read Full Story

11:44 AM (IST) Feb 11

ಅತಿ ಶೀಘ್ರದಲ್ಲೇ ಅಂತ್ಯ ಆಗಲಿರೋ ಸಾಲು ಸಾಲು ಕನ್ನಡ ಧಾರಾವಾಹಿಗಳು! ಯಾವುವು?

Kannada Serial: ಈಗ ಕನ್ನಡ ಮನರಂಜನಾ ವಾಹಿನಿಗಳಲ್ಲಿ ಕೆಲ ಧಾರಾವಾಹಿಗಳು ಅಂತ್ಯ ಆಗಲಿವೆ. ಈ ಜಾಗಕ್ಕೆ ಹೊಸದಾಗಿ ಹೊಸ ಸೀರಿಯಲ್‌ಗಳ ಆಗಮನ ಕೂಡ ಆಗಲಿದೆ. ಹಾಗಾದರೆ ಅಂತ್ಯ ಆಗಲಿರುವ ಸೀರಿಯಲ್‌ಗಳು ಯಾವುವು? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.  

Read Full Story

11:43 AM (IST) Feb 11

ಯಾರೂ ಕೆಮ್ಮಂಗಿಲ್ಲ - ಜೋರಾಗಿ ಕೆಮ್ಮಿದ್ದಕ್ಕೆ ಯುವಕನ ಮೇಲೆ ಹಲ್ಲೆ, ಸಾವು!

ರಾಮನಗರದ ವಾಜರಹಳ್ಳಿಯಲ್ಲಿ ಜೋರಾಗಿ ಕೆಮ್ಮಿದ್ದಕ್ಕೆ ನೆರೆಮನೆಯವರಿಂದ ಹಲ್ಲೆಗೊಳಗಾದ ರಾಜಸ್ಥಾನ ಮೂಲದ ಯುವಕ ಸಾವನ್ನಪ್ಪಿದ್ದಾನೆ. ಚಿಕಿತ್ಸೆ ಫಲಿಸದೆ ವಿನೋದ್ ಕುಮಾರ್ ಜೈನ್ ಮೃತಪಟ್ಟಿದ್ದು, ಆರೋಪಿ ಹೊಂಬಯ್ಯ ಮತ್ತು ಆತನ ಕುಟುಂಬ ತಲೆಮರೆಸಿಕೊಂಡಿದೆ.
Read Full Story

11:07 AM (IST) Feb 11

Karnataka Politics - ಕುರ್ಚಿಗೆ ಅಂಟಿಕೊಂಡ ಹೇಡಿ ಸಿದ್ದರಾಮಯ್ಯ - ಸಿಎಂ ವಿರುದ್ಧ ಜನಾರ್ದನ ರೆಡ್ಡಿ ಕಿಡಿ

ಶಾಸಕ ಜನಾರ್ದನ ರೆಡ್ಡಿ, ಹೈಕಮಾಂಡ್ ಕೃಪೆಯಿಂದ ಕುರ್ಚಿಗೆ ಅಂಟಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಹೇಡಿ ಎಂದು ಟೀಕಿಸಿದ್ದಾರೆ. ಸಿಎಂ-ಡಿಸಿಎಂ ಅಧಿಕಾರ ಕಿತ್ತಾಟದಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದ್ದು, ಜನ ಸರ್ಕಾರದಿಂದ ರೋಸಿ ಹೋಗಿದ್ದಾರೆ ಎಂದರು.

Read Full Story

More Trending News