
ಬೆಂಗಳೂರು (ಏ.23): ನ್ಯುಮೋನಿಯಾಕ್ಕೆ ತುತ್ತಾಗಿದ್ದ 78 ವರ್ಷದ ಮಹಿಳೆ ಆಕ್ಸಿಜನ್ ಸಪೋರ್ಟ್‌ನಲ್ಲಿಯೇ ಬಂದು ಮತಚಲಾವಣೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಏಪ್ರಿಲ್ 23 ರಂದು ನ್ಯುಮೋನಿಯಾಗೆ ತುತ್ತಾಗಿದ್ದ ಮಹಿಳೆ ಸ್ಟ್ರೆಚರ್‌ನಲ್ಲಿಯೇ ಬಂದು ತಮ್ಮ ವೋಟ್ ಮಾಡಿದರು. ಕೆಮ್ಮು, ಉಸಿರಾಟದ ತೊಂದರೆ ಮತ್ತು ನಿಶ್ಯಕ್ತಿಯಿಂದ ಬಳಲುತ್ತಿದ್ದ ಮಹಿಳೆಯನ್ನು ಇತ್ತೀಚೆಗೆ ಜಯನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವೇಳೆ ತಪಾಸಣೆ ನಡೆಸಿದಾಗ ಅವರ ದೇಹದಲ್ಲಿ ಆಕ್ಸಿಜನ್ ಪ್ರಮಾಣ ಶೇ. 80ರಷ್ಟಿತ್ತು. ಆರೋಗ್ಯವಂಥರ ದೇಹದಲ್ಲಿ ಆಕ್ಸಿಜನ್‌ನ ಪ್ರಮಾಣ ಶೇ, 95 ಅಥವಾ ಅದಕ್ಕಿಂತ ಹೆಚ್ಚಿರುತ್ತದೆ. ಇದರ ಬೆನ್ನಲ್ಲಿಯೇ ಅವರಿಗೆ ಆಕ್ಸಿಜನ್ ಸಪೋರ್ಟ್ ನೀಡಲಾಗಿತ್ತು. ಆ ಬಳಿಕ ಅವರ ಎರಡೂ ಶ್ವಾಸಕೋಶಗಳಿಗೆ ನ್ಯೂಮೋನಿಯಾ ತಗುಲಿತ್ತು.
ಆಕೆಗೆ ಆಂಟಿಬಯೋಟಿಕ್ಸ್, ಆಮ್ಲಜನಕ ಥೆರಪಿ, ಇನ್ಹಲೇಷನ್, ಆಂಟಿವೈರಲ್ ಔಷಧಿಗಳು ಮತ್ತು ಸಪೋರ್ಟಿವ್ ಕೇರ್‌ಅನ್ನು ಅಸ್ಪತ್ರೆಯಲ್ಲಿ ನೀಡಲಾಗಿತ್ತು. ಇಂತಹ ಗಂಭೀರ ವೈದ್ಯಕೀಯ ಪರಿಸ್ಥಿತಿಗಳ ಹೊರತಾಗಿಯೂ, ಮಹಿಳೆ ತಮ್ಮ ಮತವನ್ನು ಚಲಾಯಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ವೈದ್ಯಕೀಯ ತಂಡದ ನೆರವಿನೊಂದಿಗೆ ಮಹಿಳೆಯನ್ನು ಜಯನಗರ ಕ್ಷೇತ್ರದ ಮತಗಟ್ಟೆಗೆ ಸಾಗಿಸಿ, ಸ್ಟ್ರೆಚರ್‌ನಲ್ಲಿ ಮತ ಚಲಾಯಿಸಿದರು.
ಮತದಾನ ಮುಂದುವರಿದಂತೆ, ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ಶಾಖದ ಅಲೆಗಳ ಪರಿಸ್ಥಿತಿಗಳ ಬಗ್ಗೆ ಎಚ್ಚರಿಕೆ ನೀಡಿದೆ. IMD ಡೇಟಾ ಪ್ರಕಾರ, ಮತದಾನದ ದಿನದಂದು ಬೆಂಗಳೂರಿನ ಗರಿಷ್ಠ ತಾಪಮಾನವು 36.4 ಮತ್ತು 38.4 ಡಿಗ್ರಿ ಸೆಲ್ಸಿಯಸ್ ನಡುವೆ ಇತ್ತು.
ಕರ್ನಾಟಕ Election 2024 Live: ಮತದಾನಕ್ಕೆ ಇನ್ನು ಮೂರು ಗಂಟೆ ಬಾಕಿ, ನಿಮ್ಮ ಹಕ್ಕು ಚಲಾಯಿಸಿ ...
ಬೆಂಗಳೂರಿನಲ್ಲಿ ಎಂದಿನಂತೆ ಮತದಾನದ ಪ್ರಮಾಣ ಕಡಿಮೆ ಆಗಿದ್ದರೆ, ರಾಜ್ಯಾದ್ಯಂತ ಮತಗಟ್ಟೆಗಳಲ್ಲಿ ಉದ್ದನೆಯ ಸರತಿ ಸಾಲು ಕಂಡು ಬಂದಿತ್ತು. ಮೊದಲ ಹಂತದಲ್ಲಿ, ಕಾಂಗ್ರೆಸ್ ಎಲ್ಲಾ 14 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ, ಬಿಜೆಪಿ 11 ರಲ್ಲಿ ನಾಮನಿರ್ದೇಶಿತರನ್ನು ಮತ್ತು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸೇರಿದ ಅದರ ಮೈತ್ರಿ ಪಾಲುದಾರ ಜೆಡಿಎಸ್ (ಎಸ್) ಮೂರು - ಹಾಸನ, ಮಂಡ್ಯ. ಮತ್ತು ಕೋಲಾರದಲ್ಲಿ ಸ್ಪರ್ಧೆ ಮಾಡುತ್ತಿದೆ.
ಕರ್ನಾಟಕ ಲೋಕಸಭಾ ಚುನಾವಣೆ 2024, ದಕ್ಷಿಣ ಕನ್ನಡದಲ್ಲಿ ಗರಿಷ್ಠ, ಎಲ್ಲಿ ಕನಿಷ್ಠ ಮತದಾನ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