ಕೊರೋನಾ ವಿರುದ್ಧ ಆರ್‌ಎಂಪಿ ವೈದ್ಯರು ಕೈಜೋಡುಸುವಂತೆ ಮೆಡಿಕಲ್ ಕೌನ್ಸಿಲ್ ಮನವಿ

By Suvarna NewsFirst Published Jul 8, 2020, 3:58 PM IST
Highlights

ಕರ್ನಾಟಕದಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಆರ್‌ಎಂಪಿ ವೈದ್ಯರು ಕೈ ಜೋಡಿಸುವಂತೆ ಕರ್ನಾಟಕ ಮೆಡಿಕಲ್ ಕೌನ್ಸಿಲ್  ಮನವಿ ಮಾಡಿದೆ.

ಬೆಂಗಳೂರು, (ಜುಲೈ.08): ಕರ್ನಾಟಕದಲ್ಲಿ ಕೊರೋನಾ ಮಹಾಮಾರಿಯ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ವೈದ್ಯರು ಸಹ ಹಗಲು ರಾತ್ರಿ ಎನ್ನದೇ ಕಾರ್ಯನಿರ್ವಹಿಸುತ್ತಿದ್ದಾರೆ.

ಕೆಲಸ ವೇಳೆ ವೈದ್ಯರಿಗೂ ಸಹ ಕೊರೋನಾ ಸೋಂಕು ತಗುಲಿತ್ತಿದೆ. ಇದರಿಂದ ಕರ್ನಾಟಕ ಮೆಡಿಕಲ್ ಕೌನ್ಸಿಲ್  ಆರ್‌ಎಂಪಿ ವೈದ್ಯರು ಕೈ ಜೋಡಿಸುವಂತೆ ಮನವಿ ಮಾಡಿದೆ. 

ತಿಂಗಳೊಳಗೆ ಗುತ್ತಿಗೆ ವೈದ್ಯರ ಉದ್ಯೋಗ ಖಾಯಂ : ಆರೋಗ್ಯ ಸಚಿವರಿಂದ ಭರವಸೆ

ಈಗ ಜಗತ್ತು ಅಭೂತಪೂರ್ವ ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿದೆ. ನಮ್ಮ ರಾಜ್ಯವು ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ.  ಈ ಸಮಯದಲ್ಲಿ ನಿಮ್ಮ ಸೇವೆಗಳು ತುರ್ತಾಗಿ ಅಗತ್ಯವಿದೆ. 

ಇದನ್ನು ಸಾಂಕ್ರಾಮಿಕ ರೋಗವೆಂದು ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಿದೆ. ಈ ಕಾರಣಕ್ಕೆ ಆರ್‌ಎಂಪಿಗಳು ತಮ್ಮ ಸೇವೆಯನ್ನು ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಸಲ್ಲಿಸಲು ಕೋರಿದೆ. ಮತ್ತು ರಾಜ್ಯದ ವಿವಿಧ ಸ್ಥಳಗಳಲ್ಲಿ ನಿಮ್ಮ ಸೇವೆ ಅಗತ್ಯವಿರುವಲ್ಲೆಲ್ಲಾ ಕಡೆ ಸೇವೆ ಅವಶ್ಯವಿದ್ದು, ನಿಮ್ಮಲ್ಲಿ ಸ್ವಯಂಪ್ರೇರಣೆಯಿಂದ ಸೇವೆ ಸಲ್ಲಿಸಲು ಸಿದ್ಧರಿರುವವರು, ಈ rguhscovid 19 vol@gmail.com ಲಿಂಕ್‌ಗೆ ನಿಮ್ಮ ಹೆಸರನ್ನು ನೀಡಿ ಎಂದು  ಕರ್ನಾಟಕ ಮೆಡಿಕಲ್ ಕೌನ್ಸಿಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. 

click me!