Karnataka Budget 2023: ಮುಂದಿನ 8 ತಿಂಗಳು ಶಾಸಕರು ವಿಶೇಷ ಅನುದಾನ ಕೇಳಬೇಡಿ: ಸಿಎಂ ಸಿದ್ದರಾಮಯ್ಯ ಸೂಚನೆ

Published : Jul 07, 2023, 10:48 AM ISTUpdated : Jul 07, 2023, 11:03 AM IST
Karnataka Budget 2023: ಮುಂದಿನ 8 ತಿಂಗಳು ಶಾಸಕರು ವಿಶೇಷ ಅನುದಾನ ಕೇಳಬೇಡಿ: ಸಿಎಂ ಸಿದ್ದರಾಮಯ್ಯ ಸೂಚನೆ

ಸಾರಾಂಶ

ರಾಜ್ಯದ ಯಾವುದೇ ಶಾಸಕರು ಮುಂದಿನ 8 ತಿಂಗಳುಗಳ ಕಾಲ (2023-24ನೇ ಸಾಲಿನಲ್ಲಿ) ಶಾಸಕರ ವಿಶೇಷ ಅನುದಾನಗಳನ್ನು ಕೇಳಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರು (ಜು.07)): ರಾಜ್ಯದಲ್ಲಿ ಜನರಿಗೆ ನೀಡಿದ ಗ್ಯಾರಂಟಿ ಭರವಸೆಗಳನ್ನಿ ಈಡೇರಿಸುವ ನಿಟ್ಟಿನಲ್ಲಿ ಆಯವ್ಯಯದ ಹಣವನ್ನು ಖರ್ಚು ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ 8 ತಿಂಗಳುಗಳ ಕಾಲ (2023-24ನೇ ಸಾಲಿನಲ್ಲಿ) ಶಾಸಕರು ವಿಶೇಷ ಅನುದಾನಗಳನ್ನು ಕೇಳಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವಿಧಾನಸೌಧದಲ್ಲಿ ಬಜೆಟ್‌ ಮಂಡನೆಗೂ ಮುನ್ನ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಮೂರು ಪ್ರಮುಖ ವಿಚಾರ ಪ್ರಸ್ತಾಪ ಮಾಡಿ ಮಾತನಾಡಿದರು.  ಶಾಸಕರ ವಿಶೇಷ ಅನುದಾನ ಕಡಿತ ಮಾಡಲಾಗುತ್ತಿದೆ. ಮುಂದಿನ 8 ತಿಂಗಳು ಶಾಸಕರು ಅನುದಾನ ಹೆಚ್ಚು ಕೇಳಬೇಡಿ. ಗ್ಯಾರಂಟಿಗಳ ಯೋಜನೆಗಳಿಗೆ ಅನುದಾನ ಹಂಚಿಕೆ ಆಗ್ತಿರೋದ್ರಿಂದ ವಿಶೇಷ ಅನುದಾನಕ್ಕೆ ಮನವಿ ಮಾಡಬೇಡಿ ಎಂದು ಸೂಚನೆ ನೀಡಿದ್ದಾರೆ.

Karnataka Budget 2023 Live Updates |ವಿಪಕ್ಷ ನಾಯಕನಿಲ್ಲದೇ ಮಂಡನೆಯಾಗಲಿದೆ ಬಜೆಟ್

ವಿಪಕ್ಷಗಳ ಟ್ರ್ಯಾಪ್‌ಗೆ ಒಳಗಾಗಬೇಡಿ :  ಇನ್ನು ಕಳೆದ ಬಾರಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕೆಲವು ಶಾಸಕರು ಟ್ರ್ಯಾಪ್‌ಗೆ ಒಳಗಾಗಿದ್ದರು. ಈ ಬಾರಿಯೂ ಕೂಡ ಮುಂದಿನ ದಿನಗಳಲ್ಲಿ ವಿಪಕ್ಷಗಳಿಂದ ಟ್ರ್ಯಾಪ್ ಗೆ ಒಳಗಾಗಬೇಡಿ. ಸ್ಟಿಂಗ್ ಆಪರೇಷನ್‌ಗಳು ನಡೆಯುತ್ತಿರುತ್ತವೆ. ಎಚ್ಚರದಿಂದ ಇರಿ ಎಂದು ಶಾಸಕರಿಗೆ ಸಿದ್ದರಾಮಯ್ಯ ಸಲಹೆ ಮತ್ತು ಸೂಚನೆಯನ್ನು ನೀಡಿದ್ದಾರೆ. ಇನ್ನು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಬಗ್ಗೆ ಶಾಸಕರು ಸಹಕಾರದಿಂದ ಕೆಲಸ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ.

