ಕರ್ನಾಟಕದ 28 ಕ್ಷೇತ್ರಗಳಲ್ಲಿ ಬಿಜೆಪಿ 17, ಕಾಂಗ್ರೆಸ್ 9 ಮತ್ತು ಜೆಡಿಎಸ್ ಎರಡರಲ್ಲಿ ಗೆಲುವು ಸಾಧಿಸಿದೆ. ಕರ್ನಾಟಕದ 28 ನೂತನ ಸಂಸದರ ವಿದ್ಯಾರ್ಹತೆ ಏನು ಅಂತ ನಿಮಗೆ ಗೊತ್ತಿದೆಯಾ? ಇಲ್ಲಿದೆ ನೋಡಿ ಮಾಹಿತಿ
ಬೆಂಗಳೂರು: ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ದೇಶದ ಜನರಿಗೆ ತಮ್ಮ ಕ್ಷೇತ್ರದ ನೂತನ ಸಂಸದರು ಯಾರು ಎಂದು ಗೊತ್ತಾಗಿದೆ. ಕರ್ನಾಟಕದ 28 ಕ್ಷೇತ್ರಗಳಲ್ಲಿ ಬಿಜೆಪಿ 17, ಕಾಂಗ್ರೆಸ್ 9 ಮತ್ತು ಜೆಡಿಎಸ್ ಎರಡರಲ್ಲಿ ಗೆಲುವು ಸಾಧಿಸಿದೆ. ಕರ್ನಾಟಕದ 28 ನೂತನ ಸಂಸದರ ವಿದ್ಯಾರ್ಹತೆ ಏನು ಅಂತ ನಿಮಗೆ ಗೊತ್ತಿದೆಯಾ? ಇಲ್ಲಿದೆ ನೋಡಿ ಮಾಹಿತಿ
ಕರ್ನಾಟಕದ ನೂತನ ಸಂಸದರು
ಪ್ರಹ್ಲಾದ್ ಜೋಶಿ, ಬಸವರಾಜ್ ಬೊಮ್ಮಾಯಿ, ಜಗದೀಶ್ ಶೆಟ್ಟರ್, ರಮೇಶ್ ಜಿಗಜಿಣಗಿ, ಹೆಚ್‌ಡಿ ಕುಮಾರಸ್ವಾಮಿ, ಗೋವಿಂದ ಕಾರಜೋಳ, ಶೋಭಾ ಕರಂದ್ಲಾಜೆ, ಪಿಸಿ ಗದ್ದಿಗೌಡರ, ವಿಶ್ವೇಶ್ವರ ಹೆಗಡೆ ಕಾಗೇರಿ, ಎಂ ಮಲ್ಲೇಶ್ ಬಾಬು, ಬಿ.ವೈ.ರಾಘವೇಂದ್ರ, ಪಿ.ಸಿ.ಮೋಹನ್, ವಿ.ಸೋಮಣ್ಣ, ಕೋಟ ಶ್ರೀನಿವಾಸ ಪೂಜಾರಿ, ತೇಜಸ್ವಿ ಸೂರ್ಯ, ಡಾ.ಕೆ.ಸುಧಾಕರ್, ಡಾ.ಸಿಎನ್ ಮಂಜುನಾಥ್, ಯದುವೀರ್ ಒಡೆಯರ್, ಕ್ಯಾ.ಬ್ರಿಜೇಶ್ ಚೌಟಾ, ಇ.ತುಕಾರಾಂ, ರಾಧಾಕೃಷ್ಣ ದೊಡ್ಡಮನಿ, ರಾಜಶೇಖರ್ ಹಿಟ್ನಾಳ್, ಶ್ರೇಯಸ್ ಪಟೇಲ್, ಸಾಗರ್ ಖಂಡ್ರೆ, ಪ್ರಭಾ ಮಲ್ಲಿಕಾರ್ಜುನ್, ಜಿ.ಕುಮಾರ್ ನಾಯ್ಕ್, ಸುನಿಲ್ ಬೋಸ್ ಮತ್ತು ಪ್ರಿಯಾಂಕಾ ಜಾರಕಿಹೊಳಿ
ಸಂಸದರ ವಿದ್ಯಾರ್ಹತೆ
1.ಪ್ರಹ್ಲಾದ್ ಜೋಶಿ (ಬಿಜೆಪಿ) ಧಾರವಾಡ ಲೋಕಸಭಾ ಕ್ಷೇತ್ರ
1983ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದುಕೊಂಡಿದ್ದಾರೆ.
