
ವಿಜಯಪುರ (ಜೂ.15): ಉಳಿದ ರಾಜ್ಯಗಳಿಗಿಂತ ಪೆಟ್ರೋಲ್ ಮತ್ತು ಡೀಸೆಲ್ ದರ ಕರ್ನಾಟಕದಲ್ಲಿ ಕಡಿಮೆ ಇದೆ ಎಂದು ರಾಜ್ಯ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ತಿಳಿಸಿದರು.
ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಏರಿಕೆ ವಿಚಾರ ಸಂಬಂಧ ಇಂದು ವಿಜಯಪುರ ನಗರದಲ್ಲಿ ಮಾತನಾಡಿದ ಸಚಿವರು, ನೆರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ಪೆಟ್ರೋಲ್, ಡೀಸೆಲ್ ದರ ಕಡಿಮೆಯಿದೆ. ತಮಿಳುನಾಡು ಹಾಗೂ ಇತರ ರಾಜ್ಯಗಳಲ್ಲಿ 5 ರಿಂದ 10 ರೂಪಾಯಿ ಹೆಚ್ಚಿಗೆ ದರ ಇದೆ. ಇತರ ರಾಜ್ಯಗಳಿಗಿಂತ ಪೆಟ್ರೋಲ್ ಡೀಸೆಲ್ ದರ ಕಡಿಮೆ ಮಾಡಿ ಬೆಲೆ ಏರಿಕೆ ಮಾಡಲಾಗಿದೆ. ಸರ್ಕಾರಕ್ಕೆ ಆದಾಯ ಕಡಿಮೆಯಾಗುತ್ತಿದೆ ಅಭಿವೃದ್ಧಿಗೆ ಗ್ಯಾರಂಟಿ ಯೋಜನೆಗೆ ಹಣ ಬೇಕಲ್ಲ. ಹೀಗಾಗಿ ಅನವಶ್ಯಕವಾಗಿ ಹೆಚ್ಚಿಗೆ ಬೆಲೆ ಏರಿಕೆ ಮಾಡಲಾಗಿದೆ ಎಂದರು.
ತುಮಕೂರು ಕಲುಷಿತ ನೀರು ಕುಡಿದು 6 ಮಂದಿ ದುರ್ಮರಣ: ಸತ್ತವರ ಲೆಕ್ಕ ಮುಚ್ಚಿಡೋ ಕೆಲಸ ಮಾಡಿತಾ ಸರ್ಕಾರ?
ಇತರ ರಾಜ್ಯಗಳ ಬೆಲೆ ತುಲನೆ ಮಾಡಿ ಏರಿಕೆ ಮಾಡಲಾಗಿದೆ ಎಂದ ಸಚಿವರು, ಪೆಟ್ರೋಲ್ ಡೀಸೆಲ್ ದರ ಏರಿಕೆ ಮಾಡಿದರೂ ಅವುಗಳ ಬೆಲೆ ಉಳಿದ ರಾಜ್ಯಗಳಿಗಿಂತ ನಮ್ಮಲ್ಲಿ ಕಡಿಮೆ ಇದೆ. ನಾವು ತೈಲ ಬೆಲೆ ಏರಿಕೆ ಮಾಡಿದರೂ ಅದು ರಾಜ್ಯದ ಅಭಿವೃದ್ಧಿ, ಜನರಿಗಾಗಿಯೇ ಮಾಡುವುದಲ್ಲವೇ? ಗ್ಯಾರಂಟಿ ಯೋಜನೆಗಳನ್ನು ಎಲ್ಲರಿಗೂ ಕೊಡುತ್ತಿದ್ದೇವೆ. ನಾವು ಫೈನಾನ್ಶಿಯಲ್ ಮೊಬಲೈಸೇಷನ್ ಮಾಡಲೇಬೇಕು. ಅದ್ಯಾಗೂ ಪೆಟ್ರೋಲ್ ಡೀಸೆಲ್ ದರಗಳು ಬೇರೆ ರಾಜ್ಯಗಳಿಗಿಂತ ನಮ್ಮ ಹೆಚ್ಚಿಗೆ ಇದ್ದರೆ ಹೇಳಿ ಎಂದು ಪ್ರಶ್ನಿಸಿದರು.
ಲೈನ್‌ಮ್ಯಾನ್ ನಿರ್ಲಕ್ಷ್ಯಕ್ಕೆ ವಿದ್ಯುತ್ ತಗುಲಿ ಕೂಲಿ ಕಾರ್ಮಿಕ ದುರ್ಮರಣ!
ಕೇಂದ್ರ ಸರ್ಕಾರದ ವಿರುದ್ಧ ಕಿಡಿ:
ತೈಲ ಬೆಲೆಗಳನ್ನು ಕೇಂದ್ರ ಸರ್ಕಾರ ಇಳಿಕೆ ಮಾಡಿಲ್ಲ. ಕಾಂಗ್ರೆಸ್ ಸರ್ಕಾರದಲ್ಲಿದ್ದಾಗ ಗ್ಯಾಸ್ ಬೆಲೆ 440ರೂ ಇತ್ತು, ಪೆಟ್ರೋಲ್ ಲೀಟರ್ ಗೆ 64 ರೂಪಾಯಿ ಇತ್ತು. ಬಿಜೆಪಿ ಸರ್ಕಾರದಲ್ಲಿ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಿದೆ. ಬಿಜೆಪಿ ಸರ್ಕಾರದಲ್ಲಿ ಪೆಟ್ರೋಲ್ ಬೆಲೆ ಅದು 1100 ರೂಪಾಯಿಗೆ ಹೋಗಿದೆ. ಅಷ್ಟಾದರೂ ಬೆಲೆ ಏರಿಕೆ ಕುರಿತು ನೀವು ಮೋದಿಯವರನ್ನ ಕೇಳಲಿಲ್ಲ. ಮೋದಿ ಹಾಗೂ ಕೇಂದ್ರ ಸರ್ಕಾರಕ್ಕೆ ಅನ್ವಯಿಸುವುದಿಲ್ಲವಾ? ಎಂದು ಪ್ರಶ್ನಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