
ಬೆಂಗಳೂರು(ಜು.08): ಕೊರೋನಾ ಸೋಂಕಿನ ಆರ್ಭಟದಿಂದ ಈಗಾಗಲೇ ಆರ್ಥಿಕವಾಗಿ ಸಾಕಷ್ಟುಸಂಕಷ್ಟದಲ್ಲಿರುವ ರಾಜ್ಯ ಸರ್ಕಾರಕ್ಕೆ ಪ್ರಮುಖ ಆದಾಯ ಮೂಲಗಳಲ್ಲಿ ಒಂದಾದ ಮದ್ಯ ಮಾರಾಟ ಶೇ.33.22ರಷ್ಟುಕುಸಿಯುವ ಮೂಲಕ ಮತ್ತೊಂದು ಆಘಾತ ಉಂಟಾಗಿದೆ.
ರಾಜ್ಯದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ನಡುವೆ ಮದ್ಯ ಸೇವನೆ ಮಾಡುವವರು ಸಂಖ್ಯೆ ಕಡಿಮೆಯಾಗಿದ್ದು, ಮದ್ಯಮಾರಾಟ ಕುಸಿತವಾಗಿ ಅಬಕಾರಿ ಇಲಾಖೆಗೆ ಭಾರೀ ನಿರಾಸೆ ಮೂಡಿಸಿದೆ. ಸೋಂಕಿನ ಭೀತಿಯಲ್ಲಿ ಜನ ಮನೆಗಳಿಂದ ಆಚೆ ಬರಲು ಭಯಪಡುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಮದ್ಯಪ್ರಿಯರು ಮದ್ಯಪಾನದಿಂದ ದೂರ ಉಳಿಯುತ್ತಿದ್ದಾರೆ. ಹೀಗಾಗಿ ಮದ್ಯ ಮಾರಾಟದಲ್ಲಿ ಭಾರೀ ಪ್ರಮಾಣದ ಕುಸಿತವಾಗಿದ್ದು, ಸರ್ಕಾರದ ಆದಾಯಕ್ಕೆ ಹೊಡೆತ ಬಿದ್ದಿದೆ.
ಬಿಗ್ ನ್ಯೂಸ್: ವಾರದಲ್ಲಿ 1 ದಿನ ಮದ್ಯ ಸಿಗಲ್ಲ, ಆ ಒನ್ ಡೇ ಕುಡುಕರು ಶಾಂತತೆಯಿಂದ ಇರ್ಬೇಕು..!
2019-20ನೇ ಸಾಲಿನ ಬಜೆಟ್‌ನಲ್ಲಿ ಮದ್ಯಮಾರಾಟದಿಂದ 20,950 ಕೋಟಿ ರು. ಆದಾಯ ನಿರೀಕ್ಷಿಸಿದ್ದ ಸರ್ಕಾರ, ಜೂನ್ ವೇಳೆಗೆ 5,760.14 ಕೋಟಿ ರು. ಆದಾಯ ಗಳಿಸಿತ್ತು. ಅಂತೆಯೇ 2020-21ರ ಬಜೆಟ್‌ನಲ್ಲಿ 22,700 ಕೋಟಿ ರು. ಆದಾಯ ನಿರೀಕ್ಷೆ ಮಾಡಿದ್ದು, ಜೂನ್ ವೇಳೆಗೆ 3,848.76 ಕೋಟಿ ರು. ಆದಾಯ ಗಳಿಸಿದೆ. ಆದರೆ, ಕಳೆದ ಸಾಲಿನ ಈ ಅವಧಿಗೆ ಹೋಲಿಕೆ ಮಾಡಿದರೆ 1913.38 ಕೋಟಿ ರು. ಅಂದರೆ, ಶೇ.33.22ರಷ್ಟುಆದಾಯ ಕುಸಿತವಾಗಿದೆ. ಬಜೆಟ್‌ನ ಒಟ್ಟು ನಿರೀಕ್ಷಿತ ಆದಾಯಕ್ಕೆ ಹೋಲಿಕೆ ಮಾಡಿದರೆ ಶೇ.16.95ರಷ್ಟುಆದಾಯ ಕುಸಿದೆ.
2019-20ನೇ ಸಾಲಿನಲ್ಲಿ ಜೂನ್ ಅಂತ್ಯದ ವರೆಗೆ 152.38 ಲಕ್ಷ ಪೆಟ್ಟಿಗೆ ಮದ್ಯ ಮಾರಾಟವಾಗಿದ್ದು, ಪ್ರಸಕ್ತ ಸಾಲಿನಲ್ಲಿ ಜೂನ್ ಅಂತ್ಯದ ವರೆಗೆ 100.76 ಲಕ್ಷ ಪೆಟ್ಟಿಗೆ ಮದ್ಯ ಮಾರಾಟವಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ 51.62 ಲಕ್ಷ ಪೆಟ್ಟಿಗೆ ಮದ್ಯ ಮಾರಾಟ ಕಡಿಮೆಯಾಗಿದೆ. ಈ ಮೂಲಕ ಶೇ.33.88ರಷ್ಟುಮದ್ಯ ಮಾರಾಟ ಕುಸಿತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