ಸಚಿವ ನಾಗೇಂದ್ರ ರಾಜೀನಾಮೆ ಸುದ್ದಿ ಕೇಳಿ ಖುಷಿಪಟ್ಟ ಮೃತ ಅಧಿಕಾರಿ ಪತ್ನಿ ಕವಿತಾ

By Sathish Kumar KH  |  First Published Jun 6, 2024, 4:11 PM IST

ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ.ನಾಗೇಂದ್ರ ರಾಜೀನಾಮೆ ಸಲ್ಲಿಕೆ ಮಾಹಿತಿ ಬೆನ್ನಲ್ಲಿಯೇ ಆತ್ಮಹತ್ಯೆಗೆ ಶರಣಾದ ಅಧಿಕಾರಿ ಚಂದ್ರಶೇಖರ್ ಅವರ ಪತ್ನಿ ಕವಿತಾ ಸಂತಸ ವ್ಯಕ್ತಪಡಿಸಿದ್ದಾರೆ.


ಶಿವಮೊಗ್ಗ (ಜೂ.06): ರಾಜ್ಯದಲ್ಲಿ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ. ಹಗರಣ ನಡೆದಿದ್ದು, ಇದಕ್ಕೆ ತಮ್ಮನ್ನು ಹೊಣೆಗಾರರನ್ನಾಗಿ ಮಾಡಬಹುದು ಎಂಬ ಭಯದಿಂದ ಇಲಾಖಾ ಸಚಿವ ಬಿ.ನಾಗೇಂದ್ರ ಅವರ ಹೆಸರನ್ನು ಬರೆದಿಟ್ಟು ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆಗೆ ಶರಣಾಗಿದ್ದರು. ಈಗ ಹಗರಣದ ತನಿಖೆಯನ್ನು ಸಿಬಿಐ ತನಿಖೆಗೆ ಕೈಗೆತ್ತಿಕೊಂಡ ಬೆನ್ನಲ್ಲಿಯೇ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ಸಚಿವ ಬಿ.ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡುತ್ತಿದ್ದಾರೆ. ಈ ವಿಚಾರವನ್ನು ಕೇಳಿದ ಮೃತ ಅಧಿಕಾರಿಯ ಪತ್ನಿ ಕವಿತಾ ಸಂಸತ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಶಿವಮೊಗ್ಗದಲ್ಲಿ ಮಾಧ್ಯಮಗಳಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣದ ಹಿನ್ನೆಲೆಯಲ್ಲಿ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ರಾಜೀನಾಮೆ ಕೊಡುತ್ತಿದ್ದಾರೆ. ಆದರೆ, ತಮ್ಮ ಪತಿ ಚಂದ್ರಶೇಖರ್ ಸಾವಿಗೆ ನ್ಯಾಯ ಸಿಗಬೇಕು ಎಂದರೆ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಸರ್ಕಾರದ ರಾಜಕೀಯಗಳ ಬಗ್ಗೆ ನಮಗೇನು ಗೊತ್ತಿಲ್ಲ. ವಾಲ್ಮೀಕಿ ನಿಗಮದಲ್ಲಿ ನಡೆದ ಹಗರಣದ ಬಗ್ಗೆ ಸಮಗ್ರ ತನಿಖೆ ಆಗಬೇಕು. ಈ ಹಗರಣದ ತಪಿತಸ್ಥರು ಯಾರೇ ಇದ್ದರೂ ಅವರಿಗೆ ಶಿಕ್ಷೆ ಆಗಲೇಬೇಕು ಎಂದು ಹೇಳಿದರು.

Tap to resize

Latest Videos

Big Breaking: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ಸಚಿವ ನಾಗೇಂದ್ರ ರಾಜೀನಾಮೆ ಖಚಿತಪಡಿಸಿದ ಡಿ.ಕೆ. ಶಿವಕುಮಾರ್

ಸಚಿವ ನಾಗೇಂದ್ರ ರಾಜೀನಾಮೆ ವಿಚಾರ ಮಾಧ್ಯಮಗಳ ಮೂಲಕ ತಿಳಿದಿದೆ. ಒಟ್ಟಿನಲ್ಲಿ ಪ್ರಕರಣದ ತನಿಖೆ ನಡೆದು ತಪ್ಪಿತಸ್ಥರು ಶಿಕ್ಷೆಗೊಳಗಾಗಲಿ. ಮೊದಲಿಂದಲೂ ನಾವು ಪತಿಯ ಸಾವಿಗೆ ನ್ಯಾಯ ಕೇಳುತ್ತಿದ್ದೇವೆ. ರಾಜಕೀಯವಾಗಿ ರಾಜೀನಾಮೆ ಕೇಳಿಲ್ಲ ತಪ್ಪಿತಸ್ಥರ ಶಿಕ್ಷೆ ಮಾತ್ರ ಕೇಳುತ್ತಿದ್ದೇವೆ. ಪ್ರಕರಣದ ತನಿಖೆ ನಡೆದು ಸತ್ಯಾಂಶ ಹೊರ ಬರಲಿ. ಈ ಪ್ರಕರಣದ ತನಿಖೆ ಕುರಿತು ಯಾವುದೇ ಮಾಹಿತಿ ಯಾರು ನೀಡಿಲ್ಲ ಮಾಧ್ಯಮಗಳ ಮೂಲಕ ವಿಷಯ ತಿಳಿಯುತ್ತಿದೆ. ಇನ್ನು ಪದ್ಮನಾಭ ಹೆಸರಿನ ಪೆನ್ ಡ್ರೈವ್ ಸಿಐಡಿ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪೆನ್‌ಡ್ರೈವ್‌ನಲ್ಲಿರುವ ಮಾಹಿತಿ ನೀಡುವಂತೆ ನಾವು ಪೊಲೀಸರಿಗೆ ಮನವಿ ಮಾಡಿದ್ದೆವು. ಆದರೆ, ಸಿಐಡಿ ಪೊಲೀಸರು ಈ ಬಗ್ಗೆ ನ್ಯಾಯಾಲಯಕ್ಕೆ ಪೆನ್ ಡ್ರೈ ನೀಡಿ ಅಲ್ಲಿರುವ ಮಾಹಿತಿ ಬಹಿರಂಗಪಡಿಸುವುದಾಗಿ ತಿಳಿಸಿದ್ದಾರೆ. ಪೆನ್ ಡ್ರೈವ್ ನಲ್ಲಿ ಯಾವುದೇ ಕಾರಣಕ್ಕೂ ಏನಿದೆ ಎಂದು ಪರಿಶೀಲನೆ ನಡೆಸಲ್ಲ ಕೋರ್ಟ್ ಮೂಲಕವೇ ಅನುಮತಿ ಪಡೆದು ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ ಎಂದರು.