2.ಪಿ.ಸಿ.ಗದ್ದಿಗೌಡರ್ (ಬಿಜೆಪಿ) ಬಾಗಲಕೋಟೆ ಲೋಕಸಭಾ ಕ್ಷೇತ್ರ
1972ರಲ್ಲಿ ಬಿಎ ಪದವಿ ಪಡೆದುಕೊಂಡಿದ್ದು, ಕರ್ನಾಟಕ ವಿಶ್ವವಿದ್ಯಾಲಯದಿಂದ 1975ರಲ್ಲಿ ಎಲ್ಎಲ್ಬಿ ಪೂರ್ಣಗೊಳಿಸಿದ್ದಾರೆ. ಪದವಿಯನ್ನು ಬಾಗಲಕೋಟೆ ಮತ್ತು ಎಲ್‌ಎಲ್‌ಬಿಯನ್ನು ಬೆಳಗಾವಿಯಲ್ಲಿ ಪೂರ್ಣಗೊಳಿಸಿದ್ದಾರೆ.
3.ಡಾ.ಸಿಎನ್ ಮಂಜುನಾಥ್ (ಬಿಜೆಪಿ) ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ
1988 ರಲ್ಲಿ ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಡಾಕ್ಟರ್ ಆಫ್ ಮೆಡಿಸಿನ್ ಇನ್ ಕಾರ್ಡಿಯಾಲಜಿ (DM) (ಹೃದಯಶಾಸ್ತ್ರ) ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ.
4.ಬಿವೈ ರಾಘವೇಂದ್ರ (ಬಿಜೆಪಿ) ಶಿವಮೊಗ್ಗ ಲೋಕಸಭಾ ಕ್ಷೇತ್ರ
1994ರಲ್ಲಿ ಕುವೆಂಪು ವಿಶ್ವವಿದ್ಯಾಲಯದಿಂದ ಮ್ಯಾನೇಜ್ಮೆಂಟ್‌ನಲ್ಲಿ ಪದವಿ (ಬಿಬಿಎಂ) ಪಡೆದುಕೊಂಡಿದ್ದಾರೆ.
5.ಡಾ.ಪ್ರಭಾ ಮಲ್ಲಿಕಾರ್ಜುನ್ (ಕಾಂಗ್ರೆಸ್) ದಾವಣಗೆರೆ ಲೋಕಸಭಾ ಕ್ಷೇತ್ರ
1998ರಲ್ಲಿ ಬಿಡಿಎಸ್ (Bachelor of Dental Surgery) ಕುವೆಂಪು ವಿಶ್ವವಿದ್ಯಾಲಯದಿಂದ ಪದವಿ ಪಡೆದುಕೊಂಡಿದ್ದಾರೆ.
6.ಡಾ.ಕೆ.ಸುಧಾಕರ್, (ಬಿಜೆಪಿ) ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ
2003ರಲ್ಲಿ ತುಮಕೂರಿನ ಸಿದ್ಧಾರ್ಥ್ ಮೆಡಿಕಲ್ ಕಾಲೇಜಿನಿಂದ ಎಂಬಿಬಿಎಸ್ ಪದವಿ ಪಡೆದುಕೊಂಡಿದ್ದಾರೆ.