ಕುಮಾರಸ್ವಾಮಿ ಪೆನ್ ಡ್ರೈವ್ ಗೆ ಬಾಂಬ್‌ಗೆ ಬೆಚ್ಚಿಬಿತ್ತಾ ಕಾಂಗ್ರೆಸ್..?: ಕಾಂಗ್ರೆಸ್ ‌ಶಾಸಕಾಂಗ‌ ಪಕ್ಷದ ಸಭೆಯಲ್ಲಿ ಸ್ಟಿಂಗ್ ಆಪರೇಷನ್ ಚರ್ಚೆ ಮಾಡುವ ಮೂಲಕ ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ ಪೆನ್ ಡ್ರೈವ್ ಗೆ ಬಾಂಬ್‌ಗೆ ಬೆಚ್ಚಿಬಿತ್ತಾ ಎಂಬ ಅನುಮಾನ ಕಂಡುಬರುತ್ತಿದೆ. ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಶಾಸಕರಿಗೆ ಟ್ರ್ಯಾಪ್‌ ಆಗದಂತೆ ಪಾಠ ಮಾಡಿದ್ದಾರೆ. ವಿಪಕ್ಷಗಳಿಂದ ಸ್ಟಿಂಗ್ ಆಪರೇಷನ್‌ಗಳು ನಡೆಯುತ್ತಿರುತ್ತವೆ. ಎಲ್ಲರೂ ಎಚ್ಚರಿಕೆ ಇಂದ ಇರಿ ಎಂದು ಸೂಚನೆ ನೀಡಿದ್ದಾರೆ. ಸರ್ಕಾರದ ಆರಂಭದಲ್ಲಿ ಈಸಿಯಾಗಿ ಟ್ರ್ಯಾಪ್ ಆಗುತ್ತೀರಿ. ಹೀಗಾಗಿ ಟ್ರ್ಯಾಪ್ ಗೆ ಬಲಿಯಾಗದಂತೆ ಎಚ್ಚರಿಕೆ ವಹಿಸಿ ಎಂದು ತಿಳಿಸಿದ್ದಾರೆ.

ವರ್ಗಾವಣೆ ದಂಧೆ ಕುರಿತ ಪೆನ್‌ಡ್ರೈವ್‌:  ಶಾಸಕಾಂಗ ಸಭೆಯಲ್ಲಿ ನೂತನ ಶಾಸಕರೂ ಸೇರಿದಂತೆ ಎಲ್ಲರಿಗೂ ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಈಗಾಗಲೇ ವರ್ಗಾವಣೆ ದಂಧೆಯ ದಾಖಲೆ ಸಂಗ್ರಹಿಸಿದ್ದಾರೆ. ಇದೇ ದಾಖಲೆ ಇಟ್ಟುಕೊಂಡೇ ಸರ್ಕಾರದ ಮೇಲೆ ಮುಗಿಬಿದ್ದಿದ್ದಾರೆ. ಇದೇ ಕಾರಣಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸ್ಟಿಂಗ್ ಗೆ ಬಲಿಯಾಗಬೇಡಿ ಎಂದು ಸೂಚನೆ ಸಿಎಂ ಸಿದ್ದರಾಮಯ್ಯ ಕಿವಿಮಾತು ಹೇಳಿದ್ದಾರೆ.

'ಸೆಕ್ಯುಲರ್ ಅಂತಾ ಹೇಳಿ ದೇವೇಗೌಡರ ಕುತ್ತಿಗೆ ಕುಯ್ದವರು ನೀವು..' ಸಿದ್ಧುಗೆ ಎಚ್‌ಡಿಕೆ ವಾಗ್ಭಾಣ!

ರಾಜ್ಯದ ಜನರಿಗೆ ಒಳ್ಲೆಯ ಆಡಳಿತ ನೀಡುತ್ತೇವೆ: ವಿಧಾನಸೌಧದಲ್ಲಿ ಗೃಹ ಸಚಿವ ಜಿ. ಪರಮೇಶ್ವರ್ ಮಾತನಾಡಿ, ನಾವು ಎಲ್ಲರೂ ಚುನಾವಣೆ ಸಂದರ್ಭದಲ್ಲಿ ಒಳ್ಳೆಯ ಆಡಳಿತ ನೀಡ್ತೇವೆ  ಎಂಬ ಭರವಸೆ ನೀಡಿದ್ದೇವೆ. ಒಳ್ಳೆಯದು ಆಡಳಿತ ಎಂದರೆ  ಅಭಿವೃದ್ಧಿ ಆಗಿದೆ. ದಾಖಲೆಯ 14ನೇ ಬಜೆಟ್ ಮಂಡನೆ ಮಾಡ್ತಿದ್ದಾರೆ ಇದು ದಾಖಲೆ ಇತಿಹಾಸವಾಗಲಿದೆ. ಜನರ ನಿರೀಕ್ಷೆಗೆ ತಕ್ಕಂತೆ ಅಯವ್ಯಯ ಮಂಡನೆ ಮಾಡ್ತಾರೆ ಎಂಬ ನಿರೀಕ್ಷೆ ಇದೆ ಎಂದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿಎಂ ಗೊಂದಲಕ್ಕೆ ಮತ್ತೆ ಬೆಂಕಿ: ಸಿದ್ದರಾಮಯ್ಯ 5 ವರ್ಷ ಸಿಎಂ, ಬದಲಾದರೆ ಡಿಕೆಶಿ ಒಬ್ರೇ ರೇಸ್‌ನಲ್ಲಿಲ್ಲ..; - ಕೆಎನ್ ರಾಜಣ್ಣ
ಗಡೀಪಾರು ಸಂಕಷ್ಟದಲ್ಲಿ Mahesh Shetty Timarodi: ಎಸಿ ಕೋರ್ಟ್‌ಗೆ ಹಾಜರಾಗುವ ಮುನ್ನ ಮಹಾಲಿಂಗೇಶ್ವರ ದೇಗುಲದಲ್ಲಿ ಪ್ರಾರ್ಥನೆ