ಬೆಂಗಳೂರು ಪ್ರಯಾಣಿಕರಿಗೆ ಗ್ರಾಮಗಳಲ್ಲಿ ತರಾಟೆ, 1000 ದಂಡ!

By Suvarna NewsFirst Published Jul 8, 2020, 9:32 AM IST
Highlights

ಬೆಂಗಳೂರು ಪ್ರಯಾಣಿಕರಿಗೆ ಗ್ರಾಮಗಳಲ್ಲಿ ತರಾಟೆ!| ಮಂಡದ್ಯದಲ್ಲಿ 1000 ದಂಡ, ಹುಣಸೂರಲ್ಲಿ ಪ್ರತಿಭಟನೆ

ಮಂಡ್ಯ(ಜು.08): ಬೆಂಗ​ಳೂ​ರಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಾಜ್ಯದ ರಾಜಧಾನಿಯಿಂದ ಬರುವವರು, ರಾಜಧಾನಿಗೆ ಹೋಗುವವರ ವಿರುದ್ಧ ಗ್ರಾಮೀಣ ಭಾಗಗಳಲ್ಲಿ ವಿರೋಧ ಶುರುವಾಗಿದೆ.

ಗುಡ್‌ ನ್ಯೂಸ್: 12 ದಿನದ ಬಳಿಕ ಕೊರೋನಾ ಬಲಿಗೆ ಬ್ರೇಕ್!

ಮಂಡ್ಯ ತಾಲೂಕು ಬೇಲೂರು ಗ್ರಾಮದ ಮುಖಂಡರು ಸೇರಿ, ಊರಿನವರು ಬೆಂಗಳೂರಿಗೆ ಹೋದರೆ ವಾಪಸ ಬರುವಂತಿಲ್ಲ. ಒಂದು ವೇಳೆ ಕೂಲಿ ಕೆಲಸಕ್ಕೆ ಹೋಗಿ ವಾಪಸಾದರೆ 1000 ರು. ದಂಡ ಪಾವತಿಸಬೇಕು ಎಂದು ಗ್ರಾಮದಲ್ಲಿ ಡಂಗುರ ಸಾರಿಸಿದ್ದಾರೆ. ಮುಖಂಡರು ತಮ್ಮ ಗ್ರಾಮಕ್ಕೂ ಕೊರೋನಾ ವಕ್ಕ​ರಿ​ಸ​ಬ​ಹುದು ಎಂಬ ಶಂಕೆಯ ಹಿನ್ನೆಲೆ​ಯಲ್ಲಿ ಈ ರೀತಿಯ ತೀರ್ಮಾನ ಕೈಗೊಂಡಿದ್ದಾರೆ. ಇದರಿಂದಾಗಿ ಗಾರ್ಮೆಂಟ್ಸ್‌ ಸೇರಿದಂತೆ ವಿವಿಧ ನೌಕರಿಗೆ ನಿತ್ಯ ಬೆಂಗಳೂರಿಗೆ ಆಗಮಿಸುವವರಿಗೆ ತೊಂದರೆಯಾಗುತ್ತಿದೆ.

ಮನೆ ಬಾಡಿಗೆ ಕಟ್ಟಲೂ ಹಣವಿಲ್ಲ: ಬೆಂಗಳೂರಿಂದ ತವರಿಗೆ ಮತ್ತಷ್ಜು ಜನರ ಗುಳೆ!

ಬೆಂಗ್ಳೂರಿಂದ ಬಂದವರಿಗೆ ತಡೆ: ಇನ್ನು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ 12 ಮಂದಿ ತಮ್ಮ ಸ್ವಗ್ರಾಮ ಹುಣಸೂರಿನ ಅಬ್ಬೂರಿಗೆ ಬಂದಿರುವುದಕ್ಕೆ ಸ್ಥಳೀಯರು ವಿರೋಧಿಸಿದ ಘಟನೆ ನಡೆದಿದೆ. ನಂತರ ತಹಸೀಲ್ದಾರ್‌ ಮಧ್ಯಸ್ಥಿಕೆಯಲ್ಲಿ ಅವರೆಲ್ಲರನ್ನು ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

click me!