7.ಇ ತುಕಾರಾಂ (ಕಾಂಗ್ರೆಸ್) ಬಳ್ಳಾರಿ ಲೋಕಸಭಾ ಕ್ಷೇತ್ರ
1993ರಲ್ಲಿ PGDBA (Finance)ನ್ನು ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಿಂದ ಪಡೆದುಕೊಂಡಿದ್ದಾರೆ. 1992ರಲ್ಲಿ ಎಂಕಾಂ ಸ್ನಾತಕೋತ್ತರ ಪದವಿಯನ್ನು ಗುಲ್ಬರ್ಗಾ ಯುನಿವರ್ಸಿಟಿಯಿಂದ ಪಡೆದಿದ್ದಾರೆ.
8.ಹೆಚ್‌ಡಿ ಕುಮಾರಸ್ವಾಮಿ, (ಜೆಡಿಎಸ್) ಮಂಡ್ಯ ಲೋಕಸಭಾ ಕ್ಷೇತ್ರ
1978ರಲ್ಲಿ ಬೆಂಗಳೂರು ಯುನಿವರ್ಸಿಟಿಯಿಂದ ವಿಜ್ಞಾನ ವಿಭಾಗದಲ್ಲಿ ಪದವಿಯನ್ನು ಪಡೆದುಕೊಂಡಿದ್ದಾರೆ.
9.ವಿಶ್ವೇಶ್ವರ ಹೆಗಡೆ ಕಾಗೇರಿ (ಬಿಜೆಪಿ) ಉತ್ತರಕನ್ನಡ ಲೋಕಸಭಾ ಕ್ಷೇತ್ರ
1982ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದುಕೊಂಡಿದ್ದಾರೆ.
10.ಜಗದೀಶ್ ಶೆಟ್ಟರ್ (ಬಿಜೆಪಿ) ಬೆಳಗಾವಿ ಲೋಕಸಭಾ ಕ್ಷೇತ್ರ
1977ರ ಕರ್ನಾಟಕ ವಿಶ್ವವಿದ್ಯಾಲಯದಿಂದ ವಾಣಿಜ್ಯ ವಿಭಾಗದಲ್ಲಿ ಪದವಿ, 1980ರಲ್ಲಿ ಎಲ್ಎಲ್ಬಿ ಪೂರ್ಣಗೊಳಿಸಿದ್ದಾರೆ.
11.ಪಿ.ಸಿ.ಮೋಹನ್ (ಬಿಜೆಪಿ) ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರ
1981ರಲ್ಲಿ ಬೆಂಗಳೂರಿನ ಜಯನಗರದ ವಿಜಯ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದಾರೆ.
12.ಪ್ರಿಯಾಂಕಾ ಜಾರಕಿಹೊಳಿ (ಕಾಂಗ್ರೆಸ್) ಚಿಕ್ಕೋಡಿ ಲೋಕಸಭಾ ಕ್ಷೇತ್ರ
2021ರಲ್ಲಿ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದುಕೊಂಡಿದ್ದಾರೆ.
13.ಸಾಗರ್ ಖಂಡ್ರೆ (ಕಾಂಗ್ರೆಸ್) ಬೀದರ್ ಲೋಕಸಭಾ ಕ್ಷೇತ್ರ
ಬಿಬಿಎ ಓದಿರುವ ಸಾಗರ್ ಖಂಡ್ರೆ 2021ರಲ್ಲಿ ಎಲ್‌ಎಲ್‌ಬಿ ಪಡೆದುಕೊಂಡಿದ್ದಾರೆ.
14.ಶೋಭಾ ಕರಂದ್ಲಾಜೆ (ಬಿಜೆಪಿ) (ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ)
1990ರಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಸಾಮಾಜಿಕ ಸೇವೆ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. 1996ರಲ್ಲಿ ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದಲೂ ಪದವಿ ಪಡೆದಿದ್ದಾರೆ.
15.ಶ್ರೇಯಸ್ ಎಂ ಪಟೇಲ್ (ಕಾಂಗ್ರೆಸ್) ಹಾಸನ
ಮೈಸೂರಿನ ಮಹಾಜನ್ ಫಸ್ಟ್ ಗ್ರೇಡ್ ಕಾಲೇಜಿನಿಂದ ಬಿಬಿಎಂ ಪದವಿ ಹೊಂದಿದ್ದಾರೆ.