ವಾಲ್ಮೀಕಿ ನಿಗಮದ ಹಗರಣ ಮತ್ತು ತಮ್ಮ ಪತಿಯ ಸಾವಿನ ಕೇಸ್ ಸಿಬಿಐಗೆ ಹಸ್ತಾಂತರ ಆಗಿರುವ ಹಿನ್ನೆಲೆ ಹೆಚ್ಚಿನ ಮಾಹಿತಿ ಹೊರಬರಲಿದೆ. ವಾಲ್ಮೀಕಿ ನಿಗಮದಲ್ಲಿ ಹಗರಣ ನಡೆದಿದ್ದು ದೊಡ್ಡ ಮಟ್ಟದ ಹಗರಣ ನಡೆದಿರುವ ಹಿನ್ನೆಲೆಯಲ್ಲಿ ಹೆಚ್ಚಿನ ತನಿಖೆ ಅಗತ್ಯವಿದೆ. ಹಗರಣದಲ್ಲಿ ಮಂತ್ರಿ ಸೇರಿದಂತೆ ಯಾರೇ ಪ್ರಭಾವಶಾಲಿಗಳು ಶಾಮೀಲಾಗಿದ್ದರು ತನಿಖೆಯಿಂದ ಹೊರಬರಲಿ. ರಾಜೀನಾಮೆಯ ಬೆಳವಣಿಗೆ ನೋಡಿದರೆ ಸಚಿವರು ತಪ್ಪಿತಸ್ಥರೆಂದು ನಾವು ಹೇಳಲು ಬರುವುದಿಲ್ಲ ಎಂದು ಹೇಳಿದರು.

ವಾಲ್ಮೀಕಿ ನಿಗಮದ ಹಗರಣ ಕೇಸ್; ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲು ಮುಂದಾದ ನಾಗೇಂದ್ರ

ಪರಿಶಿಷ್ಟ ಪಂಗಡದ ಕಲ್ಯಾಣ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಯಿಂದ ಖುಷಿಯಾದರೂ, ನನ್ನ ಗಂಡನ ಸಾವಿಗೆ ನ್ಯಾಯ ಸಿಕ್ಕಿಲ್ಲ ಎಂಬ ದುಃಖವಿದೆ. ತನಿಖೆಯಿಂದ ಸತ್ಯಾಂಶ  ಬೆಳಕಿಗೆ ಬಂದರೂ ಪತಿ ಚಂದ್ರಶೇಖರ್ ಬದುಕಿ ಬರಲ್ಲ ಎಂಬ ನೋವಿದೆ. ಪತಿ ಚಂದ್ರಶೇಖರ್ ಮೇಲೆ ಒತ್ತಡ ಹೇರಿ ಜೀವ ತೆಗೆದಿದ್ದಾರೆ. ನಾವು ನೊಂದಿದ್ದು,  ಜೀವನಕ್ಕೆ ಯಾರು ಆಧಾರ ಇಲ್ಲ. ಕೆಲಸದ ವಿಷಯದ ಬಗ್ಗೆ ಯಾರು ನಮ್ಮೊಂದಿಗೆ ಚರ್ಚೆ ಮಾಡಿಲ್ಲ ಈ ವಿಷಯ ಸರ್ಕಾರಕ್ಕೆ ಬಿಟ್ಟಿದ್ದು. ನಮ್ಮ ಮುಂದಿನ ಜೀವನ ಏನು ಎಂಬುದು ಪ್ರಶ್ನಾರ್ಥಕವಾಗಿ ಉಳಿದಿದೆ. ಹೋರಾಟದ ಮೂಲಕ ನ್ಯಾಯ ಸಿಗುವ ಭರವಸೆ ಇದೆ. ಇದುವರೆಗೂ ಸಂಪೂರ್ಣ ಸತ್ಯಾಂಶ ಹೊರಗೆ ಬಂದಿಲ್ಲ. ನನ್ನ ಪತಿ ಚಂದ್ರಶೇಖರ್ ನಿಷ್ಠಾವಂತ ಅಧಿಕಾರಿಯಾಗಿ ಜೀವ ಕಳೆದುಕೊಂಡಿರುವ ಬಗ್ಗೆ ನಮಗೆ ನೋವಿದೆ. ಮೌಖಿಕವಾಗಿ ಸಚಿವರ ಸೂಚನೆ ಎಂಬ ಬಗ್ಗೆ ಡೆತ್ ನೋಟ್ನಲ್ಲಿ ಉಲ್ಲೇಖವಿತ್ತು ಎಂದು ನೋವು ತೋಡಿಕೊಂಡರು.

click me!