Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!

Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!

Published : Jun 20, 2026, 03:11 PM IST
ವಿಧಾನಪರಿಷತ್ ಚುನಾವಣೆಯ ಫಲಿತಾಂಶವು ಅನಿರೀಕ್ಷಿತವಾಗಿ ಹೊರಬಿದ್ದಿದೆ. ಬಿಜೆಪಿ ಮತ್ತು ಜೆಡಿಎಸ್ ಶಾಸಕರ ಅಡ್ಡಮತದಾನದಿಂದಾಗಿ ಕಾಂಗ್ರೆಸ್ ನಿರೀಕ್ಷೆಗೂ ಮೀರಿ ಪ್ರಚಂಡ ಗೆಲುವು ಸಾಧಿಸಿದೆ. ಈ ಅಡ್ಡಮತದಾನದ ಸುಂಟರಗಾಳಿಯು ಕಮಲ ಮತ್ತು ದಳ ಪಕ್ಷಗಳನ್ನು ಕಂಗೆಡಿಸಿದೆ.

ಬೆಂಗಳೂರು (ಜೂ.20): ಪರಿಷತ್​ ಪಟ್ಟದ ಅಖಾಡಲ್ಲಿ ಗೆಲ್ಲೋದು ಯಾರು? ಉತ್ತರ ಸಿಕ್ಕಾಗಿದೆ. ಆದರೆ ಈ ಉತ್ತರವನ್ನ ಯಾರೂ ನಿರೀಕ್ಷಿಸಿ ಇರಲಿಲ್ಲ. ಅಡ್ಡಮತದಾನದ ಸುಂಟರಗಾಳಿಗೆ ಕಮಲ-ದಳಕ್ಕೆ ಉಸಿರು ಕಟ್ಟಿದೆ. ಕೈ ಕೋಟೆಯಲ್ಲಿ ಸಂಭ್ರಮದ ಅಲೆ ಎದ್ದಿದೆ.. ಇಲ್ಲಿ  ಆರು ಅಭ್ಯರ್ಥಿಗಳ ಗೆಲುವು ಫಿಕ್ಸ್ ಆಗಿತ್ತು ನಿಜ.

ಜೈಲಿನಿಂದ Darshan Thoogudeepa ರಿಲೀಸ್‌ ಆಗೋ ವಿಷಯ; ಮಹತ್ವದ ಹೇಳಿಕೆ ಕೊಟ್ಟ ಹೊಸ CM ಡಿಕೆ ಶಿವಕುಮಾರ್!

ಹಾಗಿದ್ದರೂ, ಏಳನೇ ಅಭ್ಯರ್ಥಿಯ ಗೆಲುವಿಗಾಗಿ ಅಲ್ಲಿ ನಡೆದಿದ್ದು ಅದೆಂಥಹ ಫೈಟ್..? ಸಿಎಂ ಸಿಂಹಾಸನವನ್ನ ಅಲಂಕರಿಸಿದ ನಂತ್ರ ಎದುರಾದ ಮೊದಲ ಅಗ್ನಿಪರೀಕ್ಷೆಯನ್ನ  ಎದುರಿಸಿ ಕನಕಾಧಿಪತಿ ನಿಂತಿದ್ದೇ ಈಗ ಇತಿಹಾಸ. ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನದ ಅಲೆ ಎದ್ದಿದೆ. ಆ ಅಲೆಯ ಅಬ್ಬರಕ್ಕೆ ಜೆಡಿಎಸ್-ಬಿಜೆಪಿ ಕಂಗಾಲಾಗಿದ್ರೆ, ಅದೇ ಅಲೆಯಲ್ಲಿ ಪ್ರಚಂಡ ಗೆಲುವಿನ ದೋಣಿ ಒಡಿಸಿದೆ ಕಾಂಗ್ರೆಸ್.

ಏಳು ವಿಧಾನಪರಿಷತ್ ಸ್ಥಾನಗಳಲ್ಲಿ ಐದು ಸ್ಥಾನಗಳನ್ನ ಕಾಂಗ್ರೆಸ್ ಗೆಲ್ಲುತ್ತೆ ಅನ್ನೋದು ಬಹುತೇಕ ಕನ್ಫರ್ಮ್​ ಆಗಿತ್ತು. ಸರಳ ಗೆಲವನ್ನ ಅಲ್ಲಿ ನಿರೀಕ್ಷಿಸಲಾಗ್ತಾಯಿತ್ತು. ಆದ್ರೀಗ ಅವರಿಗೆ ಸಿಕ್ಕಿರೋದು ಪ್ರಚಂಡ ಗೆಲುವು. ಅದಕ್ಕೆ ಕಾರಣ ಜೆಡಿಎಸ್ ಹಾಗೂ ಬಿಜೆಪಿ ಶಾಸಕರು ನಡೆಸಿರೊ ಅಡ್ಡಮತದಾನ.

 

20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
Read more