16.ಸುನಿಲ್ ಬೋಸ್ (ಕಾಂಗ್ರೆಸ್) ಚಾಮರಾಜನಗರ ಲೋಕಸಭಾ ಕ್ಷೇತ್ರ
ಅಳಿಕೆಯ ಶ್ರೀ ಸತ್ಯ ಸಾಯಿ ಸೇವಾ ಪ್ರಿ ಯುನಿವರ್ಸಿಟಿ ಕಾಲೇಜಿನಲ್ಲಿ ಸೆಕೆಂಟ್ ಪಿಯುವರೆಗೂ ಓದಿದ್ದಾರೆ. 2000ರಲ್ಲಿ ಪಿಯು ಪಾಸ್ ಆಗಿದ್ದಾರೆ.
17.ತೇಜಸ್ವಿ ಸೂರ್ಯ (ಬಿಜೆಪಿ) ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ
ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ನಿಂದ ಬಿಎ, ಎಲ್ಎಲ್‌ಬಿ ಪದವಿ ಪಡೆದುಕೊಂಡಿದ್ದಾರೆ.
18.ವಿ.ಸೋಮಣ್ಣ (ಬಿಜೆಪಿ) ತುಮಕೂರು ಲೋಕಸಭಾ ಕ್ಷೇತ್ರ
ಬೆಂಗಳೂರಿನ ವಿವಿ ಪುರಂ ಕಾಲೇಜಿನಲ್ಲಿ ಬಿಎ ಪದವಿ ಓದಿದ್ದಾರೆ. (1971-72 ರಿಂದ 1973-74)
19.ಯದುವೀರ್ ಒಡೆಯರ್ (ಬಿಜೆಪಿ) ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ
ಅರ್ಥಶಾಸ್ತ್ರ ಮತ್ತು ಇಂಗ್ಲಿಷ್‌ನಲ್ಲಿ ಡಬಲ್ ಡಿಗ್ರಿ ಪಡೆದುಕೊಂಡಿದ್ದಾರೆ. ಅಮೆರಿಕದ ಅಮ್ಹೆರ್ಸ್ಟ್ ಮಸಾಚುಸೆಟ್ಸ್ ವಿಶ್ವವಿದ್ಯಾಲಯದಲ್ಲಿ ಓದಿದ್ದಾರೆ.
300ರ ಗಡಿ ದಾಟಿದ ಎನ್‌ಡಿಎ- ಬಿಜೆಪಿಗೆ ಸಿಕ್ತು ಪಕ್ಷೇತರರು, ಸ್ಥಳೀಯ ಪಕ್ಷಗಳ ಬೆಂಬಲ
20.ಬಸವರಾಜ್ ಬೊಮ್ಮಾಯಿ (ಬಿಜೆಪಿ) ಹಾವೇರಿ ಲೋಕಸಭಾ ಕ್ಷೇತ್ರ
ಕೆಎಲ್‌ಇ ಕಾಲೇಜಿನಲ್ಲಿ ಮೆಕ್ಯಾನಿಕ್ ವಿಭಾಗದಲ್ಲಿ ಇಂಜಿನೀಯರಿಂಗ್ ಪಡೆದುಕೊಂಡಿದ್ದಾರೆ.
21.ಗೋವಿಂದ ಕಾರಜೋಳ (ಬಿಜೆಪಿ) ಚಿತ್ರದುರ್ಗ ಲೋಕಸಭಾ ಕ್ಷೇತ್ರ
ಬಿಜೆಪಿಯ ಹಿರಿಯ ನಾಯಕರಾಗಿರುವ ಗೋವಿಂದ ಕಾರಜೋಳ ಎಸ್ಎಸ್ಎಲ್‌ಸಿ ವರೆಗೂ ಅಭ್ಯಾಸ ಮಾಡಿದ್ದಾರೆ.
22.ಕೋಟ ಶ್ರೀನಿವಾಸ ಪೂಜಾರಿ (ಬಿಜೆಪಿ) ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ
ಬಿಜೆಪಿಯ ಹಿರಿಯ ನಾಯಕರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರು 7ನೇ ಕ್ಲಾಸ್‌ವರೆಗೂ ಓದಿದ್ದಾರೆ.
