ರಾಜ್ಯಪಾಲ ಥಾವರ್‌ ಚಂದ್ ಗೆಹಲೋತ್‌ಗೆ ಕೊರೊನಾ ಪಾಸಿಟಿವ್!

By Sathish Kumar KH  |  First Published Jan 9, 2024, 6:37 PM IST

ಕರ್ನಾಟಕ ರಾಜ್ಯದ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರಿಗೆ ಕರೊನಾ ಸೋಂಕು (ಕೋವಿಡ್-19 ಪಾಸಿಟಿವ್) ದೃಢಪಟ್ಟಿದೆ.


ಬೆಂಗಳೂರು (ಜ.09): ಕರ್ನಾಟಕ ರಾಜ್ಯದ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರಿಗೆ ಕರೊನಾ ಸೋಂಕು (ಕೋವಿಡ್-19 ಪಾಸಿಟಿವ್) ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸದ್ಯ ಅವರನ್ನು ನಿವಾಸದಲ್ಲಿಯೇ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಆದ್ದರಿಂದ ಅವರ ಎಲ್ಲ ನಿಗದಿತ ಕಾರ್ಯಕ್ರಮಗಳನ್ನು ಮುಂದಿನ ದಿನಾಂಕದವರೆಗೆ ರದ್ದುಗೊಳಿಸಲಾಗಿರುತ್ತದೆ.

ಕರ್ನಾಟಕ ರಾಜ್ಯಪಾಲರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಅವರನ್ನು ನಿರಂತರವಾಗಿ ನಿಗಾ ವಹಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಸದ್ಯ ಅವರನ್ನು ನಿವಾಸದಲ್ಲಿಯೇ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ನಿಗದಿತ ಕಾರ್ಯಕ್ರಮಗಳು / ಅಪಾಯಿಂಟ್‌ಮೆಂಟ್‌ಗಳನ್ನು ಮುಂದಿನ ಸೂಚನೆಯ ತನಕ ರದ್ದುಗೊಳಿಸಲಾಗುತ್ತದೆ. ಅವರು ಚೇತರಿಸಿಕೊಂಡ ನಂತರ ಕಾರ್ಯಕ್ರಮಗಳನ್ನು ನಿಗದಿಗೊಳಿಸಲಾಗುವುದು ಮತ್ತು ಭೇಟಿಗೆ ಅವಕಾಶ ನೀಡಲಾಗುವುದು ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರಭುಶಂಕರ್ ಅವರು ಪ್ರಕಟಣೆಯನ್ನು ಹೊರಡಿಸಿದ್ದಾರೆ.

Latest Videos

undefined

ರಾಜ್ಯದಲ್ಲಿ ಕೊರೋನಾ ಸೋಂಕಿತ ರೂಪಾಂತರಿ ಉಪತಳಿಯ ಆರ್ಭಟ ಮತ್ತೆ ಶುರುವಾಗಿದೆ. ಪ್ರತಿನಿತ್ಯ ಕೋವಿಡ್ ಪಾಸಿಟಿವಿಟಿ ದರದಲ್ಲಿ ಏರಿಕೆ ಆಗುತ್ತಿದೆ. ಕೋವಿಡ್‌ ಲಕ್ಷಣಗಳು ಬಹಳಷ್ಟು ಜನರಿಗೆ ಕಾಣಿಸಿಕೊಳ್ಳುತ್ತಿದ್ದು, ಪರೀಕ್ಷೆಗೆ ಒಳಪಟ್ಟ ಜನರ ಪೈಕಿ ಹೆಚ್ಚಿನ ಜನರಿಗೆ ಸೋಂಕು ಪತ್ತೆಯಾಗುತ್ತಿದೆ. ಪ್ರತಿ ನೂರು ಜನರಲ್ಲಿ 8-9 ಮಂದಿಗೆ ಪಾಸಿಟಿವ್ ದೃಢವಾಗುತ್ತಿದೆ. 

ಇದಕ್ಕೆ ಸಾಮಾಜಿಕ ಜಾತಾಣದ ಮೂಲಕ ಮಾಹಿತಿ ಹಂಚಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಕೊರೊನಾ ಸೋಂಕಿಗೆ ಒಳಗಾಗಿರುವ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋತ್ ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ'  ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.

click me!