23.ಕ್ಯಾಪ್ಟನ್ ಬ್ರಿಜೇಶ್ ಚೌಟ (ಬಿಜೆಪಿ) ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರ
BSc., ಸೇಂಟ್ ಅಲೋಶಿಯಸ್ ಕಾಲೇಜು, ಮಂಗಳೂರು ವಿಶ್ವವಿದ್ಯಾನಿಲಯ 2002, ಇಂದೋರ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ರಕ್ಷಣಾ ಅಧಿಕಾರಿಗಳ ವ್ಯವಹಾರ ನಿರ್ವಹಣೆಯಲ್ಲಿ ಪ್ರಮಾಣಪತ್ರ ಕೋರ್ಸ್ ಪಡೆದಿದ್ದಾರೆ.
24.ರಮೇಶ್ ಜಿಗಜಿಣಗಿ (ಬಿಜೆಪಿ) ವಿಜಯಪುರ ಲೋಕಸಭಾ ಕ್ಷೇತ್ರ
ಬಿಜೆಪಿಯ ಹಿರಿಯ ನಾಯಕರಾಗಿರುವ ರಮೇಶ್ ಜಿಗಜಿಣಗಿ, 1974ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿಎ ಪದವಿ ಪಡೆದುಕೊಂಡಿದ್ದಾರೆ.
25.ಮಲ್ಲೇಶ್ ಬಾಬು (ಜೆಡಿಎಸ್) ಕೋಲಾರ ಲೋಕಸಭಾ ಕ್ಷೇತ್ರ
1997ರಲ್ಲಿ ಬೆಂಗಳೂರು ಯುನಿವರ್ಸಿಟಿಯಿಂದ ಎಂಬಿಎ ಪದವಿ ಪಡೆದುಕೊಂಡಿದ್ದಾರೆ.
26.ರಾಜಶೇಖರ್ ಹಿಟ್ನಾಳ್ (ಕಾಂಗ್ರೆಸ್) ಕೊಪ್ಪಳ ಲೋಕಸಭಾ ಕ್ಷೇತ್ರ
1998ರಲ್ಲಿ ಧಾರವಾಡದ ಜೆಎಸ್ಎಸ್ ಕಾಲೇಜಿನಲ್ಲಿ ಎರಡನೇ ಪಿಯುವರೆಗೆ ವ್ಯಾಸಂಗ ಮಾಡಿದ್ದಾರೆ.
ಖಾತೆ ಹಂಚಿಕೆಗೆ ಲಕ್ಷ್ಮಣ ರೇಖೆ ಎಳೆದ ಬಿಜೆಪಿ; ಯಾರಿಗೆ, ಯಾವ ಮಂತ್ರಿಗಿರಿ?
27.ರಾಧಾಕೃಷ್ಣ ದೊಡ್ಡಮನಿ (ಕಾಂಗ್ರೆಸ್) ಕಲಬುರಗಿ ಲೋಕಸಭಾ ಕ್ಷೇತ್ರ
ಬೆಂಗಳೂರಿನ ಸೇಂಟ್ ಅಲೋಶಿಯಸ್ ಹೈಸ್ಕೂಲ್ ನಲ್ಲಿ 10ನೇ ಕ್ಲಾಸ್‌ವರೆಗೂ ಓದಿದ್ದಾರೆ.
28.ಜಿ ಕುಮಾರ್ ನಾಯ್ಕ್ (ಕಾಂಗ್ರೆಸ್) ರಾಯಚೂರು ಲೋಕಸಭಾ ಕ್ಷೇತ್ರ
ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ ವಿಶ್ವವಿದ್ಯಾಲಯದಿಂದ ಸಿವಿಲ್ ವಿಭಾಗದಲ್ಲಿ ಎಂಜಿನೀಯರಿಂಗ್ ಪದವಿ ಪಡೆದುಕೊಂಡಿದ್ದಾರೆ.